ಶಂಕರಪುರದ ಅಜ್ಜಿ ಮಾಡೋ ಸಾಂಪ್ರದಾಯಿಕ 'ಬಾಣಂತಿ‌ಮದ್ದು' ವಿದೇಶಗಳಲ್ಲೂ ಫೇಮಸ್

By Suvarna NewsFirst Published Sep 23, 2022, 3:53 PM IST
Highlights

ಗರ್ಭಿಣಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅವರ ಆರೋಗ್ಯ, ಆಹಾರ ಎಲ್ಲದರ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ರೆ ಉಡುಪಿಯ ಶಂಕರಪುರದ ಅಜ್ಜಿ ಮಾಡೋ ಸಾಂಪ್ರದಾಯಿಕ 'ಬಾಣಂತಿ‌ಮದ್ದು' ವಿದೇಶಗಳಲ್ಲೂ ಫೇಮಸ್ ಆಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಕರಾವಳಿ ಜಿಲ್ಲೆ, ಉಡುಪಿ ನಾಟಿ ವೈದ್ಯಕೀಯದಲ್ಲಿ ತನ್ನದೇ ಸ್ಥಾನ ಗೌರವ ಪಡೆದಿದೆ. ಎಷ್ಟೇ ಆಧುನಿಕ ಪದ್ಧತಿ ಬಂದರೂ, ಸಾಂಪ್ರದಾಯಿಕ ಪದ್ಧತಿಯ ಔಷದೋಪಚಾರಕ್ಕೆ ಉಡುಪಿ ಫೇಮಸ್ ; ಅನೇಕ ನಾಟಿ ವೈದ್ಯರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಉಡುಪಿ ಜಿಲ್ಲೆಯದ್ದು. ಅದರಲ್ಲಿಯೂ ತೆರೆಮರೆಯಲ್ಲಿ ಮನೆಮದ್ದುಗಳನ್ನು ಮಾಡಿಕೊಡುತ್ತಿರುವ ಅನೇಕ ವ್ಯಕ್ತಿಗಳಲ್ಲಿ ಎಲಿಝಾ ಡಿಮೆಲ್ಲೊ ಕೂಡ ಒಬ್ಬರು. 

ಇವರು ಮಾಡುವ  ಬಾಣಂತಿ ಮದ್ದುಗಳು (Preganant medicine) ವಿದೇಶಗಳಲ್ಲೂ ಬಹಳ ಫೇಮಸ್ . ಎಲಿಝಾ ಅವರಿಗೆ ಈಗ ಎಪ್ಪತ್ತು ವರ್ಷ.ಉಡುಪಿ ಜಿಲ್ಲೆಯ ಶಂಕರಪುರ ಎಂಬ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ‌.ಇವರು ಕೃಷಿಕರೂ (Farmer) ಹೌದು.ತಮ್ಮ ತೋಟದಲ್ಲಿ ಹಲವು ಬಗೆಯ ಔಷಧೀಯ ಗಿಡ‌ ಬೆಳೆಯುತ್ತಾರೆ. ಎರಡು ದಶಕಗಳ ಹಿಂದೆ ಇವರು ತಮ್ಮ ಮನೆಯ ಸದಸ್ಯರಿಗಾಗಿ ಮನೆ‌ಮದ್ದು (Home remedies) ಮಾಡಲು ಪ್ರಾರಂಭಿಸಿದರಂತೆ. 

ಮಹಿಳೆಯರು ಸ್ಟ್ರಾಂಗು ಅಂತ ಕಂಡು ಹಿಡಿಯೋದು ಹೇಗೆ?

ಕ್ರಮೇಣ ಇದು ಊರವರಿಗೆ ಗೊತ್ತಾಗಿ ,ಹೊರ ಜಿಲ್ಲೆ ಮತ್ತು ವಿದೇಶಗಳಿಗೂ (Foriegn countries) ಇವರ ಮದ್ದು ಪಾರ್ಸಲ್ ಹೋಗಿದೆ.ಅದರಲ್ಲೂ ಇವರ ವಾಣಂತಿ ಮದ್ದು ತುಂಬ ಪ್ರಸಿದ್ಧ.ಐದು ಬಗೆಯ ಬಾಣಂತಿ‌ಮದ್ದು ಜಿಲ್ಲೆ ದಾಟಿ ದುಬೈ ಮತ್ತು ಸೌದಿಗೂ ಹೋಗಿದೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿರುವ ಈ ಅಜ್ಜಿ ಅತ್ಯಂತ ಶ್ರದ್ಧೆ ಮತ್ತು ಕಾಳಜಿ ವಹಿಸಿ ಬಾಣಂತಿ ಮದ್ದು ತಯಾರಿಸುತ್ತಾರೆ.ಮನೆಗೆ ಬಂದವರಿಗೆ ಪ್ರೀತಿಯಿಂದ ಮದ್ದು ಕೊಡುತ್ತಾರೆ.ಇವರ ಮನೆಗೆ ಒಮ್ಮೆ ಬಂದವರು ಮತ್ತೆ ಬಾರದೆ ಇರಲಾರರು.ಅಂಥ ಕೈ ಗುಣ ಇವರದ್ದು.

ಅಮೆರಿಕಾ, ದುಬೈ, ಮಸ್ಕತ್, ಮುಂಬೈ, ಬೆಂಗಳೂರು ಮುಂತಾದ ಕಡೆಗಳಿಂದ ಜನರು ಊರಿಗೆ ಬಂದಾಗ ಇವರ ಮನೆಯಿಂದ ಬಾಣಂತಿ ಮದ್ದು ತೆಗೆದುಕೊಂಡು ಹೋಗುತ್ತಾರೆ.ಇವರು ಶುದ್ಧ ಗ್ರಾಮೀಣ ಶೈಲಿ (Village style)ಯಲ್ಲಿ ಕಟ್ಟಿಗೆ ಒಲೆಯಲ್ಲಿ ಮದ್ದು ತಯಾರು ಮಾಡುತ್ತಾರೆ. ಔಷಧಿಗೆ ಬೇಕಾಗುವ ಎಲ್ಲ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿ ತಯಾರು ಮಾಡುವುದಲ್ಲದೆ ಉತ್ತಮ ರುಚಿ ಕೂಡ ಹೊಂದಿದೆ .ಸ್ಥಳೀಯ ವೈದ್ಯರೇ ಇವರ ಕೈಗುಣವನ್ನು ಹೊಗಳುತ್ತಾರೆ.

Swelling during Pregnancy: ಗರ್ಭಿಣಿ ಕಾಲುಗಳಲ್ಲಿ ಊತಕ್ಕಿದೆ ಸಿಂಪಲ್ ಪರಿಹಾರ

ಗ್ರಾಮೀಣ ಪ್ರದೇಶದ ಮನೆ ಮದ್ದು ಉಳಿಸುವಲ್ಲಿ ಈ ಅಜ್ಜಿಯ ಕೊಡುಗೆ ಅಪಾರ. ಇವರ ಕೈಯಲ್ಲಿ ತಯಾರಾದ ಮದ್ದು ಪಡೆದ ಸಾವಿರಾರು ಜನ ಅದರ ಪ್ರಯೋಜನ ಪಡೆದಿದ್ದಾರೆ. ಈ ಅಜ್ಜಿಯ ಜನಸೇವೆ ಬೆಲೆ ಕಟ್ಟಲಾಗದ್ದು, ಅಲ್ಲವೇ?...

click me!