ಹೆಣ್ಮಕ್ಕಳ ಅಗತ್ಯಗಳಲ್ಲಿ ಬ್ರಾ ಕೂಡ ಒಂದು. ಹೆಣ್ಮಕ್ಕಳು ಹದಿಹರೆಯಕ್ಕೆ ಬರ್ತಿದ್ದಂತೆ ಬ್ರಾ ಧರಿಸಲು ಶುರು ಮಾಡ್ತಾರೆ. ಇದು ಹಿಂಸೆಯಾದ್ರೂ ಧರಿಸಲೇಬೇಕು ಎಂಬ ಅಲಿಖಿತ ನಿಯಮವಿದೆ. ಬರೀ ಬ್ರಾ ಧರಿಸಬೇಕು ಎಂಬುದು ಮಾತ್ರವಲ್ಲ ಬ್ರಾಗೆ ಸಂಬಂಧಿಸಿದಂತೆ ಕೆಲ ನಂಬಿಕೆ ಅಚ್ಚರಿ ಹುಟ್ಟಿಸುತ್ತದೆ.
ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರಾ ಲಭ್ಯವಿದೆ. ಬ್ರಾ ಬಗ್ಗೆ ಈಗ್ಲೂ ಭಾರತದಲ್ಲಿ ಸಾರ್ವಜನಿಕವಾಗಿ ಮಾತನಾಡೋದಿಲ್ಲ. ಕೆಲ ಮಹಿಳೆಯರು ಬ್ರಾ ಧರಿಸಲು ಇಷ್ಟಪಡ್ತಾರೆ. ಮತ್ತೆ ಕೆಲವರು ಬ್ರಾ ಧರಿಸಿದ್ರೆ ಉಸಿರುಗಟ್ಟುತ್ತೆ ಎನ್ನುತ್ತಾರೆ. ಈ ಎರಡು ಅಭಿಪ್ರಾಯದ ತಿಕ್ಕಾಟದಲ್ಲಿ ಬ್ರಾ ಕೂಡ ಕನ್ಫೂಸ್ ಆಗಿದೆ. ನನ್ನನ್ನು ಯಾಕೆ ಸೃಷ್ಟಿ ಮಾಡಿದ್ದಾರೆ ಎಂಬ ಗೊಂದಲ ಬ್ರಾಗೂ ಇರಬಹುದು.
ಬಡವ (Poor), ಶ್ರೀಮಂತ (Rich) ಎನ್ನದೆ ಎಲ್ಲ ಹುಡುಗಿಯರೂ ತಮ್ಮ ಬಜೆಟ್‌ಗೆ (Budget) ಅನುಗುಣವಾಗಿ ಬ್ರಾ (Bra) ಖರೀದಿಸುತ್ತಾರೆ. ಕಡಿಮೆ ಬೆಲೆಗೂ ಬ್ರಾ ಲಭ್ಯವಿದೆ. ಹಾಗೆ ದುಬಾರಿ ಬೆಲೆಯ, ಬೇರೆ ಬೇರೆ ಡಿಸೈನ್ ನ ಬ್ರಾ ಮಾರುಕಟ್ಟೆ (Market) ಯಲ್ಲಿದೆ. ಸ್ತನ ದೊಡ್ಡದಾಗಿದ್ರೆ ಹುಡುಗಿಯರು ಮುಜುಗರಪಟ್ಟುಕೊಳ್ತಾರೆ. ಸ್ತನ ಚಿಕ್ಕದಾಗಿದ್ರೆ ಅದು ಕೂಡ ಅವರ ಕೀಳರಿಮೆಗೆ ಕಾರಣವಾಗುತ್ತದೆ. ನಿಪ್ಪಲ್ ಕಾಣಬಾರದು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರಾ ಲಭ್ಯವಿದೆ. ಪ್ಯಾಡೆಡ್ ಬ್ರಾ (Padded Bra) ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕೆಲ ಹುಡುಗಿಯರಿಗೆ ತಮ್ಮ ಸ್ತನಕ್ಕೆ ತಕ್ಕ ಬ್ರಾ ಬೇಗ ಸಿಗುತ್ತದೆ. ಮತ್ತೆ ಕೆಲ ಹುಡುಗಿಯರು ಹದಿಹರೆಯದಲ್ಲಿ ಸೂಕ್ತ ಬ್ರಾ ಪತ್ತೆ ಮಾಡಲು ಪರದಾಡ್ತಾರೆ.
ಹಳ್ಳಿಗಳಲ್ಲಿ ಬ್ರಾ ಕಂಡ್ರೆ ಅದನ್ನು ಅವಮಾನ ಎಂದುಕೊಳ್ತಾರೆ. ಸೀರೆ ಎತ್ತಿ ಲಂಗ ತೋರಿಸಿದ್ರೂ ಅವರಿಗೆ ಅದು ವಿಶೇಷ ಎನ್ನಿಸುವುದಿಲ್ಲ. ಆದ್ರೆ ಬ್ರಾ ಪಟ್ಟಿ ಮಾತ್ರ ಕಾಣಬಾರದು. ಬರೀ ಇದೇ ಅಲ್ಲ, ಬ್ರಾ ಬಗ್ಗೆ ಸಾಕಷ್ಟು ನಂಬಿಕೆಗಳು ಈಗ್ಲೂ ಜಾರಿಯಲ್ಲಿದೆ. ಬ್ರಾ ಪಟ್ಟಿ ಈಗ್ಲೂ ಅನೇಕರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಹಲವೆಡೆ ಹೆಣ್ಣುಮಕ್ಕಳ (Girls) ಡ್ರೆಸ್ ಗೆ ಹುಕ್ ಇಡಲಾಗುತ್ತದೆ. ಈ ಹುಕ್ಕನ್ನು ಬ್ರಾ ಜೊತೆ ಜೋಡಿಸಲಾಗುತ್ತದೆ. ಬ್ರಾ ಪಟ್ಟಿ ಹೊರಗೆ ಬರದಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.
ಬ್ರಾವನ್ನು ಯಾವಾಗ್ಲೂ ಮುಚ್ಚಿಡಬೇಕು. ಬ್ರಾವನ್ನು ಕಬೋರ್ಡ್‌ನಲ್ಲಿ ಇಡಲು ಪ್ರತ್ಯೇಕ ಜಾಗವನ್ನು ಮಾಡಲಾಗಿದೆ. ಸಾಮಾನ್ಯ ಬಟ್ಟೆ ಜೊತೆ ಬ್ರಾ ಇಡುವಂತಿಲ್ಲ. ಕಬೋರ್ಡ್‌ನಿಂದ ಬಟ್ಟೆ ತೆಗೆಯುವಾಗ ಬ್ರಾ ಬಿದ್ದರೆ, ಅದನ್ನು ಬೇರೆಯವರು ನೋಡಿದ್ರೆ ಮುಜುಗರ ಎಂಬ ಕಾರಣಕ್ಕೆ ಅದನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಅನೇಕ ಬಾರಿ ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಸರಿಯಾದ ಮಟ್ಟದಲ್ಲಿ ಬ್ರಾ ಧರಿಸಲು ಸಲಹೆ ನೀಡಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರು ಸರಿಯಾದ ಸಮಯದಲ್ಲಿ ಬೆಳವಣಿಗೆಯಾಗುವುದಿಲ್ಲ.ಬ್ರಾ ಹೆಸರನ್ನೂ ಸೇರಿಸಲಾಗಿದೆ.
Woman Health: ಬ್ರಾ ಹಾಕೋದ್ರಿಂದ ಬೆನ್ನು ನೋವು ಬರುತ್ತಾ ?
ಕೆಲವು ತಾಯಂದಿರುವ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬ್ರಾ ಧರಿಸುವಂತೆ ಸಲಹೆ ನೀಡುವುದಿಲ್ಲ. ಇದ್ರಿಂದ ಸ್ತನದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಮನೆಯಲ್ಲಿ ಕೆಲ ವಿಷ್ಯಗಳನ್ನು ಮುಕ್ತವಾಗಿ ಮಾತನಾಡುವುದಿಲ್ಲ. ಅದ್ರಲ್ಲಿ ಬ್ರಾ ಕೂಡ ಸೇರಿದೆ. ಈಗ್ಲೂ ಕೆಲ ಮನೆಗಳಲ್ಲಿ ಮಹಿಳೆಯರು ಬ್ರಾ ಖರೀದಿ ಮಾಡುವುದಿಲ್ಲ. ಹೆಣ್ಣುಮಕ್ಕಳಿಗೆ ಅಂಗಿಯೊಳಗೆ ಬ್ಯಾಂಡೇಜ್ ಹಾಕಲು ಸೂಚಿಸುತ್ತಾರೆ. ಈ ಬ್ಯಾಂಡೇಜ್ ಅಪ್ಪಿತಪ್ಪಿಯೂ ಕಾಣಿಸಿಕೊಳ್ಳುವಂತಿಲ್ಲ. ಕಾಣಿಸಿದ್ರೆ ಅದನ್ನು ಬೇರೆ ಮಹಿಳೆಯರು ತಕ್ಷಣ ಸರಿಪಡಿಸ್ತಾರೆ.
ಅನೇಕ ಮನೆಗಳಲ್ಲಿ ಬ್ರಾಗಳನ್ನು ಹೊಸ ಪ್ರದೇಶದಲ್ಲಿ ಒಣಗಿಸಲು ಅನುಮತಿಯಿಲ್ಲ. ಹಾಗಾಗಿ ಸೂರ್ಯನ ಬೆಳಕಿನಲ್ಲಿ ಬ್ರಾವನ್ನು ಒಣಗಿಸುವುದಿಲ್ಲ. ಈ ಮನೆಗಳಲ್ಲಿ ಬ್ರಾಗೆ ಪ್ರತ್ಯೇಕ ಹಗ್ಗವನ್ನು ತಯಾರಿಸಲಾಗುತ್ತದೆ. ಯಾರಿಗೂ ಕಾಣದ ಜಾಗದಲ್ಲಿ ಬ್ರಾ ಒಣಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಕೆಲ ಮನೆಗಳ ಬಾಲ್ಕನಿ ಅಥವಾ ಟೆರೇಸ್ ಮೇಲೆ ಬ್ರಾ ಒಣಗಿಸಲಾಗುತ್ತದೆ. ಆದ್ರೆ ಅದ್ರ ಮೇಲೆ ಬಟ್ಟೆ ಮುಚ್ಚಲಾಗುತ್ತದೆ. ಬ್ರಾ ಒಣಗಿಸಿರುವುದು ಯಾರಿಗೂ ಕಾಣಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.
ಬ್ರಾ ಧರಿಸದೆ ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ. ಮನೆಯಲ್ಲಿ ಕೂಡ ಬ್ರಾ ಧರಿಸಬೇಕೆಂದು ಕೆಲವರು ನಿಯಮ ಮಾಡ್ತಾರೆ. ಬ್ರಾ ಧರಿಸಿಲ್ಲವೆಂದ್ರೆ ದುಪ್ಪಟ್ಟಾ ಹಾಕಿಕೊಳ್ಳುವಂತೆ ಆದೇಶ ನೀಡ್ತಾರೆ. ಸ್ನಾನಕ್ಕೆ ಹೋದಾಗ ಕೊಳಕಾದ ಬಟ್ಟೆಯನ್ನು ಬಕೆಟ್ ಗೆ ಹಾಕಬಹುದು. ಆದರೆ ಬ್ರಾವನ್ನು ಹಾಗೆ ಹಾಕುವಂತಿಲ್ಲ. ಅದನ್ನು ಮುಚ್ಚಿಡಬೇಕು.
ಫಸ್ಟ್ ಟೈಮ್ ಬ್ರಾ ಧರಿಸಿದಾಗ ವಿರೋಧಿಸಿದ್ರಂತೆ ಜನ, ಏನಿದರ ಇತಿಹಾಸ?
ಸ್ನಾನಕ್ಕೆ ಹೋಗುವ ಮುನ್ನ ಬ್ರಾ ತೆಗೆದುಕೊಳ್ಳುವ ಹುಡುಗಿಯರು ಅದನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಹೋಗ್ತಾರೆ. ಬ್ರಾವನ್ನು ಎಲ್ಲರ ಎದುರಿಗೆ ತೆಗೆದುಕೊಂಡು ಹೋಗುವಂತಿಲ್ಲ.