Save Money : ಬೇಸಿಗೆಯಲ್ಲಿ ಎಸಿ ಕಾರಣದಿಂದ ಕರೆಂಟ್ ಬಿಲ್ ಜಾಸ್ತಿ ಆಗ್ತಿದ್ರೆ ಹೀಗೆ ಮಾಡಿ

Published : Apr 27, 2023, 05:15 PM IST
Save Money : ಬೇಸಿಗೆಯಲ್ಲಿ ಎಸಿ ಕಾರಣದಿಂದ ಕರೆಂಟ್ ಬಿಲ್ ಜಾಸ್ತಿ ಆಗ್ತಿದ್ರೆ ಹೀಗೆ ಮಾಡಿ

ಸಾರಾಂಶ

ಬೇಸಿಗೆ ಶುರುವಾಗ್ತಿದ್ದಂತೆ ಒಂದ್ಕಡೆ ಎಸಿ, ಇನ್ನೊಂದು ಕಡೆ ಕೂಲರ್ ಮತ್ತೊಂದು ಕಡೆ ಫ್ಯಾನ್ ತಿರುಗ್ತಾ ಇರುತ್ತೆ. ಇದ್ರಿಂದ ಕರೆಂಟ್ ಬಿಲ್ ಹೆಚ್ಚಾಗಿ ಜೇಬಿಗೆ ಕತ್ತರಿ ಬೀಳುತ್ತೆ. ನಿಮ್ಮ ಮನೆಯಲ್ಲೂ ಎಸಿಯಿದ್ದು, ಕರೆಂಟ್ ಬಿಲ್ ಕಡಿಮೆ ಬರಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಟಿ.  

ಬೇಸಿಗೆ ಪ್ರಾರಂಭವಾದರೆ ಸಾಕು ಹಗಲು ರಾತ್ರಿಯೆನ್ನದೆ ಮನೆಯಲ್ಲಿ ಫ್ಯಾನ್, ಎಸಿ, ಕೂಲರ್ ಎಲ್ಲವೂ ಚಾಲ್ತಿಯಲ್ಲೇ ಇರುತ್ತದೆ. ರಾತ್ರಿಯ ಸಮಯದಲ್ಲಂತೂ ಒಮ್ಮೆ ವಿದ್ಯುತ್ ಕಡಿತವಾದರೂ ಸಾಕು ನಿದ್ದೆ ಬರದೇ ಸೆಕೆಯಿಂದ ಒದ್ದಾಡುವ ಪರಿಸ್ಥಿತಿ ಎದುರಾಗುತ್ತದೆ. ವಿಪರೀತ ಸೆಕೆಯಿಂದ ಉಂಟಾಗುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಎಸಿ ಮುಂತಾದ ಸೌಲಭ್ಯಗಳು ಇರುವುದರಿಂದ ನೆಮ್ಮದಿಯ ನಿದ್ದೆ ಮಾಡಬಹುದಾಗಿದೆ.

ಈಗಂತೂ ಮನೆ ಕಚೇರಿ (Office) ಎನ್ನದೇ ಎಲ್ಲ ಕಡೆಯಲ್ಲೂ ಎಸಿಯ ಸೌಲಭ್ಯ ಇರುತ್ತದೆ. ಗ್ಲೋಬರ್ ವಾರ್ಮಿಂಗ್ ನಿಂದಾಗಿ ಹೆಚ್ಚುತ್ತಿರುವ ಉಷ್ಣತೆಯ ಕಾರಣ ಬೆಳಿಗ್ಗೆಯಿಂದ ಸಂಜೆಯ ತನಕ ಎಸಿ ಆನ್ ಇರುತ್ತದೆ. ಕೆಲವೊಂದು ಇಲೆಕ್ಟ್ರಿಕ್ (Electric) ಸಾಧನಗಳಿಗೆ ಕೂಡ ಎಸಿ ಬೇಕೇ ಬೇಕು. ಅಂತಹ ಸಮಯದಲ್ಲಿ ಎಸಿಯ ಕಾರಣದಿಂದ ಕರೆಂಟ್ ಬಿಲ್ ಕೂಡ ಹೆಚ್ಚಿಗೆ ಬರುತ್ತದೆ. ಕರೆಂಟ್ ಬಿಲ್ ಹೆಚ್ಚು ಬರುತ್ತದೆ ಎಂಬ ಕಾರಣಕ್ಕೆ ಎಸಿ ಇಲ್ಲದೇ ಕಳೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಹಾಗಾಗಿ ಎಸಿ (Ac) ಯನ್ನು ಬಳಸಬೇಕು ಹಾಗೇ ಹಣವನ್ನೂ ಉಳಿಸಬೇಕು ಎಂದರೆ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಬೇಕು.

ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ತಾರೆಯರ ಫ್ಯಾಷನ್ ಝಲಕ್

ಮನೆಯನ್ನು ಮುಚ್ಚಿ ಎಸಿ ಆನ್ ಮಾಡಿ : ಎಸಿ ಆನ್ ಮಾಡುವ ಮೊದಲು ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿ. ಕಿಟಕಿ ಬಾಗಿಲುಗಳನ್ನು ಹಾಕಿ ಎಸಿಯನ್ನು ಆನ್ ಮಾಡಿದಾಗ ಮನೆಯ ಒಳಗೆ ಬೇಗ ಕೂಲ್ ಆಗುತ್ತದೆ. ಕಿಟಕಿ ಬಾಗಿಲುಗಳು ತೆರೆದಿದ್ದರೆ ಮನೆಯ ಒಣಗಿನ ವಾತಾವರಣ ತಣ್ಣಗಾಗಲು ಬಹಳ ಸಮಯ ಬೇಕು. ಆಗ ಕರೆಂಟ್ ಕೂಡ ಹೆಚ್ಚು ಬೇಕಾಗುತ್ತದೆ.

ಎಸಿಯ ಟೆಂಪರೇಚರ್ ಹೀಗಿರಲಿ : ಎಸಿಯ ಟೆಂಪರೇಚರ್ ಅನ್ನು ಮತ್ತೆ ಮತ್ತೆ ಹೆಚ್ಚು ಕಡಿಮೆ ಮಾಡುವುದರಿಂದಲೂ ವಿದ್ಯುತ್ ಹೆಚ್ಚು ವ್ಯಯವಾಗುತ್ತದೆ. ಹಾಗಾಗಿ ಎಸಿಯನ್ನು ಯಾವಾಗಲೂ 23-26 ಡಿಗ್ರಿ ಸೆಲ್ಸಿಯಸ್ ನಲ್ಲೇ ಇಡಬೇಕು. 24 ಡಿಗ್ರಿ ಸೆಲ್ಸಿಯಸ್ ಟೆಂಪರೇಚರ್ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಈ ವಿಧಾನವನ್ನು ಅನುಸರಿಸುವುದರಿಂದ ಪ್ರತಿಶತ 15ರಿಂದ 25 ರಷ್ಟು ವಿದ್ಯುತ್ ಬಿಲ್ ಅನ್ನು ಉಳಿಸಬಹುದು.

ಟೈಮರ್ ಸೆಟ್ ಮಾಡಿ : ಎಸಿಗೆ ಟೈಮ್ ಸೆಟ್ ಮಾಡುವುದರಿಂದ ಕೂಡ ವಿದ್ಯುತ್ ಅನ್ನು ಉಳಿಸಬಹುದು. ಇದರಿಂದ ನಿಮಗೆ ರಾತ್ರಿಯಿಡಿ ಎಸಿಯನ್ನು ಆನ್ ಮಾಡುವ ತೊಂದರೆಯೂ ತಪ್ಪುತ್ತದೆ. ರಾತ್ರಿ ಸುಮಾರು 1-2 ಗಂಟೆಗೆ ಎಸಿ ಟೈಮರ್ ಅನ್ನು ಸೆಟ್ ಮಾಡಿ. ಆ ಸಮಯದಲ್ಲಿ ನಿಮಗೂ ಚೆನ್ನಾಗಿ ನಿದ್ದೆ ಬಂದಿರುತ್ತದೆ ಮತ್ತು ರೂಮಿನ ವಾತಾವರಣ ಕೂಡ ತಣ್ಣಗಾಗಿರುತ್ತದೆ.

ಶ್... ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸೀಕ್ರೆಟ್ಸ್ ಇವು!

ಏರ್ ಫಿಲ್ಟರ್ ಅನ್ನು ಸ್ವಚ್ಛಗೊಳಿಸಿ : ಏರ್ ಫಿಲ್ಟರ್ ಗಳು ಎಸಿಯನ್ನು ಧೂಳಿನಿಂದ ರಕ್ಷಿಸಿ ಎಸಿ ಸರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತದೆ. ಇವು ಧೂಳನ್ನು ನಿಯಂತ್ರಿಸಿ ಎಸಿಯ ಒಳಗಿನ ಹವೆ ತಣ್ಣಗಾಗಲು ಸಹಕಾರಿಯಾಗಿದೆ. ನಿಯಮಿತವಾಗಿ ಕಾರ್ಯ ನಿರ್ವಹಿಸುವುದರಿಂದ ಏರ್ ಫಿಲ್ಟರ್ ಗಳು ಧೂಳಿನಿಂದ ತುಂಬಿಹೋಗುತ್ತದೆ. ಹೀಗೆ ಫಿಲ್ಟರ್ ನಲ್ಲಿ ಧೂಳು ಆವರಿಸಿದಾಗ ಗಾಳಿಯನ್ನು ಒಳಗೆ ಎಳೆಯಲು ಎಸಿಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಹೆಚ್ಚು ಶಕ್ತಿ ವ್ಯಯವಾದಾಗ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಆದ್ದರಿಂದ ಆಗಾಗ ಏರ್ ಫಿಲ್ಟರ್ ಅನ್ನು ತೊಳೆಯುವುದರಿಂದ ವಿದ್ಯುತ್ ಬಿಲ್ ಅನ್ನು ಕಡಿಮೆಮಾಡಬಹುದು.

ಎಸಿಯ ಜೊತೆ ಫ್ಯಾನ್ ಬಳಸಿ : ನೀವು ಮಲಗುವ ಸ್ಥಳ ಅಥವಾ ಮನೆ ಬೇಗ ತಂಪಾಗಲು ಎಸಿ ಮತ್ತು ಫ್ಯಾನ್ ಎರಡನ್ನು ಬಳಸಿ. ಎಸಿ ಮತ್ತು ಫ್ಯಾನ್ ಎರಡನ್ನೂ ಒಮ್ಮೆಲೇ ಆನ್ ಮಾಡಿದಾಗ ಆ ಸ್ಥಳ ಬಹಳ ಬೇಗ ತಣ್ಣಗಾಗುತ್ತದೆ. ಇದರಿಂದ ದಿನವಿಡೀ ಎಸಿಯನ್ನು ಆನ್ ಮಾಡಿಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ವಿದ್ಯುತ್ ಕಡಿಮೆ ಖರ್ಚಾಗುತ್ತದೆ ತನ್ಮೂಲಕ ಕರೆಂಟ್ ಬಿಲ್ ಕೂಡ ಕಡಿಮೆಯಾಗುತ್ತದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!