
ಮಾಜಿ ನೀಲಿಚಿತ್ರಗಳ ತಾರೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಿಗೆ ಮೂವರು ಮಕ್ಕಳು ಪುತ್ರಿಯನ್ನು ದತ್ತು ಪಡೆದಿದ್ದರೆ, ಇನ್ನಿಬ್ಬರು ಅವಳಿ ಮಕ್ಕಳನ್ನು ಅವರು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಹೀಗಿರುವಾಗ ಅವರು ತಾವು ಮಕ್ಕಳನ್ನು ಪಡೆಯುವುದಕ್ಕಾಗಿ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಹಾಗೂ ತಮ್ಮ ತಾಯ್ತನದ ಪಯಣದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಮತ್ತೊಬ್ಬ ನಟಿ ಸೋಹಾ ಅಲಿ ಖಾನ್ ಅವರು ನಡೆಸಿಕೊಡುವ ಮುಂದಿನ ಪಾಡ್‌ಕಾಸ್ಟ್ 'ಆಲ್ ಅಬೌಟ್ ಹರ್' (All About Her)ಹೆಸರಿನ ಪಾಡ್‌ಕಾಸ್ಟ್‌ನಲ್ಲಿ ಸನ್ನಿ ಲಿಯೋನ್ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾಡ್‌ಕಾಸ್ಟ್‌ನ ಪ್ರೋಮೋ ರಿಲೀಸ್ ಆಗಿದ್ದು ವೈರಲ್ ಆಗ್ತಿದೆ.
ಬಾಡಿಗೆ ತಾಯ್ತನಕ್ಕಾಗಿ ದುಬಾರಿ ಹಣ ವೆಚ್ಚ ಮಾಡಿದೆವು:
ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೇಬರ್ ಅವರು ಮೂವರು ಮಕ್ಕಳಿಗೆ ಪೋಷಕರಾಗಿದ್ದಾರೆ. ಇವರಲ್ಲಿ ಮಗಳು ನಿಶಾ ವೇಬರ್ ಅವರನ್ನು ದತ್ತು ಪಡೆಯಲಾಗಿದೆ. ಗಂಡು ಅವಳಿ ಮಕ್ಕಳಾದ ನೋಹ್ ಆಹಾಗೂ ಅಶೇರ್ ಅವರನ್ನು ಬಾಡಿಗೆ ತಾಯಿಯ ಮೂಲಕ ಪಡೆಯಲಾಗಿದೆ. ಹೀಗಿರುವಾಗ ಅವರು ಅಚ್ಚರಿಯ ವಿಚಾರವನ್ನು ಹೇಳಿಕೊಂಡಿದ್ದಾರೆ. ತಾವು ತನ್ನ ಮಕ್ಕಳಿಗಾಗಿ ಆಯ್ಕೆ ಮಾಡಿದ ಮಹಿಳೆ ತಮ್ಮಿಂದ ಬಹಳ ದುಬಾರಿ ಹಣವನ್ನು ವಸೂಲಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ತಾವು ನೀಡಿದ ಹಣದಿಂದ ಆಕೆ ಮನೆಯನ್ನು ಕಟ್ಟಿಕೊಂಡಳು ಹಾಗೂ ಮದುವೆಗೂ ಹಣ ಮಾಡಿಕೊಂಡಳು ಎಂದು ಹೇಳಿಕೊಂಡಿದ್ದಾರೆ.
ಸನ್ನಿ ಬಾಡಿಗೆ ತಾಯ್ತನದ ಮೊರೆ ಹೋಗಿದ್ದೇಕೆ?
ಇಂದಿನ ಎಪಿಸೋಡ್, ವಾಸ್ತವವಾಗಿ ಪೋಷಕರಾಗುವ ವಿಭಿನ್ನ ಮಾರ್ಗಗಳನ್ನು ಅನ್ವೇಷಿಸುವ ಬಗ್ಗೆ ಎಂದು ಸೋಹಾ ಹೇಳುವ ಮೂಲಕ ಈ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಸನ್ನಿ ನನ್ನ ಮನಸ್ಸಿನಲ್ಲಿ, ನಾನು ಮಗುವನ್ನು ದತ್ತು ಪಡೆಯಬೇಕು ಎಂದು ಬಯಸಿದ್ದೆ ಎಂದು ಹೇಳುತ್ತಾರೆ. ಈ ಪಾಡ್‌ಕಾಸ್ಟ್‌ನಲ್ಲಿ ಇವರ ಜೊತೆ ಖ್ಯಾತ ಸ್ತ್ರೀರೋಗತಜ್ಞೆ ಕಿರಣ್ ಕೊಯೆಲ್ಹೋ ಅವರು ಮಾತನಾಡಿದ್ದಾರೆ. ಟ್ರೇಲರ್‌ನಲ್ಲಿ, ಸನ್ನಿ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡ ಬಗ್ಗೆ ಮಾತನಾಡುತ್ತಾ, ನಾವು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದೆವು. ಅಲ್ಲದೇ ಐವಿಎಫ್‌ಗೆ ಸಿದ್ಧತೆ ಮಾಡಿದ ದಿನವೇ ನಮಗೆ ಸಣ್ಣ ಮಗುವನ್ನು ದತ್ತು ಪಡೆಯುವ ಅವಕಾಶ ಸಿಕ್ಕಿತ್ತು ಎಂದು ಸನ್ನಿ ಹೇಳಿಕೊಂಡಿದ್ದಾನೆ. ಈ ಸಂದರ್ಶನದ ವೇಳೆಯೇ ಸೋಹಾ ಅಲಿಖಾನ್ ಅವರು, ಸನ್ನಿ ಅವರ ಬಳಿ ಬಾಡಿಗೆ ತಾಯ್ತನ ಅನಿವಾರ್ಯವಾಗಿತ್ತಾ ಅಥವಾ ಮಕ್ಕಳನ್ನು ಹೆರಲು ಇಷ್ಟವಿಲ್ಲದ ಕಾರಣ ಆಗಿತ್ತಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸನ್ನಿ ಹೌದು ನನಗೆ ಮಗುವನ್ನು ಹೆರುವುದಕ್ಕೆ ಇಷ್ಟವಿರಲಿಲ್ಲ ಎಂದು ಪ್ರಮಾಣಿಕವಾಗಿ ಒಪ್ಪಿಕೊಂಡರು.
ಬಾಡಿಗೆ ತಾಯ್ತನಕ್ಕೆ ಮಾಡಿದ ವೆಚ್ಚ ಎಷ್ಟು?
ಇದೇ ಸಮಯದಲ್ಲಿ ಬಾಡಿಗೆ ತಾಯ್ತನದ ವೇಳೆ ಏನೆಲ್ಲಾ ವೆಚ್ಚಗಳಿದ್ದವು ಎಂದು ಸೋಹಾ ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಸನ್ನಿ ನಾವು ನಮ್ಮ ಮಕ್ಕಳ ಬಾಡಿಗೆ ತಾಯಿಗೆ ವಾರಕೊಮ್ಮೆ ಹಣ ಕೊಡುತ್ತಿದ್ದೆವು. ಆಕೆಯ ಗಂಡನಿಗೂ ಆಕೆಯನ್ನು ನೋಡಿಕೊಳ್ಳುವುದಕ್ಕೆ ಹಣ ಪಾವತಿ ಮಾಡಲಾಗುತ್ತಿತ್ತು. ನಾವು ಆಕೆಗೆ ತುಂಬಾ ಹಣ ಪಾವತಿ ಮಾಡಿದೆವು. ಎಷ್ಟೆಂದರೆ ಆಕೆ ಒಂದು ಮನೆಯನ್ನು ಖರೀದಿಸಿದಳು. ಮದುವೆಯನ್ನು ತುಂಬಾ ಅದ್ದೂರಿಯಾಗಿ ಮಾಡಿದಳು ಎಂದು ಸನ್ನಿ ಹೇಳಿದ್ದಾರೆ.
ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೇಬರ್ 2011ರಲ್ಲಿ ಮದುವೆಯಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಮೊದಲು ಮಗಳು ನಿಶಾಳನ್ನು 2017ರಲ್ಲಿ ದತ್ತು ಪಡೆದಿದ್ದಾರೆ. ಇದಾದ ನಂತರ ಅವರು 2018ರಲ್ಲಿ ಬಾಡಿಗೆ ತಾಯಿಯ ಮೂಲಕ 2018ರಲ್ಲಿ ಅವಳಿ ಮಕ್ಕಳನ್ನು ಪಡೆದರು. ಸನ್ನಿ ಲಿಯೋನ್ ತಮ್ಮ ಮಕ್ಕಳ ಜೊತೆಗಿನ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿರುತ್ತಾರೆ. 2011ರಲ್ಲಿ ಸನ್ನಿ ಲಿಯೋನ್ ಹಿಂದಿ ಬಿಗ್ ಬಾಸ್ 5ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸನ್ನಿ ಜಿಸ್ಮ್-2 ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ರಾಗಿಣಿ ಎಂಎಂಎಸ್ 2, ಏಕ್ ಪಹೇಲಿ ಲೀಲಾ ಮತ್ತು ಮಸ್ತಿಜಾದೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಎಂಬ ಡೇಟಿಂಗ್ ರಿಯಾಲಿಟಿ ಶೋವನ್ನು ಕೂಡ ನಿರೂಪಣೆ ಮಾಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ನಂತರ ಮತ್ತೆ ಪ್ರೀತಿಯಲ್ಲಿ ಬಿದ್ದ ದುಬೈ ರಾಜಕುಮಾರಿ: ಪ್ರಸಿದ್ಧ ರಾಪರ್ ಜೊತೆ ರೋಮ್ಯಾನ್ಸ್
ಇದನ್ನೂ ಓದಿ: ಟ್ರಂಪ್ ಎಡವಟ್ಟಿನ ವರ್ತನೆಗೆ ತಿರುಗೇಟು: ಅಮೆರಿಕಾದಲ್ಲಿ 550 ಬಿಲಿಯನ್ ಡಾಲರ್ ಒಪ್ಪಂದ ರದ್ದು ಮಾಡುತ್ತಾ ಜಪಾನ್?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.