ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ನಮ್ಮ ಬದುಕನ್ನು ಆನಂದಮಯಗೊಳಿಸುವ ಹೆಣ್ಣು ಮಕ್ಕಳ ದಿನವನ್ನು ಆಚರಿಸೋಣ ಬನ್ನಿ.
ಇತ್ತೀಚೆಗೆ ಮಾತಿಲ್ಲದ ಕಿರುಚಿತ್ರವೊಂದು ವೈರಲ್ (Viral) ಆಗಿತ್ತು. ಅಪ್ಪನ (Father) ಕಿರುಬೆರಳು ಹಿಡಿದು ನಡೆಯುವ ಪುಟ್ಟ ಹೆಣ್ಣು ಮಗು (Girl child) ಮುಂದೆ ಬೆಳೆದು ಅಪ್ಪನ ಸಮಸಮಕ್ಕೆ ಸೈಕಲ್ (Cycle) ಹೊಡೆಯುತ್ತಾಳೆ. ಹಾಗೇ ಒಂದು ದಿನ ಆತ ಆಕೆಯನ್ನು ದಡದಲ್ಲಿ ನಿಲ್ಲಿಸಿ ಈಗ ಬರುತ್ತೇನೆ ಎಂದು ದೋಣಿಯಲ್ಲಿ ಹೋದವನು ಬರುವುದೇ ಇಲ್ಲ. ಆ ಹೆಣ್ಣುಮಗಳಿಗೆ ಮದುವೆಯಾಗುತ್ತದೆ, ಮಕ್ಕಳಾಗುತ್ತವೆ, ವೃದ್ಧೆಯಾಗುತ್ತಾಳೆ. ಆದರೆ ಆಕೆ ಪ್ರತಿದಿನ ಅದೇ ದಡದ ಜಾಗಕ್ಕೆ ಬಂದು ಅಪ್ಪ ಮರಳಿ ಬಂದನೇ ಎಂದು ನೋಡಲು ತಪ್ಪಿಸುವುದಿಲ್ಲ.
ಇದು ಹೆಣ್ಣು ಮಗುವಿನ ಅಂತಃಕರಣ. ಆಕೆ ಎಂದೂ ತನ್ನ ತಂದೆ ತಾಯಿಯ ಕೈಬಿಡುವುದಿಲ್ಲ. ಮಗನಾದರೋ ಸ್ವಂತ ಸಂಸಾರ ಕಟ್ಟಿಕೊಂಡು ದೂರ ಹೋದಾನು, ಮಗಳು ದೂರ ಹೋದರೂ ಆಕೆಯ ಮನಸ್ಸೆಲ್ಲ ತನ್ನವರಲ್ಲೇ ಇರುತ್ತದೆ. ಹಾಗಂತ ತಾನು ಹೊಕ್ಜ ಮನೆಯನ್ನೂ ಕಡೆಗಣಿಸುವುದಿಲ್ಲ. ಹೀಗಾಗಿಯೇ ಆಕೆ ಎರಡೂ ಮನೆಗಳ ದೀಪ ಬೆಳಗುವವಳು ಎಂಬ ಮಾತು ಇದೆ.
ಇದು ಸರಳ. ನಮ್ಮನ್ನು ಹೆತ್ತವಳು ಹೆಣ್ಣು. ಹೊತ್ತ ಭೂಮಿಹೆಣ್ಣು. ಒಡನಾಡಿದ ಅಕ್ಕ ತಂಗಿ ಹೆಣ್ಣು. ಸುಖ ಹಂಚಿಕೊಂಡ ಹೆಂಡತಿ ಹೆಣ್ಣು. ಮತ್ತೆ ವೃದ್ಧಾಪ್ಯದಲ್ಲಿ ಕಾಪಾಡುವ ಮಗಳು ಹೆಣ್ಣು. ನೀರು ಕೊಟ್ಟ ನದಿಗಳೂ ಹೆಣ್ಣು. ನಮ್ಮ ದೇಶದಲ್ಲಿ ಹರಿಯುವ ಒಂದೇ ಒಂದು ನದಿಯನ್ನು ಹೊರತು ಎಲ್ಲಾ ನದಿಗಳೂ ' ಸ್ತ್ರೀ' ನದಿಗಳೇ. ಗಂಗಾ, ಕಾವೇರಿ, ಕೃಷ್ಣಾ, ನರ್ಮದಾ, ಅಲಕನಂದಾ, ಗೋದಾವರಿ, ತುಂಗಾ, ಭದ್ರಾ ಹೀಗೆ ಎಲ್ಲಾ ನದಿಗಳೂ 'ಸ್ತ್ರೀ'ಗಳೇ! ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಅಭಿಪ್ರಾಯಕ್ಕೆ ಭಾರತೀಯ ಸಂಸ್ಕೃತಿ ಬದ್ದವಾಗಿದೆ.
National Girl Child Day: ಪ್ರತಿ ಹೆಣ್ಣಿಗೂ ಸ್ಫೂರ್ತಿಯ ಸೆಲೆ ಉದ್ಯಮ ರಂಗದ ಈ 7 ಮಹಿಳಾ ಸಾಧಕಿಯರು
undefined
ವೇದಗಳ ಕಾಲದಲ್ಲಿದ್ದ ಗಾರ್ಗಿ, ಮೈತ್ರೇಯಿಯರ ಬೌದ್ಧಿಕ ಸಾಧನೆ ಸ್ಮರಣಿಯವಾದುದು. ಪುರಾಣ ಕಾಲದ 'ಆದಿಶಕ್ತಿ' ದುಷ್ಟಶಿಕ್ಷಕಿಯಾಗಿ, ಶಿಷ್ಟರಕ್ಷಕಿಯಾಗಿ, ಸರ್ವಶಕ್ತಿಯನ್ನು ಮೆರೆದಿರುವುದನ್ನು ಕಾಣಬಹುದಾಗಿದೆ. ಹಿಂದೂ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತ ಕೃತಿಗಳ ರಚನೆಗೆ ಸ್ತ್ರೀ ಕಾರಣೀಭೂತಳು. ಹಲವು ಶಾಸ್ತ್ರಗಳಲ್ಲಿ ಈಕೆಯನ್ನು ಜಗಜ್ಜನನಿಯೆಂದು ಹೇಳಲಾಗುತ್ತದೆ. ನಮ್ಮ ಪರಂಪರೆಯಲ್ಲಿಯೂ ಸಹ ಮುಖ್ಯ ದೇವತೆಗಳು 'ಸ್ತ್ರೀ' ದೇವತೆಗಳೇ. ಶಕ್ತಿಗೆ ಅದಿದೇವತೆ 'ಪಾರ್ವತಿ' ಧನಕ್ಕೆ ಅದಿದೇವತೆ 'ಲಕ್ಷ್ಮಿ' ಮತ್ತು ವಿದ್ಯೆಗೆ ಅದಿದೇವತೆ 'ಸರಸ್ವತಿ' .
ಇಂಥ ಹೆಣ್ಣು ಮಗುವಿನ ಕುರಿತು ಕವಿ ಜಿ.ಎಸ್.ಶಿವರುದ್ರಪ್ಪನವರು ಹೀಗೆ ಬರೆದಿದ್ದಾರೆ:
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ ?
ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
Padmashri Pappammal: ಪದ್ಮಶ್ರೀ ಪಡೆದ 107 ವರ್ಷದ ಸೆಲೆಬ್ರಿಟಿ ಅಜ್ಜಿ ತಮ್ಮ ಬದುಕಿನ ಕತೆ ಹೇಳಿದಾಗ...
2008ರಿಂದ, ಭಾರತದಲ್ಲಿ ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನೇತೃತ್ವದಲ್ಲಿ ದೇಶಾದ್ಯಂತ ಆಚರಣೆಗಳು ನಡೆಯುತ್ತಿವೆ. ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಹೆಣ್ಣು ಮಕ್ಕಳ ಹಕ್ಕುಗಳು ಮತ್ತು ಸ್ತ್ರೀ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ದಿನದ ಉದ್ದೇಶವಾಗಿದೆ.
ಈ ದಿನ ಸರ್ಕಾರದ ಬೇಟಿ ಬಚಾವೋ ಬೇಟಿ ಪಢಾವೋ, ಹೆಣ್ಣು ಮಗುವನ್ನು ಉಳಿಸಿ, ಶಾಲೆ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಮೀಸಲಾತಿಯಂತಹ ಅಭಿಯಾನಗಳು ಮತ್ತು ಕಾರ್ಯಕ್ರಮಗಳಿಗೆ ಅನುಗುಣವಾಗಿದೆ. ಕೆಲವು ಥೀಮ್‌ಗಳ ಆಧಾರದ ಮೇಲೆ ಆಯಾ ವರ್ಷದ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. 2019ರಲ್ಲಿ, 'ಉಜ್ವಲವಾದ ನಾಳೆಗಾಗಿ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವುದು', 2020ರಲ್ಲಿ 'ನನ್ನ ಧ್ವನಿ, ನಮ್ಮ ಸಾಮಾನ್ಯ ಭವಿಷ್ಯ', 2021ರಲ್ಲಿ 'ಡಿಜಿಟಲ್ ಜನರೇಷನ್, ನಮ್ಮ ಪೀಳಿಗೆ' ಥೀಮ್ ಆಗಿದ್ದವು. ಈ ವರ್ಷ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸಬಲೀಕರಣದ ಕಡೆಗೆ ನಡೆಯೋಣ ಎಂಬುದಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಕಡೆ ರಂಗೋಲಿ ಅಭಿಯಾನಗಳನ್ನು ಏರ್ಪಡಿಸಲಾಗಿದೆ.