ಕ್ಲಾಸ್‌ ರೂಂನಲ್ಲಿ ಹೆಣ್ಮಕ್ಕಳನ್ನು ಚುಡಾಯಿಸಿದ ಹುಡುಗರು, ಮನಮುಟ್ಟುವಂತಿದೆ ಶಿಕ್ಷಕಿಯ ಪಾಠ

By Vinutha PerlaFirst Published Mar 30, 2023, 11:22 AM IST
Highlights

ರಸ್ತೆಯಲ್ಲಿ, ಹೊಟೇಲ್‌ಗಳಲ್ಲಿ, ಪಾರ್ಕ್‌ಗಳಲ್ಲಿ ಹುಡುಗಿಯರು ಹೋಗುತ್ತಿರುವಾಗ ಹುಡುಗರು ಕಾಮೆಂಟ್ ಮಾಡೋದು ಕಾಮನ್ ಆಗಿದೆ. ಹೆಣ್ಮಕ್ಕಳು ಇದನ್ನು ಕೇಳಿಯೂ ಕೇಳದಂತೆ ಸುಮ್ಮನಿದ್ದು ಬಿಡುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ಹೆಣ್ಮಕ್ಕಳನ್ನು ಚುಡಾಯಿಸುವ ಇಂಥಾ ಹುಡುಗರಿಗೆ ಮನ  ಮುಟ್ಟುವಂತೆ ಪಾಠ ಮಾಡಿದ್ದಾಳೆ.

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ ಮತ್ತು ಸಮಾಜದ ನಿರ್ಣಾಯಕ ಅಂಶವಾಗಿದೆ. ಇದರ ಹೊರತಾಗಿಯೂ ಸಮಾಜದಲ್ಲಿ ಲಿಂಗ ತಾರತಮ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ನಿದರ್ಶನಗಳು ಹೆಚ್ಚುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಜಾಗೃತಿಯನ್ನು ಹೆಚ್ಚಿಸಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗಿದೆ. ಶಾಲೆಗಳಲ್ಲಿಯೂ ಸಹ ಶಿಕ್ಷಕರು ಲಿಂಗ ಸಮಾನತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ, ಶಿಕ್ಷಕಿಯೊಬ್ಬರು ತಮ್ಮ ತರಗತಿಯ ಎಲ್ಲಾ ಹುಡುಗರಿಗೆ ಮಹಿಳೆಯರನ್ನು (Women) ಗೌರವಿಸುವ ಪಾಠವನ್ನು ಕಲಿಸಿದರು. 

ಹೆಣ್ಣು ಮಕ್ಕಳನ್ನು ಯಾಕೆ ಗೌರವಿಸಬೇಕು ಎಂಬುದನ್ನು ಶಿಕ್ಷಕಿ (Teacher) ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಆಕೆಯ ಭಾಷಣವು ತುಂಬಾ ಪರಿಣಾಮಕಾರಿಯಾಗಿದ್ದು, ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಕೂಡಲೇ ಎಲ್ಲೆಡೆ ವೈರಲ್ ಆಗಿದೆ. ಅಂಜಲಿ ಎಂಬವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, 'ಈ ಶಿಕ್ಷಕಿ ತನ್ನ ತರಗತಿಯ ಹುಡುಗರಿಗೆ (Boys) ಹೆಣ್ಮಕ್ಕಳಿಗೆ ಗೌರವಿಸುವ ರೀತಿಯನ್ನು ತನ್ನದೇ ರೀತಿಯಲ್ಲಿ ಹೇಳಿದ್ದಾರೆ' ಎಂಬ ಶೀರ್ಷಿಕೆ ನೀಡಿದ್ದಾರೆ. 

ಹೆಣ್ಣಿನ ಮದುವೆ ವಯಸ್ಸು 21ಕ್ಕೆ ಏರಿಸಿ, ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ಹೆಣ್ಮಕ್ಕಳನ್ನು ಹೇಗೆ ಗೌರವಿಸಬೇಕು ಎಂದು ಶಿಕ್ಷಕಿಯ ಪಾಠ
ವೀಡಿಯೊದಲ್ಲಿ ಬಬಿತಾ ಎಂಬ ಶಿಕ್ಷಕಿ ಪಾಠ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಒಬ್ಬಳು ಹುಡುಗಿ ನಿಂತಿರುವುದನ್ನು ನೋಡಿ ಹುಡುಗರು ಆಕೆಯನ್ನು ಹತ್ತಿರದಲ್ಲಿ ಬಂದು ಕುಳಿತುಕೊಳ್ಳಲು ಒತ್ತಾಯಿಸುತ್ತಾರೆ. ಶಿಕ್ಷಕಿ ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ಕರೆದು ಮುಂದಿನ ಬೆಂಚ್‌ನಲ್ಲಿ ಕುಳಿತುಕೊಳ್ಳುವಂತೆ ಸೂಚಿಸುತ್ತಾರೆ. ನಂತರ ಹುಡುಗರಿಗೆ ಹೆಣ್ಮಕ್ಕಳನ್ನು ಹೇಗೆ ಗೌರವಿಸಬೇಕು ಎಂದು ಹಿತವಚನ ನೀಡುತ್ತಾರೆ.

'ನೀವು ಈ ಹುಡುಗಿಯ ಜೊತೆ ವರ್ತಿಸುವ ರೀತಿಯೇ ನಿಮ್ಮ ಅಕ್ಕ-ತಂಗಿಯ ಜೊತೆ ವರ್ತಿಸುತ್ತೀರಾ, ಅಥವಾ ನಿಮ್ಮವರ ಜೊತೆ ಯಾರಾದರೂ ಹೀಗೆ ಕೆಟ್ಟದಾಗಿ ನಡೆದುಕೊಂಡರೆ ನೀವು ಸಹಿಸಿಕೊಳ್ಳುತ್ತೀರಾ. ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಿರಿ. ನೀವು ಯಾವಾಗಲ್ಲೆಲ್ಲಾ ಇತರ ಹೆಣ್ಣುಮಕ್ಕಳಿಗೆ ಅವಮಾನ ಮಾಡುತ್ತಿರುತ್ತೀರಾ, ಅದೆಲ್ಲವೂ ನಿಮಗೇ ರಿಟರ್ನ್ ಬರುತ್ತದೆ. ಕರ್ಮ ಅನ್ನೋದು ಎಲ್ಲಾ ಕಡೆ ನಿರ್ವಹಿಸುತ್ತದೆ. ಇವತ್ತು ನೀವು ಮತ್ತೊಬ್ಬ ಹುಡುಗಿಯನ್ನು ಚುಡಾಯಿಸುತ್ತೀರಿ. ನಾಳೆ ಇನ್ಯಾರೋ ನಿಮ್ಮ ಮನೆಯವರನ್ನು ಚುಡಾಯಿಸುತ್ತಾರೆ' ಎಂದು ಶಿಕ್ಷಕಿ ಹೇಳುತ್ತಾರೆ.

ಚಿಕ್ಕ ಸ್ಕರ್ಟ್ ಹಾಕ್ಕೊಂಡ್ರೆ ತೊಡೆ ಮುಚ್ಕೋಬೇಕು, ಹುಡುಗೀರು ನಗುವಾಗ ಬಾಯಿ ಮುಚ್ಕೋಬೇಕಿಲ್ಲಿ!

ಮಾತ್ರವಲ್ಲ 'ನೀವು ಇವತ್ತು ಇಲ್ಲಿ ವರ್ತಿಸಿದಂತೆ ಮುಂದೆ ಕಾಲೇಜಿನಲ್ಲಿಯೂ ವರ್ತಿಸುತ್ತೀರಿ. ಇದು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಜನರು ಕೇವಲ ನಿಮ್ಮ  ಬಗ್ಗೆ ಮಾತನಾಡುವುದಿಲ್ಲ. ನಿಮ್ಮ ತಂದೆ-ತಾಯಿಯ ಬಗ್ಗೆಯೂ ಮಾತನಾಡುತ್ತಾರೆ. ನಿಮ್ಮನ್ನು ಅವರು ಸರಿಯಾಗಿ ಬೆಳೆಸಿಲ್ಲವೆಂದು ದೂರುತ್ತಾರೆ. ಹೀಗಾಗಿ ಯಾವತ್ತೂ ಹೆಣ್ಣುಮಕ್ಕಳನ್ನು ಗೌರವಿಸಲು ಕಲಿಯಿರಿ. ನೀವು ಎಲ್ಲಿಯೋ ಇದ್ದು ಹೆಣ್ಣುಮಕ್ಕಳನ್ನು ಚುಡಾಯಿಸುತ್ತಾ ಇರುತ್ತೀರಿ. ಇನ್ನೆಲ್ಲೋ ಇನ್ಯಾರೋ ನಿಮ್ಮ ಅಕ್ಕ, ತಂಗಿ, ಅಮ್ಮ, ಅತ್ತೆಗೆ ಚುಡಾಯಿಸುತ್ತಿರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದಿದ್ದಾರೆ.

ಈ ಸ್ಪೂರ್ತಿದಾಯಕ ಕ್ಲಿಪ್ 414.3K ವೀಕ್ಷಣೆಗಳು, 1,634 ರಿಟ್ವೀಟ್‌ಗಳು, 6,423 ಲೈಕ್ಸ್‌ಗಳನ್ನು ಗಳಿಸಿದೆ. ವೀಡಿಯೊಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕಿ ಮಾಡಿದ ಪಾಠಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

In her own way, this teacher gave a very important lesson of respect to the boys in her class. pic.twitter.com/QpAbMty6dk

— Anjali B. (@MsAnjaliB)
click me!