ಮೀನು ತಿನ್ನೋಕೆ ಇಷ್ಟ ಆದ್ರೆ ಅದ್ರ ಸ್ಮೆಲ್ ಕಷ್ಟ ಎನ್ನುವವರಿದ್ದಾರೆ. ಎಷ್ಟು ತೊಳೆದ್ರೂ ಅದ್ರ ವಾಸನೆ ಹೋಗಲ್ಲ ಎನ್ನುವ ಮಹಿಳೆಯರು ಮೀನನ್ನು ಕ್ಲೀನ್ ಮಾಡುವಾಗ ಬುದ್ಧಿವಂತಿಗೆ ಉಪಯೋಗಿಸಬೇಕು. ಬರೀ ನೀರಲ್ಲ, ನೀರಿಗೆ ಕೆಲ ವಸ್ತು ಮಿಕ್ಸ್ ಮಾಡಿದ್ರೆ ಮೀನಿನಿಂದ ವಾಸನೆ ಬರೋದಿಲ್ಲ.
ಮೀನು ನಾನ್ ವೆಜ್ ಪ್ರಿಯರ ಇಷ್ಟದ ಆಹಾರದಲ್ಲಿ ಒಂದು. ಫಿಶ್ ಆಹಾರವನ್ನು ಜನರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದ್ರೆ ಕೆಲ ನಾನ್ ವೆಜ್ ಪ್ರೇಮಿಗಳಿಗೆ ಫಿಶ್ ಇಷ್ಟವಾಗುವುದಿಲ್ಲ. ಇದಕ್ಕೆ ಕಾರಣ ಮೀನಿನಿಂದ ಬರುವ ವಾಸನೆ. ಮೀನಿನಿಂದ ಬರುವ ದುರ್ವಾಸನೆಯನ್ನು ಸಹಿಸಲು ಸಾಧ್ಯವಾಗೋದಿಲ್ಲ. ಮೀನನ್ನು ಮನೆಗೆ ತಂದು ಸರಿಯಾಗಿ ಕ್ಲೀನ್ ಮಾಡಿದ್ರೆ ಅದರ ವಾಸನೆ ಕಡಿಮೆಯಾಗುತ್ತದೆ. ಅನೇಕ ಬಾರಿ ಅದನ್ನು ಸರಿಯಾಗಿ ಸ್ವಚ್ಛಗೊಳಿಸದೆ ಬಳಸಲಾಗುತ್ತದೆ. ಇದ್ರಿಂದ ಫಿಶ್ ಆಹಾರ ವಾಸನೆ ಬರಲು ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ಈಗ ಅಡುಗೆಗೆ ಸಿದ್ಧವಾದ ಮೀನುಗಳು ಸಿಗುತ್ತದೆ. ಅದನ್ನು ಹೆಚ್ಚು ಸ್ವಚ್ಛಗೊಳಿಸಬೇಕಾಗಿಲ್ಲ. ಪ್ಯಾಕೆಟ್ ನಲ್ಲಿಯೇ ಅದು ಲಭ್ಯವಿರುತ್ತದೆ. ಆದ್ರೆ ಎಲ್ಲ ಕಡೆ ನಿಮಗೆ ಈ ಸೌಲಭ್ಯವಿರೋದಿಲ್ಲ. ಮತ್ತೆ ಕೆಲವರು ತಾಜಾ ಮೀನಿನ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಅಂಥವರು ಮನೆಗೆ ಫಿಶ್ ತಂದು ಅದನ್ನು ಸ್ವಚ್ಛಗೊಳಿಸಿ ಆಹಾರ ತಯಾರಿಸುತ್ತಾರೆ. ನಿಮ್ಮ ಮನೆಯಲ್ಲಿ ಮಾಡುವ ಫಿಶ್ ಅಡುಗೆ ಕೂಡ ಕೆಟ್ಟ ವಾಸನೆ ಬರ್ತಿದೆ ಎಂದಾದ್ರೆ ಕೆಲ ಟಿಪ್ಸ್ ಫಾಲೋಮಾಡಿ. ನಾವಿಂದು ಯಾವುದ್ರಿಂದ ಮೀನನ್ನು ಸ್ವಚ್ಛಗೊಳಿಸಿದ್ರೆ ಫಿಶ್ ವಾಸನೆ ಹೋಗುತ್ತದೆ ಎಂಬುದನ್ನು ನಿಮಗೆ ಹೇಳ್ತೆವೆ.
ಫಿಶ್ ಕ್ಲೀನ್ (Clean) ಗೆ ಬಳಸಿ ಉಪ್ಪು ಮತ್ತು ಹಿಟ್ಟು : ಮೀನಿನ ವಾಸನೆಯನ್ನು ತೆಗೆದುಹಾಕಲು ನೀವು ಮನೆಯಲ್ಲಿರುವ ಯಾವುದೇ ಹಿಟ್ಟು ಮತ್ತು ಉಪ್ಪನ್ನು ಬಳಸಬಹುದು. ಮಾರುಕಟ್ಟೆ (Market) ಯಿಂದ ತಂದ ಮೀನನ್ನು ನೀವು ಕನಿಷ್ಠ 2-3 ಬಾರಿ ನೀರಿನಲ್ಲಿ ತೊಳೆಯಬೇಕು. ಅದರ ನಂತರ ಹಿಟ್ಟು ಮತ್ತು ಉಪ್ಪನ್ನು ಮೀನಿನ ಮೇಲೆ ಹಾಕಬೇಕು. ಮೀನಿನ ತುಂಡುಗಳ ಮೇಲೆ ಉಪ್ಪು ಮತ್ತು ಹಿಟ್ಟಿನ್ನು ಲೇಪಿಸಬೇಕು. ನಂತ್ರ ಸ್ವಲ್ಪ ಸಮಯ ಅದನ್ನು ಹಾಗೆಯೇ ಬಿಡಬೇಕು. ಆ ಮೇಲೆ ಉಪ್ಪು ಮತ್ತು ಹಿಟ್ಟನ್ನು ನೀರಿನಲ್ಲಿ ಚೆನ್ನಾಗಿ ಕ್ಲೀನ್ ಮಾಡಿ ಬಳಸಬೇಕು. ಹೀಗೆ ಮಾಡಿದ್ರೆ ಮೀನಿನ ವಾಸನೆ ಇರೋದಿಲ್ಲ.
ಮಗುವೂ ತಿನ್ನಬಲ್ಲದು ಪಪ್ಪಾಯಿ, ಕೊಟ್ಟರೆ ಅನಾರೋಗ್ಯ ದೂರ
ನೀರಿಗೆ ಉಪ್ಪು ಬೆರೆಸಿ ಕ್ಲೀನ್ ಮಾಡಿ : ಅಡುಗೆ ಮನೆಯಲ್ಲಿ ಏನಿಲ್ಲವೆಂದ್ರೂ ಉಪ್ಪಿರುತ್ತದೆ. ಇದನ್ನು ಅಡುಗೆ ರುಚಿ ಹೆಚ್ಚಿಸಲು ಮಾತ್ರವಲ್ಲದೆ ಶುಚಿತ್ವಕ್ಕೆ ಕೂಡ ಬಳಕೆ ಮಾಡಲಾಗುತ್ತದೆ. ಮನೆ ಸ್ವಚ್ಛಗೊಳಿಸುವುದ್ರಿಂದ ಹಿಡಿದು ಅನೇಕ ಕೆಲಸಕ್ಕೆ ಈ ಉಪ್ಪನ್ನು ಬಳಸಲಾಗುತ್ತದೆ. ಉಪ್ಪು ವಾಸನೆ ತೆಗೆಯುವ ಕೆಲಸ ಕೂಡ ಮಾಡುತ್ತದೆ. ಮೀನಿನಿಂದ ವಾಸನೆ ಬರಬಾರದು ಎಂದ್ರೆ ಮೀನುಗಳನ್ನು ಉಪ್ಪು ನೀರಿನಿಂದ ತೊಳೆಯಬಹುದು. ಉಪ್ಪನ್ನು ಬಳಸುವುದರಿಂದ ಮೀನಿನ ವಾಸನೆ ಮತ್ತು ಜಿಡ್ಡು ಕಡಿಮೆಯಾಗುತ್ತದೆ. ಪಾತ್ರೆಯಲ್ಲಿ ನೀರನ್ನು ಹಾಕಬೇಕು. ಅದಕ್ಕೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಉಪ್ಪು ಮಿಶ್ರಿತ ನೀರಿನಲ್ಲಿ ಮೀನುಗಳನ್ನು ಕನಿಷ್ಠ ಐದರಿಂದ ಆರು ಬಾರಿ ತೊಳೆಯಿರಿ. ಇದು ಮೀನಿನ ವಾಸನೆ ಮತ್ತು ಜಿಡ್ಡಿನಂಶವನ್ನು ಕಡಿಮೆ ಮಾಡುತ್ತದೆ.
ORGANIC FOOD: ಸಾವಯವ ಆಹಾರ ಖರೀದಿಸೋ ಮುನ್ನ ಈ ಎಚ್ಚರ!
ಮೀನಿನ ವಾಸನೆ ತೆಗೆಯಲು ವಿನೆಗರ್ ಬೆಸ್ಟ್ : ವಿನೆಗರ್ ನೀರಿನಿಂದ ಮೀನುಗಳನ್ನು ಕ್ಲೀನ್ ಮಾಡಬಹುದು. ವಿನೆಗರ್ ಕೂಡ ಮೀನಿನ ಜಿಡ್ಡನ್ನು ತೆಗೆಯಲು ಒಳ್ಳೆಯದು. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ, ಅದಕ್ಕೆ ವಿನೆಗರ್ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಈ ನೀರಿನಲ್ಲಿ ಮೀನುಗಳನ್ನು ತೊಳೆಯಿರಿ. ನಾಲ್ಕೈದು ಬಾರಿ ಈ ನೀರಿನಲ್ಲಿ ಮೀನನ್ನು ತೊಳೆದ್ರೆ ವಾಸನೆ ಕೂಡ ಮಾಯವಾಗುತ್ತದೆ. ನೀವು ವಿನೆರಗ್ ನೀರಿನಲ್ಲಿ ಮೀನನ್ನು ಕ್ಲೀನ್ ಮಾಡಿದ ನಂತ್ರ ಶುದ್ಧ ನೀರಿನಲ್ಲಿ ಇನ್ನೊಮ್ಮೆ ತೊಳೆದು ನಂತ್ರ ಅಡುಗೆಗೆ ಬಳಸಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ.