Aishwarya Sheoran: ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದಾಕೆ ಏಕಾಏಕಿ ಅಧಿಕಾರಿಯಾಗಿ ಸ್ಫೂರ್ತಿ ತುಂಬಿದಾಗ...

By Suvarna NewsFirst Published Feb 21, 2023, 10:44 AM IST
Highlights

ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶಗಳು ಕೈ ಬೀಸಿ ಕರೆಯುತ್ತಿದ್ದಾಗ ಏಕಾಏಕಿ ಅದರಿಂದ ದೂರವಾಗಿ ಯುಪಿಎಸ್ ಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಐಶ್ವರ್ಯಾ ಶರೋನ್ ಎಲ್ಲರಿಗೂ ಸ್ಫೂರ್ತಿಯಾಗಬಲ್ಲರು. ಕೋಚಿಂಗ್ ಕೂಡ ಇಲ್ಲದೆ ಅವರು ಅತಿ ಕ್ಲಿಷ್ಟಕರ ಪರೀಕ್ಷೆಯನ್ನು ಪಾಸು ಮಾಡಿದ್ದುದು ಸಂಪೂರ್ಣವಾಗಿ ತಮ್ಮ ಬುದ್ಧಿಮತ್ತೆಯಿಂದಲೇ.

ಐಶ್ವರ್ಯಾ ಶೆರೋನ್... ಹಳೆಯ ಮಾಡೆಲ್, ಹಾಲಿ ಅಧಿಕಾರಿ. ಬ್ಯೂಟಿ ಸ್ಪರ್ಧೆಗಳಲ್ಲಿ ಆಸಕ್ತರಾಗಿದ್ದವರಿಗೆ ಇವರ ಹೆಸರು ಗೊತ್ತಿರುತ್ತದೆ. ಇಲ್ಲವಾದಲ್ಲಿ ಇವರ್ಯಾರು ಎನ್ನುವ ಗೊಂದಲ ಮೂಡುವುದು ಸಹಜ. ಐಶ್ವರ್ಯಾ ಹೆಸರಿನಲ್ಲೇ ಒಂದು ಗಾಂಭೀರ್ಯದ ಸೌಂದರ್ಯವಿದೆ. ಇವರೂ ಸಹ ಖಂಡಿತವಾಗಿ ಸೌಂದರ್ಯವತಿ. ಹೀಗಾಗಿ, ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು. ಅಸಲಿಗೆ ಇವರ ಬುದ್ಧಿಮತ್ತೆ ಬೆಳಕಿಗೆ ಬಂದಿದ್ದು 2020ರಲ್ಲಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಪ್ರಥಮ ಯತ್ನದಲ್ಲೇ ಪಾಸಾಗಿದ್ದಾರೆ ಎನ್ನುವುದು ಅಂದೂ ಸಹ ಇಡೀ ದೇಶದ ಗಮನ ಸೆಳೆದಿತ್ತು. ಭಾರತದಲ್ಲಿರುವ ವಿವಿಧ ಪರೀಕ್ಷೆಗಳಲ್ಲಿ ಅತ್ಯಂತ ಕ್ಲಿಷ್ಟಕರ ಹಾಗೂ ಯುಕ್ತಿಯಿಂದ ಕೂಡಿದ ಪರೀಕ್ಷೆ ಎಂದರೆ ಅದು ಯುಪಿಎಸ್ ಸಿ ಎನ್ನುವುದು ಪ್ರಚಲಿತವಾದ ಮಾತು. ಯುಪಿಎಸ್ ಸಿ ಪರೀಕ್ಷೆಗೆ ವರ್ಷಾನುಗಟ್ಟಲೆ ಸಿದ್ಧತೆ ನಡೆಸಿದರೂ ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆಗಳನ್ನು ಪಾಸು ಮಾಡುವುದು ಸುಲಭವಲ್ಲ. ಒಂದೊಮ್ಮೆ ಎರಡೂ ಪರೀಕ್ಷೆಗಳನ್ನು ಪಾಸು ಮಾಡಿದರೂ ಮುಂದಿನ ಸಂದರ್ಶನದಲ್ಲಿ ಹಲವರು ಫೇಲ್ ಆಗುತ್ತಾರೆ. ಏಕೆಂದರೆ, ಇಲ್ಲಿ ಬುದ್ಧಿವಂತಿಕೆಗಿಂತ ವ್ಯಕ್ತಿಯಲ್ಲಿರುವ ವಿವೇಚನೆ ಹೆಚ್ಚು ಪರೀಕ್ಷೆಗೆ ಒಡ್ಡಲ್ಪಡುತ್ತದೆ. ಲಕ್ಷಾಂತರ ಮಂದಿ ಪರೀಕ್ಷೆ ಬರೆದರೂ ಪ್ರತಿವರ್ಷ ಕೆಲವು ನೂರು ಅಥವಾ ಸಾವಿರದ ಲೆಕ್ಕದಲ್ಲಷ್ಟೇ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ, ಯುಪಿಎಸ್ ಸಿ ಪರೀಕ್ಷೆಯನ್ನು ಪಾಸು ಮಾಡುವುದು ಅದೃಷ್ಟವೂ ಹೌದು. ಜತೆಗೆ, ಪರಿಶ್ರಮ, ಬದ್ಧತೆಯೂ ದುಪ್ಪಟ್ಟು ಬೇಕು ಎನ್ನುವುದು ಸತ್ಯ.

ಪ್ರತಿಭಾನ್ವಿತ ಸುಂದರಿ (Talented Beauty)
ಐಶ್ವರ್ಯಾ ಶೆರೋನ್ (Aishwarya Sheoran) ಇಂತಹ ಅದೃಷ್ಟವಂತರಲ್ಲಿ ಒಬ್ಬರಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿಭಾನ್ವಿತೆಯಾಗಿದ್ದಾರೆ. ಹೀಗಾಗಿ, ಮೊದಲ ಪ್ರಯತ್ನದಲ್ಲೇ (First Attempt) ಯುಪಿಎಸ್ ಸಿ (UPSC) ಪರೀಕ್ಷೆ (Exam) ಕ್ಲಿಯರ್ ಮಾಡಿ ಈಗ ಅಧಿಕಾರಿ (Officer) ಆಗಿದ್ದಾರೆ. ಯುಪಿಎಸ್ ಸಿಯ ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನದಲ್ಲೂ (Interview) ಆಯ್ಕೆಯಾದ ಐಶ್ವರ್ಯಾ ಯಾವುದೇ ಕೋಚಿಂಗ್ (Coaching) ಕೂಡ ಪಡೆದುಕೊಂಡಿರಲಿಲ್ಲ ಎಂದರೆ ಅಚ್ಚರಿಯಾಗಬಹುದು. ಮೊದಲ ಪ್ರಯತ್ನದಲ್ಲೇ ಇಂತಹ ಸಾಧನೆ (Achievement) ಮಾಡಿರುವ ಕೆಲವೇ ಪ್ರತಿಭಾನ್ವಿತರಲ್ಲಿ ಇವರೂ ಒಬ್ಬರು. 2019ನೇ ಸಾಲಿನ ಪರೀಕ್ಷೆಯಲ್ಲಿ 93ನೇ ರ್ಯಾಂಕ್ (Rank) ಪಡೆದಿರುವ ಇವರು ಪ್ರಸ್ತುತ ವಿದೇಶಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೆಹಲಿ ಮೂಲದ ಐಶ್ವರ್ಯಾ ಶೆರೋನ್ ಚಾಣಕ್ಯಪುರಿಯಲ್ಲಿರುವ ಸಂಸ್ಕೃತ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 12ನೇ ತರಗತಿಯಲ್ಲಿ ಶೇ.97 ಅಂಕ ಗಳಿಸಿ ಶಾಲೆಗೆ ಟಾಪರ್ (Topper) ಆಗಿದ್ದರು. ದೆಹಲಿ ವಿಶ್ವವಿದ್ಯಾಲಯದ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿ ಪಡೆದಿದ್ದಾರೆ.

Business Woman : ಮನೆಯಲ್ಲೇ ಸೆಣಬಿನ ಚೀಲ ತಯಾರಿಸಿ ಯಶಸ್ವಿಯಾದ ಮಹಿಳೆ

ಮಾಡೆಲಿಂಗ್ (Modelling) ಕ್ಷೇತ್ರದಲ್ಲಿ ಹೆಸರು

ಯುಪಿಎಸ್ ಸಿ ಪರೀಕ್ಷೆ ಬರೆಯುವುದಕ್ಕೂ ಮುನ್ನ ಐಶ್ವರ್ಯಾ ಶೆರೋನ್ ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಸಾಕಷ್ಟು ಅವಕಾಶಗಳು (Opportunities) ಕೈಯಲ್ಲಿದ್ದವು. ಆದರೆ, ಕೇವಲ ಸೌಂದರ್ಯ ಸ್ಪರ್ಧೆಗಳಲ್ಲಿ (Beauty Contest) ಉನ್ನತ ಸ್ಥಾನಕ್ಕೇರುವುದು ಇವರ ಕನಸಾಗಿರಲಿಲ್ಲ. ಅದಕ್ಕೂ ಮಿಗಿಲಾದ ಸಾಧನೆ ಮಾಡಬೇಕೆಂಬ ತುಡಿತ ಹೊಂದಿದ್ದರು. ಹೀಗಾಗಿ, 2018ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸಿ ಮಾಡೆಲಿಂಗ್ ನಿಂದ ಗ್ಯಾಪ್ ತೆಗೆದುಕೊಂಡರು. ಬಳಿಕ, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಐಶ್ವರ್ಯಾ 2016ರಲ್ಲಿ ನಡೆದ ಮಿಸ್ ಇಂಡಿಯಾ (Miss India) ಸೌಂದರ್ಯ ಸ್ಪರ್ಧೆಯಲ್ಲಿ ಫೈನಲಿಸ್ಟ್ ಕೂಡ ಆಗಿದ್ದರು. ಅದಕ್ಕೂ ಮುನ್ನ 2015ರಲ್ಲಿ ಮಿಸ್ ದೆಹಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. 2014ರಲ್ಲಿ ಮಿಸ್ ಕ್ಲೀನ್ (Miss Clean) ಮತ್ತು ಕೇರ್ ಫ್ರೆಶ್ ಫೇಸ್ (Care Fresh Face) ಪ್ರಶಸ್ತಿಗೂ ಪಾತ್ರರಾಗಿರುವ ಹೆಗ್ಗಳಿಕೆ ಹೊಂದಿದ್ದಾರೆ.

Relationship Tips: ಹುಡುಗರೇಕೆ ಹುಡುಗೀರ ಬೆನ್ನು ಬೀಳ್ತಾರೆ? ಅದು ಅವರ ಹುಟ್ಟುಗುಣವಾ?

ಕೆಲವು ಮೂಲಗಳ ಪ್ರಕಾರ, ಐಶ್ವರ್ಯಾ ಇದಕ್ಕೂ ಮುನ್ನ ಭಾರತೀಯ ಸೇನೆಗೂ ಆಯ್ಕೆಯಾಗಿದ್ದರು. ಆದರೆ, ಅದನ್ನು ಮುಂದುವರಿಸಿರಲಿಲ್ಲ.

 

click me!