ಅಸ್ಸಾಂನಲ್ಲಿ ಸತ್ತಿದ್ದಾನೆ ಎಂದುಕೊಂಡಿದ್ದ ಮಗ, ಮತ್ತೆ ತಾಯಿಗೆ ಸಿಕ್ಕಿದ್ದಾನೆ. ಮಗು ಜನಿಸಿದ ಮರುದಿನವೇ ಮಗು ಸತ್ತಿದೆ ಎಂದು ನರ್ಸ್ ಹೇಳಿದ್ದರು. ಆಕೆ ಮಾತು ನಂಬದ ಪಾಲಕರು ಕೋರ್ಟ್ ಮೆಟ್ಟಿಲೇರಿ, ಮಗು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಂಭತ್ತು ತಿಂಗಳು ಮಗು (Child) ವನ್ನು ಹೊಟ್ಟೆ (Stomach) ಯಲ್ಲಿ ಹೊತ್ತ ತಾಯಿ (Mother) ಗೆ ಮಗು ಹೊರಗೆ ಬರ್ತಿದ್ದಂತೆ ಪುನರ್ ಜೀವ ಬಂದಂತಾಗುತ್ತದೆ. ಮಗುವಿನ ಮುಖ ನೋಡ್ತಿದ್ದಂತೆ ಎಲ್ಲ ನೋವು ಮಾಯವಾಗುತ್ತದೆ. ಮಗುವಿನ ಅಳು, ನಗು ಕೇಳ್ತಿದ್ದಂತೆ ಇಡೀ ಪ್ರಪಂಚವನ್ನೇ ತಾಯಿ ಮರೆಯುತ್ತಾಳೆ. ತನ್ನ ಇಡೀ ಜೀವನವನ್ನು ಮಕ್ಕಳಿಗಾಗಿ ಮುಡುಪಿಡ್ತಾಳೆ. ಹೊಟ್ಟೆಯಲ್ಲಿ ಮಗುವಿದ್ದಾಗ ಪ್ರತಿಯೊಬ್ಬ ತಾಯಿಯೂ ಆ ಮಗುವಿನ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿರ್ತಾಳೆ. ಮಗು ಸುರಕ್ಷಿತವಾಗಿ ಹೊರಗೆ ಬರಲಿ ಎಂದು ನೂರಾರು ದೇವರನ್ನು ಬೇಡಿಕೊಂಡಿರ್ತಾಳೆ. ತನ್ನ ಆರೋಗ್ಯದ ಬಗ್ಗೆ ಅತಿಯಾಗಿ ಕಾಳಜಿ ವಹಿಸ್ತಾಳೆ. ಆದ್ರೆ ಜನನದ ವೇಳೆ ಮಗು ಮರಣ ಹೊಂದಿದ್ರೆ ಆ ನೋವನ್ನು ಸಹಿಸಲು ತಾಯಿಗೆ ಸಾಧ್ಯವಿಲ್ಲ. ಭೂಮಿಗೆ ಬರ್ತಿದ್ದಂತೆ ಮಡಿಲು ಬರಿದಾದ್ರೆ ತಾಯಿಯಾದವಳು ಕಣ್ಣೀರಿನಲ್ಲಿ ಜೀವನ ಸಾಗಿಸ್ತಾಳೆ. ಆ ನೋವು ಆಕೆಯನ್ನು ಜೀವನ ಪರ್ಯಂತ ಕಾಡುತ್ತದೆ. ಅಸ್ಸಾಂನ ತಾಯಿಯೊಬ್ಬಳಿಗೂ ಇದೇ ಆಗಿತ್ತು. ಆಸ್ಪತ್ರೆಯಲ್ಲಿ ಜನಿಸಿದ ಮಗು ತಾಯಿ ಕೈ ಸೇರಿರಲಿಲ್ಲ. ಮಗು ಸಾವನ್ನಪ್ಪಿದೆ ಎಂಬ ನರ್ಸ್ (Nurse) ಮಾತು ಬರಸಿಡಿಲಾಗಿತ್ತು. ಮೂರು ವರ್ಷಗಳ ಹಿಂದೆ ಮಗು ಕಳೆದುಕೊಂಡಿದ್ದ ತಾಯಿ ಈಗ ತನ್ನ ಮಗುವನ್ನು ವಾಪಸ್ ಪಡೆದಿದ್ದಾಳೆ. ಆಕೆಯ ಹೋರಾಟಕ್ಕೆ ಜಯ ಸಿಕ್ಕಿದೆ. ಆದ್ರೆ ಇನ್ನೊಬ್ಬರ ಮಗುವನ್ನು ತನ್ನ ಮಗುವೆಂದು ಬೆಳೆಸಿದ್ದ ಮತ್ತೊಂದು ತಾಯಿ ಈಗ ದುಃಖದಲ್ಲಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಇಲ್ ಕೇಳಿ...
ಮೂರು ವರ್ಷದ ನಂತ್ರ ತಾಯಿಗೆ ಸಿಕ್ಕ ಮಗ : ಅಸ್ಸಾಂ (Assam) ನ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯ (Court) ವೊಂದು ಮೂರು ವರ್ಷದ ಮಗವನ್ನು ಹೆತ್ತ ತಾಯಿಗೆ ನೀಡಿದೆ. ಮಗು ಹುಟ್ಟಿದ ಕೂಡಲೇ ತಾಯಿಯಿಂದ ಬೇರ್ಪಟ್ಟಿತ್ತು. ಒಂದೇ ಹೆಸರಿನ ಇಬ್ಬರು ತಾಯಂದಿರು ಒಂದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ನರ್ಸ್ ಗೆ ಕನ್ಫ್ಯೂಸ್ ಆಗಿತ್ತು. ಇದಾದ ಬಳಿಕ ತಾಯಿಯೊಬ್ಬರು ಈ ವಿಚಾರವಾಗಿ ಪೊಲೀಸರ ಮೊರೆ ಹೋಗಿದ್ದರು. ಕೊನೆಗೆ ಡಿಎನ್‌ಎ (DNA) ಪರೀಕ್ಷೆಯ ಮೂಲಕ ಪ್ರಕರಣವನ್ನು ಬಗೆಹರಿಸಲಾಗಿದೆ.
ಕಲೆ ರಹಿತ ಸುಂದರ ತ್ವಚೆಗಾಗಿ ಟೊಮ್ಯಾಟೊ ಫೇಸ್ ಪ್ಯಾಕ್
ಘಟನೆ ನಡೆದಿದ್ದು ಎಲ್ಲಿ ? : ಬಾರ್ಪೇಟಾ ಜಿಲ್ಲೆಯ ಫಕ್ರುದ್ದೀನ್ ಅಲಿ ಅಹ್ಮದ್ ವೈದ್ಯಕೀಯ ಕಾಲೇಜಿನ (Fakhruddin Ali Ahmed Medical College) ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ನಜ್ಮಾ ಖಾನುಮ್ ಮಾರ್ಚ್ 3, 2019 ರಂದು ಫಕ್ರುದ್ದೀನ್ ಅಲಿ ಅಹ್ಮದ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ಆಕೆಯನ್ನು ಐಸಿಯುಗೆ ದಾಖಲಿಸಲಾಗಿತ್ತು. ನವಜಾತ ಶಿಶುವನ್ನು ಶಿಶುವಿನ ಕೋಣೆಯಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯ ಆಡಳಿತ, ಖಾನುಮ್ ಅವರ ಪತಿಗೆ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಮರುದಿನ ತಿಳಿಸಿದೆ. ಹುಟ್ಟಿದ ಸಮಯದಲ್ಲಿ ಮಗ ಆರೋಗ್ಯವಾಗಿದ್ದ ಕಾರಣ ದಂಪತಿ ಇದನ್ನು ಒಪ್ಪಲಿಲ್ಲ. ಆಸ್ಪತ್ರೆ ವಿರುದ್ಧ ಬಾರ್ಪೇಟಾ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Violent Behaviour: ಮಗುವಿನಲ್ಲಿ ಹಿಂಸಾ ಪ್ರವೃತ್ತಿ ಇದ್ದರ, ಇಗ್ನೋರ್ ಮಾಡ್ಲೇ ಬೇಡಿ!
ತನಿಖೆ ವೇಳೆ ಗೊತ್ತಾಯ್ತು ವಿಷ್ಯ : ತನಿಖೆಯ ವೇಳೆ ಪೊಲೀಸರಿಗೆ ಒಂದು ವಿಷ್ಯ ಗೊತ್ತಾಗಿತ್ತು. ಗೋಸಾಯಿಗಾಂವ್‌ನ ನಜ್ಮಾ ಖಾತೂನ್ ಎಂಬುವವರು ತಮ್ಮ ನವಜಾತ ಶಿಶುವನ್ನು ಅದೇ ದಿನ ಅದೇ ಆಸ್ಪತ್ರೆಗೆ ದಾಖಲಿಸಿದ್ದರು. ಅದೇ ದಿನ ಮಗು ಸಾವನ್ನಪ್ಪಿತ್ತು. ಕರ್ತವ್ಯದಲ್ಲಿದ್ದ ನರ್ಸ್ ಎರಡೂ ಶಿಶುಗಳ ಬಗ್ಗೆ ಗೊಂದಲಕ್ಕೊಳಗಾದರು ಮತ್ತು ಸತ್ತ ಮಗುವನ್ನು ನಜ್ಮಾ ಖಾನುಮ್ ಅವರ ಪತಿಗೆ ಒಪ್ಪಿಸಿದ್ದರು. ಡಿಎನ್‌ಎ ಪರೀಕ್ಷೆಯ (DNS Testing) ಮೂಲಕ ಬಾಲಕನ ಜೈವಿಕ ಪೋಷಕರನ್ನು (Biological Parents) ಪತ್ತೆ ಹಚ್ಚಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಮೂರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ.