ಮುಟ್ಟಿನ ಸ್ರಾವ ಕುಡಿದು ಫೇಷಿಯಲ್ ಮಾಡಿಕೊಳ್ತಾಳಂತೆ... ಇದೇ ಈಕೆಯ ಸೌಂದರ್ಯದ ಗುಟ್ಟು!

By Suvarna News  |  First Published Jan 26, 2022, 4:09 PM IST
  • ಸೌಂದರ್ಯ, ಆರೋಗ್ಯಕ್ಕಾಗಿ ಮುಟ್ಟಿನ ರಕ್ತ ಸೇವನೆ
  • ಸ್ಪಾನಿಷ್‌ ಮಹಿಳೆಯ ಬೆಚ್ಚಿ ಬೀಳಿಸುವ ಹೇಳಿಕೆ

ಋತುಸ್ರಾವ ಎಂದರೆ ಬಹುತೇಕ ಹೆಣ್ಣು ಮಕ್ಕಳು ಇದು ಯಾಕಾದರೂ ಬರುವುದೋ ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಇದಕ್ಕೆ ಕಾರಣ ಅದು ನೀಡುವ ನೋವು ಹಾಗೂ ಕೆಲವು ಮಾನಸಿಕ ಕಿರಿಕಿರಿ ಜೊತೆ ಮುಟ್ಟಿನ ರಕ್ತದ ಅಸಹ್ಯಕರ ವಾಸನೆಯೂ ಕೂಡ ಕಾರಣ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಸೌಂದರ್ಯ ವೃದ್ಧಿಸುವುದಕ್ಕಾಗಿ ಅದನ್ನೇ ಕುಡಿಯುತ್ತಾಳಂತೆ. ಹೀಗಾಂತ ಆ ಮಹಿಳೆಯೇ ಹೇಳಿಕೊಂಡಿದ್ದಾಳೆ. 

ಮಹಿಳೆಯರ  ಮುಟ್ಟಿನ ಸಮಸ್ಯೆ ಬಗ್ಗೆ  ಅರಿವು ಮೂಡಿಸುವುದು ಅಗತ್ಯವಾದರೂ ಸ್ಪ್ಯಾನಿಷ್ ಮಹಿಳೆಯೊಬ್ಬಳ ಈ ವಿಲಕ್ಷಣ ಹೇಳಿಕೆ  ಪ್ರಪಂಚದಾದ್ಯಂತ ಜನರನ್ನು ಬೆಚ್ಚಿಬೀಳಿಸಿದೆ. 30 ವರ್ಷದ ಜಾಸ್ಮಿನ್ ಅಲಿಸಿಯಾ ಕಾರ್ಟರ್ (Jasmine Alicia Carter) ಅವರು ತಮ್ಮ ಮುಟ್ಟಿನ ಸಂದರ್ಭದಲ್ಲಿ ಹೊರ ಬರುವ ರಕ್ತವನ್ನು ಕುಡಿಯುತ್ತಾರಂತೆ. ಇದು ಅವರ ಆರೋಗ್ಯವನ್ನು ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಋತುಚಕ್ರದ ರಕ್ತವನ್ನು ಮುಖದ ಮೇಲೆ ಹಚ್ಚುವುದಲ್ಲದೇ, ಪೀರಿಯಡ್ ಪೇಂಟಿಂಗ್ಸ್  ರಚಿಸಲು ಅದನ್ನು ಬಳಸುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 

Tap to resize

Latest Videos

undefined

Yoga For Health: ಗರ್ಭಾಸನ ಮಾಡಿ ಪೀರಿಯಡ್ಸ್ ನೋವು, ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಿ..

ಈ 30 ವರ್ಷದ ಜಾಸ್ಮಿನ್ ಅಲಿಸಿಯಾ ಕಾರ್ಟರ್‌ ಒಂದು ಮಗುವಿನ ತಾಯಿಯಾಗಿದ್ದು, ಮಹಿಳೆಯರಿಗೆ ಅವರ ಸಂಪೂರ್ಣ ಋತುಚಕ್ರದೊಳಗೆ ಇರುವ ಅಂತರ್ಗತ ಪವಿತ್ರತೆಯನ್ನು ಅರ್ಥಮಾಡಿಕೊಳ್ಳಲು ತರಬೇತಿ ನೀಡುವ ಮಾರ್ಗದರ್ಶಕರಾಗಿದ್ದಾರೆ. ನಮ್ಮ ರಕ್ತ ಹಾಗೂ ಯೋನಿಗಳ ಕಾರಣದಿಂದಾಗಿ ನಾವು ಇಲ್ಲಿದ್ದೇವೆ. ಆದರೆ ಮಹಿಳೆಯರು ಅದಕ್ಕೆ ಸಾಕಷ್ಟು ಮನ್ನಣೆಯನ್ನು ಕೊಡುವುದಿಲ್ಲ ಎಂದು ಕಾರ್ಟರ್ ಹೇಳಿದ್ದಾರೆ. 

ಮಹಿಳೆಯರಿಗೆ ಮೊದಲಿನಿಂದಲೂ ಮುಟ್ಟಿನ ಬಗ್ಗೆ ಅಸಹ್ಯ ಪಡುವಂತೆ ಕಲಿಸಲಾಗಿದೆ. ಟ್ಯಾಂಪೂನ್‌ಗಳು ಮತ್ತು ಪ್ಯಾಡ್‌ಗಳು ರಾಸಾಯನಿಕಗಳನ್ನು ಹೊಂದಿದ್ದು, ನಮ್ಮ ರಕ್ತವನ್ನು ಮರೆಮಾಡಲು ಮತ್ತು ನಮ್ಮ ಪಿರೇಡ್ಸ್‌ ನೈಸರ್ಗಿಕ ಕಾರ್ಯ ಚಟುವಟಿಕೆಯನ್ನು  ನಿಯಂತ್ರಿಸುತ್ತವೆ ಎಂದು ಆಕೆ ಹೇಳಿದ್ದಾಳೆ.

ಆಸ್ಮಿನ್ ಹೇಳುವಂತೆ ಪಿರಿಯಡ್ ಬ್ಲಡ್, ಪೋಷಕಾಂಶ, ಕಬ್ಬಿಣಾಂಶ ಮತ್ತು ಸ್ಟೆಮ್ ಸೆಲ್‌ಗಳಂತಹ ಪೋಷಕಾಂಶಗಳನ್ನು ಹೆಚ್ಚು ಒಳಗೊಂಡಿದೆ ಮತ್ತು ನೀವು ಅದನ್ನು ಸಂಗ್ರಹಿಸಿದರೆ ಅದನ್ನು ಬಳಸಬಹುದಾದ ಹಲವು ಮಾರ್ಗಗಳಿವೆ ಎಂದು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ವಿವರಿಸುತ್ತಾ, ಆಕೆ  ಋತುಚಕ್ರದ ರಕ್ತ ಹಿಡಿದಿಡಲು ಬಳಸುವ ಕಪ್‌ನಿಂದ ತಾಜಾ ಅವಧಿಯ ರಕ್ತವನ್ನು ಸಂಗ್ರಹಿಸಿ ಒಂದು ಸಿಪ್ ಸೇವಿಸುತ್ತೇನೆ. ಅಲ್ಲದೇ  ಬ್ರಷ್ ಅಥವಾ  ಬೆರಳುಗಳಿಂದ ರಕ್ತವನ್ನು 'ಫೇಸ್ ಮಾಸ್ಕ್' ಆಗಿ ಮುಖಕ್ಕೆ ಹಚ್ಚುತ್ತೇನೆ ಎಂದು ಹೇಳಿದ್ದಾಳೆ.

ನಾನು ನನ್ನ ಮುಟ್ಟಿನ ರಕ್ತವನ್ನು ಕುಡಿಯುವಾಗ, ಸಾಮಾನ್ಯವಾಗಿ ಶೌಚಾಲಯದಲ್ಲಿ ಕುಳಿತುಕೊಳ್ಳುತ್ತೇನೆ. ನಾನು ನನ್ನ ದೇಹಕ್ಕೆ ಎಷ್ಟು ಸಂಪರ್ಕ ಹೊಂದಿದ್ದೇನೆ ಎಂದರೆ ಎಷ್ಟು ರಕ್ತವನ್ನು ಕುಡಿಯಬೇಕು ಎಂದು ನನಗೆ ತಿಳಿದಿದೆ. ಕೆಲವೊಮ್ಮೆ ಕೇವಲ ಒಂದು ಸಿಪ್, ಮತ್ತು ಕೆಲವೊಮ್ಮೆ ಸಂಪೂರ್ಣ ಮುಟ್ಟಿನ(period) ಕಪ್ ರಕ್ತವನ್ನು ಕುಡಿಯುತ್ತೇನೆ. ಏಕೆಂದರೆ ನನಗೆ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ ಎಂದು ಆಕೆ ಹೇಳಿದ್ದಾಳೆ. 

Periods Problem: ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೇ? ಈ ಆಹಾರ ಸೇವಿಸಿ

ಕಾರ್ಟರ್ ಹೇಳುವಂತೆ ಪಿರಿಯಡ್ ಬ್ಲಡ್‌ನ ಫೇಸ್ ಮಾಸ್ಕ್‌ಗಳು(Face Mask) ಚರ್ಮಕ್ಕೆ(Skin) ಉತ್ತಮವಾಗಿವೆಯಂತೆ. ನಾನು ಮೊದಲ ಬಾರಿ ಮುಟ್ಟಿನ ರಕ್ತವನ್ನು ನನ್ನ ಮುಖದ ಮೇಲೆ ಹಾಕಿದಾಗ, ಅದು ತುಂಬಾ ನೈಸರ್ಗಿಕವೆನಿಸಿತು. ಜೊತೆಗೆ ಭಾವನೆಯು ತುಂಬಾ ಉಲ್ಲಾಸಕರವಾಗಿತ್ತು ಎಂದು ಆಕೆ ಹೇಳಿದ್ದಾಳೆ. ಒಟ್ಟಿನಲ್ಲಿ ಇದನ್ನೆಲ್ಲಾ ಕೇಳಿದಾಗ ಸೌಂದರ್ಯಕ್ಕಾಗಿ (Beauty) ಕೆಲವರು ಏನೂ ಬೇಕಾದರೂ ಮಾಡಬಹುದು ಎಂದು ಅನಿಸುತ್ತಿಲ್ಲವೇ..

click me!