Women Power : ಬ್ಯೂಸಿನೆಸ್ ಮಾಡಲು ಹೆಣ್ಣೇನೂ ಕಡಿಮೆ ಇಲ್ಲ ಅಂತ ತೋರ್ಸುತ್ತೆ ಈ ಮಾರ್ಕೆಟ್!

By Suvarna News  |  First Published Apr 26, 2023, 2:47 PM IST

ಈಗ ಮಹಿಳೆಯರು ಸ್ವಾವಲಂಭಿಗಳಾಗ್ತಿದ್ದಾರೆ, ಎಲ್ಲ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ ನಿಜ. ಆದ್ರೆ ಹಿಂದಿನ ಕಾಲದ ಮಹಿಳೆಯರು ಯಾರಿಗೂ ಕಡಿಮೆ ಇರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದು ತಮ್ಮ ಸಾಮ್ರಾಜ್ಯ ಕಟ್ಟಿದ ಈ ಮಹಿಳೆಯರು ಎಲ್ಲರಿಗೂ ಮಾದರಿ.
 


ನಾವು ಭಾರತದಲ್ಲಿದ್ರೂ ಭಾರತದ ಅನೇಕ ಪ್ರದೇಶಗಳ ಬಗ್ಗೆ ನಮಗೆ ಸರಿಯಾಗಿ ತಿಳಿದಿಲ್ಲ. ಭಾರತದಲ್ಲಿ ಅನೇಕ ಆಸಕ್ತಿದಾಯಕ, ವಿಶಿಷ್ಟ ಸ್ಥಳಗಳಿವೆ. ಮಣಿಪುರದ ಇಮಾ ಕೈತಾಲ್ ಮಾರುಕಟ್ಟೆ ಕೂಡ ಇದ್ರಲ್ಲಿ ಸೇರಿದೆ. ಈ ಮಾರುಕಟ್ಟೆ ಮಹಿಳಾ ಶಕ್ತಿಗೆ ಉತ್ತಮ ನಿದರ್ಶನ. ಈ ಮಾರುಕಟ್ಟೆಯಲ್ಲಿ ನೀವು ಮಹಿಳೆಯರನ್ನು ಮಾತ್ರ ನೋಡ್ತೀರಿ. ಈ ಮಾರುಕಟ್ಟೆಯನ್ನು ಮಹಿಳೆಯರೇ ನಡೆಸ್ತಾರೆ.  

ಸಾಂಪ್ರದಾಯಿಕ (Traditional) ವೇಷಭೂಷಣಗಳನ್ನು ಧರಿಸಿದ ಸಾವಿರಾರು ಮಹಿಳೆಯರು ತಮ್ಮ ಅಂಗಡಿಗಳನ್ನು ಸಂಭಾಳಿಸ್ತಾರೆ. ಅಂಗಡಿಗಳನ್ನು ಕೂಡ ಇವರು ಸುಂದರವಾಗಿ ಅಲಂಕರಿಸ್ತಾರೆ. ಈ ಮಾರುಕಟ್ಟೆ (Market) ಯಲ್ಲಿ ಸುಮಾರು 5000 ಮಹಿಳೆಯರು ವ್ಯಾಪಾರ ಮಾಡೋದನ್ನು ನೀವು ನೋಡ್ಬಹುದು. ಹಾಗಾಗಿಯೇ ಈ ಮಾರುಕಟ್ಟೆಯನ್ನು ಏಷ್ಯಾ (Asia) ದ ಅತಿದೊಡ್ಡ ಮಹಿಳಾ ಮಾರುಕಟ್ಟೆ ಎಂದೂ ಕರೆಯಲಾಗುತ್ತದೆ. 
ಈ ಮಾರುಕಟ್ಟೆಯಲ್ಲಿ ಬರೀ ಅಲಂಕಾರಿಕ ವಸ್ತುಗಳಿಲ್ಲ. ಮೀನು, ತರಕಾರಿ, ಮಸಾಲೆ ಪದಾರ್ಥ, ಹಣ್ಣು, ಸ್ಥಳೀಯ ಚಾಟ್  ಸೇರಿದಂತೆ ಎಲ್ಲ ಬಗೆಯ ವಸ್ತುಗಳನ್ನು ನೀಡು ಖರೀದಿ ಮಾಡಬಹುದು. ಈ ಮಹಿಳಾ ಮಾರುಕಟ್ಟೆ ವಿಶೇಷವೇನು? ಯಾಗಿಲ್ಲ ಪುರುಷರು ವ್ಯಾಪಾರ ಮಾಡೋದಿಲ್ಲ ಎಂಬುದನ್ನು ನಾವು ಹೇಳ್ತೇವೆ.

Tap to resize

Latest Videos

ಅಬ್ಬಬ್ಬಾ..ಸುರ ಸುಂದರಾಗಿ ಯುವತಿ..ಈಕೆಗಿರೋದು ಭರ್ತಿ 7,000 ಬಾಯ್‌ಫ್ರೆಂಡ್ಸ್‌!

ಮಣಿಪುರದ ಇಮಾ ಕೈತಾಲ್ ಮಾರುಕಟ್ಟೆ ವಿಶೇಷವೇನು? : ಈ ಮಾರುಕಟ್ಟೆ ನೋಡಲು ಸುಂದರವಾಗಿದೆ. ಈ ಮಾರುಕಟ್ಟೆ ಮತ್ತೊಂದು ವಿಶೇಷವೆಂದ್ರೆ ಇಲ್ಲಿ ವಿವಾಹಿತ ಮಹಿಳೆಯರು ಮಾತ್ರ ವ್ಯಾಪಾರ ನಡೆಸಬಹುದು. ಇದಲ್ಲದೆ ಈ ಮಾರುಕಟ್ಟೆ ವಿಶೇಷವಾಗಲು ಹಲವು ಕಾರಣಗಳಿವೆ. ಇಮಾ ಬಜಾರ್‌ನ ಅಡಿಪಾಯವನ್ನು 16 ನೇ ಶತಮಾನದಲ್ಲಿ ಹಾಕಲಾಯಿತು. ಆ ಸಮಯದಲ್ಲಿ ಮಣಿಪುರವನ್ನು ಲುಲುಪ್ ಕಾಬಾ ಆಳುತ್ತಿದ್ದನು. ಬಂಧಿತ ಕಾರ್ಮಿಕರಿಗೆ ಆತ ಕೆಲಸ ನೀಡಿದ್ದ. ಒತ್ತಾಯ ಪೂರ್ವಕವಾಗಿ ಈ ಮಾರುಕಟ್ಟೆಯಲ್ಲಿ ಬಂಧಿತ ಕಾರ್ಮಿಕರು ಕೆಲಸ ಮಾಡಬೇಕಾಗಿತ್ತು. ಪುರುಷರು ಸೈನ್ಯ ಮತ್ತು ಇತರ ಕೆಲಸ  ಮಾಡಲು ಮನೆಯಿಂದ ಹೊರಗೆ ಹೋಗ್ಬೇಕಿತ್ತು. ಹಾಗಾಗಿ ಅವರು ಮನೆಗಳಿಂದ ದೂರ ಇರುತ್ತಿದ್ದರು. ಗಂಡಸರು ಮನೆಯಿಂದ ದೂರವಿದ್ದ ಕಾರಣ ಎಲ್ಲ ಜವಾಬ್ದಾರಿ ಮಹಿಳೆಯರ ಹೆಗಲೇರಿತ್ತು. ಈ ಸಂದರ್ಭದಲ್ಲಿ ಮಹಿಳೆಯರು ಧೈರ್ಯ ಕಳೆದುಕೊಳ್ಳಲಿಲ್ಲ. ಬಲವಂತದ ಕಾರ್ಮಿಕ ವ್ಯವಸ್ಥೆಯನ್ನು ಅವರು ವಿರೋಧಿಸಿದ್ರು. ಮೇಟಿ ಮಹಿಳೆಯರು ಧೈರ್ಯ ಕಳೆದುಕೊಳ್ಳಲಿಲ್ಲ. ಇಮಾ ಕೈತಾಲ್ ಮಾರುಕಟ್ಟೆ ಶುರುವಾಗಿದ್ದು ಹೀಗೆ. ಆ ಸಮಯದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕುಟುಂಬ ಮತ್ತು ಸಮಾಜವನ್ನು ಬಲಪಡಿಸಿದರು. ಈ ಮಹಿಳೆಯರು ಸ್ವಂತ ವ್ಯಾಪಾರದ ಮಾರ್ಗ ಕಲಿತು, ಮಾರುಕಟ್ಟೆ ಶುರು ಮಾಡಿದ್ರು. ಇಂದು ಈ ಮಾರುಕಟ್ಟೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವಿಶ್ವದಲ್ಲಿಯೇ ಹೆಸರು ಮಾಡಿದೆ.

ಸೆಕ್ಸ್‌ ಅಂದ್ರೆ ಹಲವರಿಗೆ ಖುಷಿಗಿಂತ ನೋವೇ ಹೆಚ್ಚು!

ಬ್ರಿಟಿಷರು ಭಾರತಕ್ಕೆ ಬಂದ ನಂತರವೂ ಬಲವಂತದ ಬಂಧಿತ ಕಾರ್ಮಿಕರ ಲುಲ್ಲಾಪ್-ಕಾಬಾ ವ್ಯವಸ್ಥೆಯು ಮುಂದುವರೆಯಿತು. ಆ ಸಮಯದಲ್ಲಿ  ಬ್ರಿಟಿಷರ ದೌರ್ಜನ್ಯ ಉತ್ತುಂಗದಲ್ಲಿತ್ತು. ಬ್ರಿಟಿಷ್ ಸರ್ಕಾರದ ನೀತಿಗಳು ಇಮಾ ಬಜಾರ್‌ನ ಕಾರ್ಯನಿರ್ವಹಣೆಯಲ್ಲೂ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದವು. ಆದ್ರೆ  ಮಾರುಕಟ್ಟೆಯಲ್ಲಿರುವ ಮಹಿಳೆಯರು ಬ್ರಿಟಿಷ್ ನೀತಿಯನ್ನು ವಿರೋಧಿಸಿದ್ರು. ಭಾರತದ ವಿವಿಧ ದೇಶಗಳಲ್ಲಿ ಜನರನ್ನು ಹೆದರಿಸುತ್ತಿದ್ದ ಬ್ರಿಟಿಷರಿಗೆ ಪಾಠ ಕಲಿಸಲು ಮಹಿಳೆಯರು ಮುಂದಾದ್ರು. ಇಮಾ ಕೈತಾಲ್ ಕಟ್ಟಡಗಳನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮುಂದಾಗಿದ್ದರು. ಆದ್ರೆ ಇಮಾ ಬಜಾರ್‌ನ ಮಹಿಳೆಯರು ಇದನ್ನು ವಿರೋಧಿಸಿ ಬ್ರಿಟಿಷರಿಗೆ ಬುದ್ದಿ ಕಲಿಸಿದ್ರು. 

ಕೈತಾಲ್‌ನ ಮಹಿಳೆಯರು ಬ್ರಿಟಿಷರ ಆಡಳಿತ (British Administration) ಸಿಬ್ಬಂದಿ ಜೊತೆ ಧೈರ್ಯದಿಂದ ಹೋರಾಡಿದರು. ಮಹಿಳಾ ಯುದ್ಧ ಪ್ರಾರಂಭಿಸಿದರು. ಬ್ರಿಟಿಷರ ದಮನಕಾರಿ ನೀತಿಗಳ ವಿರುದ್ಧ ಪ್ರತಿಭಟನೆ, ಪ್ರದರ್ಶನ ಮತ್ತು ಮೆರವಣಿಗೆ ನಡೆಯಿತು. ಈ ಚಳುವಳಿ ಎರಡನೇ ಮಹಾಯುದ್ಧದವರೆಗೂ ಮುಂದುವರೆಯಿತು. ಕೊನೆಗೆ ಇಮಾ ಬಜಾರ್‌ನ ಮಹಿಳೆಯರು ಮಾತೃಶಕ್ತಿಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ರು. 

ಮಹಿಳೆಯರ ಹೋರಾಟ (Fight) ನೋಡಿಯೇ ಇದಕ್ಕೆ ಇಮಾ ಎಂಬ ಹೆಸರು ಬಂದಿದೆ. ಇಮಾ ಅಂದ್ರೆ ಮಣಿಪುರಿ ಭಾಷೆಯಲ್ಲಿ ತಾಯಿ (Mother)  ಕೈತಾಲ್ ಎಂದರೆ ಮಾರುಕಟ್ಟೆ. ಆದ್ದರಿಂದ ಈ ಮಾರುಕಟ್ಟೆಯ ಸಂಪೂರ್ಣ ಅರ್ಥವೆಂದರೆ ತಾಯಿಯ ಮಾರುಕಟ್ಟೆ. ಮಹಿಳೆಯರಿಂದ ಪ್ರಾರಂಭವಾದ ಈ ಮಾರುಕಟ್ಟೆ ಇಂದಿಗೂ ಇಡೀ ಜಗತ್ತಿನಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತ್ಯೇಕ ಗುರುತಾಗಿ ಉಳಿದಿದೆ.  
 

click me!