
ಗರ್ಭಿಣಿಯಾಗುವುದು ನಿಜಕ್ಕೂ ಖುಷಿ ನೀಡುವ ವಿಚಾರ. ಹೀಗಾಗಿ ಮಹಿಳೆಯರು ಈ ನೆನಪನ್ನು ಜೋಪಾನವಾಗಿಡಲು ಬಯಸುತ್ತಾರೆ. ಅದಕ್ಕಾಗಿಯೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಮೊದಲ್ಲೆಲ್ಲಾ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾತ್ರ ಮಾಡಲಾಗುತ್ತಿತ್ತು. ಆದರೆ ಈಗ ಫೋಟೋಶೂಟ್ ಹೆಚ್ಚು ಟ್ರೆಂಡ್ ಆಗ್ತಿದೆ. ಪ್ರೆಗ್ನೆಂಟ್ ಲೇಡಿ ತನ್ನ ಸ್ಟೈಲಿಶ್ ಬಟ್ಟೆ ಧರಿಸಿ ಹೊಟ್ಟೆಯನ್ನು ತೋರಿಸಿ ಫೋಸ್ ನೀಡುತ್ತಾಳೆ. ಇದಕ್ಕೆ ನಾನಾ ರೀತಿಯ ಥೀಮ್ ಸಹ ಸೇರಿಸಲಾಗುತ್ತದೆ. ಸದ್ಯ ಅದೇ ರೀತಿ ಗರ್ಭಿಣಿಯೊಬ್ಬಳು ಮಾಡಿರೋ ಫೋಟೋಶೂಟ್ ವೈರಲ್ ಆಗ್ತಿದೆ.
ಮೂರು ತಲೆಮಾರಿನವರ ಪ್ರೆಗ್ನೆನ್ಸಿ ಫೋಟೋಶೂಟ್ ವೈರಲ್
ಪ್ರತಿಯೊಬ್ಬರೂ ತಮ್ಮ ಜೀವನದ ವಿಶೇಷ ಕ್ಷಣಗಳನ್ನು ಹಾಗೆಯೇ ಜೋಪಾನ ಮಾಡಲು ಬಯಸುತ್ತಾರೆ. ಹೀಗಾಗಿ ಸಮಾರಂಭದ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಎಲ್ಲದರ ಫೋಟೋ ಶೂಟ್ ಮಾಡುತ್ತಿದ್ದಾರೆ. ಇದು ಹುಟ್ಟುಹಬ್ಬ (Birthday), ಮದುವೆ (Marriage) ಅಥವಾ ಹೊಸ ಮಗುವಿನ ಆಗಮನವಾಗಿರಬಹುದು. ಈ ದಿನಗಳಲ್ಲಿ ಪ್ರತಿಯೊಂದಕ್ಕೂ ಫೋಟೋ ಶೂಟ್ ಇದೆ. ಅದಕ್ಕಾಗಿಯೇ ವೆಡ್ಡಿಂಗ್ ಫೋಟೋಶೂಟ್, ಪ್ರೀ ವೆಡ್ಡಿಂಗ್ ಫೋಟೋಶೂಟ್, ಪ್ರೆಗ್ನೆನ್ಸಿ ಮತ್ತು ಮೆಟರ್ನಿಟಿ ಫೋಟೋಶೂಟ್‌ನ ಹೊಸ ಟ್ರೆಂಡ್‌ಗಳು ಪ್ರಾರಂಭವಾಗುತ್ತಿವೆ.
28 ವರ್ಷಕ್ಕೇ 9 ಮಕ್ಕಳ ತಾಯಿ, ಬರೋಬ್ಬರಿ 12 ವರ್ಷ ಸತತವಾಗಿ ಗರ್ಭಿಣಿಯಾದ ಮಹಿಳೆ!
ಸದ್ಯ ವಿವಿಧ ರೀತಿಯ ಫೋಟೋ ಶೂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿವೆ. ಫೋಟೋ ಶೂಟ್‌ಗಳಿಗಾಗಿ ವಿಭಿನ್ನ ಥೀಮ್‌ಗಳನ್ನು ಸಹ ಅನ್ವೇಷಿಸಲಾಗುತ್ತದೆ. ಆದರೆ ಸದ್ಯ ವಿಭಿನ್ನವಾದ ಪ್ರೆಗ್ನೆನ್ಸಿ ಫೋಟೋ ಶೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಪ್ರೆಗ್ನೆಂಟ್ ಆಗಿರುವಾಗ ಇತ್ತೀಚಿಗೆ ಎಲ್ಲರೂ ಫೋಟೋಶೂಟ್ ಎಲ್ಲರೂ ಮಾಡಿಕೊಳ್ತಾರೆ. ಆದ್ರೆ ಈ ಫೋಟೋಶೂಟ್ ಮಾತ್ರ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ ಈ ಫೋಟೋಶೂಟ್‌ನಲ್ಲಿ ಗರ್ಭಿಣಿ ತನ್ನ ಅತ್ತೆ, ಅಮ್ಮ ಮತ್ತು ಅಜ್ಜಿ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮೂರು ತಲೆಮಾರುಗಳನ್ನು (Three generation) ಒಂದೇ ಫೊಟೋದಲ್ಲಿ ನೋಡಲು ನಿಜಕ್ಕೂ ಖುಷಿಯಾಗುತ್ತದೆ.
3 ತಲೆಮಾರುಗಳ ಮಹಿಳೆಯರು ಒಂದೇ ಸಮಯದಲ್ಲಿ ಗರ್ಭಿಣಿಯಾದರಾ?
ಪ್ರೆಗ್ನೆನ್ಸಿ ಫೋಟೋ ಶೂಟ್‌ನಲ್ಲಿ ಗರ್ಭಿಣಿಯ ತಾಯಿ ಮಾತ್ರವಲ್ಲದೆ ಅತ್ತೆ (Mother in law) ಮತ್ತು ಅಜ್ಜಿ ಕೂಡ ಕಾಣಿಸಿಕೊಂಡಿದ್ದಾರೆ. 3 ತಲೆಮಾರುಗಳ ಮಹಿಳೆಯರು (Women) ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆಯೇ? ಇದು ಹೇಗೆ ಸಾಧ್ಯ ಎಂದು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಇದು ನಿಜವಾದ ಫೋಟೋಶೂಟ್ ಅಲ್ಲ. ಕಾಲ್ಪನಿಕ ಎಂಬುದು ಆ ನಂತರ ತಿಳಿದುಬಂದಿದೆ.
ತಾಯಿ, ಅತ್ತೆ ಮತ್ತು ಅಜ್ಜಿ ಒಟ್ಟಿಗೆ ತಮ್ಮ ಮಗುವಿನ ಹೊಟ್ಟೆಯನ್ನು ಪ್ರದರ್ಶಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇದರಲ್ಲಿ ಒಬ್ಬಾಕೆಯಷ್ಟೇ ಗರ್ಭಿಣಿ ಉಳಿದವರು ಹೊಟ್ಟೆ ಮೇಲೆ ದಿಂಬು ಇಟ್ಟು ಫೋಟೋ ಶೂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Health: ಆಂಬ್ಯುಲೆನ್ಸ್‌ನಲ್ಲೆ ಅವಳಿಗೆ ಜನ್ಮ ನೀಡಿದ 7 ತಿಂಗಳ ಗರ್ಭಿಣಿ!
ಕೇರಳದ ಜಿಬಿನ್ ಎಂಬವರು ಈ ಪೋಟೋಶೂಟ್ ಮಾಡಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಜಿಬಿನ್ ಅವರ ಪತ್ನಿ ಚಿಂಜು ಇತ್ತೀಚೆಗೆ ಗರ್ಭಿಣಿಯಾಗಿದ್ದಾರೆ. ಅವಳು ಗರ್ಭಿಣಿಯಾಗುತ್ತಿದ್ದಂತೆ ಮನೆಯಲ್ಲಿ ಎಲ್ಲರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಛಾಯಾಗ್ರಾಹಕ ಜಿಬಿನ್, ತನ್ನ ಹೆಂಡತಿಯ ಮಗುವಿನ ಬಂಪ್ನ ಫೋಟೋಗಳನ್ನ ತೆಗೆದುಕೊಳ್ಳಲು ನಿರ್ಧರಿಸಿದನು. ಜಿಬಿನ್ ಹೊಸದನ್ನ ಪ್ರಯತ್ನಿಸಲು ಯೋಚಿಸಿದ್ದು, ಈ ರೀತಿ ಫೋಟೋಶೂಟ್ ಮಾಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.