ಸವಾಲಿನ ಜೊತೆ ಜೀವನ ನಡೆಸ್ತಾಳೆ Single Mother

By Suvarna NewsFirst Published Jun 21, 2022, 3:09 PM IST
Highlights

ಸಿಂಗಲ್ ಮದರ್ ಹೆಸರು ಕೇಳ್ತಿದ್ರೆ ಭಾರತೀಯರ ಮುಖ ಗಂಟಾಗುತ್ತದೆ. ಮಕ್ಕಳ ಜೊತೆ ಒಂಟಿಯಾಗಿ ವಾಸಿಸುತ್ತಿದ್ದಾಳೆ ಎಂಬುದು ಗೊತ್ತಾದ್ರೆ ಆಕೆ ನೋಡುವ ದೃಷ್ಟಿಯೇ ಬದಲಾಗುತ್ತದೆ. ಆದ್ರೆ ಸಿಂಗಲ್ ಮದರ್ ಆಗಿ ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಮಾತಲ್ಲ. 
 

ಮಕ್ಕಳು (Children) ಎಷ್ಟೇ ದೊಡ್ಡವರಾಗಿರಲಿ, ಅವರ ಪಾಲಕರಿಗೆ ಅವರು ಮಕ್ಕಳೇ ಆಗಿರ್ತಾರೆ. ಹಾಗೆ ಪಾಲಕರ ಸಹಾಯ ಮಕ್ಕಳಿಗೆ ಸದಾ ಬೇಕಿರುತ್ತದೆ. ಮಕ್ಕಳಿಗೆ ತಂದೆ ಕಲಿಸುವ ವಿಧಾನ ಬೇರೆಯಾದ್ರೆ ತಾಯಿ ಕಲಿಸುವ ವಿಷ್ಯಗಳು ಬೇರೆ. ಇದೇ ಕಾರಣಕ್ಕೆ ಮಕ್ಕಳು, ತಂದೆ- ತಾಯಿ ಇಬ್ಬರ ಜೊತೆಯೂ ಬೆಳೆಯಬೇಕೆನ್ನಲಾಗುತ್ತದೆ. ಆದ್ರೆ ಎಲ್ಲ ಸಂದರ್ಭಗಳು ಹಾಗಿರೋದಿಲ್ಲ. ಅನೇಕ ಬಾರಿ ತಾಯಿಯೊಬ್ಬಳ ಮೇಲೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಇರುತ್ತದೆ. ಸಿಂಗಲ್ ಮದರ್ (Single Mother) ಕೆಲಸ ಎಂದಿಗೂ ಸುಲಭವಲ್ಲ. ತಾಯಿ ಜೊತೆ ತಂದೆ ಪಾತ್ರವನ್ನು ಆಕೆ ನಿಭಾಯಿಸಬೇಕಾಗುತ್ತದೆ. ಜೀವನದಲ್ಲಿ ಬರುವ ಅನೇಕ ಸವಾಲುಗಳನ್ನು (challenge) ಎದುರಿಸಿ, ಧೈರ್ಯದಿಂದ ಮುನ್ನುಗ್ಗಬೇಕಾಗುತ್ತದೆ. ಕುಟುಂಬದವರು, ಸಂಬಂಧಿಕರ ಮಾತುಗಳು ಅವರ ಮನಸ್ಸು ಚುಚ್ಚುತ್ತವೆ. ಮಕ್ಕಳ ಶಿಕ್ಷಣದಿಂದ ಹಿಡಿದು ಅವರ ಮದುವೆಯವರೆಗೆ ಎಲ್ಲವನ್ನೂ ಒಬ್ಬರೇ ನೋಡಿಕೊಳ್ಳಬೇಕು. ಎಲ್ಲವನ್ನು ಹೆಗಲ ಮೇಲೆ ಹೊತ್ತು ಸಾಗಿದ್ರೂ ಸಮಾಜ, ಸಿಂಗಲ್ ಮದರ್ ಗೆ ಮಾನ್ಯತೆ ನೀಡೋದಿಲ್ಲ. ಅದು ಅವರನ್ನು ನೋಡುವ ದೃಷ್ಟಿಯೇ ಭಿನ್ನ. ಇತ್ತೀಚಿನ ದಿನಗಳಲ್ಲಿ ಸಮಾಜ ಬದಲಾಗ್ತಿದೆ. ಮಕ್ಕಳ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಕಾಣ್ತಿದೆ. ಮಕ್ಕಳ ಗೆಜೆಟ್ ಬಳಕೆ ಹೆಚ್ಚಾಗಿದೆ. ಮಕ್ಕಳನ್ನು ದಾರಿ ತಪ್ಪಿಸಲು ಇದು ಕಾರಣವಾಗಿದೆ. ಇದೇ ಕಾರಣಕ್ಕೆ ಸಿಂಗಲ್ ಮದರ್ಸ್ ಜೀವನವು ಮತ್ತಷ್ಟು ಕಷ್ಟಕರವಾಗಿವಾಗ್ತಿದೆ. ಮಕ್ಕಳನ್ನು ಬೆಳೆಸುವ ಬಗ್ಗೆ ಅವರು ಹೆಚ್ಚು ಚಿಂತಿತರಾಗ್ತಿದ್ದಾರೆ. ಸಿಂಗಲ್ ಮದರ್ಸ್ ಎದುರಿಸುತ್ತಿರುವ ಕೆಲ ಸಮಸ್ಯೆಗಳ ಬಗ್ಗೆ ನಾವಿಂದು ಹೇಳ್ತೇವೆ. 

ಭದ್ರತೆಯ ಕೊರತೆ :  ಒಂಟಿಯಾಗಿ ಮಕ್ಕಳನ್ನು ಬೆಳೆಸುವ ತಾಯಿಗೆ ಮಕ್ಕಳ ಭದ್ರತೆ ದೊಡ್ಡ ಸವಾಲಾಗಿದೆ. ಇಂದಿನ ಕಾಲಘಟ್ಟದಲ್ಲಿ ಆರ್ಥಿಕ ಸಮಸ್ಯೆ ಕೂಡ ಕಾಡುತ್ತದೆ.  ಬರೀ ಸಂಪಾದನೆ ಮಾತ್ರವಲ್ಲ ಇದರ ಜೊತೆಗೆ ತಾಯಂದಿರುವ ಮಕ್ಕಳನ್ನೂ ಒಂಟಿಯಾಗಿ ನೋಡಿಕೊಳ್ಳಬೇಕು. ಒಂಟಿ ತಾಯಿ ಭಾವನಾತ್ಮಕವಾಗಿಯೂ ಸಾಕಷ್ಟು ದಣಿಯುತ್ತಾಳೆ. ಎಲ್ಲವನ್ನೂ ನಿಭಾಯಿಸುವುದು ಆಕೆಗೆ ಕಷ್ಟವಾಗುತ್ತದೆ.

Travel Tips : ಸೋಲೋ ಟ್ರಿಪ್ ಹೆಣ್ಮಕ್ಕಳೇ ಹುಷಾರು, ಈ ಬಗ್ಗೆ ಗೊತ್ತು ಮಾಡ್ಕೊಳ್ಳಿ!

ಹಣದ ಸಮಸ್ಯೆ : ದುಡಿಮೆ ಇಲ್ಲಿ ಅನಿವಾರ್ಯವಾಗುತ್ತದೆ. ಮಕ್ಕಳ ಓದು,ಹೊಟ್ಟೆ, ಬಟ್ಟೆ ಹೀಗೆ ಎಲ್ಲದಕ್ಕೂ ಹಣ ಹೊಂದಿಸಬೇಕು. ಹಗಲಿರುಳು ದುಡಿದ್ರೂ ಅನೇಕ ಬಾರಿ ಹಣ ಸಾಲುವುದಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡ್ಬೇಕು. ಮನೆಯಲ್ಲಿ ಆಕೆಯೊಬ್ಬಳೇ ದುಡಿಯುವ ಕಾರಣ, ಆಕೆ ಹಾಸಿಗೆ ಹಿಡಿದ್ರೆ ಮನೆ ಮಂದಿ ಉಪವಾಸವಿರಬೇಕಾಗುತ್ತದೆ.

ಟೀಕೆಗಳು : ಭಾರತದಲ್ಲಿ ಒಂಟಿ ತಾಯಂದಿರನ್ನು ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಪುರುಷರ ಫ್ಲರ್ಟಿಂಗ್‌, ಲೈಂಗಿಕ ಕಿರುಕುಳವನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಒಂಟಿ ತಾಯಿಯನ್ನು ದುರ್ಬಲ ಎಂದು ಪರಿಗಣಿಸುವ ಬದಲು ಆಕೆಯನ್ನು ಸಬಲಳನ್ನಾಗಿ ಮಾಡುವತ್ತ ಗಮನ ಹರಿಸಿದರೆ ಎಲ್ಲರಿಗೂ ಒಳ್ಳೆಯದು ಎನ್ನುತ್ತಾರೆ ಒಂಟಿ ತಾಯಂದಿರು. 

ಸಮಯದ ಅಭಾವ :  ಒಂಟಿ ತಾಯಂದಿರು ಒಂದೇ ಸಮಯದಲ್ಲಿ ಮನೆ-ಕೆಲಸ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟ. ಅವರಿಗೆ ಯಾವಾಗಲೂ ಸಮಯದ ಕೊರತೆ ಕಾಡುತ್ತದೆ. ಅವರು ಎಲ್ಲದಕ್ಕೂ ಸಮಯವನ್ನು ಸರಿಹೊಂದಿಸಬೇಕಾಗುತ್ತದೆ. ಮಕ್ಕಳನ್ನು ನೋಡಿಕೊಳ್ಳುವ ಕೌಶಲ್ಯ, ತಾಳ್ಮೆ ಮತ್ತು ತಿಳುವಳಿಕೆ ಈ ಎಲ್ಲವೂ ಮಹತ್ವ ಪಡೆಯುತ್ತದೆ. ಕೆಲವೊಮ್ಮೆ ತಮ್ಮ ಮಕ್ಕಳ ಕಷ್ಟ, ವಿಚಿತ್ರ ಪ್ರಶ್ನೆಗಳಿಗೂ ಉತ್ತರಿಸಬೇಕಾಗುತ್ತದೆ.  

Relation Tips: ಸಂಬಂಧದಲ್ಲಿ ಯಾವುದೆಲ್ಲ ಇರ್ಲೇಬಾರ್ದು?

ಮದುವೆಯಾಗಲು ಒತ್ತಡ : ಭಾರತದಲ್ಲಿ ಒಂಟಿ ತಾಯಂದಿರಿಗೆ ಮರುಮದುವೆಯಾಗುವಂತೆ ಸಮಾಜದ ಒತ್ತಡ ಯಾವಾಗಲೂ ಇರುತ್ತದೆ.    ಆದರೆ ಒಂಟಿ ತಾಯಿ ಮದುವೆಯಾದ ನಂತರ ಸೃಷ್ಟಿಯಾಗುವ ಕೌಟುಂಬಿಕ ಸಮಸ್ಯೆಯನ್ನು ಸಮಾಜ ನಿರ್ಲಕ್ಷಿಸುತ್ತದೆ. ಮತ್ತೆ ಮದುವೆಯಾಗುವುದು ದೊಡ್ಡ ಅಪಾಯ. ವ್ಯಕ್ತಿ ಮದುವೆಯಾಗ್ಬಹುದು, ಪತ್ನಿ ಸ್ಥಾನ ನೀಡ್ಬಹುದು. ಆದ್ರೆ ಬೇರೆಯವರ ಮಗುವಿಗೆ ತಂದೆಯಾಗಲು ಇಷ್ಟಪಡುವುದಿಲ್ಲ. ಇದ್ರಿಂದ ಇಬ್ಬರ ಮಧ್ಯೆ ಗಲಾಟೆ ಶುರುವಾಗುತ್ತದೆ. ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ. 
 

click me!