ಅರೆರೆ..ಇವರು ಹುಡುಗರಾ..ಥೇಟ್‌ ಮಹಿಳೆಯರಂತೆ ಡ್ರೆಸ್ ಮಾಡಿ ಸಖತ್‌ ಮಿಂಚಿದ್ರು ಪುರುಷರು!

By Vinutha Perla  |  First Published Mar 29, 2023, 1:26 PM IST

ಶಬರಿಮಲೆ ದೇವಸ್ಥಾನದಲ್ಲಿ ಕೆಲ ವಯೋಮಾನದ ಮಹಿಳೆಯರಿಗೆ ಪ್ರವೇಶವಿಲ್ಲ. ಹಾಗೆಯೇ ಕೇರಳದಲ್ಲಿ ಇನ್ನೊಂದು ವಿಶೇಷವಾದ ದೇವಸ್ಥಾನವಿದೆ. ಇಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಪುರುಷರು ಈ ದೇವಸ್ಥಾನದೊಳಗೆ ಹೋಗ್ಬೇಕು ಅಂದ್ರೆ ಮಹಿಳೆಯರಂತೆ ರೆಡಿಯಾಗ್ಬೇಕು. ಆ ಬಗ್ಗೆ ಒಂದು ವಿಶೇಷ ಸ್ಟೋರಿ ಇಲ್ಲಿದೆ.


ಕೇರಳ ರಾಜ್ಯವನ್ನು ದೇವರ ನಾಡು ಎಂದೇ ಕರೆಯುತ್ತಾರೆ. ಇಲ್ಲಿ ಹಲವು ಪುರಾತನ, ಆಸಕ್ತಿದಾಯಕ ಕ್ಷೇತ್ರಗಳಿವೆ. ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ಮತ್ತು ಆಸಕ್ತಿದಾಯಕವಾದ ಆಚರಣೆಗಳು, ನಂಬಿಕೆಗಳನ್ನು ಕಾಣಬಹುದು. ಕೆಲವೊಂದು ವಿಚಿತ್ರ ಎಂದೆನಿಸಿದರೂ, ಅಲ್ಲಿನ ಸ್ಥಳೀಯ ಜನರು ಮಾತ್ರ ಆಚರಣೆಗಳನ್ನು ಅಪಾರವಾದ ನಂಬಿಕೆಗಳಿಂದ ಆಚರಿಸಿಕೊಂಡು ಬರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಚಮಯವಿಳಕ್ಕು ಹಬ್ಬದ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಭಾರತೀಯ ರೈಲ್ವೇ ಅಧಿಕಾರಿ ಅನಂತ್ ರೂಪನಗುಡಿ ಅವರು ಟ್ವಟಿರ್​​ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ 'ಕೊಟ್ಟಂಕುಳಂಗರ ದೇವಿ' ದೇವಸ್ಥಾನಕ್ಕೆ ಪುರುಷರ ಪ್ರವೇಶವನ್ನು (Mens entry) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದೇವಾಲಯಕ್ಕೆ (Temple) ಮಹಿಳೆಯರು ಮತ್ತು ನಪುಂಸಕರಿಗೆ ಮಾತ್ರ ಪ್ರವೇಶ. ಪುರುಷರು ಇಲ್ಲಿ ಬರಬೇಕೆಂದರೆ ಅವರು ಸ್ತ್ರೀ ವೇಷ ಧರಿಸಿಕೊಳ್ಳಲೇಬೇಕು. ಅದರಲ್ಲೂ ಕೇವಲ ಸ್ತ್ರೀ ಬಟ್ಟೆ ಧರಿಸಿದರೆ ಸಾಲದು. ಅವರಂತೆ ಎಲ್ಲ ರೀತಿಯಲ್ಲಿ ಮೇಕಪ್ ಹಾಕಿಕೊಂಡು ಸಿಂಗಾರ ಮಾಡಿಕೊಳ್ಳಬೇಕು. ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ.

Tap to resize

Latest Videos

ಕೇರಳ ದೇಗುಲದ ಜಾತ್ರೆಯಲ್ಲಿ ರೋಬೋಟ್‌ ಆನೆಯ ಬಳಕೆ: ದೇಶದಲ್ಲೇ ಮೊದಲು ವಿದ್ಯುಚ್ಛಾಲಿತ ಆನೆ ಮೆರವಣಿಗೆ

ಕೊಟ್ಟಂಕುಲಕರದಲ್ಲಿರುವ ದೇವಿ ದೇವಾಲಯದಲ್ಲಿ ಚಮಯವಿಳಕ್ಕು ಉತ್ಸವ
ಕೊಲ್ಲಂ ಜಿಲ್ಲೆಯ ಕೊಟ್ಟಂಕುಲಕರದಲ್ಲಿರುವ ದೇವಿ ದೇವಾಲಯದಲ್ಲಿ ಚಮಯವಿಳಕ್ಕು ಉತ್ಸವ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಪುರುಷರು ಮಹಿಳೆಯರಂತೆ ವೇಷ ತೊಟ್ಟು ಉತ್ಸವದಲ್ಲಿ (Festival) ಪಾಲ್ಗೊಳ್ಳುತ್ತಾರೆ. ಇದೇ ವೇಳೆಯಲ್ಲಿ ಸ್ಪರ್ಧೆ ಏರ್ಪಡಿಸಿ ಆಕರ್ಷಕವಾಗಿ ಸಿಂಗರಿಸಿಕೊಂಡವರಿಗೆ ಬಹುಮಾನವನ್ನು (Prize) ಸಹ ನೀಡಲಾಗುತ್ತದೆ. ಚಮಯವಿಳಕ್ಕು ಉತ್ಸವವು ತೃತೀಯ ಲಿಂಗಿ ಸಮುದಾಯಕ್ಕೆ ಸೇರಿದವರ ಅತೀ ದೊಡ್ಡ ಹಬ್ಬವಾಗಿ ಖ್ಯಾತಿ ಪಡೆದುಕೊಂಡಿದೆ.

ಕೊಲ್ಲಂ ಜಿಲ್ಲೆಯ ಕೊಟ್ಟಂಕುಲಕರದಲ್ಲಿರುವ ದೇವಿ ದೇವಾಲಯದಲ್ಲಿ ಚಮಯವಿಳಕ್ಕು ಉತ್ಸವ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಪುರುಷರು ಮಹಿಳೆಯರಂತೆ ವೇಷ ತೊಟ್ಟು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ವೇಳೆಯಲ್ಲಿ ಸ್ಪರ್ಧೆ ಏರ್ಪಡಿಸಿ ಆಕರ್ಷಕವಾಗಿ ಸಿಂಗರಿಸಿಕೊಂಡವರಿಗೆ ಬಹುಮಾನವನ್ನು ಸಹ ನೀಡಲಾಗುತ್ತದೆ. ಚಮಯವಿಳಕ್ಕು ಉತ್ಸವವು ತೃತೀಯ ಲಿಂಗಿ ಸಮುದಾಯಕ್ಕೆ ಸೇರಿದವರ ಅತೀ ದೊಡ್ಡ ಹಬ್ಬವಾಗಿ ಖ್ಯಾತಿ ಪಡೆದುಕೊಂಡಿದೆ.

ರಾಜ್ಯದ ಹಲವೆಡೆಯಿಂದ ಆಗಮಿಸುವ ಪುರುಷರು ಈ ವಿಶಿಷ್ಟ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಉತ್ಸವದಲ್ಲಿ ಪುರುಷರು ತಮ್ಮ ಕೈಯಲ್ಲಿ ದೀಪಗಳನ್ನು ಹಿಡಿದುಕೊಂಡು ಮಹಿಳೆಯರಂತೆ (Women) ವೇಷ ಧರಿಸಿ ಮೆರವಣಿಗೆ ಹೋಗುತ್ತಾರೆ. ಸ್ತ್ರೀವೇಷಧಾರಿ ಪುರುಷರು ದೀಪ ಹಿಡಿದು ದೇವಾಲಯದ ಸುತ್ತಲೂ ತಮ್ಮ ಭಕ್ತಿಯ ಸಂಕೇತವಾಗಿ ಪ್ರದಕ್ಷಿಣೆ ಬರುತ್ತಾರೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್​ನಲ್ಲಿ ತಿಳಿಸಲಾಗಿದೆ. 

ಗುರುವಾಯೂರು ದೇವಾಲಯದ ಕುರಿತ ಆಸಕ್ತಿಕರ ಸಂಗತಿಗಳಿವು..

ಸ್ಪರ್ಧೆಯಲ್ಲಿ ಬಹುಮಾನ ಪಡೆದ ವ್ಯಕ್ತಿಯ ಫೋಟೋ ವೈರಲ್‌
ಸದ್ಯ ಅನಂತ್ ರೂಪನಗುಡಿ ಅವರು ಚಮಯವಿಳಕ್ಕು ಹಬ್ಬದ ವೇಳೆ ಆಯೋಜನೆಯಾಗಿದ್ದ ಸ್ಪರ್ಧೆಯಲ್ಲಿ ಆಕರ್ಷಕವಾಗಿ ಸಿಂಗರಿಸಿಕೊಂಡು ಪ್ರಥಮ ಬಹುಮಾನ ಪಡೆದ ಸ್ಪರ್ಧಿಯ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ. ವ್ಯಕ್ತಿ ನಿಜಕ್ಕೂ ಸ್ತ್ರೀಯಂತೆಯೇ ಕಾಣುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ದೇವಾಲಯದ ಇತಿಹಾಸ: ಸ್ಥಳೀಯ ದಂತಕಥೆಗಳ ಪ್ರಕಾರ, ಇಲ್ಲಿ ವನದುರ್ಗಾ ದೇವಿಯ ವಿಗ್ರಹವು ಬಹಳ ಹಿಂದೆಯೇ ಇಲ್ಲಿ ಕಾಣಿಸಿಕೊಂಡಿತ್ತು. ಆ ಕಾಲದಲ್ಲಿ ಕುರುಬರು ಪ್ರಾಣಿಗಳನ್ನು ಮೇಯಿಸುತ್ತಿದ್ದ ಕಾಡು ಇದಾಗಿತ್ತು. ಅವರು ಈ ವಿಗ್ರಹವನ್ನು ಮೊದಲು ನೋಡಿದರು ಮತ್ತು ಕೆಲವು ಅಜ್ಞಾತ ಪ್ರೇರಣೆಯಿಂದಾಗಿ, ದೇವಿಗೆ ಹೂವುಗಳನ್ನು ಅರ್ಪಿಸಿದರು ಮತ್ತು ಸ್ತ್ರೀಯರ ಉಡುಪುಗಳನ್ನು ಧರಿಸಿ ಪೂಜಿಸಿದರು. ನಂತರ ಈ ಸ್ಥಳವನ್ನು ದೇವಾಲಯವಾಗಿ ಪರಿವರ್ತಿಸಲಾಯಿತು. ಅಂದಿನಿಂದ ಈ ದೇವಾಲಯದಲ್ಲಿ ಪುರುಷರಿಗೆ ಪೂಜೆ ಮಾಡಲು ಅವಕಾಶವಿಲ್ಲ. ಯಾವುದೇ ವಯಸ್ಸಿನ ಪುರುಷರು ದೇವಾಲಯವನ್ನು ಪ್ರವೇಶಿಸಲು ಮಹಿಳೆಯರ ಉಡುಪುಗಳನ್ನು ಧರಿಸಬೇಕು ಮತ್ತು ಅವರಂತೆ ಷೋಡಶ ಅಲಂಕಾರ ಮಾಡಿಕೊಳ್ಳಬೇಲು.

ದೇವಸ್ಥಾನದಲ್ಲಿದೆ ಮೇಕಪ್ ರೂಮ್: ದೇವಸ್ಥಾನದಲ್ಲಿ ಮೇಕಪ್ ರೂಂ ಕೂಡ ನಿರ್ಮಿಸಲಾಗಿದ್ದು, ಇದರಿಂದ ಪುರುಷರು ಮಹಿಳೆಯರಂತೆ ಸರಿಯಾಗಿ ಡ್ರೆಸ್ ಮಾಡಿಕೊಳ್ಳಬಹುದಾಗಿದೆ. ಪುರುಷರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ತಮ್ಮ ಹೆಂಡತಿ, ಸಹೋದರಿ ಅಥವಾ ತಾಯಿಯ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಅವರು ತಮ್ಮೊಂದಿಗೆ ಇತರ ಪುರುಷರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ದೇವಸ್ಥಾನಕ್ಕೆ ಹೋಗಬೇಕಾದರೆ ಬರೀ ಹೆಂಗಸರ ಬಟ್ಟೆ ಹಾಕಿಕೊಂಡರೆ ಸಾಲದು, 16 ಅಲಂಕಾರಗಳನ್ನು ಸಂಪೂರ್ಣವಾಗಿ ಮಾಡಲೇಬೇಕು.

ಪ್ರತಿ ವರ್ಷ 2 ದಿನಗಳ ಉತ್ಸವ: ಈ ದೇವಾಲಯದಲ್ಲಿ ಪ್ರತಿ ವರ್ಷ ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಹೆಣ್ಣಿನ ವೇಷ ಧರಿಸಿ ದೇವಿಯನ್ನು ಪೂಜಿಸುವುದರಿಂದ ಒಳ್ಳೆಯ ಉದ್ಯೋಗ ದೊರೆಯುತ್ತದೆ ಮತ್ತು ಸುಂದರ ಪತ್ನಿ ದೊರೆಯುತ್ತಾಳೆ ಎಂಬುದು ಸ್ಥಳೀಯ ನಂಬಿಕೆ. ಈ ಕಾರಣಕ್ಕಾಗಿಯೇ ಈ ಹಬ್ಬದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಪುರುಷರು ಇಲ್ಲಿಗೆ ಬಂದು ಸ್ತ್ರೀಯರ ವೇಷ ಧರಿಸಿ ದೇವಿಯನ್ನು ಪೂಜಿಸುತ್ತಾರೆ.

The Devi Temple in Kottamkulakara in Kollam district in Kerala has a tradition called the Chamayavilakku festival.

This festival is celebrated by men who are dressed as women. The above picture is that of the man who won the first prize for the make up In the contest. pic.twitter.com/ow6lAREahD

— Ananth Rupanagudi (@Ananth_IRAS)
click me!