ರಕ್ಷಾಬಂಧನಕ್ಕೆ ಸಹೋದರಿಯೇ ಇಲ್ಲ, ಅಣ್ಣನ ಡ್ರಗ್ಸ್ ಚಟ ಬಿಡಿಸಲು ಪ್ರಾಣ ಕಳೆದುಕೊಂಡ ತಂಗಿ!

Published : Aug 13, 2023, 12:48 PM ISTUpdated : Aug 13, 2023, 01:08 PM IST
ರಕ್ಷಾಬಂಧನಕ್ಕೆ ಸಹೋದರಿಯೇ ಇಲ್ಲ, ಅಣ್ಣನ ಡ್ರಗ್ಸ್ ಚಟ ಬಿಡಿಸಲು ಪ್ರಾಣ ಕಳೆದುಕೊಂಡ ತಂಗಿ!

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಅಣ್ಣ-ತಂಗಿಯ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ತಂಗಿಯ ಸುರಕ್ಷತೆಗೆ ಅಣ್ಣ, ಅಣ್ಣನ ಖುಷಿಗಾಗಿ ತಂಗಿ ಎಂಥಾ ತ್ಯಾಗವನ್ನೂ ಮಾಡೋಕೆ ಸಿದ್ಧವಿರುತ್ತಾರೆ. ಆದರೆ, ಇಲ್ಲೊಬ್ಬ ತಂಗಿ ಇದೆಲ್ಲವನ್ನೂ ಮೀರಿ ಅಣ್ಣನಿಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಣ್ಣ-ತಂಗಿಯ ಮನಕಲಕುವ ಸ್ಟೋರಿ ಇಲ್ಲಿದೆ.

ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಈ ವರ್ಷ ಆಗಸ್ಟ್ 15ರಂದು ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ. ಎಲ್ಲಾ ಸಹೋದರಿಯರೂ ಪ್ರತಿವರ್ಷ ತನ್ನ ಸಹೋದರನಿಗೆ ರಾಖಿ ಕಟ್ಟಲು ಕಾಯುತ್ತಾರೆ. ತಂಗಿ, ಸಹೋದರನ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತಾಳೆ. ತಂಗಿಯ ಸುರಕ್ಷತೆಗೆ ಅಣ್ಣ, ಅಣ್ಣನ ಖುಷಿಗಾಗಿ ತಂಗಿ ಎಂಥಾ ತ್ಯಾಗವನ್ನೂ ಮಾಡೋಕೆ ಸಿದ್ಧವಿರುತ್ತಾರೆ. ಇಲ್ಲೊಬ್ಬ ಸಹೋದರಿ ತನ್ನ ಸಹೋದರನನ್ನು ಮಾದಕ ವ್ಯಸನದಿಂದ ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾಳೆ. ಇಡೀ ಸುದ್ದಿ ನಿಮ್ಮನ್ನು ಅಳುವಂತೆ ಮಾಡುತ್ತದೆ.

ರಕ್ಷಾಬಂಧನಕ್ಕೆ (Raksha Bandhan) ಇನ್ನೇನು ಕೆಲವೇ ದಿನ ಉಳಿದಿದೆ. ಎಲ್ಲೆಡೆ ಅಣ್ಣ-ತಂಗಿ (Brother-sister) ಈ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ. ಆದರೆ ಈ ಅಣ್ಣ ಮಾತ್ರ ಈ ಬಾರಿ ತನ್ನ ತಂಗಿಯನ್ನು ಕಳೆದುಕೊಂಡು ಕಣ್ಣೀರು ಹಾಕುವಂತಾಗಿದೆ. ಇನ್ನು ಪ್ರತಿ ಬಾರಿ ರಾಖಿ ಹಬ್ಬ ಬಂದಾಗಲೆಲ್ಲ ಈತ ತನ್ನ ತಂಗಿಯನ್ನು ನೆನೆದು ಅಳುತ್ತಾ ತನ್ನನ್ನೇ ಶಪಿಸಿಕೊಳ್ಳುತ್ತಾನೆ. ನಾನು ಅವಳ ಮಾತನ್ನು ಮೊದಲೇ ಕೇಳಿದ್ದರೆ, ಅವಳು ಈ ಜಗತ್ತಿನಲ್ಲಿ ಇರುತ್ತಿದ್ದಳು  ಎಂದು ಭಾವಿಸುತ್ತೇನೆ. ಯಾಕೆಂದರೆ ಆತನಿಗಾಗಿ ತಂಗಿ ಅಂಥಾ ತ್ಯಾಗವನ್ನು ಮಾಡಿದ್ದಾಳೆ. ಅಣ್ಣನ ಮಾದಕ ವ್ಯಸನದ (Drugs addiction) ಚಟ ಬಿಡಿಸಲು ತಂಗಿ ನೇಣಿಗೆ ಶರಣಾಗಿದ್ದಾಳೆ. ಗಾಜಿಯಾಬಾದ್‌ನಲ್ಲಿ ಇಂಥಾ ಮನಕಲಕುವ ಘಟನೆ ನಡೆದಿದೆ.

ಅಣ್ಣನ ಮಾದಕ ವ್ಯಸನದಿಂದ ಬೇಸತ್ತು ಸಾವಿಗೆ ಶರಣು
16 ವರ್ಷದ ಬಾಲಕಿಯ ಶವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಣ್ಣನ ಮಾದಕ ವ್ಯಸನದಿಂದ ಬೇಸತ್ತು ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎನ್ನಲಾಗಿದೆ. ಆಕೆಯ ಬಳಿ ಸಿಕ್ಕಿರುವ ಸೂಸೈಡ್ ನೋಟ್‌ನಲ್ಲಿ, 'ನನ್ನ ಸಾವಿಗೆ (Death) ಯಾರೂ ಹೊಣೆಗಾರರಲ್ಲ. ಆದರೆ ನನ್ನ ಸಹೋದರ ಡ್ರಗ್ಸ್ ಬಿಡಲಿ ಎಂದು ನಾನು ಜೀವ ಕಳೆದುಕೊಳ್ಳುತ್ತಿದ್ದೇನೆ' ಎಂದು ಬರೆದಿದ್ದಾಳೆ.

ತಾಯಿ ಮನೆಯಲ್ಲಿ ಇಲ್ಲದ ವೇಳೆ ಬಾಲಕಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಮನೆಗೆ ಹಿಂದಿರುಗಿದಾಗ, ಅವಳು ಬಾಗಿಲು ತಟ್ಟಿದಳು. ಆದರೆ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಅಕ್ಕಪಕ್ಕದವರಿಗೆ ಕರೆ ಮಾಡಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಎಲ್ಲರೂ ದಿಗ್ಭ್ರಮೆಗೊಂಡರು.

ಅಪ್ಸರೆಯಂಥ ಮಡದಿಯಿದ್ದರೂ, ಅನೈತಿಕ ಸಂಬಂಧವೇ ಬೇಕಂತೆ: ಪ್ರಶ್ನೆ ಮಾಡಿದ್ದಕ್ಕೆ ಉಸಿರೇ ನಿಂತೋಯ್ತು...

ಜೈಲು ಸೇರಿದ ಸಹೋದರ
ಹುಡುಗಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಇದಾದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಸಂತ್ರಸ್ತೆಯ ಹಿರಿಯ ಸಹೋದರನನ್ನು ಪೋಕ್ಸೋ ಕಾಯ್ದೆಯಡಿ ಜೈಲಿನಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಕುಟುಂಬದವರಿಂದ ಯಾವುದೇ ದೂರು ದಾಖಲಾಗಿಲ್ಲ.

ಡ್ರಗ್‌ನಿಂದ ಧ್ವಂಸಗೊಂಡ ಮನೆ
ಕುಡಿದ ಅಮಲಿನಲ್ಲಿ ಎಷ್ಟು ಮನೆಗಳು ಧ್ವಂಸವಾಗಿವೆಯೋ ಗೊತ್ತಿಲ್ಲ. ಯಾರ ಮನೆಯಲ್ಲಿ ಯಾರಾದರೂ ಮಾದಕ ವ್ಯಸನಕ್ಕೆ ಒಳಗಾಗುತ್ತಾರೋ ಆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಆದರೆ ತಂಗಿ ತೀರಿಕೊಂಡ ನಂತರ ಗಾಜಿಯಾಬಾದ್ ನಲ್ಲಿ ನೆಲೆಸಿರುವ ಸಹೋದರ ನಶೆ ಬಿಟ್ಟು ತಂಗಿಯ ಕೊನೆಯ ಆಸೆಯನ್ನು ಈಡೇರಿಸುವ ಸಾಧ್ಯತೆ ಇದೆ. ಆದರೆ, ಹುಡುಗಿ ಇಟ್ಟ ಹೆಜ್ಜೆಯೂ ಸರಿ ಎನ್ನಲಾಗದು. ಯಾವುದೇ ಸಮಸ್ಯೆಗೆ ಸಾಯುವುದು ಪರಿಹಾರವಲ್ಲ. ಆಕೆ ಬದುಕಿದ್ದೇ ಅಣ್ಣನ ಚಟ ಹೋಗಲಾಡಿಸಲು ಪ್ರಯತ್ನಿಸಬೇಕಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ವೀಟ್ ಬಾಕ್ಸ್‌ಗೆ ಇರುವೆ ಮುತ್ತಿಕೊಂಡ್ರೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ