ರೇಷ್ಮೆ ಸೀರೆ ಹೇಗೆ ತಯಾರಾಗುತ್ತೆ ಗೊತ್ತಿದ್ಯಾ? ಆಹಾರದ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿ ಮತ್ತೆ ಟ್ರೋಲ್‌!

By Vinutha Perla  |  First Published Jul 28, 2023, 1:19 PM IST

ಸುಧಾ ಮೂರ್ತಿ ಎಲ್ಲಿ ಹೋದರೂ ಸೀರೆಯನ್ನೇ ಉಡುತ್ತಾರೆ. ವಿದೇಶಕ್ಕೆ ಹೋದಾಗಲೂ ಅವರು ರೇಷ್ಮೆ ಸೀರೆಯನ್ನೇ ಉಡುವ ಮೂಲಕ ಇಲ್ಲಿನ ನೆಲದ ಸಂಪ್ರದಾಯದ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಹಾರದ ವಿಚಾರದಲ್ಲಿ ಸುಧಾ ಮೂರ್ತಿ ಅವರು ನೀಡಿದ ಹೇಳಿಕೆ ಬಳಿಕ ಅವರ ಸೀರೆಯ ಬಗ್ಗೆಯೂ ಟ್ರೋಲ್ ಮಾಡಲಾಗಿದೆ.


ಇನ್‌ಪೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಆಹಾರ ಸಂಸ್ಕೃತಿ ಬಗ್ಗೆ ಆಡಿದ ಮಾತುಗಳು ವಿವಾದ ಸೃಷ್ಟಿಸಿದೆ. ಸುಧಾಮೂರ್ತಿ ಇತ್ತೀಚೆಗೆ ಖ್ಯಾತ ಆಹಾರ ಬ್ಲಾಗರ್ ಕುನಾಲ್ ವಿಜಯಂಕರ್ ನಡೆಸಿಕೊಡುವ ಶೋ ' ಖಾನೆ ಮೇ ಕೌನ್ ಹೈ?' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಹಾರದ ಬಗ್ಗೆ ತಮ್ಮ ನಿಲುವು ಹಾಗೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿದೇಶಗಳಲ್ಲಿ ಬಹುತೇಕ ಮಾಂಸಹಾರವೇ ಹೆಚ್ಚು ಎಲ್ಲೂ ಸಸ್ಯಹಾರಕ್ಕೆ ಅವಕಾಶ ಇಲ್ಲ,  ಸಸ್ಯಾಹಾರದ ಆಯ್ಕೆಗಳು ವಿದೇಶದಲ್ಲಿ ತೀರಾ ಕಡಿಮೆ ಹೀಗಾಗಿ ಸುಧಾಮೂರ್ತಿಯವರಿಗೆ ವಿದೇಶಕ್ಕೆ ಭೇಟಿ ನೀಡಿದಾಗ ಆಹಾರದ ಶೈಲಿ ಯಾವ ರೀತಿಯದ್ದು ಎಂದು ಫುಡ್ ಬ್ಲಾಗರ್ ಕೇಳಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿದ ಸುಧಾಮೂರ್ತಿ ತಾನು ಶುದ್ಧ ಸಸ್ಯಾಹಾರಿ (Vegetarian)ಯಾಗಿರುವುದರಿಂದ ವಿದೇಶಕ್ಕೆ ತೆರಳುವಾಗ ನನ್ನದೇ ಆಹಾರದ ಚೀಲವನ್ನು ತೆಗೆದುಕೊಂಡು ಹೋಗುತ್ತೇನೆ.  ನಾನು ಆಹಾರದ (Food) ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ, ಮಾಂಸಹಾರಕ್ಕೆ ಬಳಸಿದ ಸೌಟ್‌(Spoon) ಗಳನ್ನೇ ಸಸ್ಯಾಹಾರಿ ತಿನಿಸುಗಳ ತಯಾರಿಗೆ ಅಥವಾ ಬಡಿಸಲು ಬಳಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ತಾನು ಈ ವಿಚಾರದಲ್ಲಿ ಯಾವುದೇ ತೊಂದರೆ ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಒಂದು ಗುಂಪು ಸುಧಾಮೂರ್ತಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡರೆ ಮತ್ತೊಂದು ಗುಂಪು ಸಾಮಾಜಿಕ ಜಾಲತಾಣಗಳಲ್ಲಿ (Social media) ತೀವ್ರವಾಗಿ ಟ್ರೋಲ್ ಮಾಡಲಾರಂಭಿಸಿದೆ. 

Tap to resize

Latest Videos

Sudha Murthy Food Controversy: ಸಹಿಷ್ಣುತೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮತಾನಾಡೋರೆಲ್ಲಿ ಎಂದ ಮಾಳವಿಕಾ

ರೇಷ್ಮೆ ಸೀರೆ ಹೇಗೆ ತಯಾರಿಸುತ್ತಾರೆ ಗೊತ್ತಾ ಎಂದು ಪ್ರಶ್ನಿಸಿದ ನೆಟ್ಟಿಗರು
ಸುಧಾ ಮೂರ್ತಿ ಎಲ್ಲಿ ಹೋದರೂ ಸೀರೆಯನ್ನೇ ಉಡುತ್ತಾರೆ. ವಿದೇಶಕ್ಕೆ ಹೋದಾಗಲೂ ಅವರು ರೇಷ್ಮೆ ಸೀರೆಯನ್ನೇ ಉಡುವ ಮೂಲಕ ಇಲ್ಲಿನ ನೆಲದ ಸಂಪ್ರದಾಯದ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಹಾರದ ವಿಚಾರದಲ್ಲಿ ಸುಧಾ ಮೂರ್ತಿ ಅವರು ನೀಡಿದ ಹೇಳಿಕೆ ಬಳಿಕ ಅವರ ಸೀರೆಯ ಬಗ್ಗೆಯೂ ಟ್ರೋಲ್ ಮಾಡಲಾಗಿದೆ. ಟ್ವಿಟ್ಟರ್ ಬಳಕೆದಾರ 'ಡ್ರಂಕ್ ಜರ್ನಲಿಸ್ಟ್' ಎಂಬವರು 'ರೇಷ್ಮೆ ಸೀರೆ' ಧರಿಸಿದ್ದಕ್ಕಾಗಿ ಸುಧಾ ಮೂರ್ತಿ ಅವರನ್ನು ಟೀಕಿಸಿದ್ದಾರೆ.

ಡ್ರಂಕ್‌ ಜರ್ನಲಿಸ್ಟ್ ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ಸುಧಾಮೂರ್ತಿ ಅವರು ಹಸಿರು ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದು, ಈ ರೇಷ್ಮೆ ಸೀರೆಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ ನಂತರ ಅನೇಕರು ರಿಟ್ವೀಟ್ ಮಾಡಿ ಸುಧಾ ಮೂರ್ತಿ ಅವರನ್ನು ಟ್ರೋಲ್ ಮಾಡಿದ್ದಾರೆ. 'ಈ ಪ್ರಶ್ನೆಯನ್ನು ಖಂಡಿತವಾಗಿಯೂ ಸುಧಾಮೂರ್ತಿಯವರನ್ನು ಕೇಳಬೇಕು' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 

Sudhamurthy Speech: ಹಣ ಬರ್ತಿದ್ದಂತೆ ಇದನ್ನು ಕಳ್ಕೊಂಡೆ ಎನ್ನುತ್ತಾರೆ ಸುಧಾಮೂರ್ತಿ, ಏನದು?

Does she know how the silk saree is made out of? 🤔🤔🤔 pic.twitter.com/OJti0zKV6V

— Drunk Journalist (@drunkJournalist)

ಮತ್ತೊಬ್ಬ ಬಳಕೆದಾರರು, 'ಜನರಿಗೆ ವೆಜಿಟೇರಿಯನ್ ಆಗಿದ್ದರೂ ಕಷ್ಟವೇ, ನಾವು ಎಂಥಾ ಜನರ ಮಧ್ಯೆ ವಾಸಿಸುತ್ತಿದ್ದೇವೆ' ಎಂದು ಕಾಮೆಂಟ್ ಮಾಡಿ ಸುಧಾಮೂರ್ತಿಯವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಆಕೆ ಸಾರಿಯನ್ನು ತಿನ್ನುವುದಿಲ್ಲ' ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್‌ನಲ್ಲಿ 'ಆಹಾರಸಂಸ್ಕೃತಿ ಅವರ ಇಷ್ಟ. ನಾನು ಸಹ ನಾನ್ ವೆಜ್ ಹೊಟೇಲ್‌ನಲ್ಲಿ ತಿನ್ನುವುದಿಲ್ಲ. ಅದ್ಯಾಕೆ ತಪ್ಪಾಗುತ್ತದೆ' ಎಂದಿದ್ದಾರೆ.

ಅದೇನೆ ಇರ್ಲಿ, ಆದರೆ ಯಾವಾಗಲೂ ತಮ್ಮ ಸರಳ, ಸಜ್ಜನಿಕೆ, ಸಮಾಜ ಸೇವೆಯಿಂದ ಗುರುತಿಸಿಕೊಂಡಿದ್ದ ಸುಧಾಮೂರ್ತಿಯವರು ಈಗ ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ. ಆಹಾರದ ಆಯ್ಕೆ ವ್ಯಕ್ತಿಯ ಸ್ವಾತಂತ್ರ್ಯ, ಹೀಗಾಗಿ ಈ ನೆಪದಲ್ಲಿ ಸುಧಾಮೂರ್ತಿಯವರನ್ನು ಟ್ರೋಲ್ ಮಾಡೋದು ಸರಿಯಲ್ಲ ಅನ್ನೋದು ಹಲವರ ಅಭಿಪ್ರಾಯ.

click me!