ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..

By Suvarna News  |  First Published Apr 24, 2024, 5:43 PM IST

 ಆರೋಗ್ಯಪೂರ್ಣ ಮಗುವಿಗಾಗಿ, ಸುಲಭದ ಹೆರಿಗೆಗೆ ನಟಿ ಅದಿತಿ  ಪ್ರಭುದೇವ ಏನೆಲ್ಲಾ ಟಿಪ್ಸ್​ ಫಾಲೋ ಮಾಡಿದ್ದರು ಎನ್ನುವ ವಿಡಿಯೋ ಶೇರ್​ ಮಾಡಿದ್ದಾರೆ. 
 


ಇದೇ ಏಪ್ರಿಲ್​ 4ರಂದು ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿಯಾಗಿದ್ದು, ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ಅದಿತಿ ಗರ್ಭಿಣಿಯಾದ ಮೇಲೂ ಆ್ಯಕ್ಟೀವ್​ ಆಗಿಯೇ ಇದ್ದರು.  ವಿಭಿನ್ನ ರೀತಿಯ ಟಿಪ್ಸ್​, ಅಡುಗೆ ಕುರಿತು ವಿಡಿಯೋ ಶೇರ್​ ಮಾಡುತ್ತಿರುವ ನಟಿ ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು. ಗರ್ಭಿಣಿಯರಿಗೆ  ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು.  ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು.  ಕಾಲು ಊದಿಕೊಳ್ಳುವುದು ಹಲವು ಗರ್ಭಿಣಿಯರಿಗೆ ಸಾಮಾನ್ಯ. ಇಡೀ ದೇಹದಲ್ಲಿನ ಪ್ರಕ್ರಿಯೆ ಒಂದೇ ಸಮನೆ ಬದಲಾಗುವ ಕಾರಣ, ದೇಹ ಮತ್ತು ಮನಸ್ಸು ಎರಡರ ಮೇಲೂ ಸಾಕಷ್ಟು ಪ್ರಭಾವ ಬೀರುತ್ತದೆ. ಕೆಲವೊಂದು ದೈಹಿಕ ಸಮಸ್ಯೆಗಳು ಕಾಣಿಸುತ್ತವೆ. ಅಂಥದ್ದರಲ್ಲಿ ಒಂದು ಕಾಲು ಊದಿಕೊಳ್ಳುವುದು. ಅದಕ್ಕೆ ಏನೇನು ಪರಿಹಾರ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ಅದಿತಿ ನೀಡಿದ್ದರು.

ಇದೀಗ ಮಗು ಜನಿಸಿ 20 ದಿನಗಳಾದ ಮೇಲೆ ಗರ್ಭಿಣಿ ಅವಧಿಯಲ್ಲಿ, ತಾವು ಮಾಡಿದ್ದ ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ತಾವು ಗರ್ಭಿಣಿಯಾಗಿದ್ದಾಗ ಹೇಗೆಲ್ಲಾ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೆ ಎನ್ನುವ ಬಗ್ಗೆ ನಟಿ ಹೇಳಿದ್ದಾರೆ. ಬೆಳಿಗ್ಗೆ ಬಿಸಿಯಾದ ನೀರು ಕುಡಿದು, ಏನಾದರೂ ಹಣ್ಣು ತಿಂದು ವ್ಯಾಯಾಮ ಮಾಡಲು ಹೋಗುತ್ತೇನೆ ಎಂದಿದ್ದಾರೆ ನಟಿ. ಇವರ ಈ ವಿಡಿಯೋ ಮಾಡಿದಾಗ ಎಂಟು ತಿಂಗಳು ತುಂಬಿದ್ದರಿಂದ ಈ ಸಮಯದಲ್ಲಿ ವೈದ್ಯರ ಸಲಹೆ ಪಡೆದು ವ್ಯಾಯಾಮ ಮಾಡುವಂತೆ ಹೇಳಿದ್ದಾರೆ. ತಾವು ರೆಗ್ಯುಲರ್​ ಆಗಿ ಯೋಗ, ವ್ಯಾಯಾಮ ಮಾಡುತ್ತಿದ್ದುದರಿಂದ ತಮಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದಿರುವ ಅವರು, ಹೊಸದಾಗಿ ಮಾಡುವುದಿದ್ದರೆ ವೈದ್ಯರ ಇಲ್ಲವೇ ಪರಿಣತದ ಸಲಹೆ ಪಡೆದು ಅದನ್ನು ಶುರು ಮಾಡುವಂತೆ ಹೇಳಿದ್ದಾರೆ. ಗರ್ಭಿಣಿಯಾಗಿದ್ದಾಗ ಮನಸ್ಸು ಉಲ್ಲಾಸವಾಗಿರಲಿ, ಹಿತವಾಗಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಿದರೆ ಒಳ್ಳೆಯದು ಎಂದಿದ್ದಾರೆ. 

Tap to resize

Latest Videos

ಗರ್ಭಿಣಿಯರಿಗೆ ಹುರುಳಿ ಕಾಳಿನ ಟೇಸ್ಟಿ ರೆಸಿಪಿ ಜೊತೆ, ಚಿಕ್ಕಪುಟ್ಟ ಸಮಸ್ಯೆಗಳಿಗೆ ನಟಿ ಅದಿತಿ ಪರಿಹಾರ

ಗರ್ಭಿಣಿ ಟೈಂನಲ್ಲಿ ಬಾಡಿಯಲ್ಲಿ ಏನೇನೋ ಬದಲಾವಣೆಗಳು ಆಗುತ್ತವೆ. ದೇಹ ಊದಿಕೊಳ್ಳುವುದರ ಜೊತೆಗೆ ಏನೇನೋ ಸಮಸ್ಯೆ ಆಗುತ್ತವೆ. ಆದ್ದರಿಂದ ಮೊದಲಿನಿಂದಲೂ ಯೋಗ, ಧ್ಯಾನ, ವ್ಯಾಯಾಮ ಮಾಡುತ್ತಾ ಬಂದರೆ ಒಳ್ಳೆಯದು. ಗರ್ಭಿಣಿಯಾದ ಸಮಯದಲ್ಲಿ ಇವೆಲ್ಲಾ ಉಪಯೋಗಕ್ಕೆ ಬರುತ್ತದೆ ಎನ್ನುವುದು ನಟಿ ಅದಿತಿಯ ಮಾತು. ಒಂದೇ ಸಲಕ್ಕೆ ಗರ್ಭಿಣಿಯಾದಾಗ ಈ ರೀತಿಯ ಪ್ರಯೋಗ ಮಾಡಬೇಡಿ ಎಂದೂ ನಟಿ ಟಿಪ್ಸ್​  ಕೊಟ್ಟಿದ್ದಾರೆ. ಸಾಮಾನ್ಯವಾಗಿ ಮನೆಯಲ್ಲಿ ಹೆಚ್ಚು ಕೆಲಸ ಮಾಡುವವರು ಇಲ್ಲವೇ ಕಚೇರಿಗೆ ಹೋಗುವ ಗರ್ಭಿಣಿಯರು ಅಲ್ಲಿಯ ಓಡಾಟದಿಂದಲೇ ಸಾಕಷ್ಟು ವ್ಯಾಯಾಮ ಸಿಗುತ್ತದೆ ಎನ್ನುತ್ತಾರೆ. ಆದರೆ ಇದು ಸರಿಯಲ್ಲ ಎಂದಿರುವ ಅದಿತಿ, ತಮ್ಮ ಮನೆಯ ಕೆಲಸವನ್ನು ಸಂಪೂರ್ಣವಾಗಿ ನಾನೇ ಮಾಡಿದರೂ, ಗರ್ಭಿಣಿಯಾದಾಗ ವ್ಯಾಯಾಮ ಮಾಡಿರುವುದಾಗಿ ಹೇಳಿದ್ದಾರೆ. ಜೊತೆಗೆ ತಿನ್ನುವ ಆಹಾರ ಹೇಗಿರಬೇಕು ಎಂಬುದನ್ನೂ ತಿಳಿಸಿದ್ದಾರೆ. 

ಇನ್ನು ನಟಿಯ ಸಿನಿ ಪಯಣದ ಕುರಿತು ಹೇಳುವುದಾದರೆ, ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ನಟಿ ಅದಿತಿ, ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡುತ್ತಿದ್ದು, ಈಗ ಮೊದಲ ಮಗುವಿನ ಸಂತಸದಲ್ಲಿದ್ದಾರೆ.

ಗರ್ಭಿಣಿ ಅದಿತಿ ಪ್ರಭುದೇವ ಅಮ್ಮ ಕಲಿಸಿಕೊಟ್ರು ಮುತ್ತಜ್ಜಿಯ ರೆಸಿಪಿ ಸೂಪರ್​, ಟೇಸ್ಟಿ 'ಮಾದಲಿ'!

click me!