ಲಿಪ್‌ಸ್ಟಿಕ್ ವ್ಯಾಮೋಹವಿದ್ದರೆ ಈ ಸುದ್ದಿ ಓದಿ, ಹುಷಾರು!

By Suvarna News  |  First Published Jun 21, 2022, 1:16 PM IST

ಹೆಣ್ಣು ಮಕ್ಕಳು ಎಷ್ಟೇ ಪರ್ಫೆಕ್ಟ್ ಆಗಿ ಮೇಕ್ ಅಪ್ ಮಾಡಿಕೊಂಡಿದ್ದರೂ, ಲಿಪ್‍ಸ್ಟಿಕ್ ಹಂಚಿ ಕೊಂಡಿಲ್ಲ ಅಂದ್ರೆ ಅಪೂರ್ಣ ಅನ್ಸುತ್ತೆ. ಹಾಗಂಥ ಅದನ್ನು ವಿಪರೀತ ಹೆಚ್ಚಿಕೊಳ್ಳುತ್ತಿದ್ದರೆ ಹೊಟ್ಟೆಗೆ ಹೋಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೂ ಇರುತ್ತೆ.


ಸಾಮಾನ್ಯವಾಗಿ ಹೆಣ್ಣು ಮಕ್ಕಳು(Woman) ಮೇಕಪ್ ಜೊತೆಗೆ ತುಟಿಗೆ ಒಂದಷ್ಟು ರಾಶಿ ಲಿಪ್‌ಸ್ಟಿಕ್(Lipstick) ಹಚ್ಚಿಕೊಳ್ಳದೆ ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. ತಲೆ ಕಟ್ಟುವುದನ್ನು(Tieing Hair) ಬಿಟ್ಟಾರು ಆದರೆ ಲಿಪ್‌ಸ್ಟಿಕ್ ಮಾತ್ರ ಬಿಡುವ ಸೀನ್‌ಯೇ ಇಲ್ಲ. ಅದರಲ್ಲೂ ಇತ್ತೀಚೆಗೆ ಗಾಢ ಬಣ್ಣದ ಲಿಪ್‌ಸ್ಟಿಕ್(Dark Shade Lipstick) ಹೆಚ್ಚು ಚಾಲ್ತಿಯಲ್ಲಿದೆ. ಕೆಲವೊಂದು ಒಮ್ಮೆ ಹಚ್ಚಿದರೆ ದಿನವಿಡೀ ಒಂಚೂರು ಅಳಿಸದಂತೆ ಗೋಡೆಗೆ ಹಚ್ಚುವ ಲಪ್ಪದ ಹಾಗೆ ದಪ್ಪಗೆ ತುಟಿಯ ಮೇಲೆ ಕೂತಿರುತ್ತೆ. ಕೊನೆಗೆ ಬಲವಂತವಾಗಿ ನಾವೇ ಕೈಯಾರೆ ಅಳಿಸಬೇಕು. ಅತಿಯಾಗಿ ಲಿಪ್‌ಸ್ಟಿಕ್ ಹಚ್ಚುವುದರಿಂದ ಆರೋಗ್ಯದ(Health) ಮೇಲಾಗುವ ಪರಿಣಾಮ ಏನೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕೆಂಪು(Red), ಗುಲಾಬಿ(Pink), ನೇರಳೆ(Purple), ಕಪ್ಪು(Black) ಹೀಗೆ ನಾನಾ ರೀತಿಯ ಬಣ್ಣಗಳಲ್ಲಿ ಲಿಪ್‌ಸ್ಟಿಕ್ ಹಚ್ಚುವ ಹೆಣ್ಣು ಮಕ್ಕಳ ಸಂಖ್ಯೆ ದಿನ ನಿತ್ಯ ಹೆಚ್ಚಾಗುತ್ತಿದೆ. ಹೆಣ್ಣಿನ ಅಂದಕ್ಕೆ ಮತ್ತಷ್ಟು ಮೆರಗು ನೀಡುವುದು ಈ ಲಿಪ್‌ಸ್ಟಿಕ್ ಎಂದರೆ ತಪ್ಪಾಗಲಾರದು. ಲಿಪ್‌ಸ್ಟಿಕ್ ಇಲ್ಲದ ಮೇಕಪ್ ಅನ್‌ಕಂಪ್ಲೀಟ್(Uncompleted) ಎನ್ನುವವರು ಇದ್ದಾರೆ. ಆದರೆ ಅದರಿಂದ ಹಲವು ರೀತಿಯ ದುಷ್ಪರಿಣಾಮಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಲಿಪ್ ಗ್ಲೋಸ್(Lip Glosses), ಲಿಪ್ ಲೈನರ್‌ಗಳು(Lip Liner) ಕ್ಯಾಡ್ಮಿಯಂ(Cadmium), ಅಲ್ಯುಮಿನಿಯಂ(Aluminum), ಸೀಸ(Lead) ಮುಂತಾದ ಹಾನಿಕಾರಕ ಅಂಶಗಳನ್ನು ಹೊಂದಿರುತ್ತವೆ. ಲಿಪ್‌ಸ್ಟಿಕ್ ಅತಿಯಾಗಿ ಹಚ್ಚುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. 

100 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದೆ ಲಿಪ್​ಸ್ಟಿಕ್ ಗಿಡ, ಇದ್ರ ವಿಶೇಷತೆ ತಿಳಿದ್ರೆ ಬೆರಗಾಗ್ತೀರಾ !

Latest Videos

undefined

ಲಿಪ್‌ಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು
1. ಮೇಕಪ್‌ನಲ್ಲಿ ಸೀಸಾ(Lead) ಬಳಸುವುದರಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಲಿಪ್‌ಸ್ಟಿಕ್ ನಲ್ಲಿ ಸೀಸಾ ಬಳಸಲಾಗುತ್ತದೆ. ಇದು ದೀರ್ಘ ಕಾಲದ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೆ ಲಿವರ್(Liver) ಹಾಗೂ ಕಿಡ್ನಿಯ(Kidney) ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
2. ಪಾಲಿಥಿಲೀನ್ ಗ್ಲೆöÊಕೋಲ್‌ಗಳು(Polyethylene glycols) ಪೆಟ್ರೋಲಿಯಂ(Petroleum) ಆಧಾರಿತ ಕ್ರೀಮ್ ಟೆಕ್ಸಚರ್‌ನ ಪ್ರಾಡಕ್ಟಗಳು(Product) ಇದರಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ನರಮಂಡಲಕ್ಕೆ(Nervous System) ತುಂಬಾ ಹಾನಿಕಾರಕವಾಗಿದೆ.
3. ಪ್ಯಾರಬೆನ್ಸ್(Parabens) ಪ್ರಿಸರ್‌ವೇಟಿವ್‌ಗಳು(Preservative) ಈ ಲಿಪ್‌ಸ್ಟಿಕ್‌ನಲ್ಲಿ ಬಳಸಲಾಗುತ್ತದೆ. ಇದು ಚರ್ಮಕ್ಕೆ(Skin) ಹೆಚ್ಚು ಹಾನಿ ಮಾಡುತ್ತದೆ. ಕಾಲಕ್ರಮೇಣ ಇದು ಖಿನ್ನತೆ(Depression), ವಾಂತಿ(Vomit), ಅತಿಸಾರಕ್ಕೆ(Diarrhoea) ಕಾರಣವಾಗುತ್ತದೆ.
4. ಇದರಲ್ಲಿನ ಸಿಲೋಕ್ಷೇನ್(Siloxanes) ಎಂಬ ಅಂಶವು ಅಂತಃಸ್ರಾವಕ ವ್ಯವಸ್ಥೆಯನ್ನು(Endocrine System) ಅಡ್ಡಿಪಡಿಸುತ್ತದೆ ಹಾಗೂ ಸಂತಾನೋತ್ಪತ್ತಿ ವ್ಯವಸ್ಥೆಗೂ(Reproductive System) ಇದು ಮಾರಕವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 

ಹೇಗಾಯ್ತೋ ಹಾಗೆ ಹಚ್ಚಿದರೆ ತುಟಿಗೆ ಒಪ್ಪೋಲ್ಲ ಲಿಪ್‌ಸ್ಟಿಕ್, ಅದಕ್ಕೂ ರೀತಿ ನೀತಿ ಇದೆ!

ಹಾನಿಕಾರಕ ಪರಿಣಾಮಗಳು
ಲಿಪ್‌ಸ್ಟಿಕ್ ಅನ್ನು ಖರೀದಿಸುವಾಗ ಅದರಲ್ಲಿ ಉಪಯೋಗಿಸುವ ಪ್ರಾಡಕ್ಟಗಳ ಮೇಲೆ ಗಮನ ಹರಿಸಲೇ ಬೇಕು. ಯಾವುದು ಬೇಕೊ ಅದನ್ನು ಕೊಂಡುಕೊAಡಲ್ಲಿ ಆರೋಗ್ಯದ ಮೇಲೆ ಮಾರಣಾಂತಿಕ ಪರಿಣಾಮಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಎಚ್ಚರಿಗೆ ಇರಲೇಬೇಕು. ಇಲ್ಲವಾದಲ್ಲಿ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದು ಇಲ್ಲಿ ತಿಳಿಸಲಾಗಿದೆ.

1. ವಿಷಾನೀಲ ಸೇವನೆ
ಮ್ಯಾಗ್ನೀಸ್(Manganese), ಕ್ಯಾಡ್ಮಿಯಂ(Cadmium), ಕ್ರೋಮಿಯಂ(Chromium), ಅಲ್ಯುಮಿನಿಯಂ(Aluminum) ಅಂಶಗಳ ಗೊತ್ತಿಲ್ಲದೆ ದೇಹದಲ್ಲಿ(Bdy) ಸೇರಿದಾಗ ಅದು ವಿಷದ(Toxic) ರೂಪ ತಾಳುತ್ತದೆ. ಲಿಪ್‌ಸ್ಟಿಕ್ ಹಚ್ಚಿದ ಹೆಣ್ಣು ಮಕ್ಕಳು ಹೆಚ್ಚಿನದಾಗ ಆಹಾರ(Eating) ಸೇವಿಸುವಾಗ ಗೊತ್ತಿಲ್ಲದೆ ಇವನ್ನೇಲ್ಲಾ ಸೇವಿಸಿರುತ್ತಾರೆ. ಹಾಗಾಗಿ ಲಿಪ್‌ಸ್ಟಿಕ್ ಕೊಂಡುಕೊಳ್ಳುವಾಗ ಈ ಅಂಶಗಳಿAದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.  
2. ಅಲರ್ಜಿ
ಎಲ್ಲಾ ಪ್ರಾಡಕ್ಟಗಳು ಎಲ್ಲರಿಗೂ ಹೊಂದುವುದಿಲ್ಲ. ಲಿಪ್‌ಸ್ಟಿಕ್‌ನಲ್ಲಿ ಬಿಸ್ಮತ್ ಆಕ್ಸಿಕ್ಲೋರೈಡ್(Bismuth Oxychloride) ಎಂಬ ರಾಸಾಯನಿಕವನ್ನು(Chemical) ಪ್ರಿಸರ್ವೇಟಿವ್ ಆಗಿ ಬಳಸಲಾಗುತ್ತದೆ. ಕಾರ್ಸಿನೊಜೆನಿಕ್(Carcinogenic) ಅಂಶವು ಹಾನಿಕಾರಕವಾಗಿದ್ದು, ಅಲರ್ಜಿ(Allergy) ಆಗಲು ಕಾರಣವಾಗುತ್ತದೆ.
3. ಕ್ಯಾನ್ಸರ್
ಲಿಪ್‌ಸ್ಟಿಕ್‌ನಲ್ಲಿ ಬಳಸಲಾಗುವ ಪ್ರಿಸರ್ವೇಟಿವ್‌ಗಳು ಚರ್ಮ ಸಮಸ್ಯೆ(Skin), ಉಬ್ಬಸಾ(Wheezing), ಕಫ(Cough), ಕಣ್ಣಿನಲ್ಲಿ ಕಿರಿಕಿರಿ(Eye Irritation) ಉಂಟು ಮಾಡುತ್ತವೆ. ಹಾಗಾಗಿ ಕೆಲ ಲಿಪ್‌ಸ್ಟಿಕ್ ಬ್ರಾö್ಯಂಡ್‌ಗಳಲ್ಲಿ(Lipstick Brand) ಈ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ ಅವುಗಳನ್ನು ಬಲಸದಿರುವುದು ಒಳ್ಳೆಯದು. ಏಕೆಂದರೆ ಈ ರೀತಿಯ ಸಮಸ್ಯೆಗಳು ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಡುತ್ತದೆ.
4. ಅಂತಃಸ್ರಾವಕ್ಕೆ ಅಡ್ಡಿ
ಎಲ್ಲಾ ಲಿಪ್‌ಸ್ಟಿಕ್‌ಗಳಲ್ಲೂ ಪೆಟ್ರೋಲ್ ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತವೆ . ಇವು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಂತಃಸ್ರಾವ ಅಡ್ಡಿಯು ಬೆಳವಣಿಗೆ, ಬುದ್ಧಿವಂತಿಕೆ, ಸಂತಾನೋತ್ಪತ್ತಿ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುತ್ತದೆ. ಎಲ್ಲಾ ಪೆಟ್ರೋಲಿಯಂ ಪ್ರಾಡಕ್ಟಗಳು ನೈಸರ್ಗಿಕ ಅನಿಲ(Natural Gas) ಹಾಗೂ ಕಚ್ಚಾ ತೈಲಗಳ(Crude Oil) ಉಪ ಉತ್ಪನ್ನಗಳ ಪ್ರತಿರೂಪ ಎನ್ನುವುದನ್ನು ಮರೆಯಬಾರದು.
5. ನರ ದೌರ್ಬಲ್ಯ
ಬಹುತೇಕ ಲಿಪ್‌ಸ್ಟಿಕ್‌ಗಳಲ್ಲಿ ಸೀಸಾ(Lead) ಅಂಶ ಹೆಚ್ಚಾಗಿರುತ್ತದೆ. ಇದರಿಂದ ಹಾರ್ಮೋನಗಳಲ್ಲಿ(Harmon) ಏರುಪೇರು, ಮಿದುಳು(Brain) ಸಮಸ್ಯೆಗೆ ಕಾರಣವಾಗುತ್ತದೆ. ಏಕೆಂದರೆ ಇದರಲ್ಲಿ ನ್ಯೂರೋಟಾಕ್ಸಿನ್(Neurotoxin) ಅಂಶವಿದ್ದು, ನರ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
6. ಮೂತ್ರಪಿಂಡದ ದೌರ್ಬಲ್ಯ
ಲಿಪ್‌ಸ್ಟಿಕ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಟಲ್(Metal) ಬಳಸಲಾಗುತ್ತದೆ. ಇದು ಅಂಗಾAಗಳ ವೈಫಲ್ಯ ಅಥವಾ ಮಾರಣಾಂತಿಕ ರೋಗಕ್ಕೆ ಎಡೆಮಾಡಿಕೊಡುತ್ತದೆ. ಕ್ಯಾಡ್ಮಿಯಂ(Cadmium) ಅಂಶ ಹೆಚ್ಚಿದ್ದಲ್ಲಿ ಅದು ಮೂತ್ರಪಿಂಡ ಸಮಸ್ಯೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿನ ಕ್ಯಾನ್ಸರ್(Stomach Cancer) ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Lip Care: ಚೆಲುವೆಯ ಅಂದದ ಮೊಗಕೆ ತುಟಿಯೂ ಭೂಷಣ

ಸಮಸ್ಯೆಯಿಂದ ದೂರ ಉಳಿಯುವುದು ಹೀಗೆ
ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಎಂಬುದು ಇದ್ದೇ ಇರುತ್ತದೆ. ಕೆಲ ಲಿಪ್‌ಸ್ಟಿಕ್‌ಗಳನ್ನು ಬಳಸುವುದರಿಂದ ದೊಡ್ಡ ಮಟ್ಟದ ಅನಾಹುತದಿಂದ ತಪ್ಪಿಸಿಕೊಳ್ಳಬಹುದು. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್.
1. ಡಾರ್ಕ್ ಲಿಪ್‌ಸ್ಟಿಕ್‌ಗಳಲ್ಲಿ(Dark Lipstick) ಮೆಟಲ್ ಅಂಶ ಹೆಚ್ಚಿರುತ್ತದೆ. ಹಾಗಾಗಿ ಲಿಪ್‌ಸ್ಟಿಕ್ ಆರಿಸಿಕೊಳ್ಳುವಾಗ ಲೈಟ್ ಕಲರ್(Light Color) ಆರಿಸಿಕೊಳ್ಳುವುದು ಉತ್ತಮೆ.
2. ಪೆಟ್ರೋಲಿಯಂ ಜೆಲ್ಲಿಯ ಆಧಾರವು ಲಿಪ್‌ಸ್ಟಿಕ್‌ನಲ್ಲಿರುವ ರಾಸಾಯನಿಕ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿ ಮಾಡಿದ(Home made) ಲಿಪ್‌ಸ್ಟಿಕ್‌ಗಳನ್ನು ಬಳಸುವುದು ಉತ್ತಮ.
3. ಪ್ರೆಗ್ನೆನ್ಸಿ(Pregnancy) ಸಂದರ್ಭದಲ್ಲಿ ಲಿಪ್‌ಸ್ಟಿಕ್ ಬಳಕೆ ಕಟ್ಟುನಿಟ್ಟಾಗಿ ದೂರ ಉಳಿಯಬೇಕು. ಏಕೆಂದರೆ ಲಿಪ್‌ಸ್ಟಿಕ್‌ನಲ್ಲಿನ ಕೆಮಿಕಲ್‌ಗಳು ಹೊಟ್ಟೆಯಲ್ಲಿನ ಮಗುವಿನ(Babies) ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಹರ್ಬಲ್ ಲಿಪ್‌ಸ್ಟಿಕ್(Herbal Lipstick) ಹಚ್ಚುವುದು ಒಳ್ಳೆಯದು.
4. ಲಿಪ್‌ಸ್ಟಿಕ್ ಅನ್ನು ದಿನನಿತ್ಯ ಬಳಸುವುದು ಒಳ್ಳೆಯದಲ್ಲ. ಅದನ್ನು ಅಪರೂಪಕ್ಕೆ(Occasionally) ಬಳಸುವುದು ಬಹಳ ಒಳ್ಳೆಯದು.

 

 

click me!