ವಿಶ್ವದ ಅತ್ಯಂತ ವೇಗದ ಮಹಿಳೆ ಕಿಟ್ಟಿ ಓನೀಲ್‌ಗೆ ಗೂಗಲ್ ಡೂಡಲ್‌ ಗೌರವ

By Vinutha PerlaFirst Published Mar 24, 2023, 2:15 PM IST
Highlights

ಗೂಗಲ್ ಡೂಡಲ್ ಅಮೇರಿಕದ ಸ್ಟಂಟ್ ಪ್ರದರ್ಶಕರಾದ ಕಿಟ್ಟಿ ಓನೀಲ್ ಅವರಿಗೆ ಗೌರವ ಸಲ್ಲಿಸಿದೆ. 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಗೂಗಲ್, ಇವರು ಜೀವನದ ಸಾಹಸ ಮತ್ತು ಸಾಧನೆಯ ಬಗ್ಗೆ ಈ ಮೂಲಕ ತಿಳಿಸಿದೆ. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ಅಮೇರಿಕನ್ ಸ್ಟಂಟ್ ಪ್ರದರ್ಶಕರು ಮತ್ತು ವಿಶ್ವದ ಅತ್ಯಂತ ವೇಗದ ಮಹಿಳೆ ಕಿಟ್ಟಿ ಓನೀಲ್‌ಗೆ ಗೂಗಲ್ ಗೌರವ ಸಲ್ಲಿಸಿದೆ. ವಿಶೇಷ ಡೂಡಲ್‌ನ್ನು ಸಿದ್ಧಪಡಿಸಿ ಅವರ ಸಾಧನೆಯನ್ನು ನೆನಪಿಸಿದೆ. ಕಿಟ್ಟಿ ಓನೀಲ್‌, 1946ರಲ್ಲಿ ಟೆಕ್ಸಾಸ್‌ನಲ್ಲಿ ಜನಿಸಿದರು. ಆಕೆಗೆ ಕಿವಿ ಕೇಳುತ್ತಿರಲ್ಲಿಲ್ಲ. ಆದರೂ ಅತಿ ವೇಗದ ಕ್ರೀಡೆಗಳು ಮತ್ತು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿ ಅಸಾಧಾರಣ ಮಹಿಳೆ ಎಂದು ಕರೆಸಿಕೊಂಡಿದ್ದರು. ಇದೀಗ ಇವರ 77ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಗೂಗಲ್, ಇವರ ಜೀವನದ ಸಾಹಸ ಮತ್ತು ಸಾಧನೆಯ ಬಗ್ಗೆ ಈ ಮೂಲಕ ತಿಳಿಸಿದೆ.

ಗೂಗಲ್ ತನ್ನ ಮುಖಪುಟದಲ್ಲಿ ತಿಳಿಸಿರುವಂತೆ ಓನೀಲ್ ಹೆಲಿಕಾಪ್ಟರ್‌ನಿಂದ ಜಿಗಿಯುವುದು, ರೇಸ್ ಕಾರನ್ನು ಓಡಿಸುವುದು ಮತ್ತು ನೀಲಿ ಮತ್ತು ಬಿಳಿ ಹಿನ್ನೆಲೆಯಲ್ಲಿ ಕಿತ್ತಳೆ ಬಣ್ಣದ ಸೂಟ್‌ನಲ್ಲಿ ವಿಜಯಶಾಲಿಯಾಗಿ ಪೋಸ್ ನೀಡುವುದನ್ನು ತೋರಿಸಿದೆ.

ಪಿಕೆ ರೋಸಿಗೆ ಗೂಗಲ್ ಡೂಡಲ್ ಗೌರವ; ಚಿತ್ರಮಂದಿರಕ್ಕೆ ಬೆಂಕಿ, ಗಡಿಪಾರು, ಮಲಯಾಳಂ ಮೊದಲ ನಟಿಯ ರೋಚಕ ಪಯಣ

ಹಲವಾರು ಕಾಯಿಲೆಗಳಿಗೆ ತುತ್ತಾಗಿ ಶ್ರವಣಶಕ್ತಿ ಕಳೆದುಕೊಂಡ ಕಿಟ್ಟಿ ಓನೀಲ್‌ 
ಗೂಗಲ್ ಪ್ರಕಾರ, ಓನೀಲ್ ಕೆಲವೇ ತಿಂಗಳುಗಳ ವಯಸ್ಸಿನವರಾಗಿದ್ದಾಗ, ಹಲವಾರು ಕಾಯಿಲೆಗಳಿಗೆ (Disease) ತುತ್ತಾಗಿದರು. ಇದು ತೀವ್ರವಾದ ಜ್ವರಕ್ಕೆ ಕಾರಣವಾಯಿತು. ಇದರಿಂದ ಅವರು ಶ್ರವಣ ಶಕ್ತಿಯನ್ನು ಸಹ ಕಳೆದುಕೊಂಡರು. ಆ ನಂತರ ಅವರು ವಿವಿಧ ಸಂವಹನ ವಿಧಾನಗಳನ್ನು (Communication skills) ಕಲಿತರು. ಬಳಿಕ ವಿವಿಧ ಅಪಾಯಕಾರಿ ಸ್ಟಂಟ್‌ಗಳಲ್ಲಿ ಭಾಗಿಯಾಗಲು ಶುರು ಮಾಡಿದರು. ಓನೀಲ್ ತಮ್ಮ ಕಿವುಡುತನವನ್ನು ತಡೆಯಾಗಿ ನೋಡಲಿಲ್ಲ. ಬದಲಿಗೆ ಅದನ್ನೇ ಸವಾಲಾಗಿ ತೆಗೆದುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆದರು. ಕಷ್ಟಗಳ ನಡುವೆಯೂ ವೃತ್ತಿಪರ ಅಥ್ಲೀಟ್ ಆಗುವ ತನ್ನ ಕನಸನ್ನು ನನಸಾಗಿಸಲು ಅವಳು ಬದ್ಧರಾಗಿದ್ದರು ಎಂದು ಗೂಗಲ್ ಹೇಳಿದೆ.

ಓನೀಲ್ ವಾಟರ್ ಸ್ಕೀಯಿಂಗ್ ಮತ್ತು ಮೋಟಾರ್‌ಸೈಕಲ್ ರೇಸಿಂಗ್‌ನಂತಹ ಹೈ-ಸ್ಪೀಡ್ ಕ್ರೀಡೆಗಳಲ್ಲಿ (Sports activities) ಭಾಗಿಯಾಗುತ್ತಿದ್ದರು. ನಿಜವಾದ ಆಕ್ಷನ್-ಪ್ರೇಮಿಯಾಗಿದ್ದರು.ಬೆಂಕಿ ಹಚ್ಚುವಾಗ ಎತ್ತರದಿಂದ ಬೀಳುವ ಮತ್ತು ಹೆಲಿಕಾಪ್ಟರ್‌ಗಳಿಂದ ಜಿಗಿಯುವಂತಹ ಅಪಾಯಕಾರಿ ಸ್ಟಂಟ್‌ಗಳಲ್ಲಿ ಭಾಗಿಯಾಗುತ್ತಿದ್ದರು. 

International womens day 2023: ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್ ಡೂಡಲ್

ಹಲವು ದಾಖಲೆಗಳನ್ನು ಸರಿಗಟ್ಟಿದ ವಿಶ್ವದ ಅತ್ಯಂತ ವೇಗದ ಮಹಿಳೆ
ಓನೀಲ್ 1976ರಲ್ಲಿ ರಾಕೆಟ್ ಚಾಲಿತ ಕಾರಿನಲ್ಲಿ ಗಂಟೆಗೆ 512.76 ಮೈಲುಗಳ ವೇಗದಲ್ಲಿ ಓರೆಗಾನ್ ರಾಜ್ಯದ ಆಲ್ವರ್ಡ್ ಮರುಭೂಮಿಯಾದ್ಯಂತ ತನ್ನ ಅಂತಿಮ ಸಾಧನೆಯನ್ನು ಸಾಧಿಸಿದರು. ಅವರು ಲ್ಯಾಂಡ್-ಸ್ಪೀಡ್‌ನಲ್ಲಿ ಹಿಂದಿನ ಮಹಿಳಾ ದಾಖಲೆಯನ್ನು ಮುರಿದರು ಮತ್ತು ಪುರುಷರ ಸಾಧನೆಯನ್ನು ಸಹ ಹಿಂದಿಕ್ಕಿದರು. ಆದರೆ ಒಟ್ಟಾರೆ ದಾಖಲೆಯನ್ನು ಮೀರಿಸುವ ಅವಕಾಶವನ್ನು ಆಕೆಗೆ ನೀಡಲಾಗಲ್ಲಿಲ್ಲ, ಏಕೆಂದರೆ ಅದು ಯಥಾಸ್ಥಿತಿಗೆ ತೊಂದರೆ ಉಂಟುಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ನೀಲ್ ಈ ಕುರಿತು ಕಾನೂನುಬದ್ಧವಾಗಿ ಹೋರಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಓನೀಲ್ ಪೈಲಟಿಂಗ್ ರಾಕೆಟ್ ಡ್ರ್ಯಾಗ್‌ಸ್ಟರ್‌ಗಳು ಮತ್ತು ಜೆಟ್-ಚಾಲಿತ ದೋಣಿಗಳು ಸೇರಿದಂತೆ ಇತರ ಹಲವು ದಾಖಲೆಗಳನ್ನು ಸರಿಗಟ್ಟುವಷ್ಟು ಸಾಧನೆ ಮಾಡಿರು. 70ರ ದಶಕದ ಉತ್ತರಾರ್ಧದಲ್ಲಿ, ಅವರು 'ದಿ ಬ್ಲೂಸ್ ಬ್ರದರ್ಸ್', 'ದಿ ಬಯೋನಿಕ್ ವುಮನ್' ಮತ್ತು 'ವಂಡರ್ ವುಮನ್' ಸೇರಿದಂತೆ ಹಲವಾರು ಸಾಹಸ ಚಲನಚಿತ್ರಗಳಲ್ಲಿ ಸ್ಟಂಟ್ ಡಬಲ್ ಆಗಿ ಸೇವೆ ಸಲ್ಲಿಸಿದರು. ಹಾಲಿವುಡ್‌ನ ಅತ್ಯುತ್ತಮ ಸಾಹಸ ಪ್ರದರ್ಶನಕಾರರ ಸಂಘವಾದ ಸ್ಟಂಟ್ಸ್ ಅನ್‌ಲಿಮಿಟೆಡ್‌ಗೆ ಸೇರಿದ ಮೊದಲ ಮಹಿಳೆ ಕೂಡ ಇವರಾಗಿದ್ದಾರೆ.

ಸೋಲಿಲ್ಲದ ಸರದಾರ ಪೈಲ್ವಾನ್ ಗಾಮಗೆ ವಿನೂತನ ಗೌರವ ಸಲ್ಲಿಸಿದ Google Doodle

'ಸೈಲೆಂಟ್ ವಿಕ್ಟರಿ: ದಿ ಕಿಟ್ಟಿ ಓ'ನೀಲ್ ಸ್ಟೋರಿ' ಎಂಬ ಶೀರ್ಷಿಕೆಯ Ms ಓ'ನೀಲ್ ಅವರ ಜೀವನದ ಕುರಿತಾದ ಜೀವನಚರಿತ್ರೆ 1979 ರಲ್ಲಿ ಬಿಡುಗಡೆಯಾಯಿತು . ಓನೀಲ್ 2018ರಲ್ಲಿ ದಕ್ಷಿಣ ಡಕೋಟಾದಲ್ಲಿ ನಿಧನರಾದರು.

click me!