ಮುಖದಲ್ಲಿರೋ ಕೂದಲಿಗಿಂತ ಮಾರ್ಕ್ಸ್ ಮುಖ್ಯ..ನೆಟ್ಟಿಗರಿಗೆ ಉತ್ತರ ಪ್ರದೇಶ 10th ಟಾಪರ್ ಪ್ರಾಚಿ ತಿರುಗೇಟು

By Suvarna NewsFirst Published Apr 25, 2024, 11:43 AM IST
Highlights

ಪ್ರಾಚಿ ನಿಗಮ್… ಸದ್ಯ ಸುದ್ದಿಯಲ್ಲಿರುವ ವಿದ್ಯಾರ್ಥಿನಿ. ಆಕೆ ಮುಖದ ಮೇಲಿರೋ ಕೂದಲು ಆಕೆಯ ಮಾರ್ಕ್ಸ್ ಮುಚ್ಚಿ ಹಾಕಿದೆ. ಟ್ರೋಲರ್ ಕಮೆಂಟ್ ಗೆ ಪ್ರಾಚಿ ಕೊನೆಗೂ ಮೌನ ಮುರಿದಿದ್ದಾಳೆ. 
 

ಪ್ರತಿಭೆ ಇರೋರು ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಅವರಿಗೆ ಅಂದಕ್ಕಿಂತ ಸಾಧನೆ ಮಾಡೋದ್ರಲ್ಲಿ ಸಂತೋಷ ಸಿಗುತ್ತದೆ. ಗುರಿ ಯಶಸ್ಸಿನ ಕಡೆಗಿರುವ ಕಾರಣ ಮುಖ, ಕೂದಲಿನ ಸೌಂದರ್ಯ ವೃದ್ಧಿಗೆ ಸಮಯ ನೀಡಲು ಸಾಧ್ಯವಾಗೋದಿಲ್ಲ. ಅತೀ ಶ್ರೀಮಂತ ವ್ಯಕ್ತಿಗಳು ಸರಳ ಬಟ್ಟೆ ಧರಿಸಿ, ಸಾಮಾನ್ಯರಂತೆ ನಡೆದುಕೊಳ್ಳುವವರಿದ್ದಾರೆ. ಅವರ ಫ್ಯಾಷನ್, ಸೌಂದರ್ಯದ ಬಗ್ಗೆ ಹೊರಗಿನವರು ಎಷ್ಟೇ ಬೊಬ್ಬೆ ಹಾಕಿದ್ರೂ ಅವರು ಮಾತ್ರ ಡೋಂಟ್ ಕೇರ್. ಅಂಥವರ ಸಾಲಿಗೆ ವಿದ್ಯಾರ್ಥಿನಿ ಪ್ರಾಚಿ ನಿಗಮ್ ಕೂಡ ಬರ್ತಾಳೆ. ಅನೇಕ ವಿದ್ಯಾರ್ಥಿಗಳಿಗೆ ಪ್ರಾಚಿ ಮಾದರಿಯಾಗಿದ್ದಾಳೆ. ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಪಡೆದು ಮುಂದಿನ ಗುರಿ ಸಾಧನೆ ಮುಖ್ಯವೇ ವಿನಃ ಹದಿನೈದನೇ ವಯಸ್ಸಿನಲ್ಲೇ ವ್ಯಾಕ್ಸಿಂಗ್, ಹೇರ್ ಕಟ್ಟಿಂಗ್, ಐಬ್ರೋ ಅಂತ ಬ್ಯೂಟಿಪಾರ್ಲರ್ ಮೊರೆ ಹೋದ್ರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.  

ಯುಪಿ (UP) ಬೋರ್ಡ್ ಪರೀಕ್ಷೆಯಲ್ಲಿ ಪ್ರಾಚಿ ನಿಗಮ್ (Prachi Nigam) ಶೇಕಡಾ 98.5 ಅಂಕ ಪಡೆಯುವ ಮೂಲಕ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಇಷ್ಟೊಂದು ಅಂಕ ಗಳಿಸಿ ಸಾಧನೆ ಮಾಡಿದ ಪ್ರಾಚಿಯನ್ನು ಮೆಚ್ಚಿಕೊಳ್ಳುವ ಬದಲು ನೆಟ್ಟಿಗರು ಪ್ರಾಚಿ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಓದಿಗಿಂತ ಸೌಂದರ್ಯ (Beauty) ಮುಖ್ಯ ಎನ್ನುವ ರೀತಿಯ ಕಮೆಂಟ್ ಮಾಡಿದ್ದರು. ಪ್ರಾಚಿಯನ್ನು ಟ್ರೋಲ್ ಮಾಡಿದವರಿಗೆ ಪ್ರಾಚಿ ನಿಗಮ್ ಉತ್ತರ ನೀಡಿದ್ದಾಳೆ. ನೆಟ್ಟಿಗರಿಗೆ ಪ್ರಾಚಿ, ತನ್ನ ಗುರಿ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.

ಕೈ ಇಲ್ಲದೇ ಕಾರು ಚಲಾಯಿಸುವ ಏಷ್ಯಾದ ಮೊದಲ ಮಹಿಳೆ!

ಟ್ರೋಲರ್‌ (Troll)ಗಳು ತಮ್ಮ ಮನಸ್ಥಿತಿಯೊಂದಿಗೆ ಬದುಕುತ್ತಾರೆ. ನನ್ನ ಯಶಸ್ಸು ಈಗ ನನ್ನ ಗುರುತಾಗಿದೆ ಎಂಬುದು ನನಗೆ ಸಂತೋಷವನ್ನುಂಟು ಮಾಡಿದೆ ಎಂದು ಪ್ರಾಚಿ ನಿಗಮ್ ಹೇಳಿದ್ದಾಳೆ. ಟ್ರೋಲರ್‌ಗಳಿಗೆ ಪ್ರಾಚಿ ಪ್ರತಿಕ್ರಿಯಿಸಿದ್ದು  ಇದೇ ಮೊದಲು. ತನ್ನ ಎಲ್ಲಾ ಗಮನವು ತನ್ನ ಅಧ್ಯಯನದ ಮೇಲೆ ಕೇಂದ್ರೀಕೃತವಾಗಿತ್ತು. ಈವರೆಗೆ ಯಾರೂ ನನ್ನ  ಮುಖದ ಮೇಲಿರುವ ಹೆಚ್ಚುವರಿ ಕೂದಲಿನ ಕಡೆಗೆ ಗಮನ ಹರಿಸಿರಲಿಲ್ಲ ಎಂದು ಪ್ರಾಚಿ ಹೇಳಿದ್ದಾಳೆ. 

ನನ್ನ ಕುಟುಂಬ, ನನ್ನ ಶಿಕ್ಷಕರು ಮತ್ತು ನನ್ನ ಸ್ನೇಹಿತರು ನನ್ನ ನೋಟವನ್ನು ಎಂದಿಗೂ ಟೀಕಿಸಲಿಲ್ಲ. ನಾನು ಅದರ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ಫಲಿತಾಂಶದ ನಂತರ ನನ್ನ ಫೋಟೋವನ್ನು ಪ್ರಕಟಿಸಲಾಯಿತು. ಆಗ ಜನರು ನನ್ನನ್ನು ಟ್ರೋಲ್ ಮಾಡಲು ಶುರು ಮಾಡಿದ್ರು. ಆಗ್ಲೇ ನನ್ನ ಗಮನ ನನ್ನ ಸಮಸ್ಯೆಯತ್ತ ತಿರುಗಿತು ಎಂದು ಪ್ರಾಚಿ ನಿಗಮ್ ಹೇಳಿದ್ದಾಳೆ. ನನ್ನ ಗುರಿ ಇಂಜಿನಿಯರ್ ಆಗುವುದು. ಅಂತಿಮವಾಗಿ ನನ್ನ ಗುರುತು ಮುಖ್ಯವಾಗುತ್ತದೆಯೇ ವಿನಃ  ನನ್ನ ಮುಖದ ಮೇಲಿರುವ ಕೂದಲಲ್ಲ ಎಂದು ಪ್ರಾಚಿ ನಿಗಮ್ ನೆಟ್ಟಿಗರಿಗೆ ನೇರವಾಗಿ ಉತ್ತರ ನೀಡಿದ್ದಾಳೆ. 

ಪ್ರಾಚಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದವರು ಒಂದಿಷ್ಟು ಮಂದಿಯಾದ್ರೆ ಮತ್ತೆ ಕೆಲವರು ಆಕೆ ಬೆಂಬಲಕ್ಕೆ ನಿಂತಿದ್ದಾರೆ. ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ಪ್ರಾಚಿಗೆ ಸಪೋರ್ಟ್ ಮಾಡಿದ್ದಾರೆ. ಶಿಕ್ಷಣದ ಬಗ್ಗೆ ಗಮನ ಹರಿಸುವಂತೆ ಪ್ರಾಚಿಗೆ ಸಲಹೆ ನೀಡಿದ್ದಾರೆ.

98.5 ಪರ್ಸೆಂಟ್ ಅಂಕ ಗಳಿಸಿದ ವಿದ್ಯಾರ್ಥಿನಿ ಸೌಂದರ್ಯ ಗೇಲಿ ಮಾಡಿದ ನೆಟ್ಟಿಗರು! ಇದೆಂಥ ಕೊಳಕು ಮನಸ್ಸಿನ ಜನರಿವರು?

ಹಾರ್ಮೋನ್ ಸಮಸ್ಯೆ ಪ್ರಾಚಿ ಮುಖದ ಮೇಲೆ ಕೂದಲು ಬೆಳೆಯಲ; ಕಾರಣವಾಗಿದೆ. ಎಂಡೋಕ್ರೈನಾಲಜಿ ಸಹಾಯದಿಂದ ಇದಕ್ಕೆ ಚಿಕಿತ್ಸೆ ಪಡೆಯಬಹುದು. 8 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದ್ದು, ಇದನ್ನು ತಿಂಗಳೊಳಗೆ ಗುಣಪಡಿಸಬಹುದು. ಈ ಮಧ್ಯೆ, ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಪ್ರೊ ಆರ್ ಕೆ ಧಿಮಾನ್, ಪ್ರಾಚಿಗೆ ಖುಷಿ ಸುದ್ದಿ ನೀಡಿದ್ದಾರೆ. ಪ್ರಾಚಿಗೆ ಸಂಸ್ಥೆ ಉಚಿತ ಚಿಕಿತ್ಸೆ ನೀಡಲಿದೆ ಎಂದಿದ್ದಾರೆ. 

click me!