ಸರಳ ಉಡುಪಿನ ಕಾರಣಕ್ಕೆ ಸುಧಾಮೂರ್ತಿಗೆ ಹೀಗಂದ್ರಾ ಏರ್‌ಪೋರ್ಟ್ ಅಧಿಕಾರಿಗಳು!

Published : May 06, 2023, 03:01 PM IST
ಸರಳ ಉಡುಪಿನ ಕಾರಣಕ್ಕೆ ಸುಧಾಮೂರ್ತಿಗೆ ಹೀಗಂದ್ರಾ ಏರ್‌ಪೋರ್ಟ್ ಅಧಿಕಾರಿಗಳು!

ಸಾರಾಂಶ

ಸುಧಾಮೂರ್ತಿ ಅವರು ತಮ್ಮ ಇತ್ತೀಚಿನ ಅನುಭವವೊಂದನ್ನು ಹೇಳಿಕೊಂಡಿದ್ದಾರೆ. ಬ್ಯುಸಿನೆಸ್‌ ಕ್ಲಾಸಿನ ಕ್ಯೂನಲ್ಲಿದ್ದ ಅವರನ್ನು ಏರ್‌ಪೋರ್ಟ್ ಅಧಿಕಾರಿಗಳು ಎಕಾನಮಿ ಕ್ಲಾಸ್‌ ಕ್ಯೂಗೆ ಕಳಿಸಿದ್ರಂತೆ. ಕಾರಣ ಏನು ಗೊತ್ತಾ?

ಜಾಗತಿಕ ಮಟ್ಟದಲ್ಲಿ ಇನ್‌ಫೋಸಿಸ್‌ ಮಾಡಿರುವ ಹೆಸರು ಬಹಳ ದೊಡ್ಡದು. ಐಟಿ ಕ್ಷೇತ್ರದಲ್ಲಿ ವಿಶ್ವಕ್ಕೆ ಮಾದರಿಯಾದ ಈ ಸಂಸ್ಥೆಯ ಹಿಂದಿನ ದೈತ್ಯ ಶಕ್ತಿ ಸುಧಾಮೂರ್ತಿ. ಪತಿ ಇನ್‌ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗೆ ಬೆನ್ನುಲುಬಾಗಿ ನಿಂತು ಇನ್‌ಫೋಸಿಸ್‌ ಬೆಳವಣಿಗೆಗೆ ಕಾರಣವಾದವರು. ಕಂಪನಿ ಒಂದು ಹಂತಕ್ಕೆ ಬೆಳೆದ ಬಳಿಕ ಅದಕ್ಕೆ ಸಂಬಂಧಿಸಿದ ವಿಚಾರಗಳಿಂದ ಹೊರಬಂದರು. ಸಮಾಜಸೇವೆಗಳಲ್ಲಿ ಬ್ಯುಸಿ ಆದರು. ಸುಧಾಮೂರ್ತಿ ದೇಶದ ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ. ಅನೇಕ ವಿದ್ಯಾಸಂಸ್ಥೆಗಳಿಗೆ ನೆರವಾಗಿದ್ದಾರೆ. ಅವರ ಒಳ್ಳೆಯ ಕೆಲಸ ಕಂಡು ಬಹಳ ಮಂದಿ ಅವರಿಂದ ಪ್ರೇರಿತರಾಗಿದ್ದಾರೆ. ಅವರ ಅಳಿಯ ಬ್ರಿಟನ್‌ನ ಪ್ರಧಾನಿ ಆಗಿರೋದು ಇದೀಗ ಸುಧಾಮೂರ್ತಿ ಅವರ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.

ಇಷ್ಟೆಲ್ಲ ಕೆಲಸ ಮಾಡಿದರೂ, ಹಣದಲ್ಲಿ, ಗುಣದಲ್ಲಿ ಬಲು ಶ್ರೀಮಂತರಾಗಿದ್ದರೂ ಸುಧಾಮೂರ್ತಿ ಅವರು ಇತ್ತೀಚೆಗೆ ಒಂದು ಫಚೀತಿಗೆ ಸಿಲುಕಿಕೊಂಡಿದ್ದನ್ನು ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಸುಧಾಮೂರ್ತಿ ಅವರ ಮಾತುಗಳು ಸದಾ ವೈರಲ್‌ ಆಗುತ್ತಲೇ ಇರುತ್ತವೆ. ಮನಸ್ಸು ವಿಕಸಿಸುವ ಹಾಗೆ ವ್ಯಕ್ತಿತ್ವ ವಿಕಸನದ ಮಾತುಗಳನ್ನು ಅವರು ಆಡುತ್ತಿರುತ್ತಾರೆ. ಇತ್ತೀಚೆಗೆ ಹೀಗೇ ಮಾತಾಡುವಾಗ ಅವರು ಒಂದು ಸಂಗತಿಯನ್ನು ಹೇಳಿದರು. ನಮ್ಮ ಉಡುಗೆ ತೊಡುಗೆಯನ್ನು ನೋಡಿ ಜನ ನಮ್ಮ ಆರ್ಥಿಕತೆಯನ್ನು ಹೇಗೆ ಜಡ್ಜ್ ಮಾಡುತ್ತಾರೆ ಅನ್ನೋ ಸಂಗತಿ.

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ, ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳಲು ಇಲ್ಲಿವೆ ಟಿಪ್ಸ್

'ನಮ್ಮಲ್ಲಿ ಒಂದು ಮನಸ್ಥಿತಿ ಇದೆ. ನಮ್ಮ ಬಟ್ಟೆ ನೋಡಿ ನಮ್ಮ ಆರ್ಥಿಕತೆಯನ್ನು, ನಮ್ಮ ಜ್ಞಾನವನ್ನು(Knowladge) ಅಳೆಯೋದು. ನಾನು ಇತ್ತೀಚೆಗೆ ಎಲ್ಲಿಗೋ ಹೋಗಬೇಕಿತ್ತು. ಏರ್‌ಪೋರ್ಟ್‌ನಲ್ಲಿದ್ದೆ. ಬ್ಯುಸಿನೆಸ್‌ ಕ್ಲಾಸಿನ ಕ್ಯೂನಲ್ಲಿ ನಿಂತಿದ್ದೆ. ಏರ್‌ಪೋರ್ಟ್ ನ ಅಧಿಕಾರಿಗಳು ನನ್ನ ಕಡೆ ಅನುಮಾನದಿಂದ ನೋಡಿದರು. ನಮ್ಮ ಜನರ ಮನಸ್ಥಿತಿ ಹೇಗೆ ಅಂದರೆ ಇತರರ ಆರ್ಥಿಕತೆಯನ್ನು, ಜ್ಞಾನವನ್ನು ಅವರ ಉಡುಗೆಗಳಿಂದ ಅಳೆಯುತ್ತಾರೆ. ಹೆಣ್ಣುಮಗಳೊಬ್ಬಳು ಸೆಲ್ವಾರ್ ಕಮೀಜ್ ತೊಟ್ಟರೆ ಅಥವಾ ನಾರ್ಮಲ್ ಸೀರೆಯುಟ್ಟು ಕೊಂಚ ಸಾಂಪ್ರದಾಯಿಕವಾಗಿ ಬಂದರೆ ಆಕೆಯೊಬ್ಬಳು ಕೆಳಮಧ್ಯಮ ವರ್ಗದ ಇಂಗ್ಲೀಷ್ ಬರದ ಹೆಚ್ಚೇನೂ ಓದಿರದವಳು ಅಂದುಕೊಳ್ಳುತ್ತಾರೆ. ನನಗೆ ಹೀಗೇ ಆಯ್ತು. ನನ್ನ ಬಟ್ಟೆ ನೋಡಿದ ಏರ್‌ಪೋರ್ಟ್ ಅಧಿಕಾರಿಗಳು ನಾನೆಲ್ಲೋ ತಪ್ಪಿ ಬ್ಯುಸಿನೆಸ್ ಕ್ಲಾಸ್(Business class) ಕ್ಯೂನಲ್ಲಿ ನಿಂತಿದ್ದೇನೆ. ನನಗೆ ಅಲ್ಲಿ ಮಾತಾಡೋದಕ್ಕೆ ಇಂಗ್ಲೀಷ್ ಬರೋದಿಲ್ಲ ಅಂತೆಲ್ಲ ಅಂದುಕೊಂಡು, ಎಕಾನಮಿ ಕ್ಯೂ ಕಡೆಗೆ ಹೋಗಲು ಸೂಚಿಸಿದರು.

ಇದು ನನ್ನೊಬ್ಬಳ ಅನುಭವ ಅಲ್ಲ. ಹಲವರಿಗೆ ಇಂಥಾ ಅನುಭವಗಳಾಗಿವೆ. ತಮ್ಮ ಬಟ್ಟೆಯಿಂದ ತಮ್ಮ ವ್ಯಕ್ತಿತ್ವವನ್ನು ಇತರರು ಅಳೆಯೋದು ಅವರ ಗಮನಕ್ಕೂ ಬಂದಿರುತ್ತೆ. ಹಾಗಂತ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿರುತ್ತಾರೆ. ನಾನು ಕಂಡ ಹಾಗೆ ಎಷ್ಟೋ ಜನ ಸಾಧಕರು ಮೇಲ್ನೋಟಕ್ಕೆ ಬಹಳ ಸರಳವಾಗಿರುತ್ತಾರೆ. ಆದರೆ ಅವರದು ಮೇರು ವ್ಯಕ್ತಿತ್ವವಾಗಿರುತ್ತದೆ. ಅವರನ್ನು ತಪ್ಪಾಗಿ ಜಡ್ಜ್(Judge) ಮಾಡಿದ್ದಕ್ಕೆ ಅವರೇನೂ ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ಹಾಗೆ ಜಡ್ಜ್ ಮಾಡಿರುವವರು ಮುಜುಗರಕ್ಕೆ ಸಿಲುಕಬೇಕಾಗುತ್ತದೆ. ನಾನು ಎಲ್ಲರಿಗೂ ಹೇಳೋದು, ಯಾರನ್ನೂ ಜಡ್ಜ್ ಮಾಡೋಕೆ ಹೋಗಬೇಡಿ. ಪೂರ್ವಾಗ್ರಹವಿಲ್ಲದೇ ನಾವು ಜನರ ಜೊತೆ ಬೆರೆತರೆ ನಮಗೇ ಉತ್ತಮ' ಹೀಗನ್ನೋದು ಸುಧಾಮೂರ್ತಿ ಮಾತು.

Relationship Tips : 40 ವರ್ಷವಾದ್ಮೇಲೆ ಮದುವೆಯಾದ ಫರಾ ಖಾನ್ ಅನುಭವಿಸಿದ ನೋವು ನಿಮ್ಮನ್ನೂ ಕಾಡ್ಬಹುದು..

ಸುಧಾಮೂರ್ತಿ ಅವರ ಎಷ್ಟೊಂದು ಮಾತುಗಳು ಸಮಾಜದಲ್ಲಿ ಬದಲಾವಣೆ ತರುವಂತಿರುತ್ತದೆ. ಅವರು ಸಂಬಂಧಗಳ ಬಗ್ಗೆ ಸೊಗಸಾಗಿ ಮಾತಾಡ್ತಾರೆ. ವಯಸ್ಸಾದ ಪೋಷಕರ ಬಿಹೇವಿಯರ್ ಹೇಗಿರಬೇಕು ಅನ್ನೋದರ ಬಗ್ಗೆ ಬಹಳ ಸೂಕ್ಷ್ಮವಾಗಿ ಮಾತಾಡ್ತಾರೆ. ಜೈಪುರ್‌ನಲ್ಲಿ ಸಾಹಿತ್ಯೋತ್ಸವ ನಡೆದಾಗ ಸಾಮಾನ್ಯರಿಗಿಂತ ಸಾಮಾನ್ಯರಂತೆ ನೆಲದ ಮೇಲೆ ಕೂತು ಶಶಿ ತರೂರ್‌ ಮಾತಿಗೆ ಕಿವಿಯಾಗಿದ್ದರು. ತಮ್ಮ ಮಾತಿನಲ್ಲಿ 'ತಾನು ನ್ಯಾಶನಲ್‌ ನಾನಿ' ಅಂತ ನಗೆ ಚಟಾಕಿ ಹಾರಿಸಿದ್ದರು. ಅದರ ಸೆಶನ್‌ ಕಿಕ್ಕಿರಿದು ತುಂಬಿತ್ತು. ಬಹಳ ಜನ ಅವರ ಸ್ಫೂರ್ತಿಯ ಮಾತುಗಳಿಗೆ ಕಿವಿಯಾಗಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?