ಗರ್ಭಿಣಿಯರಿಗೂ ಮೊಟ್ಟೆ ಒಳ್ಳೇಯದು, ಇತಿ ಮಿತಿಯಲ್ಲಿರುವಂತೆ ಇರಲಿ ಎಚ್ಚರ!

By Suvarna News  |  First Published Dec 12, 2022, 12:56 PM IST

ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರಬೇಕಾಗುತ್ತದೆ. ಮೊಟ್ಟೆ ಸೇವನೆ ಮಾಡುವ ಗರ್ಭಿಣಿಯರು ಕೂಡ ಎಷ್ಟು ಮೊಟ್ಟೆಯನ್ನು ಹೇಗೆ ಸೇವನೆ ಮಾಡ್ಬೇಕು ಎಂಬ ಮಾಹಿತಿ ಹೊಂದಿರಬೇಕು.
 


ಗರ್ಭಿಣಿಯರು ಪ್ರತಿಯೊಂದು ಕೆಲಸ ಮಾಡುವಾಗ್ಲೂ ವಿಶೇಷ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೆರಿಗೆ ನಂತ್ರಕ್ಕಿಂತ ಹೆರಿಗೆ ಮೊದಲು ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಗರ್ಭಿಣಿಯರು ಏನೇ ತಪ್ಪು ಮಾಡಿದ್ರೂ ಅದು ಗರ್ಭದಲ್ಲಿರುವ ಭ್ರೂಣಕ್ಕೆ ಅಪಾಯವನ್ನುಂಟು ಮಾಡುತ್ತದೆ. ಗರ್ಭಿಣಿಯರಿಗೆ ರುಚಿ ರುಚಿ ಆಹಾರ ಸೇವನೆ ಮಾಡುವ ಮನಸ್ಸಾಗುತ್ತದೆ ನಿಜ. ಆದ್ರೆ ಬೇಕಾಬಿಟ್ಟಿ ಆಹಾರ ಸೇವನೆ ಮಾಡಲು ಸಾಧ್ಯವಿಲ್ಲ. ಗರ್ಭಿಣಿ ಸೇವನೆ ಮಾಡಿದ ಆಹಾರ ಆಕೆ ಆರೋಗ್ಯದ ಮೇಲೆ ಮಾತ್ರವಲ್ಲದೆ ಆಕೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೂ ನೇರ ಪರಿಣಾಮ ಬೀರುತ್ತದೆ. ಕೆಲ ಆಹಾರಗಳನ್ನು ಮಹಿಳೆಯರು ಸೇವನೆ ಮಾಡ್ಲೇಬೇಕು. ಆದ್ರೆ ಗರ್ಭಾವಸ್ಥೆಯಲ್ಲಿ ಯಾವುದೇ ಕಾರಣಕ್ಕೂ ಆಹಾರ ತಿನ್ನಬಾರದು.   

ಮೊಟ್ಟೆ (Egg) ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಅನೇಕ ಬಾರಿ ವೈದ್ಯ (Doctor) ರು, ಸಸ್ಯಹಾರಿಗಳಿಗೂ ಮೊಟ್ಟೆ ಸೇವನೆ ಮಾಡುವಂತೆ ಸಲಹೆ ನೀಡ್ತಾರೆ. ಗರ್ಭಾವಸ್ಥೆಯಲ್ಲಿ ಮೊಟ್ಟೆ ತಿನ್ನುವುದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಪ್ರೋಟೀನ್ (Protein) ಹೊರತುಪಡಿಸಿ, ವಿಟಮಿನ್ ಬಿ 12, ಒಮೆಗಾ -3, ತಾಮ್ರ, ಮೆಗ್ನೀಸಿಯಮ್, ಸೆಲೆನಿಯಮ್ ಮುಂತಾದ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಮೊಟ್ಟೆಯಲ್ಲಿ ಕಂಡುಬರುತ್ತವೆ. ಗರ್ಭಿಣಿ (Pregnant) ಯರು ಮೊಟ್ಟೆಯನ್ನು ಸೇವನೆ ಮಾಡಿದ್ರೆ ತಪ್ಪೇನಿಲ್ಲ. ಆದ್ರೆ ಸೇವನೆ ಮಾಡುವಾಗ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾವಿಂದು ಮೊಟ್ಟೆ ಸೇವನೆ ಮಾಡುವಾಗ ಏನೆಲ್ಲ ವಿಷ್ಯ ಗಮನಿಸಬೇಕು ಎಂಬುದನ್ನು ನಿಮಗೆ ಹೇಳ್ತೆವೆ.

Tap to resize

Latest Videos

ಹಸಿ (Raw) ಮೊಟ್ಟೆ ಸೇವನೆ ಬೇಡ : ಗರ್ಭಿಣಿಯರು ಹಸಿ ಮೊಟ್ಟೆ ಸೇವನೆ ಮಾಡಬೇಡಿ. ಮೊಟ್ಟೆಯನ್ನು ಬೇಯಿಸಿ ಅಥವಾ ಬೇರೆ ಆಹಾರದಲ್ಲಿ ಸೇರಿಸಿ ನೀವು ಸೇವನೆ ಮಾಡಬಹುದು. ಅದ್ರ ಬದಲು ಹಸಿ ಮೊಟ್ಟೆ ತಿನ್ನುವ ಸಾಹಸಕ್ಕೆ ಹೋಗಬೇಡಿ.  ಹಸಿ ಮೊಟ್ಟೆ ತಿನ್ನುವುದ್ರಿಂದ ಗರ್ಭಪಾತ (Miscarriage)ದ ಅಪಾಯ ಹಲವಾರು ಪಟ್ಟು ಹೆಚ್ಚಾಗುತ್ತದೆ.  ಹಸಿ ಮೊಟ್ಟೆ ಮಾತ್ರವಲ್ಲದೆ ಗರ್ಭಿಣಿಯರು ಹಾಳಾದ  ಮೊಟ್ಟೆಯನ್ನು ಸೇವಿಸಬಾರದು. ಇದು ಗರ್ಭಾವಸ್ಥೆಯಲ್ಲಿ ಸೋಂಕಿನ ಸಾಧ್ಯತೆಯನ್ನು  ಹೆಚ್ಚಿಸುತ್ತದೆ.

WINTER TIPS: ಚಳಿಗೆ ನೀರನ್ನೇ ಮುಟ್ಟೋಕಾಗಲ್ಲ, ಪಾತ್ರೆ ತೊಳೆಯೋದು ಹೇಗಪ್ಪಾ ?

ಮನೆಯ ಹೊರಗೆ ಮೊಟ್ಟೆ ಸೇವನೆ ಬೇಡ : ಮನೆಯಲ್ಲಿಯೇ ನೀವು ಮೊಟ್ಟೆ ಆಹಾರ ತಯಾರಿಸಿ ತಿನ್ನಬಹುದು. ಇಲ್ಲವೆ ಬೇಯಿಸಿದ ಮೊಟ್ಟೆಯನ್ನು ನೀವು ಸೇವನೆ ಮಾಡಬಹುದು. ಆದ್ರೆ ಹೊರಗೆ ಮೊಟ್ಟೆ ಆಹಾರ ಸೇವನೆ ಮಾಡಬೇಡಿ. ಅನೇಕ ಕಡೆ ಮೊಟ್ಟೆಯನ್ನು ಸರಿಯಾಗಿ ಬೇಯಿಸದೆ ನೀಡುತ್ತಾರೆ. ಇಲ್ಲವೆ ಹಸಿ ಮೊಟ್ಟೆಯನ್ನು ಬಳಕೆ ಮಾಡಿರುತ್ತಾರೆ. ಇದು ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆಯಿರುತ್ತದೆ. ಗರ್ಭಿಣಿಯರು ಶುದ್ಧ ಆಹಾರಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯವಾಗುತ್ತದೆ.  

ಈ ಸಮಯದಲ್ಲಿ ಮೊಟ್ಟೆ ಸೇವನೆ ಮಾಡಿ : ಗರ್ಭಿಣಿಯರು ಮೊಟ್ಟೆ ತಿನ್ನಲು ಇಷ್ಟಪಡ್ತಿದ್ದರೆ ನೀವು ಬೆಳಗಿನ ಉಪಹಾರದಲ್ಲಿ ಮೊಟ್ಟೆ ಸೇವನೆ ಮಾಡಬೇಕು. ಬೆಳಿಗ್ಗೆ ಚಯಾಪಚಯ ಕ್ರಿಯೆ ತುಂಬಾ ಹೆಚ್ಚಾಗಿರುತ್ತದೆ. ಇದರಿಂದ ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಜೀರ್ಣಕ್ರಿಯೆ ಸುಲಭವಾಗಲು ಬೆಳಿಗ್ಗೆ ಮೊಟ್ಟೆ ಸೇವನೆ ಬೆಸ್ಟ್. 

ಪ್ರೆಗ್ನೆನ್ಸಿ ಟೈಂನಲ್ಲಿ ಕಬ್ಬಿಣದ ಮಾತ್ರೆ ತಗೊಂಡ್ರೆ ಹುಟ್ಟೋ ಮಗು ಕಪ್ಪಾಗುತ್ತಾ ?

ಅತಿಯಾದ ಮೊಟ್ಟೆ ಸೇವನೆ ಬೇಡ : ಕೆಲವರು ಮೊಟ್ಟೆಯನ್ನು ಅತಿಯಾಗಿ ಇಷ್ಟಪಡ್ತಾರೆ. ಹಾಗಾಗಿ ಗರ್ಭಾವಸ್ಥೆಯಲ್ಲೂ ಅತಿಯಾದ ಮೊಟ್ಟೆ ಸೇವನೆ ನಿಲ್ಲಿಸುವುದಿಲ್ಲ. ಮೊಟ್ಟೆ ತಿನ್ನುವುದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ನಿಜ. ಆದರೆ ಅದರ ಮಿತಿ ಬಗ್ಗೆ ಗಮನವಿರಬೇಕಾಗುತ್ತದೆ. ದಿನಕ್ಕೆ ಎರಡು ಮೂರು ಮೊಟ್ಟೆಗಳನ್ನು ತಿನ್ನಬಹುದು. ಆದರೆ ಇದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವುದು ಅಪಾಯಕಾರಿ. ಇದ್ರಿಂದ ಹೊಟ್ಟೆಯಲ್ಲಿರುವ ಮಗುವಿಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. 
 

click me!