ಅಬ್ಬಬ್ಬಾ..ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೆ ಒದ್ದಾಡಿದ ಮಹಿಳೆ!

Published : Mar 25, 2023, 12:26 PM ISTUpdated : Mar 25, 2023, 12:34 PM IST
ಅಬ್ಬಬ್ಬಾ..ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ಮಾಡದೆ ಒದ್ದಾಡಿದ ಮಹಿಳೆ!

ಸಾರಾಂಶ

ಮನುಷ್ಯ ಆರೋಗ್ಯವಾಗಿರಬೇಕಾದರೆ ಸಾಕಷ್ಟು ನೀರು ಕುಡಿಯುವುದು ಮತ್ತು ಆಗಾಗ ಮೂತ್ರ ಮಾಡುವುದು ಅಗತ್ಯವಾಗಿದೆ. ಆದರೆ ಕೆಲವೊಬ್ಬರಿಗೆ ಮೂತ್ರಕೋಶದ ಸಮಸ್ಯೆಯಿದ್ದಾಗ ಆಗಾಗ ಮೂತ್ರ ಮಾಡಲು ಆಗುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಭರ್ತಿ 14 ತಿಂಗಳು ಯೂರಿನ್ ಪಾಸ್ ಮಾಡಿಲ್ಲ ಅಂದ್ರೆ ನೀವ್ ನಂಬ್ತೀರಾ?

ದೇಹದ ಹೊಲಸು ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ.  ಮೂತ್ರ ದೇಹದ ಕೊಳಕು ದ್ರವ. ಮೂತ್ರದಲ್ಲಿ ನೀರು, ಉಪ್ಪು, ಪೊಟ್ಯಾಸಿಯಮ್, ರಂಜಕ, ಯೂರಿಯಾ, ಯೂರಿಕ್ ಆಮ್ಲದಂತಹ ಎಲೆಕ್ಟ್ರೋಲೈಟ್‌ ರಾಸಾಯನಿಕವಿರುತ್ತದೆ. ಆಗಾಗ ಮೂತ್ರವನ್ನು ದೇಹದಿಂದ ಹೊರಗೆ ಹಾಕುವುದು ಬಹಳ ಮುಖ್ಯ. ಮೂತ್ರವನ್ನು ಕಟ್ಟಿಕೊಂಡ್ರೆ ಸಮಸ್ಯೆ ಶುರುವಾಗುತ್ತದೆ. ಹಾಗೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಕೂಡ ಒಳ್ಳೆಯದಲ್ಲ. ಮೂತ್ರ ವಿಸರ್ಜನೆ ವಿಧಾನವೇ ನಮ್ಮ ಆರೋಗ್ಯವನ್ನು ಹೇಳುತ್ತದೆ. ಕೆಲವರು ದಿನದ ಸಮಯದಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗ್ತಾರೆ. ಮತ್ತೆ ಕೆಲವರು ರಾತ್ರಿ ಏಳುವ ಅಭ್ಯಾಸ ಹೊಂದಿರ್ತಾರೆ. ರಾತ್ರಿ ಎರಡು ಬಾರಿ ಮೂತ್ರ ವಿಸರ್ಜನೆ ಮಾಡುವುದು ವಿಶೇಷವೇನಲ್ಲ. ಅನೇಕರು ರಾತ್ರಿ ಎರಡು ಬಾರಿ ಮೂತ್ರ ವಿಸರ್ಜನೆ ಮಾಡ್ತಾರೆ. 

ಮಹಿಳೆ ಬರೋಬ್ಬರಿ 14 ತಿಂಗಳುಗಳ ಕಾಲ ಮೂತ್ರಾನೇ ಮಾಡಿಲ್ಲ
ಆದ್ರೆ ಇಂಗ್ಲೆಂಡ್‌ನಲ್ಲೊಬ್ಬ ಮಹಿಳೆ (Women) ಬರೋಬ್ಬರಿ 14 ತಿಂಗಳುಗಳ ಕಾಲ ಮೂತ್ರಾನೇ ಮಾಡಿಲ್ಲ ಅಂದ್ರೆ ನೀವ್ ನಂಬ್ತೀರಾ? ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವೈದ್ಯರು (Doctors) ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ (Urine) ವಿಸರ್ಜನೆ ಮಾಡಲು ಸಾಧ್ಯವಾಗದ ಮಹಿಳೆಯ ಅಪರೂಪದ ಆರೋಗ್ಯ ಸ್ಥಿತಿಯನ್ನು (Health condition) ಪತ್ತೆಹಚ್ಚಿದ್ದಾರೆ.

Urine color: ಮೂತ್ರದ ಬಣ್ಣ ನೋಡಿ, ಆರೋಗ್ಯ ಸಮಸ್ಯೆ ಬಗ್ಗೆ ತಿಳ್ಕೊಳ್ಳಿ

30 ವರ್ಷ ವಯಸ್ಸಿನ ಎಲ್ಲೆ ಆಡಮ್ಸ್ ರಲ್ಲಿ ಅಕ್ಟೋಬರ್ 2020ಲ್ಲಿ ಈ ಸಮಸ್ಯೆಯನ್ನು ಕಂಡುಹಿಡಿಯಲಾಯಿತು. ಇದು ಫೌಲರ್ಸ್ ಸಿಂಡ್ರೋಮ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಅಸಮರ್ಥತೆಯಾಗಿದೆ. ಅಪರೂಪದ ಸ್ಥಿತಿಯು ಮುಖ್ಯವಾಗಿ ಯುವತಿಯರಲ್ಲಿ ಕಂಡು ಬರುತ್ತದೆ ಎಂದು ತಿಳಿದುಬಂದಿದೆ. ಆಡಮ್ಸ್‌ ಎಷ್ಟೇ ನೀರು ಅಥವಾ ಇತರ ದ್ರವವನ್ನು ಕುಡಿದರೂ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲ.

'ನಾನು ಅತ್ಯಂತ ಆರೋಗ್ಯವಂತಳಾಗಿದ್ದೆ. ನನಗೆ ಬೇರೆ ಯಾವುದೇ ಸಮಸ್ಯೆಗಳಿರಲಿಲ್ಲ. ನಾನು ಒಂದು ದಿನ ಎಚ್ಚರಗೊಂಡೆ ಮತ್ತು ನನಗೆ ಮೂತ್ರ ಮಾಡಲು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಮೂತ್ರ ಬರುವ ಅನುಭವವೇ ಆಗುವುದು ನಿಂತು ಹೋಯಿತು' ಎಂದು ಆಡಮ್ಸ್ ಹೇಳಿದರು.

ಮೂತ್ರದಲ್ಲಿ ರಕ್ತ ಮೂತ್ರಪಿಂಡದ ಕ್ಯಾನ್ಸರ್ ಸಂಕೇತವೇ? ಹೀಗೆ ತಿಳಿಯಿರಿ

ಆಕೆಯ ಮೂತ್ರಕೋಶದಲ್ಲಿತ್ತು ಭರ್ತಿ ಒಂದು ಲೀಟರ್ ಮೂತ್ರ
ಆಡಮ್ಸ್ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ರೋಗಲಕ್ಷಣಗಳನ್ನು ವಿವರಿಸಿ ಚಿಕಿತ್ಸೆ (Treatment) ಪಡೆಯಲು ನಿರ್ಧರಿಸಿದರು. ವೈದ್ಯರು ಆಕೆಯ ದೇಹವನ್ನು ಕೂಲಕುಂಷವಾಗಿ ಪರಿಶೀಲನೆ ನಡೆಸಿ, ಆಕೆಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಹೀಗಾಗಿ ವೈದ್ಯರ ತಂಡ ತಕ್ಷಣ ಟ್ಯೂಬ್‌ ಮೂಲಕ ಮೂತ್ರವನ್ನು ಹೊರತೆಗೆಯುವ ಕೆಲಸ ಮಾಡಿತು. 

ಒಂದು ವಾರದ ನಂತರ ಮೂತ್ರಶಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಡಮ್ಸ್ ಅವರಿಗೆ ಸ್ವಯಂ-ಟ್ಯೂಬ್ ಮೂಲಕ ಮೂತ್ರ ತೆಗೆಯುವುದು ಹೇಗೆಂದು ಹೇಗೆಂದು ಕಲಿಸಲಾಯಿತು ಮತ್ತು ಮನೆಗೆ ಕಳುಹಿಸಲಾಯಿತು. ಈಗ ಸ್ಪಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದೇನೆ ಎಂದು ಆಡಮ್ಸ್ ಹೇಳಿದ್ದಾರೆ.

Health Tips: ನಕ್ಕರೂ ಮೂತ್ರ ಸೋರಿ ಮುಜುಗರವಾಗ್ತಿದ್ಯಾ? ಹೀಗೆ ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?