
ಹೆಣ್ಣೆಂದರೆ ತಾಯಿ..ಎಲ್ಲವನ್ನೂ ಸಹಿಸುವ ಶಕ್ತಿ. ಆದರೆ ಆಕೆಯ ಗರ್ಭಾವಸ್ಥೆ (Pregnancy) ಮಾತ್ರ ಅತ್ಯಂತ ಸೂಕ್ಷ್ಮವಾದ ವಿಚಾರ. ಸ್ಪಲ್ಪ ಹೆಚ್ಚು ಕಡಿಮೆಯಾದರೂ ಆಕೆಯ ಜೀವಕ್ಕೇ ಕುತ್ತು ಬರಬಹುದು. ಹೀಗಾಗಿಯೇ ಗರ್ಭಿಣಿಯರಿಗೆ ಹೆಚ್ಚು ಕೆಲಸ ಮಾಡದಂತೆ, ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಕಂಪೆನಿಗಳು, ಗಾರ್ಮೆಂಟ್ಸ್ ಗರ್ಭಿಣಿಯರಿಗೆ ಹೆರಿಗೆ ರಜೆಯನ್ನು (Maternity leave) ನೀಡುತ್ತವೆ. ಮಾತ್ರವಲ್ಲ ಕೆಲವೊಂದು ವಿಶೇಷ ಸವಲತ್ತುಗಳನ್ನು ಸಹ ನೀಡುತ್ತವೆ. ಆದ್ರೆ ಇಲ್ಲೊಂದು ಕಂಪೆನಿ ಇಷ್ಟೆಲ್ಲಾ ಸೌಲಭ್ಯ (Facility) ಕೊಡುವುದಿರಲಿ, ಮಹಿಳಾ ಉದ್ಯೋಗಿ ಗರ್ಭಿಣಿಯೆಂದು ತಿಳಿದ ಕೂಡಲೇ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ.
ಮಹಿಳೆ ಗರ್ಭಿಣಿಯೆಂದು ತಿಳಿದು ಕೆಲಸದಿಂದ ವಜಾ ಮಾಡಿದ ಅಧಿಕಾರಿ
ಒಬ್ಬ ಮಹಿಳೆ ತನ್ನ ಗರ್ಭಾವಸ್ಥೆಯ ಬಗ್ಗೆ ತನ್ನ ಉನ್ನತ ಅಧಿಕಾರಿಗಳಿಗೆ (Higher officers) ತಿಳಿಸಿದ ನಂತರ ತನ್ನ ಕೆಲಸ (Job)ವನ್ನು ಕಳೆದುಕೊಂಡಳು. ಯುಕೆಯಲ್ಲಿ ಈ ಘಟನೆ ನಡೆದಿದೆ. 34 ವರ್ಷದ ಮಹಿಳೆ, ಶಾರ್ಲೆಟ್ ಲೀಚ್, ಎಸ್ಸೆಕ್ಸ್-ಆಧಾರಿತ ಭದ್ರತಾ ವ್ಯವಸ್ಥೆ ಪೂರೈಕೆದಾರ ಸಂಸ್ಥೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತನಗೆ ಮಗುವಿನ (Baby) ನಿರೀಕ್ಷೆ ಇದೆ ಎಂದು ಮ್ಯಾನೇಜರ್‌ಗಳಿಗೆ ತಿಳಿಸಿದ ಕೂಡಲೇ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಮಹಿಳೆಯರಿಗೆ ತಾಯಂದಿರದ್ದೇ ಗರ್ಭಕೋಶ ಕಸಿ, ಯಶಸ್ವೀ ಸರ್ಜರಿ ಮಾಡಿದ ತಜ್ಞರ ತಂಡ
ಮಹಿಳೆ ತನ್ನ ಮ್ಯಾನೇಜರ್‌ಗೆ ತಾನು ಈ ಹಿಂದೆ ಹಲವಾರು ಗರ್ಭಪಾತಗಳನ್ನು ಅನುಭವಿಸಿದ್ದೇನೆ ಎಂದು ಹೇಳಿದರು. ಈಗಾಗಲೇ ತಾಯಿಯಾಗಿರುವ ಮಹಿಳೆ ತನ್ನ ಹುಟ್ಟಲಿರುವ ಮಗುವಿನ ಯೋಗಕ್ಷೇಮದ ಬಗ್ಗೆ ಕಾಳಜಿ (Care) ವಹಿಸುವುದಾಗಿ ಹೇಳಿದ್ದಾರೆ. ಆಕೆಯ ಕಾಳಜಿಗೆ ಪ್ರತಿಕ್ರಿಯೆಯಾಗಿ, ಮಹಿಳೆಯ ಮ್ಯಾನೇಜರ್ ಆಕೆಗೆ ಟರ್ಮಿನೇಶನ್ ಪತ್ರವನ್ನು ನೀಡಿದರು.
ಮಹಿಳೆಗೆ 15 ಲಕ್ಷ ರೂ. ನೀಡುವಂತೆ ಸೂಚಿಸಿದ ಉದ್ಯೋಗ ನ್ಯಾಯಮಂಡಳಿ
ಹೆಚ್ಚುವರಿಯಾಗಿ, ಉದ್ಯೋಗ ಒಪ್ಪಂದಕ್ಕೆ ಸಹಿ ಮಾಡದ ಕಾರಣ ಮಹಿಳೆಗೆ ಮಾತೃತ್ವ ರಜೆಗೆ ಅರ್ಹತೆ ಇಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ. ದುರದೃಷ್ಟವಶಾತ್, ಮುಕ್ತಾಯದ ದಿನಗಳ ನಂತರ, ಮಹಿಳೆ ತನ್ನ ಮಗುವನ್ನು ಕಳೆದುಕೊಂಡರು. ಶೀಘ್ರದಲ್ಲೇ, ಲೀಚ್ ಅವರ ಘಟನೆಯನ್ನು ಉದ್ಯೋಗ ನ್ಯಾಯಮಂಡಳಿಯಲ್ಲಿ ನೋಂದಾಯಿಸಲಾಯಿತು. ಉದ್ಯೋಗ ನ್ಯಾಯಮಂಡಳಿಗೆ ತನ್ನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, 'ಅನಿರೀಕ್ಷಿತವಾಗಿ ಕೆಲಸದಿಂದ ವಜಾ ಮಾಡಿರುವುದು ನನಗೆ ಆಘಾತವನ್ನುಂಟುಮಾಡಿತು. ಇದು ನನ್ನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿತು. ಇದು ಸಂಪೂರ್ಣ ಅವ್ಯವಸ್ಥೆಯನ್ನು ಉಂಟುಮಾಡಿತು. ನಾನು ಆಗಾಗ ಸಾರ್ವಕಾಲಿಕ ಪ್ಯಾನಿಕ್ ಅಟ್ಯಾಕ್‌ಗಳನ್ನು ಅನುಭವಿಸಿದೆ' ಎಂದು ತಿಳಿಸಿರು.
ಆಕೆಯ ಪ್ರಕರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ, ಮಹಿಳೆಗೆ 15 ಲಕ್ಷ ರೂ (ಸುಮಾರು 14,885 ಪೌಂಡ್‌ಗಳು) ಪರಿಹಾರವನ್ನು ನೀಡಲಾಯಿತು. ಮೇ 2021 ರಲ್ಲಿ ಲೀಚ್ ತನ್ನ ಉದ್ಯೋಗವನ್ನು ಆಡಳಿತ ಸಹಾಯಕರಾಗಿ ಪ್ರಾರಂಭಿಸಿದರು. ಅವರ ವಾರ್ಷಿಕ ವೇತನ ಪ್ಯಾಕೇಜ್ ಸುಮಾರು 20 ಲಕ್ಷ ರೂ. ಆಗಿದೆ.
ಸುಂದರ ಮಕ್ಕಳ ಫೋಟೋ ಗರ್ಭಿಣಿ ನೋಡಿದ್ರೆ ಹುಟ್ಟೋ ಮಗು ಚೆಂದ ಇರುತ್ತಾ?
ತಾಯ್ತನ, ಕೆರಿಯರ್ ಒಟ್ಟಿಗೆ ನಿಭಾಯಿಸೋ ಕಷ್ಟ ಹೆಣ್ಣಿಗಷ್ಟೇ ಗೊತ್ತು ಎಂದ ಕೋರ್ಟ್
ಮೆಟರ್ನಿಟಿ ರಜೆ ತೆಗೆದುಕೊಳ್ಳುವುದು ಹೆಣ್ಮಕ್ಕಳಿಗೆ ಉದ್ಯೋಗದಲ್ಲಿದ್ದಾಗ ಎದುರಾಗುವ ದೊಡ್ಡ ಸಮಸ್ಯೆ. ಬಹಳಷ್ಟು ಸಲ ಕೆಲಸ ಬಿಡು, ಇಲ್ಲ ಕಚೇರಿಗೆ ಬಾ ಎಂದಷ್ಟೇ ಆಯ್ಕೆಗಳು ತಾಯಿಯಾಗುವ ಹೆಣ್ಣಿನ ಮುಂದಿರುತ್ತದೆ. ನವಜಾತ ಶಿಶುವನ್ನು ಬಿಟ್ಟು ಕಚೇರಿಗೆ ಹೋಗುವುದು ಸಾಧ್ಯವಿಲ್ಲ ಎಂದಾದಾಗ ಬಹಳಷ್ಟು ಹೆಣ್ಣುಮಕ್ಕಳು ಕುಟುಂಬ ಮುಖ್ಯ ಎಂದು ಕೆಲಸದ ಆಸೆಯನ್ನೇ ಬಿಟ್ಟು ಮನೆ ಸೇರಬೇಕಾಗುತ್ತದೆ. ಈ ಮೂಲಕ ಅವರ ಆರ್ಥಿಕ ವರಮಾನವೂ ನಿಲ್ಲುತ್ತದೆ. ಇಂತಹದ್ದೇ ಒಂದು ಘಟನೆ ಕೇರಳದಲ್ಲಿ ವರದಿಯಾಗಿದೆ.
ಅಮ್ಮನಾಗಲಿರುವ ಮಹಿಳೆ ರಜೆ ಕೇಳಿದ್ದಾರೆ. ರಜೆ ಸಿಗದಿದ್ದಾಗ ರಜೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಅವರನ್ನು ಕೆಲಸದಿಂದಲೇ ತೆಗೆದುಹಾಕಲಾಗಿದೆ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಈಕೆಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಕೆಲವು ಸೂಕ್ಷ್ಮ ವಿಚಾರಗಳನ್ನೂ ಎತ್ತಿ ಹಿಡಿದಿದೆ.
ಮಹಿಳೆಗೆ ಹೆರಿಗೆ ರಜೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಮಹಿಳೆ ಕೇರಳ ಹೈಕೋರ್ಟ್ ನ್ಯಾಯ ಒದಗಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೆರಿಗೆ ರಜೆ ನೀಡದೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿತ್ತು. ಆದರೆ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಲು ಸರ್ಕಾರ ಹೇಳಿರುವ ಕಾರಣವನ್ನು ಕೋರ್ಟ್ ತಳ್ಳಿ ಹಾಕಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ದೇವನ್ ರಾಮಚಂದ್ರನ್ ಅವರು ತೀರ್ಪು ಹೇಳುವಾಗ ತಾಯ್ತನ ಮತ್ತು ಕೆರಿಯರ್ ಜೊತೆಗೇ ನಿರ್ವಹಿಸುವುದು ಎಷ್ಟು ಕಷ್ಟ ಎಂದು ಒಬ್ಬ ಹೆಣ್ಣು ಮಾತ್ರ ತಿಳಿಯಲು ಸಾಧ್ಯ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.