Weird Rituals : 6 ಲಕ್ಷ ಕೊಟ್ಟು, ಕಾಡಿಗೆ ಹೋಗಿ ಕಿರುಚಾಡಿ ಬರ್ತಾರೆ ಮಹಿಳೆಯರು! ಹೆಚ್ಚಾಗ್ತಿದೆ ವಿಚಿತ್ರ ಪಾರ್ಟಿ

Published : May 28, 2024, 01:13 PM IST
Weird Rituals : 6 ಲಕ್ಷ ಕೊಟ್ಟು, ಕಾಡಿಗೆ ಹೋಗಿ ಕಿರುಚಾಡಿ ಬರ್ತಾರೆ ಮಹಿಳೆಯರು! ಹೆಚ್ಚಾಗ್ತಿದೆ ವಿಚಿತ್ರ ಪಾರ್ಟಿ

ಸಾರಾಂಶ

ಈಗಿನ ದಿನಗಳಲ್ಲಿ ಏನೇನೋ ಪಾರ್ಟಿ ನಡೆಯುತ್ತಿರುತ್ತೆ. ಈಗ ಕೋಪ ಹೊರಹಾಕೋಕೆ ಪಾರ್ಟಿ ಏರ್ಪಡಿಸಲಾಗ್ತಿದೆ.. ವಿಚಿತ್ರ ಎನ್ನಿಸಿದ್ರೂ ಇದು ನಿಜ. ಲಕ್ಷ ಲಕ್ಷ ಕೊಟ್ಟು ಪಾರ್ಟಿಗೆ ಹೋಗುವ ಮಹಿಳೆಯರು ಅಲ್ಲೇನು ಮಾಡ್ತಾರೆ? ವಿವರ ಇಲ್ಲಿದೆ.

ಒತ್ತಡದ ಜೀವನದಲ್ಲಿ (Stressed Life) ಕೋಪ ಏಕಾಏಕಿ ಬರೋದು ಹೆಚ್ಚು. ಅನೇಕ ಬಾರಿ ನಮಗೆ ಬಂದ ಕೋಪವನ್ನು ಎಲ್ಲರ ಮುಂದೆ ಪ್ರದರ್ಶಿಸಲು ಸಾಧ್ಯವಾಗೋದಿಲ್ಲ. ಕೋಪವನ್ನು ಹಿಡಿದಿಡುವ ಪ್ರಯತ್ನಕ್ಕೆ ನಾವು ಮುಂದಾಗ್ತೇವೆ. ಕೋಪ ನಿಯಂತ್ರಿಸಿಕೊಂಡಾಗ ಮನಸ್ಸು ಮತ್ತಷ್ಟು ಒತ್ತಡಕ್ಕೊಳಗಾಗುತ್ತದೆ. ಅದೇ ಆ ಕ್ಷಣದಲ್ಲಿ ನೀವು ಕೋಪ ವ್ಯಕ್ತಪಡಿಸಿದ್ರೆ ಎಲ್ಲರ ಮುಂದೆ ಅವಮಾನಕ್ಕೊಳಗಾಗ್ತೀರಿ. ಮುಜುಗರ ತಪ್ಪಿಸಿಕೊಳ್ಳಲು ಜನರು ಕೋಪ ನಿಯಂತ್ರಿಸಿಕೊಳ್ತಾರೆ. ಧ್ಯಾನ (Medtation), ವ್ಯಾಯಾಮ (Exercise) ಸೇರಿ ಕೋಪವನ್ನು (Anger) ಕಂಟ್ರೊಲ್ ಮಾಡಲು ನಾನಾ ವಿಧಗಳನ್ನು ಜನರು ಅನುಸರಿಸುತ್ತಾರೆ. ಜೋರಾಗಿ ಕಿರುಚಿ, ಕೋಪ ಹೊರಗೆ ಹಾಕ್ಬೇಕು ಅನ್ನಿಸ್ತಿದೆ, ಆದ್ರೆ ಸಾಧ್ಯವಾಗ್ತಿಲ್ಲ ಎನ್ನುವವರ ಮಾತನ್ನು ನೀವು ಕೇಳಿರಬಹುದು. ನಿಮ್ಮ ಮನಸ್ಸು ಶಾಂತವಾಗ್ಬೇಕು ಅಂದ್ರೆ ನಿಮ್ಮಲ್ಲಿರುವ ಸಿಟ್ಟನ್ನು ನೀವು ಹೊರಗೆ ಹಾಕಲೇಬೇಕು. ಅದಕ್ಕೆ ಈಗ ಅವಕಾಶವಿದೆ. ನಿಮ್ಮ ಮನೆಯವರ ಮುಂದೆ ಅಥವಾ ಕಚೇರಿಯಲ್ಲಿ ನೀವು ಕೂಗಿ, ಕಿರುಚಾಡಿ ಕೋಪ ತೋರಿಸಬೇಕಾಗಿಲ್ಲ. ಅದಕ್ಕೆಂದೇ ಒಂದು ಜಾಗವಿದೆ. ಅಲ್ಲಿಗೆ ಹೋಗಿ ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಕಹಿಯನ್ನು ಹೊರಹಾಕಿ ಬರ್ಬಹುದು. ಅಮೆರಿಕಾ ಹಾಗೂ ಯುರೋಪ್ ನಲ್ಲಿ ಆಯೋಜಿಸಲಾಗ್ತಿರುವ ಪಾರ್ಟಿಯೊಂದು ಈಗ ಸದ್ದು ಮಾಡಿದೆ.

ಇದೊಂದು ಪಾರ್ಟಿ (Party). ಕಾಡಿನ ಮಧ್ಯೆ ನಡೆಯುತ್ತದೆ. ಅಲ್ಲಿಗೆ ಬರುವ ಮಹಿಳೆಯರು ಕೂಗಾಡಿ ತಮ್ಮ ಕೋಪ (Rage) ಹೊರಗೆ ಹಾಕ್ತಾರೆ. ಕೋಪ ಹೊರಹಾಕುವ ಈ ಪಾರ್ಟಿಗೆ ಲಕ್ಷಾಂತರ ಮಂದಿ ಹಣ ನೀಡಲು ಮಹಿಳೆಯರು ಸಿದ್ಧವಾಗಿದ್ದಾರೆ.

ಜೊತೆ ಜೊತೆಯಲಿ, ಸೀತಾರಾಮ ಸೀರಿಯಲ್ ಸೂಪರ್ ಹಿಟ್ ಆಗೋದಕ್ಕೆ ಇವರೇ ಕಾರಣ!

ವರದಿ ಪ್ರಕಾರ, ಮಿಯಾ ಮಜಿಕ್ (Mia Magic) ಎಂದು ಕರೆಯಲ್ಪಡುವ ಸಾಮಾಜಿಕ ಮಾಧ್ಯಮದ ಪ್ರಭಾವಿ (Social Media Influencer) ಮಿಯಾ ಬಂಡುಚಿ ಈ ಪಾರ್ಟಿಯನ್ನು ಆಯೋಜನೆ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ಅವರು ರೇಜ್ ರಿಚ್ಯುವಲ್ಸ್ ( (Rage Rituals) ಆಚರಣೆ ಜಾರಿಗೆ ತಂದಿದ್ದಾರೆ. ಸೈಬರ್ ಸೆಕ್ಯುರಿಟಿ ಇಂಜಿನಿಯರ್ (Cyner Security Engineer) ಆಗಿರುವ ಮಿಯಾ ಮಜಿಕ್, ಅಮೆರಿಕಾ ಕಾಡಿನಲ್ಲಿ ಪಾರ್ಟಿ ಆಯೋಜಿಸುತ್ತಾರೆ. ಅಲ್ಲಿಗೆ ಬರುವ ಮಹಿಳೆಯರು ಕೂಗಾಡಿ, ಕಿರುಚಾಡಿ, ಕೈಗೆ ಸಿಕ್ಕಿದ್ದನ್ನು ಒಡೆದು, ಮುರಿದು ತಮ್ಮ ಕೋಪ ಹೊರಗೆ ಹಾಕುತ್ತಾರೆ. ಬಾಂಡೂಸಿಯು ಹಲವು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಬಂಡೂಸಿ ಮಾತ್ರವಲ್ಲ, ಜೆಸ್ಸಿಕಾ ರಿಚೆಟ್ಟಿಯಂತಹ ಅನೇಕ ಮಹಿಳೆಯರೂ ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ.

ಕಾಡಿನ ಮಧ್ಯೆ ಪಾರ್ಟಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ತಂಗಲು ಅವಕಾಶವಿದೆ. ಇಲ್ಲಿಗೆ ಬರುವ ಮಹಿಳೆಯರಿಗೆ ಕೋಪಗೊಳ್ಳಲು ಪ್ರಚೋದಿಸಲಾಗುತ್ತದೆ. ಹಳೆ ಘಟನೆಗಳನ್ನು ನೆನಪಿಸಿಕೊಂಡು ಕೋಪಗೊಳ್ಳುವಂತೆ ಮಾಡಲಾಗುತ್ತದೆ. ತಮಗಾದ ನೋವು, ಅನ್ಯಾಯವನ್ನು ನೆನದು ಮಹಿಳೆಯರು ಕಿರುಚಾಡುತ್ತಾರೆ. ಹೀಗೆ ಕೋಗಾಡಿ, ಒಳಗಿದ್ದ ಕೋಪ ಹೊರಗೆ ಹಾಕುವ ಮಹಿಳೆಯರು ನಂತರ ಶಾಂತವಾಗುತ್ತಾರೆ. ಅವರ ಮನಸ್ಸು ನಿರಾಳವಾಗುತ್ತದೆ. ಇದೊಂದು ಮನಸ್ಸಿಗೆ ನೆಮ್ಮದಿ ನೀಡುವ ಕೆಲಸವಾಗಿದೆ. ಕೋಪ ಹೊರ ಹೋದ್ರೆ ಸಂತೋಷದ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆಯರು ಐದರಿಂದ ಆರು ಲಕ್ಷ ಹಣ ಪಾವತಿಸಿ ಈ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ.

ಪೋಷಕರೇ ಎಚ್ಚರ! ಹೆಚ್ಚುತ್ತಿದೆ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಸ್ಮೋಕಿಂಗ್ ಚಟ

ಮಹಿಳೆಯರು ತಮ್ಮ ಕೋಪವನ್ನು ಹಾಗೂ ಪುರುಷರು ತಮ್ಮ ಅಳುವನ್ನು ತೋರಿಸಬಾರದು ಎನ್ನುವ ಅಲಿಖಿತ ನಿಯಮ ನಮ್ಮಲ್ಲಿದೆ. ಇದು ಸರಿಯಲ್ಲ ಎನ್ನುತ್ತಾರೆ ಮಿಯಾ ಬಂಡುಚಿ. ಜನರು ಕೋಪಗೊಂಡು ಆಕ್ರಮಣಕಾರಿಯಾಗ್ಬಾರದು. ಆಗಾಗ ತಮ್ಮ ಕೋಪ ಹೊರಹಾಕಿದ್ರೆ ಅವರು ಶಾಂತವಾಗ್ತಾರೆ. ಪುರುಷ ಕೂಡ ತನ್ನ ಅಳುವನ್ನು ಕಟ್ಟಿಡಬಾರದು. ಅಳದೆ ಅದನ್ನು ಮನಸ್ಸಿನಲ್ಲಿಟ್ಟುಕೊಂಡಾಗ ಒತ್ತಡ, ಖಿನ್ನತೆ ಕಾಡುವ ಅಪಾಯವಿರುತ್ತದೆ ಎಂದು ಮಿಯಾ ಬಂಡುಚಿ ಹೇಳುತ್ತಾರೆ. ಪುರುಷ ಅಳುವನ್ನು ಮಹಿಳೆ ಕೋಪವನ್ನು ಹೊರಹಾಕುವ ಅಗತ್ಯವಿದೆ ಎನ್ನುತ್ತಾರೆ ಮಿಯಾ ಬಂಡುಚಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?