Job Interview: ಮದುವೆ ಯಾವಾಗ, ಮಕ್ಕಳು ಯಾವಾಗ ಬೇಕು ಅಂತಾನೂ ಕೇಳಿದ ಅನುಭವ ನಿಮಗಾಗಿದ್ಯಾ?

By Suvarna NewsFirst Published Dec 28, 2022, 2:56 PM IST
Highlights

ಸಂದರ್ಶನಕ್ಕೆ ಹೋದಾಗ ನಿಮ್ಮ ಮಾರ್ಕ್ಸ್ ಹಾಗೂ ನೀವು ಹಿಂದೆ ಎಲ್ಲಿ ಕೆಲಸ ಮಾಡಿದ್ದೀರಿ ಎನ್ನುವುದನ್ನು ಮಾತ್ರ ಸಂದರ್ಶನಕಾರರು ಕೇಳ್ತಾರೆ ಎಂದು ಭಾವಿಸಬೇಡಿ. ಸಂದರ್ಶನದ ವೇಳೆ ನಾನಾ ಪ್ರಶ್ನೆಗಳು ಎದುರಾಗುತ್ತವೆ. ಅದ್ರಲ್ಲೂ ಮಹಿಳೆಯಾದವಳಿಗೆ ಕೆಲ ಪ್ರಶ್ನೆಗೆ ಉತ್ತರ ಹೇಳೋದು ಕಷ್ಟವಾಗುತ್ತದೆ.
 

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡ್ತಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮಹಿಳೆಯೊಬ್ಬಳು ಉನ್ನತ ಸ್ಥಾನಕ್ಕೆ ಏರಿದ್ದಾಳೆ ಅಂದ್ರೆ ಆಕೆ ದಾರಿ ಸುಲಭವಿರಲಿಲ್ಲ ಎಂಬುದನ್ನು ನಾವು ಅರಿಯಬೇಕು. ಪರೀಕ್ಷೆಯಲ್ಲಿ ಉತ್ತೀರ್ಣಳಾಗುವುದ್ರಿಂದ ಹಿಡಿದು ಸಂದರ್ಶನದಲ್ಲಿ ಪಾಸ್ ಆಗಿ, ಉದ್ಯೋಗ ಗಿಟ್ಟಿಸಿಕೊಂಡು, ಸಹೋದ್ಯೋಗಿಗಳ ಸಮನಾಗಿ ದುಡಿದು ಆಕೆ ಸೈ ಎನ್ನಿಸಿಕೊಂಡಿರುತ್ತಾಳೆ. 

ಭಾರತ (India) ದಲ್ಲಿ ಈಗ್ಲೂ ಮಹಿಳೆ ಹಾಗೂ ಪುರುಷನನ್ನು ಬೇರೆ ಬೇರೆಯಾಗಿಯೇ ನೋಡಲಾಗ್ತಿದೆ. ಮಹಿಳೆ ಎಷ್ಟೇ ಬುದ್ಧಿವಂತಳಾಗಿರಲಿ ಆಕೆ ಈ ಕೆಲಸ (Work) ಮಾಡಬಲ್ಲಳೇ ಎಂಬುದು ಬಹುತೇಕರ ಪ್ರಶ್ನೆಯಾಗಿರುತ್ತದೆ. ಸಾಮರ್ಥ್ಯವಿದ್ದರೂ ಕೆಲ ಕಾರಣಕ್ಕೆ ಆಕೆಗೆ ಕೆಲಸ ನೀಡಲು ಕಂಪನಿಗಳು ನಿರಾಕರಿಸುತ್ತವೆ. ಭಾರತದಲ್ಲಿರುವ ಕೆಲ ಕಂಪನಿ (Company) ಗಳು ಮಹಿಳೆಯರಿಗೆ ಉದ್ಯೋಗ ನೀಡುವುದಿಲ್ಲ. ಕೆಲಸ ನೀಡುವುದು ಒಂದು ಕಡೆಯಾದ್ರೆ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ಕೂಡ ವಿಚಿತ್ರವಾಗಿರುತ್ತವೆ. ಸಂದರ್ಶನದಲ್ಲಿ ಮಹಿಳೆಯರಿಗೆ ಯಾವ ರೀತಿಯ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದನ್ನು ನಾವಿಂದು ತಿಳಿಯೋಣ. 

Baby Care: ಪುಟ್ಟ ಕಂದಮ್ಮಗಳಿಗೆ ಮುತ್ತು ಕೊಡೋ ಮುನ್ನ!

ಸಂದರ್ಶನ (Interview) ದಲ್ಲಿ ಮಹಿಳೆಗೆ ಕೇಳಲಾಗುತ್ತೆ ಇಂಥ ಪ್ರಶ್ನೆ : 

ನಿಮ್ಮ ಮದುವೆ ಯಾವಾಗ? :  ಸಂದರ್ಶನದ ಸಮಯದಲ್ಲಿ ಕೌಶಲ್ಯಗಳನ್ನು ನೋಡುವುದರ ಜೊತೆಗೆ  ಮಹಿಳೆಯರು ಯಾವಾಗ ಮದುವೆಯಾಗುತ್ತಾರೆ ಎಂದು ಕೂಡ ಕೇಳಲಾಗುತ್ತದೆ. ಮದುವೆಯಾದ ನಂತ್ರ ಮಹಿಳೆ ಕೆಲಸ ಬಿಡುವ ಸಾಧ್ಯತೆಯಿರುತ್ತದೆ. ಇದ್ರಿಂದ ಕಂಪನಿಗಳಿಗೆ ಹೊಡೆತ ಬೀಳುತ್ತದೆ. ಹಾಗಾಗಿಯೇ ದೀರ್ಘಕಾಲ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಕಂಪನಿಗಳು ಹುಡುಕುತ್ತವೆ. ಒಂದೆರಡು ವರ್ಷದಲ್ಲಿ ಮದುವೆಯಾಗ್ತೇನೆ ಎನ್ನುವ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಅನೇಕ ಕಂಪನಿಗಳು ಮನಸ್ಸು ಮಾಡುವುದಿಲ್ಲ.   

ನೀವು ಯಾವಾಗ ಮಗುವಿನ ಪ್ಲಾನ್ ಮಾಡುತ್ತಿದ್ದೀರಿ? : ಬರೀ ಮದುವೆ ವಿಷ್ಯವನ್ನು ಮಾತ್ರವಲ್ಲ ಮಕ್ಕಳ ವಿಷ್ಯವನ್ನೂ ಸಂದರ್ಶನದಲ್ಲಿ ಕೇಳಲಾಗುತ್ತದೆ ಎಂದ್ರೆ ನೀವು ನಂಬ್ಲೇಬೇಕು. ಮದುವೆಯಾದ್ಮೇಲೆ ಕೆಲಸ ಬಿಡುವ ಅಥವಾ ಸ್ಥಳ ಬದಲಿಸುವ ಮಹಿಳೆಯರು ಸ್ವಲ್ಪಮಂದಿಯಾದ್ರೆ ಮತ್ತೆ ಕೆಲ ಮಹಿಳೆಯರು ಗರ್ಭ ಧರಿಸುತ್ತಿದ್ದಂತೆ ಕೆಲಸಕ್ಕೆ ಗುಡ್ ಬೈ ಹೇಳ್ತಾರೆ. ಇದೇ ಕಾರಣಕ್ಕೆ ಕಂಪನಿಗಳು ಈ ಪ್ರಶ್ನೆಯನ್ನು ಕೂಡ ಕೇಳುತ್ತವೆ.  ಶಿಕ್ಷಕಿಯೊಬ್ಬಳ ಕೈ ಬಳೆಯನ್ನು ನೋಡಿ, ಸಂದರ್ಶನಕಾರರು ಈ ಪ್ರಶ್ನೆ ಕೇಳಿದ್ದರಂತೆ. ಈಗಷ್ಟೆ ಮದುವೆಯಾಗಿರುವ ಶಿಕ್ಷಕಿಗೆ ನೀವು ಯಾವಾಗ ಮಕ್ಕಳನ್ನು ಪಡೆಯುವ ಪ್ಲಾನ್ ಮಾಡ್ತಿದ್ದೀರಿ ಎಂಬ ಪ್ರಶ್ನೆ ಸ್ವಲ್ಪ ಇರಿಸುಮುರುಸು ಉಂಟು ಮಾಡಿತ್ತಂತೆ.  ಮಕ್ಕಳು ಯಾವಾಗ ಎನ್ನುವ ಪ್ರಶ್ನೆ ಜೊತೆ ಮಕ್ಕಳೆಷ್ಟು ಎನ್ನುವ ಪ್ರಶ್ನೆಗಳನ್ನು ಕೂಡ ಸಂದರ್ಶನಕಾರರು ಕೇಳ್ತಾರೆ. ಇದ್ರಿಂದ ಮಹಿಳೆ ಮನೆಯಲ್ಲಿ ಎಷ್ಟು ಕೆಲಸ ಮಾಡ್ತಾಳೆ ಎಂಬುದನ್ನು ಅರಿಯುವ ಪ್ರಯತ್ನ ನಡೆಸ್ತಾರೆ.

ಪುರುಷರಿಗೆ  ಕೇಳಲಾಗುತ್ತಾ ಇಂಥ ಪ್ರಶ್ನೆ ? : ಕಂಪನಿಗಳು ಪುರುಷರಿಗೂ ಇಂತಹ ಪ್ರಶ್ನೆಗಳನ್ನು ಕೇಳುತ್ತವೆಯೇ  ಈ ಪ್ರಶ್ನೆಗೆ ಉತ್ತರ ಇಲ್ಲ. ಸಾಮಾನ್ಯವಾಗಿ ಯಾವುದೇ ಪುರುಷರಿಗೆ ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ. ಮಹಿಳೆಯರಿಗೆ ಕೇಳುವ ಪ್ರಶ್ನೆಗಳೇ ಬೇರೆಯಾದ್ರೆ ಪುರುಷರಿಗೆ ಕೇಳುವ ಪ್ರಶ್ನೆಗಳೇ ಬೇರೆಯಿರುತ್ತದೆ. ಪುರುಷರು ಮದುವೆಯಾದ್ರೆ ಅಥವಾ ಮಕ್ಕಳನ್ನು ಪಡೆದ್ರೆ ಯಾವುದೇ ಹೆಚ್ಚಿನ ಬದಲಾವಣೆಯಾಗುವುದಿಲ್ಲ. ಹಾಗಾಗಿ ಸಂದರ್ಶನಕಾರರು ಈ ಪ್ರಶ್ನೆಗಳನ್ನು ಕೇಳುವುದಿಲ್ಲ. 

Recycle : ಹಾಲಿನ ಪ್ಯಾಕೆಟ್ ಎಸಿಬೇಡಿ, ಹೀಗೆ ಬಳಸಿ

ಮೊದಲೇ ಹೇಳಿದಂತೆ ಪುರುಷರ ಕೆಲಸ ಹಾಗೂ ಮಹಿಳೆಯರ ಕೆಲಸ ಎಂಬ ತಾರತಮ್ಯ ಈಗ್ಲೂ ನಡೆಯುತ್ತಿದೆ. ಹೆಣ್ಣಿನ ಮೈಮೇಲೆ ಅನೇಕ ಜವಾಬ್ದಾರಿಯನ್ನು ಹೊರಿಸಲಾಗಿದೆ. ಕಚೇರಿ ಕೆಲಸದ ಜೊತೆ ಆಕೆ ಮನೆ ಕೆಲಸ, ಅಡುಗೆ, ಮಕ್ಕಳ ಜವಾಬ್ದಾರಿಯನ್ನೂ ಹೊತ್ತುಕ್ಕೊಳ್ಳಬೇಕೆಂದೇನಿಲ್ಲ. ಅಡುಗೆ ಮಾಡುವುದು, ಮನೆಯನ್ನು ಶುಚಿಗೊಳಿಸುವುದು ಮತ್ತು ಮಕ್ಕಳನ್ನು ಬೆಳೆಸುವ ಜವಾಬ್ದಾರಿ  ಮಹಿಳೆಯಷ್ಟೇ ಪುರುಷನಿಗೂ ಇರುತ್ತದೆ ಎಂಬ ಸತ್ಯ ಜನರಿಗೆ ತಿಳಿಯಬೇಕು. ಆಗ ಮಾತ್ರ ಸಮಾಜ ಬದಲಾಗಲು ಸಾಧ್ಯ. ಮಹಿಳೆ ಪುರುಷನ ಸಮಾನ ಕೆಲಸ ಮಾಡಲು ಹಾಗೂ ಸಂಬಳ ಪಡೆಯಲು ಸಾಧ್ಯ. 
 

click me!