
ನವದೆಹಲಿ: ಮಹಿಳೆ ಸ್ನಾನ ಮಾಡುವಾಗ ಪುರುಷರು ಸ್ನಾನಗೃಹದೊಳಗೆ ಇಣುಕಿ ನೋಡುವುದು ಅಪರಾಧ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದ ಆಕೆಯ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಹೇಳಿದೆ. ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವುದು ವ್ಯಕ್ತಿಯ ಖಾಸಗಿತನವಾಗಿದೆ. ಅದು ಪಬ್ಲಿಕ್ ಬಾತ್‌ರೂಮ್ ಆಗಿದ್ದು, ಡೋರ್‌ಗಳಿಲ್ಲದೆ ಕೇವಲ ಕರ್ಟನ್‌ಗಳನ್ನು ಮಾತ್ರ ಹೊಂದಿದ್ದರೂ ಸಹ ಪುರುಷರು ಇಣುಕಿ ನೋಡುವಂತಿಲ್ಲ ಎಂದು ತಿಳಿಸಿದೆ. ಬಾತ್‌ರೂಮ್‌ನಲ್ಲಿ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ವ್ಯಕ್ತಿ ಇಣುಕಿ ನೋಡಿದರೆ ಇದು ಸೆಕ್ಷನ್ 354Cಯ ಪ್ರಕಾರ ಅಪರಾಧವಾಗಿದೆ ಎಂದು ತಿಳಿಸಲಾಗಿದೆ.
ಮುಚ್ಚಿದ ಸ್ನಾನಗೃಹದೊಳಗೆ ಸ್ನಾನ ಮಾಡುವ ಮಹಿಳೆಯು (Women) ತನ್ನ ಗೌಪ್ಯತೆಗೆ ಧಕ್ಕೆಯಾಗುವುದಿಲ್ಲ ಅಥವಾ ತನ್ನನ್ನು ಯಾರೂ ನೋಡುವುದಿಲ್ಲ ಎಂದು ನಿರೀಕ್ಷಿಸುತ್ತಾರೆ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಹೇಳಿದರು.
ಕಚೇರಿ ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟ ಬಾಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಲೀಕ್!
'ಮಹಿಳೆ ಸ್ನಾನ ಮಾಡುವಾಗ ಬಾತ್‌ರೂಮ್ ಒಳಗೆ ಇಣುಕಿ ನೋಡುವ ದುಷ್ಕರ್ಮಿಯ ಕೃತ್ಯವನ್ನು ಖಂಡಿತವಾಗಿಯೂ ಅವಳ ಗೌಪ್ಯತೆಯ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನವನ್ನು (Privacy) ಗೌರವಿಸಬೇಕು ಮತ್ತು ಅದರ ಯಾವುದೇ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ನ್ಯಾಯಾಲಯ ಸ್ಪಷ್ಟಪಡಿಸಿಎ.
ಪ್ರಸ್ತುತ ಪ್ರಕರಣದಲ್ಲಿ, ಸಂತ್ರಸ್ತೆ ತನ್ನ ದೈನಂದಿನ ಚಟುವಟಿಕೆಗಳನ್ನು ಮಾಡುವಾಗ ವ್ಯಕ್ತಿಯೊಬ್ಬರಿಂದ ಕಿರುಕುಳಕ್ಕೊಳಗಾಗಿರುವ ಬಗ್ಗೆ ದೂರು ನೀಡಿದ್ದರು. 2014ರ ಸೆಪ್ಟೆಂಬರ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ವ್ಯಕ್ತಿಯೊಬ್ಬ ತನ್ನನ್ನು ಲೈಂಗಿಕ ಉದ್ದೇಶದಿಂದ ನೋಡುತ್ತಿದ್ದ. ತಾನು ಸ್ನಾನ ಮಾಡಲು ಹೋದಾಗಲ್ಲೆಲ್ಲಾ ಬಾತ್‌ರೂಮ್‌ನ ಹೊರಗೆ ಬೇರೆ ಬೇರೆ ನೆಪದಲ್ಲಿ ನಿಂತು ಸ್ನಾನಗೃಹದ ಒಳಗೆ ಇಣುಕಿ ನೋಡುತ್ತಿದ್ದ (Peeping to bathroom) ಎಂದು ಆರೋಪಿಯ ವಿರುದ್ಧ ದೂರು ನೀಡಿದ್ದರು. ಆಕೆಯ ವಿರುದ್ಧ ಅಸಭ್ಯ ಟೀಕೆಗಳು, ಕಾಮೆಂಟ್‌ಗಳು ಮತ್ತು ಸನ್ನೆಗಳನ್ನು ರವಾನಿಸುತ್ತಿದ್ದರು ಎಂದು ಸಹ ದೂರಿನಲ್ಲಿ ತಿಳಿಸಲಾಗಿತ್ತು.
ಅತ್ತೆಗೆ ಮಗುವಿನ ಡೈಪರ್ ಬದಲಾಯಿಸಲು ಬಿಡೋಲ್ಲ ಈ ಸೊಸೆ, ಪಾಪು ಪ್ರೈವೆಸಿ ಹೋಗುತ್ತಂತೆ!
ಈ ಬಗ್ಗೆ ವ್ಯಕ್ತಿಯ ವಕೀಲರು (Lawyer) ಮೇಲ್ಮನವಿ ಸಲ್ಲಿಸಿದ್ದರು. ಧಾರ್ಮಿಕ ಸ್ಥಳಗಳಲ್ಲಿ, ವಾಟರ್ ಪಾರ್ಕ್, ಈಜುಕೊಳದಲ್ಲಿ ಮಹಿಳೆಯರು ಹೀಗೆಯೇ ಸ್ನಾನ ಮಾಡುತ್ತಾರೆ ಎಂದು ವಾದಿಸಿದರು, ಆದರೆ ಪವಿತ್ರ ಸ್ನಾನ ಮಾಡುವುದು, ಹೆಣ್ಣು ಮುಚ್ಚಿದ ಸ್ನಾನಗೃಹದಲ್ಲಿ ಸ್ನಾನ ಮಾಡುವುದಕ್ಕೆ ಸಮನಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು.
ಸೆಕ್ಷನ್ 354C ಯ ಅಂಶಗಳನ್ನು ಪ್ರಸ್ತುತ ಪ್ರಕರಣದ ವಾಸ್ತವಿಕ ಪರಿಸ್ಥಿತಿಯಲ್ಲಿ ಹೀಗೆ ಪರೀಕ್ಷಿಸಿದಾಗ, ಈ ಪ್ರಕರಣವನ್ನು ಸೆಕ್ಷನ್ 354C IPC ಯ ವ್ಯಾಖ್ಯಾನದಿಂದ ಈ ನ್ಯಾಯಾಲಯವು ವರ್ಗೀಕರಿಸಿದೆ. IPC ಯ ಸೆಕ್ಷನ್ 354C ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ, 2012 ರ ಸೆಕ್ಷನ್ 12 ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯದಿಂದ ದೋಷಿಯಾಗಿರುವ ಸೋನು ಬಿಲ್ಲಾ ಎಂಬ ಅಪರಾಧಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವ್ಯವಹರಿಸುತ್ತಿದ್ದರು.
IPC ಯ ಸೆಕ್ಷನ್ 354C ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ, 2012 ರ ಸೆಕ್ಷನ್ 12 ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯದಿಂದ ದೋಷಿಯಾಗಿರುವ ಸೋನು @ ಬಿಲ್ಲಾ ಎಂಬ ಅಪರಾಧಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವ್ಯವಹರಿಸುತ್ತಿದ್ದರು. ಘಟನೆಯ ಸಮಯದಲ್ಲಿ ಸಂತ್ರಸ್ತೆ ಕಾಲೇಜಿನಲ್ಲಿದ್ದಳು ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಯ ಸಾಕ್ಷ್ಯದ ಪ್ರಕಾರ, ಘಟನೆಯ ದಿನಾಂಕದಂದು ಆಕೆಗೆ ಸುಮಾರು 17 ವರ್ಷ ವಯಸ್ಸಾಗಿತ್ತು ಎಂದು ನ್ಯಾಯಾಲಯವು ಗಮನಿಸಿದೆ.
'ಇಂಥಾ ಪ್ರಕರಣಗಳಲ್ಲಿಯೂ ವ್ಯಕ್ತಿ ಇಣುಕಿ ನೋಡುವುದು ಆಕೆಯ ಗೌಪ್ಯತೆಯನ್ನು ಆಕ್ರಮಿಸಿದಂತಾಗುತ್ತದೆ. ಆ ಪರಿಸ್ಥಿತಿಯಲ್ಲಿಯೂ ಸಹ, ಐಪಿಸಿಯ ಸೆಕ್ಷನ್ 354C ಮತ್ತು ಅದರ ವಿವರಣೆಯ ಅಡಿಯಲ್ಲಿ ಆಕೆಯ ಫೋಟೋಗಳು, ವೀಡಿಯೊಗಳು ಇತ್ಯಾದಿಗಳನ್ನು ತೆಗೆದುಕೊಳ್ಳಲು ಯಾವುದೇ ವ್ಯಕ್ತಿಗೆ ಹಕ್ಕಿಲ್ಲ'ಎಂದು ನ್ಯಾಯಾಲಯ ಹೇಳಿದೆ. ಆರೋಪಿಯ ಕೃತ್ಯವು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಪೀಠವು ತೀರ್ಮಾನಿಸಿತು. ಸೋನುಗೆ ಒಂದು ವರ್ಷದ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಲಾಯಿತು. ಅರ್ಜಿದಾರರ ಪರ ವಕೀಲ ಆಶಿಶ್ ದಹಿಯಾ ವಾದ ಮಂಡಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.