
ದಕ್ಷಿಣಭಾರತದ ನಟಿ (South Indian Actress)ಯರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲೊಬ್ಬರು ಸಾಯಿಪಲ್ಲವಿ (Sai Pallavi). ಇವರು ಮಲಯಾಳಂ 'ಪ್ರೇಮಂ' ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದರು. ಚಿತ್ರದಲ್ಲಿ ಸಾಯಿಪಲ್ಲವಿಯ ಮಲರ್ ಟೀಚರ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್ (Dancer) ಕೂಡಾ ಹೌದು. ಕೇವಲ ಮಲಯಾಳಂ ಮಾತ್ರವಲ್ಲ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಪ್ರೇಮಂ ಮತ್ತು ಫಿದಾ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಅವರು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪಲ್ಲವಿ ಶಿಕ್ಷಣದಿಂದ ವೈದ್ಯೆಯಾಗಿದ್ದು, 2016ರಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ.
ಸಾಯಿಪಲ್ಲವಿ ತಮ್ಮ ಸರಳತೆ, ನೋ ಮೇಕಪ್ ಲುಕ್ (No makeup look)ಗೆ ಹೆಚ್ಚು ಹೆಸರುವಾಸಿ. ಅಭಿಮಾನಿಗಳನ್ನು ದೇವರಂತೆ ನೋಡುವ ಇವರು ಸಿನಿಮಾಗಳನ್ನು ಸಹ ತುಂಬಾ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಾರೆ. ಸಮಾಜಕ್ಕೆ ಸಂದೇಶ ನೀಡುವಂತಹಾ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಸದ್ಯ ಈ ಸೌತ್ ಬ್ಯೂಟಿ ತಮ್ಮ ಮದುವೆಯ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ತಮ್ಮ ಮುಂಬರುವ ಚಿತ್ರ ವಿರಾಟಪರ್ವಂ ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನಕ್ಕೆ ಬಂದಿದ್ದ ಸಾಯಿ ಪಲ್ಲವಿ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಚಾರ್ಲಿಗಾಗಿ ಬೆಂಗಳೂರಿಗೆ ಬಂದ ಸಾಯಿ ಪಲ್ಲವಿ; ನಾಯಿಯನ್ನು ಮುದ್ದಾಡಿದ ನಟಿ
23ಕ್ಕೆ ಮದ್ವೆಯಾಗಿ 30ಕ್ಕೆ ಎರಡು ಮಕ್ಳು ಬೇಕಿತ್ತಂತೆ !
ಈ ಸಂದರ್ಭದಲ್ಲಿ ಸಾಯಿಪಲ್ಲವಿ ತಮ್ಮ ಮದುವೆಯ ಕನಸಿನ ಬಗ್ಗೆಯೂ ಹೇಳಿಕೊಂಡಿದ್ದಾರೆ. ನನಗೆ 18ನೇ ವಯಸ್ಸಿನಲ್ಲಿ ಒಂದು ಕನಸಿತ್ತು. ನನಗೆ 23 ವಯಸ್ಸಿಗೆ ಮದುಯಾಗುತ್ತದೆ, 30 ವಯಸ್ಸಿನಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಕನಸು ಕಂಡಿದ್ದೆ. ಆದರೆ ಈಗ ದಾಂಪತ್ಯದ ಕುರಿತು ಯೋಚನೆ ಮಾಡಿದ್ರೆ, ನಾನು ಮದುವೆಯಾಗದಿದ್ದು ಒಳ್ಳೆಯದು ಅನಿಸುತ್ತಿದೆ. ಮದುವೆಯೆಂಬ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಪರಿಪಕ್ವತೆ ಬೇಕು. ಮಡದಿಯಾಗಿ, ತಾಯಿಯಾಗಿ ಅವರ ಬೆಂಬಲಕ್ಕೆ ನಿಲ್ಲಬೇಕು. ಈಗ ಇಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಂದಿನ ವರ್ಷಾನೇ ಮದ್ವೆಯಾಗ್ತಾರಂತೆ ಸಾಯಿಪಲ್ಲವಿ
ಮುಂದಿನ ವರ್ಷ ಮದುವೆಯಾಗುವುದಾಗಿ ಸಾಯಿ ಪಲ್ಲವಿ ಹೇಳಿದ್ದಾರೆ. ಕೊರೋನಾ ಕಾಲಘಟ್ಟದಲ್ಲಿ ನನ್ನ ಸ್ನೇಹಿತರ ಬಳಗದಲ್ಲಿ ಹೆಚ್ಚಿನವರ ಮದುವೆಯಾಯಿತು. ಹೀಗಾಗಿ ನನಗೂ ಪೋಷಕರು ಮದುವೆ ಆಗುವಂತೆ ಪೋಷಕರಿಂದ ಒತ್ತಾಯಿಸಿದ್ದರು. ಅದಕ್ಕೂ ಮುನ್ನ ನಾನು ಸಾಕಷ್ಟು ಸಮಯ ಸಿನಿಮಾ ಶೂಟಿಂಗ್‌ನಲ್ಲಿಯೇ ಭಾಗವಹಿಸುತ್ತಿದ್ದೆ, ಹಾಗಾಗಿ ನನ್ನ ಪೋಷಕರಿಗೂ ಭಯವಾಗುತ್ತಿತ್ತು. ಜತೆಗೆ ಗ್ರಾಮದಲ್ಲಿ ನನ್ನ ಜೊತೆಗಿದ್ದ ಸಾಕಷ್ಟು ನನ್ನ ವಯಸ್ಸಿನ ಯುವತಿಯರಿಗೆ ಮದುವೆಯಾಗಿತ್ತು. ಹಾಗಾಗಿ ಸಹಜವಾಗಿ ನನಗೂ ಮದುವೆಯಾಗುವಂತೆ ಮನೆಯಲ್ಲಿ ಒತ್ತಾಯಿಸುತ್ತಿದ್ದರು ಎಂದಿದ್ದಾರೆ.
Sai Pallavi; ಹುಟ್ಟುಹಬ್ಬದ ದಿನ ಕೆಂಪು ಸೀರೆಯುಟ್ಟು ಬ್ಯಾಗ್ ಹಿಡಿದು ಹೊರಟ 'ಪ್ರೇಮಂ' ಸುಂದರಿ
'ಪ್ರೇಮಂ' ಬೆಡಗಿಯದ್ದು ಲವ್ ಮ್ಯಾರೇಜಾ, ಆರೇಂಜ್ಡ್ ಮ್ಯಾರೇಜಾ ?
ಸಾಯಿಪಲ್ಲವಿ ಸದ್ಯ ನೂರಾರು ಹುಡುಗರ ನಿದ್ದೆ ಕದ್ದಿರುವ ನ್ಯಾಚುರಲ್ ಬ್ಯೂಟಿ. ಹೀಗಾಗಿ ಸಹಜವಾಗಿಯೇ ಈಕೆಯದ್ದು ಲವ್ ಮ್ಯಾರೇಜಾ ಅಥವಾ ಆರೇಂಜ್ಡ್ ಮ್ಯಾರೇಜಾ ಅನ್ನೋ ಕುತೂಹಲ ಹಲವರಲ್ಲಿದೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಹೀಗಾಗಿ ವರ ಬೇಟೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೋಷಕರು ತಮ್ಮ ಮಗಳಿಗೆ ಸರಿಯಾದ ವರನ ಹುಡುಕಾಟದಲ್ಲಿದ್ದಾರಂತೆ.
ಮನೆಯಲ್ಲಿ ಹೆಚ್ಚಾಗಿ ತೆಲುಗು ಮಾತನಾಡುವುದರಿಂದ ಅವರ ಕುಟುಂಬಸ್ಥರು ಒಳ್ಳೆಯ ತೆಲುಗು ಹುಡುಗನನ್ನು ಮದುವೆ ಸೂಚಿಸಿದ್ದಾರಂತೆ. ಸಾಯಿ ಪಲ್ಲವಿಯನ್ನು ಮದುವೆಯಾಗುವ ಅದೃಷ್ಟ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಸಾಯಿಪಲ್ಲವಿ ನಟನೆಯ `ಗಾರ್ಗಿ’ ಮತ್ತು `ವಿರಾಟ ಪರ್ವಂ’ ಚಿತ್ರಗಳು ರಿಲೀಸ್‌ಗೆ ರೆಡಿಯಿದೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು `ಪ್ರೇಮಂ’ ಬೆಡಗಿ ರೆಡಿಯಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.