ಗಂಡು ಮಕ್ಕಳೇ ಇರೋ ಕುಟುಂಬದಲ್ಲಿ 138 ವರ್ಷಗಳ ಬಳಿಕ ಹುಟ್ಟಿತೊಂದು ಹೆಣ್ಣುಮಗು!

Published : Apr 08, 2023, 03:32 PM ISTUpdated : Apr 08, 2023, 03:38 PM IST
ಗಂಡು ಮಕ್ಕಳೇ ಇರೋ ಕುಟುಂಬದಲ್ಲಿ 138 ವರ್ಷಗಳ ಬಳಿಕ ಹುಟ್ಟಿತೊಂದು ಹೆಣ್ಣುಮಗು!

ಸಾರಾಂಶ

ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 138 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ. 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಅಂದ್ರೆ ಸಾಕು ಎಲ್ಲರೂ ಮುಖ ಸಿಂಡರಿಸ್ತಾರೆ. ಆದ್ರೆ ಈ ಕುಟುಂಬದಲ್ಲಿ ಮಾತ್ರ ಹೆಣ್ಣು ಮಗು ಜನಿಸಿದ ವಿಷಯ ಕೇಳಿ ಮನೆಯಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ಯಾಕಂದ್ರೆ ಈ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ್ದು ಬರೋಬ್ಬರಿ 130 ವರ್ಷಗಳ ನಂತ್ರ. ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 138 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ. 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಅಮೆರಿಕದ ಆ್ಯಂಡ್ರೀವ್‌ ಕ್ಲಾರ್ಕ್ ಹಾಗೂ ಕರೋಲಿನ್‌ ಕ್ಲಾರ್ಕ್ ದಂಪತಿಗಳಿಗೆ ಹೆಣ್ಣು ಮಗು (Baby girl) ಜನಿಸಿದೆ. ಇದರಲ್ಲೇನು ವಿಶೇಷ ಎಂದಿರಾ? ವಿಶೇಷವೆಂದರೆ ಕ್ಲಾಕ್‌ ಕುಟುಂಬದಲ್ಲಿ ಹೆಣ್ಣು ಮಗುವೊಂದು ಜನಿಸಿದ್ದು 138 ವರ್ಷಗಳ ಬಳಿಕವಂತೆ. 1885ರಲ್ಲಿ ಕಡೆಯ ಬಾರಿಗೆ ಈ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿತ್ತಂತೆ. ಹೀಗಾಗಿ ಅಪರೂಪಕ್ಕೆ ಕುಟುಂಬದಲ್ಲಿ ಹೆಣ್ಣು ಮಗುವಿನ ಇಡೀ ಕುಟುಂಬ (Family) ಖುಷಿಯಲ್ಲಿ ತೇಲಾಡುತ್ತಿದೆ.

ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!

1885ರಿಂದಲೂ ಬರೀ ಗಂಡುಮಕ್ಕಳಿರುವ ಕುಟುಂಬ
ತಮ್ಮ ಕುಟುಂಬದ ಸೊಸೆಯೊಬ್ಬರು ಗರ್ಭಿಣಿಯಾದ ಸುದ್ದಿ ಕೇಳುತ್ತಲೇ, ಬಹುಶಃ ಇದೂ ಗಂಡು ಮಗುವೇ ಆಗಿರಲಿದೆ ಎಂದು ಕ್ಲಾಸ್ ಕುಟುಂಬಸ್ಥರು ಭಾವಿಸಿದ್ದರು. ಆದರೆ ಎಲ್ಲರಿಗೂ ಅಚ್ಚರಿಯಾಗುವಂತೆ ಹೆಣ್ಣು ಮಗು ಜನಿಸಿದೆ. ಈ ಹೆಣ್ಣು ಮಗುವಿಗೆ ಆಡ್ರೇ ಎಂದು ಹೆಸರಿಡಲಾಗಿದೆ. ತನಗೆ ಮಗಳು ಹುಟ್ಟಿದ್ದಾಳೆ ಎಂಬುದನ್ನು ಮೊದಲಿಗೆ ಖುದ್ದು ಆಕೆಯ ತಾಯಿ ಕೆರೋಲಿನ್ ಕ್ಲಾರ್ಕ್ ಕೂಡಾ ನಂಬಿರಲಿಲ್ಲವಂತೆ. 'ನಾನು ಹತ್ತು ವರ್ಷಗಳ ಹಿಂದೆ ಕುಟುಂಬದ ಈ ಇತಿಹಾಸದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಾಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೇಲಿಂದ ಮೇಲೆ ಗಂಡು ಮಕ್ಕಳೇ (Boys) ಜನಿಸುತ್ತಾ ಸಾಗಿದ ಮೇಲೆ ನಂಬಲೇ ಬೇಕಾಯಿತು' ಎನ್ನುತ್ತಾರೆ ಕೆರೋಲಿನ್. ಆದರೆ ಈಗ ನನಗೆ ಹೆಣ್ಣು ಮಗುವಾಗಿದ್ದು ತುಂಬಾ ಖುಷಿ (Happy) ನೀಡಿದೆ ಎಂದಿದ್ದಾರೆ,

'ನಮಗೆ ಜನವರಿ 2021ರಲ್ಲಿ ಗರ್ಭಪಾತವಾಗಿತ್ತು. ಇದಾದ 15 ತಿಂಗಳ ಬಳಿಕ ನಾನು ಆಡ್ರೇಗೆ ತಾಯಿಯಾದೆ. ಅವಳು ನಮ್ಮೆಲ್ಲಾ ಕಾಯುವಿಕೆಗೊಂದು ಸಾರ್ಥಕತೆ ತಂದಿದ್ದಾಳೆ. ಅವಳು ನಮ್ಮ ಅದೃಷ್ಟ ದೇವತೆ. ನಾವೆಲ್ಲರೂ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದಾನೆ' ಎಂದಿದ್ದಾರೆ ಕೆರೋಲಿನ್.

ಆಂಡ್ರ್ಯೂ ಅವರ ಕುಟುಂಬವು 1885 ರಿಂದ ಅವರ ನೇರ ವಂಶಾವಳಿಯಲ್ಲಿ ಹೆಣ್ಣು ಮಗುವನ್ನು ನೋಡಿರಲಿಲ್ಲ, ಇದು ಒಂದು ದಶಕದ ಹಿಂದೆ ತನ್ನ ಪತಿಯಿಂದ ಅದರ ಬಗ್ಗೆ ಮೊದಲು ಕೇಳಿದಾಗ ಕ್ಯಾರೊಲಿನ್ ಆಶ್ಚರ್ಯಚಕಿತರಾದರು. ಆಡ್ರೆಯ ಆಗಮನದ ಮೊದಲು ಎರಡು ಗರ್ಭಪಾತಗಳನ್ನು ಅನುಭವಿಸಿದರೂ, ದಂಪತಿಗಳು ಭರವಸೆಯಲ್ಲೇ ಉಳಿದರು ಮತ್ತು ಆರೋಗ್ಯಕರ ಗರ್ಭಧಾರಣೆ ಮತ್ತು ಮಗುವಿಗೆ ಪ್ರಾರ್ಥಿಸಿದರು. 

Baby girl welcome ಮೊದಲ ಹೆಣ್ಣು ಮಗು ಜನನ, ಅದ್ಧೂರಿ ಸ್ವಾಗತಕ್ಕೆ ಹೆಲಿಕಾಪ್ಟರ್ ಕಳುಹಿಸಿದ ಕುಟುಂಬ!

ಗುಡ್ ಮಾರ್ನಿಂಗ್ ಅಮೇರಿಕಾದೊಂದಿಗೆ ಮಾತನಾಡುವಾಗ, ಆಂಡ್ರ್ಯೂ ಅವರ ಪೋಷಕರು ಸುದ್ದಿಯನ್ನು ಖಚಿತಪಡಿಸಿದ್ದಾರೆ ಎಂದು ಕ್ಯಾರೊಲಿನ್ ಉಲ್ಲೇಖಿಸಿದ್ದಾರೆ. ದಂಪತಿಗೆ ಈಗಾಗಲೇ 4 ವರ್ಷದ ಕ್ಯಾಮರಾನ್ ಎಂಬ ಮಗನಿದ್ದಾನೆ. ಕರೋಲಿನ್ ಮತ್ತೆ ಗರ್ಭಿಣಿಯಾದಾಗ ಎರಡು ಗರ್ಭಪಾತದ ನಂತರ, ದಂಪತಿಗಳು ಹುಡುಗ ಅಥವಾ ಹುಡುಗಿ ಎಂದು ಕಾಳಜಿ ವಹಿಸಲಿಲ್ಲ. 'ನಾವು ಗರ್ಭಿಣಿಯಾಗಲು ಕೃತಜ್ಞರಾಗಿರುತ್ತೇವೆ ಮತ್ತು ಆರೋಗ್ಯಕರ ಗರ್ಭಧಾರಣೆ ಮತ್ತು ಆರೋಗ್ಯಕರ ಮಗುವಿಗಾಗಿ ಪ್ರಾರ್ಥಿಸುತ್ತಿದ್ದೇವೆ' ಎಂದು ತಿಳಿಸಿದ್ದರು.

ಕುಟುಂಬ ಮತ್ತು ಸ್ನೇಹಿತರೊಂದಿಗಿನ ಪಾರ್ಟಿಯಲ್ಲಿ, ದಂಪತಿಗಳು ತಮಗೆ ಹೆಣ್ಣು ಮಗು ಆಗಿರುವುದನ್ನು ಬಹಿರಂಗಪಡಿಸಿದರು. ಎಲ್ಲರೂ ಅಪನಂಬಿಕೆಯಿಂದ ಕಿರುಚುತ್ತಿದ್ದರು ಎಂದು ಕ್ಯಾರೊಲಿನ್ ತಿಳಿಸಿದ್ದಾರೆ. ಈ ಹಿಂದೆ ಗಂಡು ಹೆಸರುಗಳನ್ನೇ ಯೋಚಿಸುತ್ತಿದ್ದ ದಂಪತಿಗೆ ಹೆಣ್ಣು ಮಗುವಿಗೆ ಹೆಸರಿಡುವುದು ಸವಾಲಾಗಿ ಪರಿಣಮಿಸಿತ್ತು. ಆದಾಗ್ಯೂ, ಅವರು ಅಂತಿಮವಾಗಿ ಆಡ್ರೆ ಎಂಬ ಹೆಸರನ್ನು ಆಯ್ಕೆ ಮಾಡಿದರು. ಸೇಂಟ್ ಪ್ಯಾಟ್ರಿಕ್ ದಿನವಾದ ಮಾರ್ಚ್ 17 ರಂದು ಹೆಣ್ಣು ಮಗು ಜನಿಸಿತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!