ಡೆಮೋ ರೀತಿ ಲಿಂಗ ಬೇಕಾ? ವರ್ಕಿಂಗ್ ರೀತಿ ಬೇಕಾ? ಆಪರೇಷನ್​ನ ಶಾಕಿಂಗ್​ ಮಾಹಿತಿ ಕೊಟ್ಟ transgender

Published : Nov 13, 2025, 05:42 PM IST
Transgender Operation

ಸಾರಾಂಶ

 ತೃತೀಯ ಲಿಂಗಿಯರು ಲಿಂಗ ಪರಿವರ್ತನೆಗೆ ಒಳಗಾಗುವಾಗ ಎದುರಿಸುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ. ಈ ಶಸ್ತ್ರಚಿಕಿತ್ಸೆಯು ಅತ್ಯಂತ ದುಬಾರಿ ಮತ್ತು ನೋವಿನಿಂದ ಕೂಡಿದ್ದು, ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ.   ಅವರು ಅನುಭವಿಸುವ ಸಂಕಷ್ಟಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.

ಭಾರತದಲ್ಲಿ ಐದು ಲಕ್ಷಕ್ಕೂ ಅಧಿಕ ತೃತೀಯ ಲಿಂಗಿಯರು ಇರುವ ಬಗ್ಗೆ 2011ರ ಗಣತಿಯ ಅಂಕಿ ಅಂಶ ಹೇಳುತ್ತದೆ. ಇದರ ಬಳಿಕ ದೇಶದಲ್ಲಿ ಗಣತಿ ನಡೆಯದೇ ಇರುವ ಕಾರಣ, ಸಂಖ್ಯೆ ನಿಖರವಾಗಿ ತಿಳಿದಿಲ್ಲ. ಆದರೆ ಇದರಲ್ಲಿ ಅದೆಷ್ಟೋ ಮಂದಿ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಾರೆ. ತಮ್ಮದಲ್ಲದ ತಪ್ಪಿಗೆ ಅತ್ತ ಗಂಡೂ ಆಗದೇ, ಇತ್ತ ಹೆಣ್ಣೂ ಆಗದೇ ಜನಿಸಿ, ಹುಟ್ಟಿಸಿದ ಅಪ್ಪ-ಅಮ್ಮಂದಿರಿಂದಲೇ ಕಡೆಗಣನೆಗೆ ಒಳಗಾಗುವವರು ಅದೆಷ್ಟೋ ಮಂದಿ ಇದ್ದಾರೆ. ಸಮಾಜದಿಂದಲೂ ಬಹಿಷ್ಕೃತಗೊಂಡಿರುವ ಈ ಸಮುದಾಯದವರಲ್ಲಿ ಕೆಲವರು ಎಲ್ಲಾ ರೀತಿಯ ಅಡೆತಡೆಗಳನ್ನು ಮೀರಿ ಸೆಲೆಬ್ರಿಟಿಗಳಾಗಿದ್ದಾರೆ, ತಮ್ಮದೇ ಉದ್ಯಮವನ್ನು ಸ್ಥಾಪಿಸಿ ಮಾದರಿಯಾಗಿದ್ದಾರೆ. ಯಾರಿಗೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಪ್ರಸಿದ್ಧಿ ಹೊಂದುತ್ತಿದ್ದು, ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಜೀವನ ಪರ್ಯಂತ ನೋವು

ಇಂಥವರಲ್ಲಿ ಹಲವರು ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ಇದೆ. ಆದರೆ ಇದೊಂದು ಜೀವನ ಪರ್ಯಂತ ಮಾಡಿಕೊಳ್ಳಬೇಕಾಗಿರುವ ಚಿಕಿತ್ಸೆ. ಬಲು ದುಬಾರಿ ಮಾತ್ರವಲ್ಲದೇ ಅತ್ಯಂತ ನೋವಿನ, ಅತ್ಯಂತ ಭಯಾನಕ ಎನ್ನುವಂಥ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಂಥವರು ತಾವು ಅನುಭವಿಸುವ ನೋವು, ಆಪರೇಷನ್​ ವೇಳೆ ಅನುಭವಿಸುವ ಯಾತನೆ ಜೊತೆಗೆ ಸಮಾಜದ ಕಣ್ಣಿನಿಂದ ಕಡೆಗಣನೆಗೆ ಒಳಗಾಗಿರುವ ತಮ್ಮ ಆ ಅನುಭವಗಳನ್ನು ಹಂಚಿಕೊಳ್ಳುವಾಗ ಎಂಥವರು ಕೂಡ ಕಣ್ಣೀರಾಗಬೇಕು. ಇದರ ಹೊರತಾಗಿಯೂ ಇವರನ್ನು ತಾತ್ಸಾರದಿಂದ ನೋಡುವ ದೊಡ್ಡ ವರ್ಗವೇ ಇದೆ.

ಲಿಂಗ ಪರಿವರ್ತನೆ

ಇದೀಗ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಬಗ್ಗೆ ಹಾಗೂ ಅದಕ್ಕೆ ತಗಲುವ ವೆಚ್ಚಗಳ ಬಗ್ಗೆ, ಟ್ರಾನ್ಸ್​ಜೆಂಡರ್​ ಒಬ್ಬರು ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ಆಪರೇಷನ್​ಗೆ ಒಂದು ಲಕ್ಷದಿಂದ ಐದಾರು ಲಕ್ಷದವರೆಗೂ ತಗಲುತ್ತದೆ. ನಮಗೆ ಯಾವ ರೀತಿಯ ಟ್ರೀಟ್​ಮೆಂಟ್​ ಬೇಕು ಎನ್ನುವುದರ ಮೇಲೆ ಅದು ಆಗುತ್ತದೆ. ಲಿಂಗದ ಡೆಮೋ ರೀತಿ ಬೇಕಾ? ವರ್ಕಿಂಗ್ ರೀತಿ ಬೇಕಾ ಎನ್ನುವುದನ್ನು ಕೇಳುತ್ತಾರೆ. ಕೇವಲ ಹೆಣ್ಣಾಗಿ ಕಾಣುವುದಕ್ಕೆ ಕಡಿಮೆ ಖರ್ಚು, ಆದರೆ ಲಿಂಗ ಪರಿವರ್ತನೆ ಆದ ಮೇಲೆ ಹೆಣ್ಣೊಬ್ಬಳು ಅನುಭವಿಸುವ ಸುಖಗಳನ್ನು ಅನುಭವಿಸಲು ಸಾಧ್ಯವಾಗುವುದಕ್ಕೆ ಹೆಚ್ಚು ಖರ್ಚು. ಅದೇ ರೀತಿ ಗಂಡಿನ ದೇಹ ರಚನೆ ಬಿಟ್ಟು ಹೆಣ್ಣಿನ ದೇಹ ರಚನೆ ಮಾಡಲು, ಗಡ್ಡ-ಮೀಸೆ ಬರದೇ ಇರುವಂತೆ ಟ್ರೀಟ್​ಮೆಂಟ್​ ತೆಗೆದುಕೊಳ್ಳಲು ಇವೆಲ್ಲಕ್ಕೂ ಹೆಚ್ಚು ಹಣ ಬೇಕಾಗುತ್ತದೆ ಎಂದಿದ್ದಾರೆ.

ಜೀವನ ಪೂರ್ತಿ ಟ್ರೀಟ್​ಮೆಂಟ್​

ಅಂದ ಮಾತ್ರಕ್ಕೆ ಇದು ಒಂದು ಸಲದ ವೆಚ್ಚ ಅಲ್ಲ, ಬದಲಿಗೆ ಜೀವನ ಪೂರ್ತಿ ಇಂಥ ಟ್ರೀಟ್​ಮೆಂಟ್​ ಹಲವರು ತೆಗೆದುಕೊಳ್ಳಲೇಬೇಕಾಗುತ್ತದೆ. ಬಾಡಿ ಬದಲಾವಣೆಗೆ ಹಾರ್ಮೋನಲ್​ ಇಂಜೆಕ್ಷನ್​ ತೆಗೆದುಕೊಳ್ಳಬೇಕಾಗುತ್ತದೆ ಎನ್ನುವ ಮೂಲಕ ತೃತೀಯ ಲಿಂಗಿಯಾಗಿ ಹುಟ್ಟಿ ಹೆಣ್ಣಾಗಲು ಅವರು ಪಡುವ ಸಂಕಷ್ಟಗಳನ್ನು ಕೇಳಿದರೆ ಮನಸ್ಸಿಗೆ ನೋವಾಗುವುದಂತೂ ದಿಟ. ಇಷ್ಟೆಲ್ಲಾ ಮಾಡಿ, ದೇಹದ ಮೇಲೆ ಇಷ್ಟೊಂದು ಸರ್ಕಸ್​ ಮಾಡಿ, ಯಾವುದ್ಯಾವುದೋ ಇಂಜೆಕ್ಷನ್​ಗಳಿಗೆ ದೇಹವನ್ನು ಒಗ್ಗಿಸಿಕೊಂಡು, ಮಾತ್ರೆಗಳಿಂದಲೇ ಜೀವನ ನಡೆಸಿದರೂ ಕೆಲವರು ಮಾತ್ರ ಮುನ್ನೆಲೆಗೆ ಬರಲು ಸಾಧ್ಯವಾಗಿದೆ ಎನ್ನುವುದು ಕೂಡ ಅಷ್ಟೇ ದಿಟ.

 

ಅವರ ಮಾತನ್ನು ಕೇಳಲು ಇದರ ಮೇಲೆ ಕ್ಲಿಕ್​  ಮಾಡಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!