ರೈಲಿನಲ್ಲಿ ಅಶ್ಲೀಲವಾಗಿ ಡ್ಯಾನ್ಸ್ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ, ಯುವತಿಯ ಬಗ್ಗೆ ನೆಟ್ಟಿಗರ ಆಕ್ರೋಶ!

By Vinutha Perla  |  First Published May 29, 2024, 10:25 AM IST

ಇತ್ತೀಚೆಗೆ ಜನರು ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡುವ ಅಭ್ಯಾಸ ಹೆಚ್ಚುತ್ತಿದೆ. ಹಾಗೆಯೇ ಇತ್ತೀಚಿಗೆ ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಯುವತಿಯೊಬ್ಬಳು ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇತ್ತೀಚೆಗೆ ಜನರು ಮೆಟ್ರೋ ರೈಲುಗಳು, ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್‌ಗಾಗಿ ಡ್ಯಾನ್ಸ್ ಮಾಡುವ ಅಭ್ಯಾಸ ಹೆಚ್ಚುತ್ತಿದೆ. ಯಾವುದೇ ಹಿಂಜರಿಕೆಯಿಲ್ಲದೆ ಮೈ ಮರೆತು ಅಶ್ಲೀಲವಾಗಿ ಡ್ಯಾನ್ಸ್ ಮಾಡಿ ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಇಂಥಾ ಘಟನೆಗಳು ಮಾತ್ರ ಕಡಿಮೆಯಾಗೋದಿಲ್ಲ. ಹಾಗೆಯೇ ಇತ್ತೀಚಿಗೆ ಮುಂಬೈ ಲೋಕಲ್ ರೈಲಿನ  ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಲ್ಲಿ ಯುವತಿಯೊಬ್ಬಳು ಭೋಜ್‌ಪುರಿ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವೀಡಿಯೊಗಳು ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

@mumbaimatterz ಎಂಬವರು ಎಕ್ಸ್‌ನಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿ ಇಂಥಾ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. 

Latest Videos

undefined

ರೀಲ್ಸ್ ಜೀವಕ್ಕಿಂತ ಹೆಚ್ಚ? 100 ಅಡಿ ಎತ್ತರದಿಂದ ಕೆರೆಗೆ ಹಾರಿದ ತರುಣ ಸಾವು: ವೀಡಿಯೋ ವೈರಲ್

ವೀಡಿಯೋದಲ್ಲಿ, ಮಹಿಳೆ ರೈಲಿನಲ್ಲಿ ಮಹಿಳಾ ಬೋಗಿಗಳ ಒಳಗೆ ಮತ್ತು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಚೋದನಕಾರಿಯಾಗಿ ನೃತ್ಯ ಮಾಡುವುದನ್ನು ಕಾಣಬಹುದು. ಇದು ಇತರ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ವೈರಲ್ ಆಗಿರವ ವೀಡಿಯೋವನ್ನು, 'ಮುಂಬೈ ರೈಲಿನಲ್ಲಿ ಪ್ರಯಾಣಿಕರು ಭಿಕ್ಷುಕರು ಮತ್ತು ರೀಲ್ಸ್ ಮಾಡುವವರ ಕಾಟವಿಲ್ಲದೆ ಶಾಂತಿಯುತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ.@grpmumbai @drmmumbaicr @RailMinIndia ಈ ತೊಂದರೆಯನ್ನು ಕೊನೆಗಾಣಿಸಲು ಇದು ಉತ್ತಮ ಸಮಯ'  ಎಂದು ಶೀರ್ಷಿಕೆ ನೀಡಿ ಪೋಸ್ಟ್ ಮಾಡಲಾಗಿದೆ.

ವೈರಲ್ ಆಗಿರುವ ವೀಡಿಯೋ ನೋಡಿ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಹಲವಾರು ಜನರು ಆಕೆಯನ್ನು ಟೀಕಿಸಿದರು ಮತ್ತು ಈ ಕೃತ್ಯವು ಇತರ ಪ್ರಯಾಣಿಕರಿಗೆ ಕಿರಿಕಿರಿ ಎಂದು ಕರೆದರು. ಮತ್ತೆ ಕೆಲವರು ಡ್ಯಾನ್ಸ್‌ನ್ನು ಅಶ್ಲೀಲ ಎಂದು ಹೇಳಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಅಂತಹ ನಡವಳಿಕೆಯು ಸೂಕ್ತವಲ್ಲ ಎಂದು ವಾದಿಸಿದ್ದಾರೆ. ಆಕೆಯ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆಯೂ ಕೆಲವರು ಒತ್ತಾಯಿಸಿದ್ದಾರೆ.

ಅಪ್ಪ-ಮಗಳಂತಿರೋ ಜೋಡಿ: ಪತಿಗೆ ಐ ಲವ್‌ ಯು ಜಾನು ಎಂದಿದ್ದೇ ತಪ್ಪಾಯ್ತು..ನೆಟ್ಟಿಗರ ಕಣ್ಣೇಕೆ ಕೆಂಪಾಯ್ತು?

ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮುಂಬೈ ಸೆಂಟ್ರಲ್ ಡಿಆರ್‌ಎಂನ ಅಧಿಕೃತ ಎಕ್ಸ್ ಹ್ಯಾಂಡಲ್ ಘಟನೆಯ ತನಿಖೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಮುಂಬೈ ವಿಭಾಗದ ಭದ್ರತಾ ಇಲಾಖೆಗೆ ಆದೇಶಿಸಿದೆ. 'ಮಾಹಿತಿಗಾಗಿ ಧನ್ಯವಾದಗಳು. ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಲಾಗಿದೆ.

ಒಬ್ಬ ಬಳಕೆದಾರರು, 'ಕಾನೂನಿನ ಭಯವಿಲ್ಲದಿದ್ದರೆ ಹೀಗೆಲ್ಲಾ ಸಂಭವಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸುವುದು ತಪ್ಪು. ರೈಲ್ವೆ ಅಧಿಕಾರಿಗಳು ಮೇಲಿನ ವಿಷಯದ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪ್ರಯಾಣಿಕರು ಜವಾಬ್ದಾರಿಯುತ ನಾಗರಿಕರಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು' ಎಂದು ಹೇಳಿದ್ದಾರೆ. ಮತ್ತೊಬ್ಬರು, 'ಇಂಥವರ ಮೇಲೆ ಕ್ರಮ ತೆಗೆದುಕೊಳ್ಳುವುದು ಅತೀ ಅಗತ್ಯ, ಇಲ್ಲದಿದ್ದರೆ ಉಳಿದವರು ಇದನ್ನು ನೋಡಿ ಕಲಿಯುತ್ತಾರೆ' ಎಂದು ತಿಳಿಸಿದ್ದಾರೆ.

click me!