ಹೆಣ್ಣು ಭ್ರೂಣ ಹತ್ಯೆ ತಡೆಗೆ ಗರ್ಭಿಣಿ ನೋಂದಣಿ ಕಡ್ಡಾಯಗೊಳಿಸಲು ಒತ್ತಾಯ

By Ravi Janekal  |  First Published Jan 23, 2023, 7:34 PM IST

ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಗರ್ಭಿಣಿ ನೋಂದಾವಣಿ ಕಡ್ಡಾಯಗೊಳಿಸಿ ಆರುಷಿ ಮೈ ಡಾಟರ್ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಫೆಬ್ರವರಿ 20 ರಂದು ಕನ್ಯಾಕುಮಾರಿಯಿಂದ ಪಾದಯಾತ್ರೆ ಮೂಲಕ ದೆಹಲಿಗೆ ತೆರಳಿ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆಯ ರೂವಾರಿ ಸಿ.ಎಂ ಜಕ್ಕಾಳಿ ಹೇಳಿದರು.


ವರದಿ : ವರದರಾಜ್ 

ದಾವಣಗೆರೆ (ಜ 23) : ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಗರ್ಭಿಣಿ ನೋಂದಾವಣಿ ಕಡ್ಡಾಯಗೊಳಿಸಿ ಆರುಷಿ ಮೈ ಡಾಟರ್ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಫೆಬ್ರವರಿ 20 ರಂದು ಕನ್ಯಾಕುಮಾರಿಯಿಂದ ಪಾದಯಾತ್ರೆ ಮೂಲಕ ದೆಹಲಿಗೆ ತೆರಳಿ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆಯ ರೂವಾರಿ ಸಿ.ಎಂ ಜಕ್ಕಾಳಿ ಹೇಳಿದರು.

Tap to resize

Latest Videos

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ‌ ಯೋಜನೆ  ಜಾರಿಗೆ ಒತ್ತಾಯಿಸಿ ಸುಮಾರು 25  ಪುಟಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ‌ ರಾಜ್ಯದ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದರು.2014 ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ಕ್ರಮವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡಲಾಗಿದ್ದು, ಇಂದಿನವರೆಗೂ ಮನವಿಯನ್ನು ಮಾಡುತ್ತಾ ಬಂದಿದ್ದೇನೆ. 2023 ಕ್ಕೆ 10 ನೇ ಬಾರಿಗೆ ಮಾಡುತ್ತಿರುವ ಮನವಿಯನ್ನು ಕನ್ಯಾಕುಮಾರಿಯಿಂದ ದೆಹಲಿವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ 15 ರಾಜ್ಯಗಳ ಮೂಲಕ ಸುಮಾರು 4000 ಕಿ.ಮೀ. ಪಾದಯಾತ್ರೆಯೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ನೀಡಲಾಗುವುದು ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀ ಸಬ​ಲೀ​ಕ​ರ​ಣಕ್ಕೆ ಸರ್ಕಾ​ರದ ಯೋಜ​ನೆ​ಗ​ಳು

ಭ್ರೂಣ ಹತ್ಯೆ ನಿಯಂತ್ರಣ(Control of Foeticide) ಮಾಡಲು, ಸರ್ಕಾರದಲ್ಲಿ ಪಿ.ಸಿ. & ಪಿ.ಎನ್.ಡಿ.ಟಿ.ಕಾಯ್ದೆ ಜಾರಿಯಲ್ಲಿದ್ದು ಲಿಂಗಾನುಪಾತವು 2001, 2011 ಕ್ಕೆ ಕ್ರಮವಾಗಿ 940 : 916 ಇದ್ದು  ಇಂತಹ ಪರಿಸ್ಥಿತಿಯಲ್ಲಿ ದೇಶವಿರುವಾಗ 2022, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ನ್ಯಾಯವನ್ನು ಕೋರಿ ಬಂದತಹ ನೋಂದ ಮಹಿಳೆಯ ವಿಷಯವನ್ನು ಆಲಿಸಿ “ಗರ್ಭಪಾತ ಸಂಪೂರ್ಣ ಗರ್ಭಿಣಿ ಮಹಿಳೆಯ ಆಯ್ಕೆ” ವಿವಾಹಿತಳೊ – ಅವಿವಾಹಿತಳೊ ಎನ್ನುವುದನ್ನು ನೋಡುವಂತಿಲ್ಲ, ಅವಳಿಗೆ ಬೇಕಿದ್ದರೆ ಬೇಕು, ಬೇಡವಾಗಿದ್ದರೆ ಬೇಡ. 26 ವಾರಗಳೊಳಗೆ ಗರ್ಭಪಾತವನ್ನು ಮಾಡಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಈ ಆದೇಶ ಅನ್ವಯ ಪಿ.ಸಿ. & ಪಿ.ಎನ್.ಡಿ.ಟಿ, ಕಾಯ್ದೆ ಅಸ್ತಿತ್ವವನ್ನು ಕಳೆದುಕೊಂಡತಾಗಿದೆ.

ಗರ್ಭಿಣಿಯರಿಗೂ ಮೊಟ್ಟೆ ಒಳ್ಳೇಯದು, ಇತಿ ಮಿತಿಯಲ್ಲಿರುವಂತೆ ಇರಲಿ ಎಚ್ಚರ!

1000 ಗಂಡುಮಕ್ಕಳಿಗೆ 916 ಹೆಣ್ಣು ಮಕ್ಕಳಿದ್ದು, ಲಿಂಗಾನುಪಾತದಿಂದ ಕೊರತೆಯಲ್ಲಿ ಇರುವ 84 ಮಕ್ಕಳು 100 ಕೋಟಿಗೆ 8.4 ಕೋಟಿ ಮತ್ತು ಪ್ರಸ್ತುತ ದೇಶ ಜನ ಸಂಖ್ಯೆ 140 ಕೋಟಿಗೆ 11.76 ಕೋಟಿ ಲಿಂಗಾನುಪಾತವಿರುತ್ತದೆ. ಪ್ರಸ್ತುತ ಮತ್ತು ಭವಿಷ್ಯದಲ್ಲಿ ಲಿಂಗಾನುಪಾತದ ನ್ಯೂನತೆಯಿಂದ ಗ್ರಾಮೀಣ ಮಟ್ಟದ ಕುಟುಂಬಗಳು, ಯುವಜನತೆ ತನ್ಮೂಲಕ ರಾಷ್ಟ್ರವು ದೊಡ್ಡಮಟ್ಟದ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಲಿಂಗಾಪಾತ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಿದ್ಧಪಡಿಸಿರುವ ಆರುಷಿ ಯೋಜನೆಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ವರದಿಯನ್ನು ನೀಡುವಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಇದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಗರ್ಭಿಣಿ ನೋಂದಾವಣಿ ಕಡ್ಡಾಯಗೊಳಿ ಆರುಷಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸಂಸತ್ತಿನ ಅಧಿವೇಶದಲ್ಲಿ ವಿಷಯವನ್ನು ಮಂಡಿಸುವಂತೆ ರಾಜ್ಯದ ಪ್ರತಿಯೊಬ್ಬ ಕೇಂದ್ರ ಸಚಿವರು, ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರುಗಳಿಗೆ ಕಳುಹಿಸಲಾಗಿದೆ ಎಂದರು ಸುದ್ದಿಗೋಷ್ಠಿಯಲ್ಲಿ ಮಂಜನಾಯ್ಕ ಹನುಮಸಾಗರ, ರವಿಶಂಕರ್ ಬಿ.ಜಿ, ಬೆನಕನಹಳ್ಳಿ ಇದ್ದರು.

click me!