Sudhamurthy Speech: ಹಣ ಬರ್ತಿದ್ದಂತೆ ಇದನ್ನು ಕಳ್ಕೊಂಡೆ ಎನ್ನುತ್ತಾರೆ ಸುಧಾಮೂರ್ತಿ, ಏನದು?

By Suvarna NewsFirst Published Jul 28, 2023, 12:12 PM IST
Highlights

ಪ್ರತಿಯೊಬ್ಬರೂ ಶ್ರೀಮಂತರಾಗ್ಬೇಕೆಂದು ಬಯಸ್ತಾರೆ. ಶ್ರೀಮಂತಿಕೆ ಜೊತೆಗೆ ಪ್ರಸಿದ್ಧಿ ಸಿಕ್ಕಿದ್ರೆ ಜನರು ನೆಲದ ಮೇಲಿರೋದಿಲ್ಲ. ಆದ್ರೆ ಸುಧಾಮೂರ್ತಿ ಇದ್ರಲ್ಲಿ ಭಿನ್ನವಾಗಿದ್ದಾರೆ. ಹಣ ಬಂದಾಗ ಕಳೆದುಕೊಂಡಿದ್ದು ಏನು ಎಂಬುದನ್ನು ಅವರು ಹೇಳಿದ್ದಾರೆ.
 

ಇನ್ಫೋಸಿಸ್ ಹುಟ್ಟಿಗೆ ಕಾರಣರಾದ ಸುಧಾ ಮೂರ್ತಿಗೆ ಯಾವುದಕ್ಕೂ ಕೊರತೆಯಿಲ್ಲ. ಶ್ರೀಮಂತಿಕೆ, ಪ್ರಸಿದ್ಧಿ ಎಲ್ಲವನ್ನೂ ಹೊಂದಿರುವ ಸುಧಾಮೂರ್ತಿ ಮಾತು ಹಗೂ ಬರವಣಿಗೆ ಮೂಲಕ ಲಕ್ಷಾಂತರ ಜನರನ್ನು ಸೆಳೆಯುತ್ತಾರೆ. ಅವರ ಸರಳ ನಡವಳಿಕೆ, ಪ್ರೀತಿಯ ಮಾತು ಬಹುತೇಕ ಎಲ್ಲರನ್ನೂ ಸೆಳೆಯುತ್ತದೆ. 

ಶ್ರೀಮಂತಿಗೆ (Rich)ಗೆ ಇದೆ ಎನ್ನುವ ಕಾರಣಕ್ಕೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡು ಮೆರೆಯುವ ಮಹಿಳೆ ಸುಧಾಮೂರ್ತಿ (Sudhamurthy) ಯಲ್ಲ ಎಂಬುದನ್ನು ಅವರ ವೇಷಭೂಷಣದಲ್ಲಿಯೇ ನೋಡಬಹುದು. ಹಣ (Money)ವನ್ನು ದುಂದುವೆಚ್ಚ ಮಾಡದೆ ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿ ಅವರಿಗೆ ನೆರವಾಗುತ್ತಿದ್ದಾರೆ. ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಕೇಂದ್ರಗಳು ಮತ್ತು ಗ್ರಂಥಾಲಯಗಳನ್ನು ಒದಗಿಸುವುದು ಸೇರಿ ಅನೇಕ ಸಮಾಜ ಸೇವೆಯಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  

Latest Videos

43 ವರ್ಷಗಳ ಹಿಂದಾದ ಆ ಘಟನೆ ಸುಧಾಮೂರ್ತಿ, ನಾರಾಯಣ ಮೂರ್ತಿ ಬದುಕನ್ನೇ ಬದಲಿಸಿತು!

ಸಾಮಾಜಿಕ ಜಾಲತಾಣದಲ್ಲಿ ಸುಧಾಮೂರ್ತಿಯವರ ಅನೇಕ ವಿಡಿಯೋಗಳನ್ನು ನಾವು ನೋಡ್ಬಹುದು. ಕೆಲ ದಿನಗಳ ಹಿಂದೆ ವೆಜ್ ಹಾಗೂ ನಾನ್ ವೆಜ್ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. ಸಸ್ಯಹಾರಿಯಾಗಿರುವ ಅವರು ನಾನ್ ವೆಜ್ ಸೌಟನ್ನೇ ವೆಜ್ ತಯಾರಿಕೆಗೆ ಬಳಸುವ ಸಾಧ್ಯತೆ ಇದೆ ಎನ್ನುವ ಮಾತನ್ನು ಹೇಳಿದ್ದರು. ಈ ಬಗ್ಗೆ ಅನೇಕರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಮಧ್ಯೆ ಸುಧಾ ಮೂರ್ತಿಯ ಇನ್ನೊಂದು ವಿಡಿಯೋ ಈಗ ವೈರಲ್ ಆಗಿದೆ. ಅದ್ರಲ್ಲಿ ಸುಧಾ ಮೂರ್ತಿ ಹಣ ಬಂದ ನಂತ್ರ ತಾನು ಏನನ್ನು ಕಳೆದುಕೊಂಡೆ, ಏನನ್ನು ಪಡೆದುಕೊಂಡೆ ಎಂಬುದನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ದಿಢೀರ್ ಅಂತಾ ನೀವು ಲಕ್ಷಾಧಿಪತಿ, ಕೋಟ್ಯಾಧಿಪತಿಯಾದಾಗ ನಿಮಗೆ ಏನ್ನನ್ನಿಸಿತು ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಸುಧಾ ಮೂರ್ತಿ ಉತ್ತರ ಇಂಟರೆಸ್ಟಿಂಗ್ ಆಗಿದೆ.

ಸುಧಾಮೂರ್ತಿಗೆ ಸಂಕಷ್ಟ ತಂದಿಟ್ಟ ಸೌಟು: ಟ್ರೋಲ್‌ಗೆ ಕಾರಣವಾಯ್ತು ಮಾಂಸಾಹಾರದ ಸ್ಟೇಟ್‌ಮೆಂಟು

ಆ ಸಮಯದಲ್ಲಿ ನಾನು ಸುಂದರ ಜೀವನವನ್ನು ಕಳೆದುಕೊಂಡೆ : eaderstalk_'s  ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಧಾಮೂರ್ತಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಮೂರ್ತಿ, ಶ್ರೀಮಂತಿಕೆ ಬಂದ ಸಂದರ್ಭದಲ್ಲಿ ಸುಂದರ ಜೀವನವನ್ನು (Beautiful Life) ಕಳೆದುಕೊಂಡೆ ಎನ್ನಿಸಿತ್ತು ಎಂದಿದ್ದಾರೆ. ಏಕೆಂದರೆ ನಾನು ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದೆ. ಸಾಮಾನ್ಯ ವಿಷಯ, ಸಣ್ಣ ಸಣ್ಣ ವಿಷಯಗಳನ್ನು ಆನಂದಿಸುತ್ತೇನೆ. ಚಲನಚಿತ್ರಕ್ಕೆ ಹೋಗುವುದು ಯಾವಾಗಲೂ ಹೆಚ್ಚಿನ ಉತ್ಸಾಹವನ್ನು ತರುತ್ತದೆ. ಕಮರ್ಶಿಯಲ್ ಸ್ಟ್ರೀಟಿನಲ್ಲಿ ನಡೆಯುವುದು ನನಗೆ ವಿಪರೀತ ಖುಷಿ ಕೊಡುತ್ತಿತ್ತು. ಹಣ, ಹೆಸರು ಬಂದ್ಮೇಲೆ ಅವೆಲ್ಲವನ್ನು ನಾನು ಕಳೆದುಕೊಂಡೆ ಎನ್ನಿಸಿತ್ತು. ಆ ಸಮಯದಲ್ಲಿ ನಾನು ಸುಮಾರು 1700 ರೂಪಾಯಿಗಳನ್ನು ಉಳಿಸಿದ್ದೆ. ನನ್ನ ಮಗಳಿಗೆ ಒಂದು ಜೋಡಿ ಬಳೆ ತಂದಿದ್ದೆ.  ಆಗ ನನ್ನ ಮಗಳು ಎರಡು ವರ್ಷದವಳಿದ್ದಳು ಎಂದು ಹಳೆ ದಿನಗಳನ್ನು ನೆನೆಯುತ್ತಾರೆ ಸುಧಾಮೂರ್ತಿ.  ಆ ಮಧ್ಯಮ ವರ್ಗದ ಸರಳ ಜೀವನವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಸುಧಾಮೂರ್ತಿ ಹೇಳಿದ್ದಾರೆ.

ಹಣ ಬಂದ ಕಾರಣ ಇದೆಲ್ಲ ಕಳೆದುಕೊಂಡಿದ್ದೇನೆ ನಿಜ. ಆದ್ರೆ ಹಣದಿಂದ ಪಡೆದದ್ದು ಇದೆ ಎಂದು ಸುಧಾಮೂರ್ತಿ ಹೇಳುತ್ತಾರೆ. ಉದಾಹರಣೆಗೆ ಇಂದು ನಾವು ಮಾಡುವ ಪರೋಪಕಾರವು ಕೇವಲ ಹಣದ ಕಾರಣದಿಂದಾಗಿ. ನನ್ನ ಬಳಿ ಹಣ ಇಲ್ಲದೆ ಹೋಗಿದ್ರೆ, ನಾನು ಮಧ್ಯಮ ವರ್ಗದಲ್ಲಿಯೇ ಇದ್ದರೆ ಇದೆಲ್ಲ ಸಾಧ್ಯವಾಗ್ತಿರಲಿಲ್ಲ ಎಂದು ಸುಧಾಮೂರ್ತಿ ಹೇಳುತ್ತಾರೆ.

ಸುಧಾಮೂರ್ತಿ ಈ ಮಾತುಗಳನ್ನು ಅನೇಕರು ಇಷ್ಟಪಟ್ಟರೆ ಮತ್ತೆ ಕೆಲವರು ಕಾಲೆಳೆದಿದ್ದಾರೆ. ಹಣವನ್ನು ನಮಗೆ ನೀಡಿ, ನೀವು ಮಧ್ಯಮ ವರ್ಗದವರಾಗಿಯೇ ಇರಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಸುಧಾಮೂರ್ತಿ ನಡವಳಿಕೆ ಬರೀ ನಾಟಕೀಯವೆಂದು ಟೀಕಿಸಿದ್ದಾರೆ. ಮಧ್ಯಮ ವರ್ಗದವರ ಸಮಸ್ಯೆಯನ್ನು ಬರೀ ಮಧ್ಯಮ ವರ್ಗದವರು ಅರ್ಥಮಾಡಿಕೊಳ್ಳಲು ಸಾಧ್ಯವೆಂದಿದ್ದಾರೆ ಮತ್ತೆ ಕೆಲವರು.
 

 
 
 
 
 
 
 
 
 
 
 
 
 
 
 

A post shared by LeadersTalk (@leaderstalk_)

click me!