
ಹೆಣ್ಣು ಮಕ್ಕಳ ಋತುಚಕ್ರದ ಸಮಯದಲ್ಲಿ ಅನುಭವಿಸುವ ಸಂಕಷ್ಟ ನೋವು ಮಾನಸಿಕ ತುಮುಲಗಳ ಬಗ್ಗೆ ಈಗಾಗಲೇ ಅನೇಕ ಹೆಣ್ಣು ಮಕ್ಕಳು ಹೇಳಿಕೊಂಡಿದ್ದಾರೆ. ಪೀರೆಡ್ಸ್ ಸಮಯದಲ್ಲೂ ಆ ನೋವಿನ ನಡುವೆಯೂ ಕೆಲ ಹೆಣ್ಣು ಮಕ್ಕಳು ಬೇರೆ ಬೇರೆ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆದರೆ ಯುವಕರಿಗೆ ಇದರ ಅನುಭವ ಇರುವುದಿಲ್ಲ, ಹೀಗಾಗಿ ಯುವಕರಿಗೆ ಈ ಅನುಭವ ನೀಡುವುದಕ್ಕೆ ಪಿರೇಡ್ಸ್ ಪೈನ್ ಸಿಮ್ಯುಲೆಟರ್ ಮೆಷಿನ್‌ಗಳು ಇರುವುದನ್ನು ನೀವು ನೋಡಿರಬಹುದು. ಕೆಲ ಮಾಲ್‌ಗಳಲ್ಲೂ ಈ ರೀತಿ ಪಿರೇಡ್ಸ್ ಪೈನ್ ಹೇಗಿರುತ್ತದೆ ಎಂದು ಯುವಕರಿಗೆ ಫೀಲ್ ಮಾಡುವ ಮೆಷಿನ್ ಇದೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ಈ ಪಿರೇಡ್ಸ್ ಸ್ಟಿಮ್ಯುಲೆಟ್ ಮೆಷಿನ್ ದೇಹಕ್ಕೆ ಅಳವಡಿಸಿಕೊಂಡು ಕಾರ್ಯಕ್ರಮವೊಂದನನ್ನು ನೀಡಲು ಯತ್ನಿಸಿದ್ದು ಆತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಟ್ಟಿನ ನೋವಿನ ಅನುಭವ ಪಡೆದ ಯುವಕ:
ಮಹಿಳೆಯರು ತೀವ್ರವಾದ ಮುಟ್ಟಿನ ನೋವನ್ನು ಎದುರಿಸುತ್ತಿದ್ದರೂ ಸಹ ದೈನಂದಿನ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತಾರೆ ಎಂಬುದು ರಹಸ್ಯವಾಗಿಲ್ಲ. ಹೀಗಾಗಿ ಇಲ್ಲಿ ಓರ್ವ ಯುವಕ ಪಿರೇಡ್ಸ್ ಸಮಯದಲ್ಲೂ ಹೆಣ್ಣು ಮಕ್ಕಳು ಹೇಗೆ ಎಲ್ಲಾ ಟಾಸ್ಕ್‌ಗಳನ್ನು ನಿರ್ವಹಿಸುತ್ತಾರೆ ಎಂಬುದನ್ನು ತಿಳಿಯಲು ಯತ್ನಿಸಿ ಪಿರೇಡ್ಸ್ ಪೈನ್ ಸಿಮ್ಯುಲೆಟ್ ಬಳಸಿ ಹಾಡಿನ ಗಾಯನ ಮಾಡಲು ಮುಂದಾಗಿದ್ದಾರೆ. ಆದರೆ ಸಿಮ್ಯುಲೆಟ್‌ನಿಂದ ಅವರಿಗೆ ಪಿರೇಡ್ಸ್ ನೋವಿನ ಫೀಲ್ ಆಗುವುದಕ್ಕೆ ಶುರುವಾಗಿದ್ದು, ಅವರು ತಮ್ಮ ಹಾಡಿನ ಗಾಯನದ ನಡುವೆಯೂ ಕಿಬ್ಬೊಟ್ಟೆಯಲ್ಲಿ ನೋವಿನ ಅನುಭವವಾಗಿ ನರಳಾಡುವುದನ್ನು ಕಾಣಬಹುದಾಗಿದೆ.
ನೋವು ಸಹಿಸಲಾಗದೇ ನೆಲಕ್ಕೆ ಬಿದ್ದ
ಟಾಮಿ ಮಾಂಟ್ಗೊಮೆರಿ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಆ ಯುವಕ ಹಾಡಲು ಪ್ರಾರಂಭಿಸುತ್ತಾನೆ ಆದರೆ ನೋವು ಅವನನ್ನು ಆವರಿಸುತ್ತಿದ್ದಂತೆ ಆತ ಪ್ರದರ್ಶನದ ಮಧ್ಯೆಯೇ ಹಾಡುವುದನ್ನು ನಿಲ್ಲಿಸುತ್ತಾನೆ. ಒಬ್ಬ ಮಹಿಳೆ ಈ ಸಿಮ್ಯುಲೇಟರ್ ನಿಯಂತ್ರಣಗಳನ್ನು ಹಿಡಿದಿರುವುದನ್ನು ಕಾಣಬಹುದು ಆತ ಹಾಡು ಹಾಡುತ್ತಿದ್ದಂತೆ ಆತನಿಗೆ ಕಿಬ್ಬೊಟ್ಟೆಯಲ್ಲಿ ನೋವು ಶುರುವಾಗಿ ತನ್ನ ಗಾಯನವನ್ನು ಮುಂದುವರಿಸಲು ಆತ ಹೆಣಗಾಡುತ್ತಾನೆ. ಒಂದು ಹಂತದಲ್ಲಿ ಆತನಿಗೆ ಆ ನೋವು ಸಹಿಸಲಾಗದೇ ಆತ ನೆಲಕ್ಕೆ ಕುಸಿದು ಬೀಳುತ್ತಾನೆ. ಆದರೆ ಆತ ಮತ್ತೆ ಎದ್ದೇಳುತ್ತಾನೆ. ಅಲ್ಲಿದ್ದ ಪ್ರೇಕ್ಷಕರು ಕೊನೆಯಲ್ಲಿ ಅವನ ಪ್ರಯತ್ನಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ.
ವೀಡಿಯೋ ಭಾರಿ ವೈರಲ್
ಈ ವೀಡಿಯೊವನ್ನು ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. 10 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ., 4,000+ ಕಾಮೆಂಟ್‌ಗಳು ಮತ್ತು 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಈ ವೀಡಿಯೋ ಗಳಿಸಿದೆ. ಅನೇಕರು ಈ ವೀಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹುಡುಗಿಯೊಬ್ಬರು ಕಾಮೆಂಟ್ ಮಾಡಿದ್ದು, ಅವರು ತುಂಬಾ ನಾಟಕೀಯವಾಗಿ ವರ್ತಿಸುತ್ತಿದ್ದಾರೆ. ಇದು ಸಾಮಾನ್ಯ ಅವರು ಆಳವಾದ ಉಸಿರನ್ನು ತೆಗೆದುಕೊಂಡು ಹೆಚ್ಚು ನಗಬೇಕು ಎಂದು ತಮಾಷೆಯಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ ಮತ್ತೊಬ್ಬರು ನನ್ನ ಮೊಣಕಾಲುಗಳಲ್ಲಿ ನಾನು ಅದನ್ನು ಏಕೆ ಅನುಭವಿಸಬಹುದು' ಎಂಬುದು ನನ್ನನ್ನು ಕೊಂದಿತು ಎಂದು ವ್ಯಂಗ್ಯವಾಡಿದರು. ಕೆಲವು ಮಹಿಳೆಯರು ಇದನ್ನೊಮ್ಮೆ ಪ್ರಯತ್ನಿಸಿ ಇದು ವಾಸ್ತವಕ್ಕೆ ಎಷ್ಟು ನಿಖರವಾಗಿದೆ ಎಂಬುದನ್ನು ಹೇಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬರೀ ಇಷ್ಟೇ ಅಲ್ಲ ಅತಿಸಾರ, ಮೈಗ್ರೇನ್, ಮನಸ್ಥಿತಿಯಲ್ಲಿನ ಬದಲಾವಣೆಗಳು, ಪುರುಷರು ಈ ಸಮಯದಲ್ಲಿ ಹೆಚ್ಚು ನಗುವಂತೆ ಹೇಳುವುದು, ಮನೆಗೆಲಸ, ಕೆಲಸದ ಕೆಲಸ , ಮಕ್ಕಳು, ರಕ್ತದ ನಷ್ಟದಿಂದ ಬಳಲಿಕೆ, ಕಣ್ಣು ಮಂಜಾಗುವುದು, ಇತರ ಎಲ್ಲಾ ಲಕ್ಷಣಗಳು ಪ್ರತಿದಿನ ಪ್ರತಿ ನಿಮಿಷ ಇರುತ್ತದೆ. ಇದು 5 ರಿಂದ 10 ದಿನಗಳವರೆಗೆ ತಿಂಗಳಿಗೊಮ್ಮೆ, ಪ್ರತಿ ತಿಂಗಳು, ಕನಿಷ್ಟ 45 ವರ್ಷದವರೆಗೂ ಇರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರೈನ್‌ಕೋಟ್ ಹಾಕಿ ಹಸುಗಳನ್ನು ಮೇಯಲು ಬಿಟ್ಟ ಮಾಲೀಕ: ಕೊಡಗಿನ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಬೀದಿಯಿಂದ ಬಂದು ಭದ್ರತಾ ಪಡೆ ಸೇರಿದ ಬೀದಿ ನಾಯಿ ಟೆಂಗಾನ ಕತೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.