ಮನೆ ಕ್ಲೀನ್ ಮಾಡೋವಾಗ ಹಳೆ ಚೀಟಿ ಸಿಕ್ರೆ ಎಸೀಬೇಡಿ, ಮಹಿಳೆಗೆ ಸಿಕ್ತು ಕೋಟಿ ಲಾಟರಿ!

By Suvarna News  |  First Published Jan 2, 2024, 4:57 PM IST

ಮನೆ ಸ್ವಚ್ಛಗೊಳಿಸುವ ವೇಳೆ ಅನೇಕ ಚೀಟಿ, ಪೇಪರ್ ಸಿಗುತ್ತೆ. ಅದನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಇನ್ಮುಂದೆ ಹಾಗೆ ಮಾಡ್ಬೇಡಿ. ಈ ಮಹಿಳೆ ಪೇಪರ್ ಮೇಲೆ ಕಣ್ಣು ಹಾಯಿಸದೆ ಹೋಗಿದ್ರೆ ೯೧ ಲಕ್ಷ ಕೈತಪ್ಪಿ ಹೋಗ್ತಿತ್ತು. 
 


ನೀವು ಅದೆಷ್ಟೇ ಪ್ರಯತ್ನಪಡಿ ನಿಮಗೆ ಸಿಗಬೇಕಾದ ಗೌರವ, ಹಣ ಎಲ್ಲವೂ ಸಮಯ ಬಂದಾಗ್ಲೆ ಸಿಗೋದು. ದಿನವಿಡಿ ಕೆಲಸ ಮಾಡಿದ್ರೂ ಅನೇಕ ಬಾರಿ ಹಣ ಕೈಸೇರೋದಿಲ್ಲ. ಕೆಲಸದಲ್ಲಿ ಬಡ್ತಿ ಸಿಗೋದಿಲ್ಲ. ವ್ಯಾಪಾರದಲ್ಲಿ ಏಳ್ಗೆ ಕಾಣೋದಿಲ್ಲ. ಸಾಲ ತೆಗೆದುಕೊಂಡವರು ತಿರುಗಿ ಕೂಡ ನೋಡೋದಿಲ್ಲ. ಅದೇ ನಿಮ್ಮ ಅದೃಷ್ಟ ಸರಿ ಇದ್ರೆ ನೀವು ಹೆಚ್ಚು ಕೆಲಸ ಮಾಡ್ಬೇಕಾಗಿಲ್ಲ, ತುಂಬಾ ಕಷ್ಟಪಡ್ಬೇಕಾಗಿಲ್ಲ, ಎಲ್ಲವೂ ನಿಮ್ಮ ಬಳಿ ಬರುತ್ತದೆ.  ಆದ್ರೆ ಅದು ಯಾವಾಗ ಬರುತ್ತೆ ಎನ್ನುವುದು ಯಾರಿಗೂ ತಿಳಿದಿಲ್ಲ. ಹಾಗಾಗಿ ನಿರಂತರ ಪ್ರಯತ್ನ ಅಗತ್ಯ. ಈ ಮಹಿಳೆ ಕೂಡ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಮನೆ ಕ್ಲೀನಿಂಗ್ ಶುರು ಮಾಡಿದ್ದಳು. ಮನೆಯಲ್ಲಿರುವ ಹಳೆ ವಸ್ತುಗಳನ್ನು ಹೊರಹಾಕಿ, ಕಸ ತೆಗೆದು, ಕ್ರಿಸ್ ಮಸ್ ಮೊದಲು ಮನೆಯನ್ನು ಅಂದಗೊಳಿಸುವುದು ಆಕೆ ಗುರಿಯಾಗಿತ್ತೇ ವಿನಃ ಹಳೆ ವಸ್ತುವಿನಲ್ಲಿ ಏನಾದ್ರೂ ಸಿಗ್ಬಹುದು ಎಂಬ ಆಸೆಯನ್ನು ಆಕೆ ಹೊಂದಿರಲಿಲ್ಲ. ಆದ್ರೆ ಆ ದಿನ ಆಕೆ ಅದೃಷ್ಟ ಚೆನ್ನಾಗಿತ್ತು. ಮನೆ ಕ್ಲೀನ್ ಮಾಡುವ ವೇಳೆ ಚಮತ್ಕಾರ ನಡೆಯಿತು. ಇದ್ದಕ್ಕಿದ್ದಂತೆ ಮಹಿಳೆ ಲಕ್ಷಾಧಿಪತಿ ಆದ್ಲು. ಅದು ಹೇಗೆ ಎಂಬುದನ್ನು ನಾವು ಹೇಳ್ತೇವೆ.

ಕಸ (Garbage) ತೆಗೆಯುವಾಗ ಬದಲಾದ ಅದೃಷ್ಟ : ಘಟನೆ ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ನಡೆದಿದೆ. ಇಲ್ಲಿ ವಾಸಿಸುವ ಮಹಿಳೆಯೊಬ್ಬಳ ಮನೆಯಲ್ಲಿ ಇದ್ದಕ್ಕಿದ್ದಂತೆ ನಿಧಿ ಸಿಕ್ಕಿದೆ. ಕ್ರಿಸ್ ಮಸ್ (Christmas) ಕ್ಲೀನಿಂಗ್ ವೇಳೆ ಸಾಂಥಾ ಗಿಫ್ಟ್ ನೀಡಿದ್ದಾನೆ ಅಂದ್ರೆ ತಪ್ಪಾಗೋದಿಲ್ಲ.

Tap to resize

Latest Videos

ಆನ್‌ಲೈನ್‌ ಫುಡ್‌ ಬುಕ್ಕಿಂಗ್‌ ಇನ್ನು ದುಬಾರಿ, ಫ್ಲಾಟ್‌ಫಾರ್ಮ್‌ ಫೀ ಏರಿಸಿದ ZOMATO!

ಅನೇಕರು ಮನೆ ಕ್ಲೀನ್ ಮಾಡುವ ಸಮಯದಲ್ಲಿ ಹಳೆ ಚೀಟಿಗಳನ್ನು ಓದೋದಿಲ್ಲ. ಅದನ್ನು ಹಾಗೆ ಕಸಕ್ಕೆ ಎಸೆಯುತ್ತಾರೆ. ಆದ್ರೆ ಈ  ಮಹಿಳೆ ಮನೆ ಸ್ವಚ್ಛಗೊಳಿಸುವ ವೇಳೆ ಟೇಬಲ್ ಬಳಿ ಇದ್ದ ಚೀಟಿಯನ್ನು ತೆಗೆದು ನೋಡಿದ್ದಾಳೆ. ಅದೇ ಆಕೆ ಅದೃಷ್ಟ (Good Luck) ಬದಲಿಸಿದೆ. ಮಹಿಳೆ ಎರಡು ವರ್ಷಗಳ ಹಿಂದೆ ಅಂದ್ರೆ ಫೆಬ್ರವರಿ 2021ರಲ್ಲಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದಳು. ಆ ಟಿಕೆಟ್ ಆಕೆಗೆ ಸಿಕ್ಕಿದೆ. ವಾಸ್ತವವಾಗಿ ಮಹಿಳೆಗೆ ತಾನು ಲಾಟರಿ ಟಿಕೆಟ್ ಖರೀದಿ ಮಾಡಿದ್ದೆ ಎಂಬುದೇ ನೆನಪಿರಲಿಲ್ಲ. 

ಈ ವರ್ಷ ಯುಪಿಐ ಪಾವತಿ ನಿಯಮಗಳಲ್ಲಿ 6 ಮಹತ್ವದ ಬದಲಾವಣೆ; ಈ ಹೊಸ ಸೌಲಭ್ಯಗಳ ಬಗ್ಗೆ ತಪ್ಪದೇ ತಿಳಿಯಿರಿ

ಲಾಟರಿಯಲ್ಲಿ ಸಿಕ್ಕ ಹಣ ಎಷ್ಟು? : ಲಾಟರಿ ಟಿಕೆಟ್ ಹರಿದಿರಲಿಲ್ಲ. ಹಾಗಾಗಿ ಮಹಿಳೆ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾಳೆ. ಲಾಟರಿ ಟಿಕೆಟ್ ಗೆ ಹಣ ಬಂದಿತ್ತಾ ಎಂದು ಪರೀಕ್ಷೆ ಮಾಡಿದ್ದಾಳೆ. ಈ ವೇಳೆ ಲಾಟರಿ ಅಧಿಕಾರಿಗಳು ಹೇಳಿದ ವಿಷ್ಯ ಕೇಳಿ ಮಹಿಳೆ ಖುಷಿಯಲ್ಲಿ ಕುಣಿದಾಡಿದ್ದಾಳೆ.

ಮಹಿಳೆ ಖರೀದಿ ಮಾಡಿದ್ದ ಲಾಟರಿಗೆ ಹಣ ಸಿಕ್ಕತ್ತು. 91,64,529 ರೂಪಾಯಿಗಳ ಈ ಬಹುಮಾನ ಬಂದಿತ್ತು. ಅದನ್ನು ಡಿಸೆಂಬರ್ 31, 2024 ರವರೆಗೆ ಕ್ಲೈಮ್ ಮಾಡುವ ಅವಕಾಶ ಇತ್ತು. ಈ ಸುದ್ದಿ ಕೇಳಿ ಖುಷಿಗೊಂಡ ಮಹಿಳೆ ತನ್ನ ಹಣವನ್ನು ತಾನು ಪಡೆದಿದ್ದಾಳೆ. ಎರಡು ವರ್ಷಗಳ ನಂತ್ರ ಲಾಟರಿ ಟಿಕೆಟ್ ನೀಡಿ, ಕ್ಲೈಮ್ ಮಾಡಿದ ಘಟನೆ ಇದೇ ಮೊದಲು ನಡೆದಿದೆ. 91 ಲಕ್ಷ ರೂಪಾಯಿ ಬರ್ತಿದ್ದಂತೆ ಮಹಿಳೆ ಹಣ ಖರ್ಚು ಮಾಡುವ ಪ್ಲಾನ್ ಮಾಡಿದ್ದಾಳೆ. ರಜೆ ಪಡೆದು ಸುತ್ತಾಡುವ ಪ್ಲಾನ್ ರೂಪಿಸಿದ್ದಾಳೆ. 

ಒಂದು ವರ್ಷದ ನಂತ್ರ ಕ್ಲೈಮ್ ಮಾಡಿದ್ದ ವ್ಯಕ್ತಿ : ಹಿಂದೆಯೂ ಇಂಥ ಘಟನೆ ನಡೆದಿದೆ. ಅಮೆರಿಕಾದ ವ್ಯಕ್ತಿಯೊಬ್ಬ ಒಂದು ವರ್ಷಗಳ ನಂತ್ರ ಲಾಟರಿ ಟಿಕೆಟ್ ಹಣವನ್ನು ಕ್ಲೈಮ್ ಮಾಡಿದ್ದ. ಆತನಿಗೆ ಹತ್ತು ಮಿಲಿಯನ್ ಡಾಲರ್ ಬಹುಮಾನ ಬಂದಿತ್ತು. 

click me!