ರೊಮ್ಯಾನ್ಸ್ ಆದ್ಮೇಲೆ? ರಿಯಲ್ ಲೈಫ್ ಸತ್ಯಗಳ ಬಗ್ಗೆ ಸುಧಾಮೂರ್ತಿ ಮಾತು!

By Suvarna News  |  First Published Jan 24, 2023, 12:52 PM IST

ಲೈಫು.. ಅದರಲ್ಲೂ ಗಂಡು ಹೆಣ್ಣು ಒಂದಾದ ನಂತರದ ಬದುಕು ಹೇಗಿರುತ್ತೆ? ಹೇಗಾಗಿ ಹೋಗುತ್ತೆ? ಮತ್ತೆ ಅದು ಹೇಗಿರಬೇಕು ಅನ್ನೋದರ ಬಗ್ಗೆ ಸುಧಾಮೂರ್ತಿ ಅದ್ಭುತವಾಗಿ ಹೇಳ್ತಾರೆ.


'ಡೇಟಿಂಗ್ ಮಾಡ್ತೀರಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲ ಪಾರ್ಟನರ್‌ ಜೊತೆ ಕಳೀತೀರಿ.. ಆಹಾ, ಇವ್ನ ಜೊತೆಗಿದ್ರೆ ಲೈಫು ಅದೆಷ್ಟು ಚೆನ್ನಾಗಿರುತ್ತೆ ಅಂತ ಕನಸು ಕಾಣ್ತೀರಿ. ಆದರೆ ವಾಸ್ತವ ಅದಲ್ಲ.' ಹೀಗೆ ಗಂಡು ಹೆಣ್ಣಿನ ನಡುವಿನ ಸಂಬಂಧಗಳ ಬಗ್ಗೆ ತುಂಬ ಇಂಟರೆಸ್ಟಿಂಗ್‌ ಆಗಿ ಮಾತಾಡ್ತಾರೆ ಸುಧಾಮೂರ್ತಿ. ಇತ್ತೀಚೆಗೆ ಜೈಪುರ ಸಾಹಿತ್ಯೋತ್ಸವದಲ್ಲೂ ಅವರ ಮಾತು ಬಹಳ ಮಂದಿಯ ಗಮನ ಸೆಳೆಯಿತು. ಎಲ್ಲರೂ ಬೌದ್ಧಿಕತೆ ಬಗ್ಗೆ ಊದ್ದುದ್ದ ಭಾಷಣ ಮಾಡಿದರೆ ಈ ಅಮ್ಮ ತಾನೀಗ ನ್ಯಾಶನಲ್ ನಾನಿ ಅಂತ ಜೋರಾಗಿ ನಗುತ್ತಾ ಹೇಳಿದರು. 'ಇವರು ನ್ಯಾಶನಲ್ ಅಲ್ಲ, ಇಂಟರ್‌ನ್ಯಾಶನಲ್‌ ನಾನಿ ಈಗ..' ಅಂತ ನಿರೂಪಕಿ ತಿದ್ದಿದರು. ಅಲ್ಲೊಂದು ನಗೆಬುಗ್ಗೆ ಆವರಿಸಿತು. ಅದಕ್ಕೂ ಮುನ್ನ ನೆಲದ ಮೇಲೆ ಕೂತು ಶಶಿ ತರೂರ್ ಮಾತಿಗೆ ಇವರು ಕಿವಿಯಾದದ್ದೂ ಸಖತ್ ವೈರಲ್ ಆಯ್ತು.

ಇನ್‌ಫೋಸಿಸ್‌ನಂಥಾ ದೈತ್ಯ ಸಾಫ್ಟ್‌ವೇರ್‌ ಕಂಪನಿಗೆ ಬೆನ್ನುಲುಬಾಗಿ ನಿಂತು ಜಗತ್ತಿಗೆ ಇಂಡಿಯಾದ ತಾಕತ್ತು ಪರಿಚಯಿಸಿದವರು ಸುಧಾಮೂರ್ತಿ. ಅಫ್‌ಕೋರ್ಸ್ ಅವರು ಕಂಪನಿಗೆ ಡೈರೆಕ್ಟ್ ಆಗಿ ದುಡೀಲಿಲ್ಲವೇನೋ, ಆದರೆ ಅವರ ಜಾಗದಲ್ಲಿ ಅವರಿಲ್ಲದಿದ್ದರೆ ಇವತ್ತು ನಾನು ಇನ್‌ಫೋಸಿಸ್‌ ಅನ್ನು ಕಾಣೋದು ಸಾಧ್ಯವಿರುತ್ತಿರಲಿಲ್ಲವೇನೋ. ಅವರ ಮಾತು, ಪ್ರೇರಣೆ ಇನ್‌ಫೋಸಿಸ್‌ಅನ್ನೇ ಕಟ್ಟಲು, ಬೆಳೆಸಲು ಸಹಾಯ ಮಾಡಿತು ಅಂದರೆ ಅವರ ಮಾತು ಅದೆಷ್ಟು ಇನ್‌ಸ್ಪೈರಿಂಗ್ ಆಗಿರಬಹುದು ಅಲ್ವಾ?

Tap to resize

Latest Videos

ಈಗ ಸೋಷಿಯಲ್ ಮೀಡಿಯಾದಲ್ಲಿ ಸುಧಾಮೂರ್ತಿ ಅವರ ಮಾತುಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಹಾಗೆ ನೋಡಿದರೆ ಸುಧಾಮೂರ್ತಿ ಅವರಿಗೀಗ ಎಪ್ಪತ್ತೆರಡು ವರ್ಷ. ನಮ್ಮನೆಲಿರುವ ಎಪ್ಪತ್ತೆರಡು ವರ್ಷದ ಹಿರಿಯರ ಯೋಚನಾ ಶೈಲಿಗೂ ಇವರ ಯೋಚನಾ ವಿಧಾನಕ್ಕೂ ಬಹಳ ವ್ಯತ್ಯಾಸ ಇದೆ. ಇವರು ಈ ಕಾಲದವರ ಶೂ ಒಳಗೆ ಕಾಲು ತೂರಿಸಿ ನಿಂತು ತನ್ನ ಅನುಭವದ ಆಧಾರದಲ್ಲಿ ಸಲಹೆ, ಎಚ್ಚರಿಕೆ ನೀಡುತ್ತಾರೆ. ಸೋ, ಈ ಕಾಲದ ಹುಡುಗ ಹುಡುಗಿಯರಿಂದ ಈ ಕಾಲದ ಅಜ್ಜ ಅಜ್ಜಿಯರವರೆಗೆ ಎಲ್ಲರಿಗೂ ಇವರ ಮಾತು ಇಷ್ಟವಾಗುತ್ತೆ.

ನೋಟು ಎಣಿಸಲು ಪೇಚಾಡಿದ ವರ, ಇವನೆಂಥಾ ಬೆಪ್ಪ ಅಂತ ಮದ್ವೆ ಕ್ಯಾನ್ಸಲ್ ಮಾಡಿದ ವಧು

ಅಂದಹಾಗೆ ಇವರು ಇದೀಗ ಹುಡುಗ ಹುಡುಗಿ ರಿಲೇಶನ್ ಶಿಪ್‌ ಬಗ್ಗೆ ಅದ್ಭುತವಾದ ಮಾತು ಹೇಳಿದ್ದಾರೆ. 'ಡೇಟಿಂಗ್ ಮಾಡುವಾಗ ದಿನಕ್ಕೆ ಎರಡು ಗಂಟೆ ಪರಸ್ಪರ ಮೀಟ್ ಆಗ್ತೀವಿ. ಬರೀ ಇಷ್ಟೇ ಟೈಮ್‌ ಸಿಗೋದು, ಅಷ್ಟೂ ಹೊತ್ತೂ ಖುಷಿ ಆಗಿರಬೇಕು ಅಂದುಕೊಂಡಿರ್ತೀವಿ. ನಮ್ಮ ಬೆಸ್ಟ್‌ ಅನ್ನನ್ನಷ್ಟೇ ಅಲ್ಲಿ ಕಾಣಿಸ್ತೀವಿ. ಮತ್ತು ಎಲ್ಲವೂ ಎಲ್ಲಾ ಟೈಮಲ್ಲೂ ಹಾಗೇ ಇರುತ್ತೆ ಅಂದ್ಕೊಳ್ತೀವಿ. ಆದರೆ ವಾಸ್ತವ ಇದಲ್ಲ. ಈ ಡೇಟಿಂಗ್‌, ಲವ್‌ ಮಾಡ್ತಾ ಒಂದಿನ ಮದುವೆ ಆಗುತ್ತೆ. ಕೇವಲ ಎರಡು ಗಂಟೆ ಕಾಲದ ಇದ್ದ ಹಾಗೆ ವಾರದ ಏಳೂ ದಿನ ಇಪ್ಪತ್ತನಾಲ್ಕು ಗಂಟೆ ಇರೋದಿಕ್ಕಾಗಲ್ವಲ್ಲ. ಆಗ ಲೈಫು ಚೇಂಜ್‌ ಆಗುತ್ತೆ' ಅಂತಾರೆ ಸುಧಾಮೂರ್ತಿ.

'ಮೊದಲು ಕನಸಿನ ಹಾಗೆ ಚಂದ ಕಂಡಿದ್ದು ಈಗ ವಾಸ್ತವದಲ್ಲಿ ಬೇರೆ ಥರ ಕಾಣುತ್ತೆ. ಅದಕ್ಕೆ ನಾವು ಮಾಡಬೇಕಾದ ಮೊದಲ ಕೆಲಸ (Work) ಜೊತೆಗಿರುವವರನ್ನು ಸ್ವೀಕರಿಸುವಾಗ ಅವರನ್ನು ಇಡಿಯಾಗಿ ಅವರ ನೆಗೆಟಿವ್‌ಗಳ ಸಮೇತ ಒಪ್ಪಿಕೊಳ್ಳೋದು. ಆ ನೆಗೆಟಿವ್‌ ಅಂಶಗಳ ಜೊತೆಗೇ ಅವರೊಂದಿಗೆ ಬದುಕೋದು. ಆಗ ಲೈಫು ಸಹನೀಯವಾಗುತ್ತೆ. ವಾಸ್ತವವೂ ಸೊಗಸಾಗಿಯೇ ಕಾಣುತ್ತೆ' ಅಂತಾರೆ ಸುಧಾಮೂರ್ತಿ.

ಬದುಕಿಲ್ಲ ಎಂದು ಭಾವಿಸಿದ್ದ ಅಪ್ಪನನ್ನು ಹುಡುಕಿದ ಮಗಳು: ಬೇರೆ ದೇಶದಲ್ಲಿದ್ರೂ ಅಪ್ಪ ಮರಳಿ ಸಿಕ್ಕ ಕತೆ

ಅವರ ಈ ಮಾತುಗಳಿಗೆ ಎಲ್ಲ ವಯೋಮಾನದವರೂ ಹೌದೌದು ಅಂತ ತಲೆಯಾಡಿಸಿದ್ದಾರೆ. ಎಷ್ಟೋ ಮಂದಿ ತಮ್ಮ ಸಮಸ್ಯೆಗಳನ್ನು ಶೇರ್(Share) ಮಾಡಿಕೊಂಡಿದ್ದಾರೆ. ಟಾಕ್ಸಿಕ್ ರಿಲೇಶನ್‌ಶಿಪ್‌ ಬಗ್ಗೆಯೂ ಇಲ್ಲಿ ಚರ್ಚೆಗಳು ನಡೆದಿವೆ. ತಮ್ಮ ಸಂಬಂಧ ಸುಧಾರಿಸೋದು ಹೇಗೆ ಅಂತ ಅನೇಕ ಜನ ಸೋಷಿಯಲ್‌ ಮೀಡಿಯಾ(Social media) ಪ್ಲಾಟ್‌ಫಾರ್ಮ್ ನಲ್ಲಿ ಸುಧಾಮೂರ್ತಿ ಅವರ ಬಳಿ ಸಲಹೆ ಕೇಳ್ತಿದ್ದಾರೆ. ಎಷ್ಟು ಪವರ್‌ಫುಲ್‌ ಅಲ್ವಾ ಈ ನಾನಿ ಮಾತು..

click me!