
ಕೆಲ ಮಕ್ಕಳು ಮಾಡುವ ತುಂಟಾಟಗಳು ಪೋಷಕರನ್ನು ಧರ್ಮ ಸಂಕಟಕ್ಕೆ ಸಿಲುಕಿಸುತ್ತವೆ. ಕುಳಿತಲ್ಲಿ ಕೂರದ ಈ ಮಕ್ಕಳು ಏನಾದರೊಂದು ಎಡವಟ್ಟು ಮಾಡುತ್ತಲೇ ಇರುತ್ತವೆ. ಕಾಯಿನ್ ನುಂಗೊಂದು ಹುಣಸೆ ಬೀಜ ಮೂಗಿನೊಳಗೆ ತುಂಬಿಸೋದು ಮಡಿಕೆಯೊಳಗೆ ಆಟ ಆಡ್ತಾ ಅದರೊಳಗೆ ತಲೆ ಸಿಲುಕಿಸಿಕೊಳ್ಳೋದು ಹೀಗೆ ಹಲವು ತರಲೆಗಳನ್ನು ಮಕ್ಕಳು ಮಾಡುತ್ತಾರೆ. ಕೆಲ ತಿಂಗಳ ಹಿಂದೆ ಪುಟ್ಟ ಮಗುವೊಂದರ ತಲೆ ಮಡಕೆಯಲ್ಲಿ ಸಿಲುಕಿದ ಪರಿಣಾಮ ಅದನ್ನು ತೆಗೆಯುವುದಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನೇ ಮನೆಗೆ ಕರೆಸಿದಂತಹ ಘಟನೆ ನಡೆದಿತ್ತು. ಅದೇ ರೀತಿ ಈಗ ಇಲ್ಲೊಂದು ಕಡೆ ಪುಟ್ಟ ಮಗುವೊಂದು ಮನೆಯ ಒಳಗೆ ಹೋಗಿ ಅಡುಗೆ ಕೋಣೆಗೆ ಹೋಗಿ ಕೋಣೆಯ ಬಾಗಿಲು ಹಾಕಿಕೊಂಡಿದ್ದು, ಒಳಗಿನಿಂದ ಚಿಲಕ ಹಾಕಿಕೊಂಡ ಮಗುವಿಗೆ ಆ ಚಿಲಕವನ್ನು ವಾಪಸ್ ತೆಗೆಯುವುದಕ್ಕೆ ಬಾರದೇ ಅಳುವುದಕ್ಕೆ ಶುರು ಮಾಡಿದ್ದು, ಇದರಿಂದ ಕೋಣೆಯ ಹೊರಗಿದ್ದ ತಾಯಿ ಸಂಕಟ ಪಡುವಂತಾಗಿದೆ.
shwetachaudhary5486(Shweta Chaudhary)ಎಂಬುವವರು ಇಂತಹದೊಂದು ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವ ಜೊತೆಗೆ ನೋಡುಗರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇದರ ಜೊತೆಗೆ ಅನೇಕರು ತಮಗಾದ ಹಾಗೂ ತಮ್ಮ ಮಕ್ಕಳು ಹೀಗೆ ಮಾಡಿದಾಗ ಅನುಭವವನ್ನು ಕಾಮೆಂಟ್ ಮೂಲಕ ಹೇಳಿಕೊಂಡಿದ್ದಾರೆ.
ಅಮ್ಮ ಮಾಡಿದ್ದೇನು?
ಹೌದು ಪುಟ್ಟ ಮಕ್ಕಳಿರುವ ಮನೆಯಲ್ಲಿ ಪೋಷಕರು ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಸ್ವಲ್ಪ ಕಣ್ತಿಪ್ಪಿದ್ದರೂ ಆಗಷ್ಟೇ ನಡೆದಾಡಲು ಶುರು ಮಾಡಿದ ಮಕ್ಕಳು ಇನ್ನೇನಾದರು ಅವಾಂತರವನ್ನು ಸೃಷ್ಟಿಸುವುದಂತು ಪಕ್ಕಾ. ಅದರಲ್ಲೂ ಪುಟ್ಟ ಮಕ್ಕಳು ಮನೆಯಲ್ಲಿ ದೇವರ ಕೋಣೆಗೋ ಇನ್ನಾವುದೋ ಕೋಣೆಗೋ ಹೋಗಿ ಮನೆಯ ಆಟವಾಡುವ ಭರದಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡರೆ ಇತ್ತ ಹೊರಗಿದ್ದ ಪೋಷಕರಿಗೆ ಧರ್ಮ ಸಂಕಟವಾಗುತ್ತದೆ. ಹಾಗೆಯೇ ಇಲ್ಲೊಂದು ಕಡೆ ಮಗುವೊಂದು ಮನೆಯ ಅಡುಗೆ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದೆ. ವಾಪಸ್ ಬಾಗಿಲು ತೆಗೆಯುವುದು ಹೇಗೆ ಎಂಬುದು ಮಗುವಿಗೆ ಗೊತ್ತಿಲ್ಲ. ಅಳುವುದಕ್ಕೆ ಶುರು ಮಾಡಿದೆ. ನಂತರ ತಾಯಿ ಏಣಿಯೊಂದನ್ನು ಇಟ್ಟು ಕಿಟಕಿ ಬಾಗಿಲಿನಿಂದ ತುಸು ಮೇಲೆ ಇರುವ ಕಿಟಕಿಯ ಮೂಲಕ ದೊಣ್ಣೆಯನ್ನು ಕೆಳಗೆ ಬಿಟ್ಟು ಬಾಗಿಲಿನ ಚಿಲಕ ತೆಗೆಯುವ ಪ್ರಯತ್ನ ಮಾಡಿದ್ದಾರೆ.
ಆದರೆ ಅದು ಕೈಯಲ್ಲಿ ಚಿಲಕ ತೆರೆದಂತೆ ದೊಣ್ಣೆಯಿಂದ ತೆಗೆಯುವುದಕ್ಕೆ ಆಗುತ್ತಿಲ್ಲ, ಇತ್ತ ತಾಯಿ ಮೇಲಿನ ಕಿಟಕಿಯಿಂದ ಮಗುವನ್ನು ನೋಡುತ್ತಾ ಹೇಗೆ ಬಾಗಿಲಿನ ಚಿಲಕವನ್ನು ತೆಗೆಯಬೇಕು ಎಂಬುದನ್ನು ಹೇಳಿ ಕೊಡುತ್ತಿದ್ದಾರೆ. ಆದರೆ ಆ ಪುಟ್ಟ ಮಗುವಿಗೆ ಅದನ್ನು ತೆಗೆಯುವುದು ಹೇಗೆ ಎಂದು ತಿಳಿಯುತ್ತಿಲ್ಲ, ತಾಯಿಯ ಹಲವು ಪ್ರಯತ್ನದ ನಂತರ ಮಗುವಿಗೆ ಬಾಗಿಲಿನ ಚಿಲಕ ಹೇಗೆ ತೆಗೆಯಬೇಕು ಎಂಬುದು ತಿಳಿದಿದ್ದು, ಸ್ವತಃ ಮಗುವೇ ಬಾಗಿಲಿನ ಚಿಲಕ ತೆಗೆದು ಹೊರಬಂದಿದೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ.
ವೀಡಿಯೋ ಭಾರಿ ವೈರಲ್
ವಿಡಿಯೋ ನೋಡಿದವರು ಹಲವು ಕಾಮೆಂಟ್ ಮಾಡಿದ್ದಾರೆ. ಆಕೆಯನ್ನು ಒಂದು ದಿನ ಅಲ್ಲೇ ಬಿಡಿ ಊಟ ಅಡುಗೆ ಮಾಡಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡುವುದಕ್ಕೆ ಕಿರಿಕಿರಿಯಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ಇದನ್ನೇ ನನ್ನ ಅಮ್ಮನಿಗೆ ಮಾಡಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಾಗಿಲಿನ ಮೇಲೆ ಕಿಟಕಿ ಯಾಕೆ ಇಡ್ತಾರೆ ಅಂತ ಇವತ್ತು ಗೊತ್ತಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಮಗನೂ ಹೀಗೆ ಮಾಡಿದ್ದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಕೆಲಸಗಳನ್ನು ಬಾಲ್ಯದಲ್ಲಿ ಪ್ರತಿ ಮಕ್ಕಳು ಮಾಡಿರ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಬೀದಿ ಬದಿ ಮೋಮೋಸ್ ಮಾರುವ ಈ ಯುವಕನ ದಿನದ ಗಳಿಕೆ 100000 ಲಕ್ಷ!
ಇದನ್ನೂ ಓದಿ: ಸೀರೆಯ ವಿಚಾರಕ್ಕೆ ಜಗಳ: ಹಸೆಮಣೆ ಏರಬೇಕಾದ ವಧು ಮಸಣಕ್ಕೆ
ಇದನ್ನೂ ಓದಿ: ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಮೆಕ್ಕಾ ಯಾತ್ರಿಕರ ಬಸ್: 42 ಭಾರತೀಯ ಯಾತ್ರಿಕರ ಸಾವು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.