
ಗುಜರಾತ್ (Gujarat) ನ ವಡೋದರದ ಕ್ಷಮಾ ಬಿಂದು (Kshama Bindu) ಸದ್ಯ ಸುದ್ದಿಯಲ್ಲಿರುವ ಮಹಿಳೆ. ಕ್ಷಮಾ ಬಿಂದು ತನ್ನನ್ನು ತಾನು ಮದುವೆಯಾಗಿದ್ದಾರೆ. 24 ವರ್ಷಗಳ ಕ್ಷಮಾ, ಜೂನ್ 10 ರಂದು ಸಕಲ ವಿಧಿವಿಧಾನಗಳೊಂದಿಗೆ ಮದುವೆಯಾಗಿದ್ದಾರೆ. ಭಾರತದಲ್ಲಿ ತನ್ನನ್ನು ತಾನು ಮದುವೆಯಾದ ಮೊದಲ ಮಹಿಳೆ ಇವರು. ಈ ಸ್ವಯಂ-ವಿವಾಹದ ಪರಿಕಲ್ಪನೆಯನ್ನು ಸೋಲೋಗಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಸೋಲೋಗಾಮಿ (Sologamy) ವಿವಾಹ ನಡೆದಿದ್ದು ಕೂಡ ಇದೇ ಮೊದಲು. ಇಂದು ನಾವು ಸೋಲೋಗಮಿ ಅಂದ್ರೇನು? ಹಾಗೆ ಭಾರತದ ಕಾನೂನಿನಲ್ಲಿ ಇದಕ್ಕೆ ಮಾನ್ಯತೆ ಇದ್ಯಾ ಎಂಬೆಲ್ಲ ವಿಷ್ಯಗಳನ್ನು ತಿಳಿದುಕೊಳ್ಳೋಣ.
ಸೋಲೋಗಮಿ ಎಂದ್ರೇನು ? : ಸರಳ ಭಾಷೆಯಲ್ಲಿ ಹೇಳ್ಬೇಕೆಂದ್ರೆ ನಿಮ್ಮನ್ನು ನೀವು ಮದುವೆಯಾಗುವುದಕ್ಕೆ ಸೋಲೋಗಮಿ ಎಂದು ಕರೆಯುತ್ತಾರೆ. ಅಂದ್ರೆ ಇಲ್ಲಿ ವರ ಇರೋದಿಲ್ಲ. ಎರಡು ದಶಕಗಳ ಹಿಂದೆ 2000 ರಲ್ಲಿ ಪಶ್ಚಿಮದಿಂದ ಸ್ವಯಂ ವಿವಾಹ ಅಥವಾ ಏಕಾಂಗಿತ್ವ ಪ್ರಾರಂಭವಾಯಿತು. ಸಾಮಾನ್ಯವಾಗಿ, ಏಕವ್ಯಕ್ತಿತ್ವವು ತನ್ನನ್ನು ತಾನು ಪ್ರೀತಿಸುವ ಅಭಿವ್ಯಕ್ತಿಯಾಗಿ ಕಂಡುಬರುತ್ತದೆ. ತಮ್ಮನ್ನು ತಾವು ಹೆಚ್ಚು ಪ್ರೀತಿಸುವ ವ್ಯಕ್ತಿಗಳಿಗೆ ಪ್ರೀತಿಗಾಗಿ ಇನ್ನೊಬ್ಬರ ಅಗತ್ಯತೆ ಇರುವುದಿಲ್ಲ. ಸೊಲೊಗಮಿ ನಿಮ್ಮನ್ನು ಪ್ರೀತಿಸುವ ವಿಭಿನ್ನ ಪರಿಕಲ್ಪನೆಯಾಗಿದೆ. ಕೆಲವರು ತಮ್ಮನ್ನು ತಾವು ತುಂಬಾ ಇಷ್ಟಪಡುತ್ತಾರೆ, ಅವರು ತಮ್ಮನ್ನು ಮದುವೆಯಾಗುತ್ತಾರೆ.
ದೇಶದ ಮೊದಲ ಸೋಲೋಗಮಿ: ಎರಡು ದಿನ ಮೊದಲೇ ಸ್ವಯಂ ವಿವಾಹವಾದ ಕ್ಷಮಾ ಬಿಂದು
ಸೋಲೋಗಮಿ ಬಗ್ಗೆ ಕಾನೂನು ಏನು ಹೇಳುತ್ತೆ ? : ಭಾರತದಲ್ಲಿ ಹುಡುಗ ಮತ್ತು ಹುಡುಗಿ ಮದುವೆಯಾದ್ರೆ ಅವರ ಮದುವೆಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈಗ ಅನೇಕ ದೇಶಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೂಡ ಸಿಕ್ಕಿದೆ. ಆದರೆ ಭಾರತದಲ್ಲಿ ಇದುವರೆಗೆ ಪ್ರಮಾಣ ಪತ್ರ ನೀಡಲಾಗಿಲ್ಲ. ಇನ್ನು ಸೋಲೋಗಮಿ ಬಗ್ಗೆ ಹೇಳೋದಾದ್ರೆ ಭಾರತದಲ್ಲಿ ಇಂತಹ ಮದುವೆಗಳನ್ನು ಕಾನೂನು ಗುರುತಿಸುವುದಿಲ್ಲ. ಭಾರತದಲ್ಲಿ ಇದೇ ಮೊದಲ ಮದುವೆ ಇದು.
ಸೊಲೊಗಮಿ 90 ರ ದಶಕದಲ್ಲಿ ಪ್ರಾರಂಭವಾಯಿತು. 1993 ರಲ್ಲಿ ಲಿಂಡಾ ಬೇಕರ್ ಎಂಬ ಮಹಿಳೆ ತನ್ನನ್ನು ತಾನೇ ವಿವಾಹವಾದರು. ಲಿಂಡಾ ಬೇಕರ್ ವಿವಾಹವು ಮೊದಲು ಸ್ವಯಂ ವಿವಾಹದ ಸ್ಥಾನಮಾನವನ್ನು ಪಡೆದುಕೊಂಡಿದೆ. ಲಿಂಡಾ ಬೇಕರ್ ಮದುವೆಯಾದಾಗ ಸುಮಾರು 75 ಜನರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಸಿದ್ಧ ನಾಯಕಿ ಕ್ಯಾರಿ ಬ್ರಾಡ್ಶಾ ಕೂಡ ಸ್ವತಃ ಮದುವೆಯಾಗುವುದಾಗಿ ಘೋಷಿಸಿದ್ದರು. ಇದರ ನಂತರ, ಲಾಕ್‌ಡೌನ್‌ನಲ್ಲಿ ಅಂತಹ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಶಾಸ್ತ್ರದಲ್ಲಿ ಏನಿದೆ ? : ಶಾಸ್ತ್ರೋಕ್ತ ಆಚರಣೆಗಳಲ್ಲಿ ಸೋಲೋಗಮಿಯ ಉಲ್ಲೇಖವಿಲ್ಲ. ಇದೇ ಕಾರಣಕ್ಕೆ ಅನೇಕರು ಇದನ್ನು ವಿರೋಧಿಸಿದ್ದರು. ಹಿಂದೂ ಧರ್ಮದ ಅವಹೇಳನವೆಂದಿದ್ದರು.
ನೀವೂ ಅಂದ್ರೆ ಇಷ್ಟಾನಾ? ಇಷ್ಟ ಪಟ್ಟವರ ಕಷ್ಟ ಅರಿತು ಕೊಳ್ಳುವುದು ಹೇಗೆ?
ಮದುವೆ ದಿನಾಂಕ ಬದಲಿಸಿದ ಕ್ಷಮಾ : ಮದುವೆಗೆ ಅನೇಕ ವಿರೋಧಗಳು ಬರ್ತಿದ್ದ ಕಾರಣಕ್ಕೆ ಕ್ಷಮಾ ಮದುವೆ ದಿನಾಂಕವನ್ನು ಬದಲಿಸಿದ್ದರು. ಮೊದಲು ಜೂನ್ 11ರಂದು ದೇವಸ್ಥಾನದಲ್ಲಿ ಕ್ಷಮಾ ಮದುವೆಯಾಗ್ಬೇಕಿತ್ತು. ಆದ್ರೆ ಕ್ಷಮಾ ಜೂನ್ 10ರಂದು ಮದುವೆಯಾಗುವ ನಿರ್ಧಾರ ತೆಗೆದುಕೊಂಡ್ರು. ಅಷ್ಟೇ ಅಲ್ಲ ಮನೆಯಲ್ಲಿಯೇ ಸಪ್ತಪದಿ ತುಳಿಯುವ ಪ್ಲಾನ್ ಮಾಡಿದ್ರು. ಶಾಸ್ತ್ರೋಕ್ತವಾಗಿ ಕ್ಷಮಾ ವಿವಾಹ ನಡೆದಿದೆ. ತಮ್ಮ ಹಣೆಗೆ ತಾವೇ ಸಿಂಧೂರವಿಟ್ಟುಕೊಂಡು ಮದುವೆ ಮಾಡಿಕೊಂಡಿದ್ದಾರೆ. ಆದ್ರೆ ಮದುವೆಗೆ ಯಾವುದೇ ಪಂಡೀತರು ಬರಲಿಲ್ಲ. ಹಾಗಾಗಿ ಟೇಪ್ ನಲ್ಲಿ ಮಂತ್ರ ಹಾಕಿಕೊಂಡು ಕ್ಷಮಾ ಮದುವೆಯಾಗಿದ್ದಾರೆ.
ಹನಿಮೂನ್ ಗೆ ಹೋಗಲಿರುವ ಕ್ಷಮಾ : ಕ್ಷಮಾ ಪ್ರಕಾರ, ಅವರು ಎಂದಿಗೂ ಮದುವೆಯಾಗಲು ಬಯಸಿರಲಿಲ್ಲ. ತನ್ನನ್ನು ತಾನು ಕ್ಷಮಾ ಪ್ರೀತಿ ಮಾಡ್ತಾರೆ. ಹಾಗಾಗಿಯೇ ಸೋಲೋಗಮಿಗೆ ಮುಂದಾದ್ರು. ಮದುವೆ ನಡೆದಿದೆ. ಈಗ ಎರಡು ವಾರಗಳ ಹನಿಮೂನ್ ಗೆ ಪ್ಲಾನ್ ಮಾಡಿದ್ದಾರೆ. ಗೋವಾದಲ್ಲಿ ಹನಿಮೂನ್ ಪ್ಲಾನ್ ಆಗಿದೆ.
ಇಲ್ಲಿ ವಿಚ್ಛೇದನಕ್ಕೂ ಇದೆ ಅವಕಾಶ : ಸ್ವಯಂ ವಿವಾಹ ಹೆಚ್ಚಾಗ್ತಿದ್ದಂತೆ ಸ್ವಯಂ ವಿಚ್ಛೇದನದ ಪರಿಕಲ್ಪನೆಯೂ ಬರ್ತಿದೆ. ಎಲ್ಲಿ ಮದುವೆ ಇದೆಯೋ ಅಲ್ಲಿ ವಿಚ್ಛೇದನದ ಸಾಧ್ಯತೆಯೂ ಇರುತ್ತದೆ. ಬ್ರೆಜಿಲಿಯನ್ ಮಾಡೆಲ್ ಕ್ರಿಸ್ ಗಲೇರಾ ವಿಚ್ಛೇದನ ಪಡೆದಿದ್ದರು. ಅವರು ತಮ್ಮ ಏಕವ್ಯಕ್ತಿ ವಿವಾಹವನ್ನು ಕೊನೆಗೊಳಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.