ಗಂಡನಲ್ಲಿ ಲೈಂಗಿಕ ತೃಪ್ತಿ ಸಿಗದ ಮಹಿಳೆಯರು ಹೀಗೆಲ್ಲ ಮಾಡ್ತಾರಾ?

Published : Jan 28, 2023, 02:03 PM IST
ಗಂಡನಲ್ಲಿ ಲೈಂಗಿಕ ತೃಪ್ತಿ ಸಿಗದ ಮಹಿಳೆಯರು ಹೀಗೆಲ್ಲ ಮಾಡ್ತಾರಾ?

ಸಾರಾಂಶ

ಊಟ, ನಿದ್ದೆಯಷ್ಟೇ ಸೆಕ್ಸ್ ಸಹ ಕಾಮನ್ ಅನ್ನೋ ಮಾತಿದೆ. ಹಸಿದಾಗ ಎಂಥಾ ಫೀಲ್ ಇರುತ್ತೋ ಲೈಂಗಿಕವಾಗಿ ಹಸಿದಾಗಲೂ ಅದೇ ಥರ ಫೀಲ್ ಇರುತ್ತೆ ಅಂತಾರೆ ತಿಳಿದವರು. ಗಂಡನಿಂದ ಲೈಂಗಿಕ ತೃಪ್ತಿ ಸಿಗದ ಈ ಮಹಿಳೆಯರು ಏನ್ ಮಾಡಿದ್ರು ಗೊತ್ತಾ?

ಮದುವೆ ಏನೂ ಆಗಿಬಿಡುತ್ತೆ. ಆದರೆ ಅನೇಕ ಸಂಗತಿಗಳು ಮದುವೆ ನಂತರವೇ ಗೊತ್ತಾಗೋದು. ಅದರಲ್ಲೂ ಮುಖ್ಯವಾಗಿ ತನ್ನ ಪಾರ್ಟನರ್ ಲೈಂಗಿಕವಾಗಿ ಹೇಗಿದ್ದಾರೆ ಅನ್ನೋ ವಿಚಾರ. ಅದರಲ್ಲೂ ಒಬ್ಬರಿಗೆ ಸಿಕ್ಕಾಪಟ್ಟೆ ಸೆಕ್ಸ್‌ ಬಗ್ಗೆ ಇಂಟರೆಸ್ಟ್, ಇನ್ನೊಬ್ಬರಿಗೆ ಆ ಬಗ್ಗೆ ಆಸಕ್ತಿಯೇ ಇಲ್ಲ ಅನ್ನೋರು ಜೊತೆಗಿದ್ರಂತೂ ಬೇಡ ಜೀವ್ನ. ಹೀಗೆ ತಮಗೆ ಗಂಡನಿಂದ ಲೈಂಗಿಕ ತೃಪ್ತಿ ಸಿಗದ ಹೆಣ್ಮಕ್ಕಳು ಏನ್ ಮಾಡಿದ್ರು ಅಂತ ಹೇಳ್ಕೊಂಡಿದ್ದಾರೆ. ಅವ್ರು ತಮ್ಮ ಕತೆ ಹೇಳೋ ಜೊತೆಗೆ ಲೈಂಗಿಕ ಬಯಕೆಗಳನ್ನು ಬಹುಕಾಲ ಅದುಮಿಡೋದು ಕಷ್ಟ ಅಂತ ಕೆಲವರು ಹೇಳಿದರೆ ಲೈಂಗಿಕತೆಯನ್ನು ಹೇಗೋ ಕಂಟ್ರೋಲ್ ಮಾಡ್ಕೊಂಡು ಇರಬಹುದು, ಗಂಡನಿಗೆ ಸೆಕ್ಸ್ ಬಗ್ಗೆ ಇಂಟರೆಸ್ಟ್ ಇಲ್ಲದಿದ್ದರೂ ಆತ ಫ್ರೆಂಡ್ಲಿಯಾಗಿ ಇದ್ರೆ ಸಾಕು ಅಂದಿದ್ದಾರೆ. ಅವರ ಎಕ್ಸ್ ಪೀರಿಯನ್ಸ್ ಗಳು ಹೀಗಿವೆ.

ಮೀನಾ ಮುಂಬೈವಾಸಿ. ಆಕೆಗೆ ತನ್ನ ಗಂಡ ಸಲಿಂಗ ಕಾಮಿ ಅಂತ ಗೊತ್ತಾಯ್ತು. ಆ ಬಗ್ಗೆ ಆಕೆ ಹೇಗಂತಾಳೆ. 'ಮದುವೆ ಆದಾಗಿಂದಲೂ ಗಂಡ ಯಾವತ್ತೂ ಲೈಂಗಿಕತೆಯಲ್ಲಿ ಆಸಕ್ತಿ ತೋರಿಸಲಿಲ್ಲ. ನಾನು ಅರೇಂಜ್ಡ್ ಮ್ಯಾರೇಜ್ ಆಗಿದ್ದೆ. ನನ್ನ ಪತಿ ತುಂಬಾ ಸುಂದರವಾಗಿದ್ದ ಹಾಗಾಗಿ ನನ್ನ ಸ್ನೇಹಿತರೆಲ್ಲಾ ನನ್ನ ಮೇಲೆ ಅಸೂಯೆ ಪಡುತ್ತಿದ್ದರು. ಆದರೆ ಲೈಂಗಿಕತೆಯ ವಿಷ್ಯಕ್ಕೆ ಬಂದಾಗ ನಾನು ಅವನಿಗೆ ನನ್ನ ಮೇಲೆ ಆಸಕ್ತಿ ಹುಟ್ಟಲೇ ಇಲ್ಲ, ಲೈಂಗಿಕತೆಯಿಂದ ದೂರ ಓಡಲು ಏನಾದರೂ ದಾರಿ ಹುಡುಕುತ್ತಾ ಇರುತ್ತಿದ್ದ. ಒಂದು ದಿನ ನಾನು ಕೆಲಸ ಮುಗಿಸಿ ಬೇಗನೇ ಮನೆಗೆ ಬಂದೆ. ನನ್ನ ಬಳಿ ಇದ್ದ ಕೀ ಬಳಸಿ ಒಳಬಂದರೆ ಆತ ಬೇರೊಬ್ಬ ಪುರುಷನ ತೋಳಲಿದ್ದ. ನನಗೆ ಆಘಾತವಾಯ್ತು.

ಅಬ್ಬಬ್ಬಾ..31ನೇ ವಯಸ್ಸಿನಲ್ಲಿ 57 ಮಕ್ಕಳ ತಂದೆ, ತಿಂಗಳಿಗೆ ಐದು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡ್ತಾನಂತೆ!

ಆ ಕ್ಷಣ ಏನೂ ತೋಚಲಿಲ್ಲ. ಕುಸಿದು ಕುಳಿತು. ನನಗೆ ಮೋಸವಾಗಿದೆ ಎನ್ನುವ ಭಾವನೆ ಬಂತು, ಆದರೆ ಆತನ ನೆಮ್ಮದಿಯನ್ನು ಅವನಿಂದ ಕಿತ್ತುಕೊಳ್ಳುವುದು ಇಷ್ಟ ಇರಲಿಲ್ಲ. ಆತ ಆತನಿಗೆ ಏನು ಬೇಕೋ ಅದನ್ನು ಪಡೆಯ ಬಿಡುವುದು ಮುಖ್ಯ ಅನಿಸಿತು. ಹೀಗಾಗಿ ಅವರಿಬ್ಬರ ಸಂಬಂಧಕ್ಕೆ ಅಡ್ಡಿ ಆಗಲಿಲ್ಲ. ನನ್ನ ಲೈಂಗಿಕ ಭಾವಗಳನ್ನು ಅದುಮಿಟ್ಟೆ. ಗಂಡ ಓರ್ವ ಉತ್ತಮ ಸ್ನೇಹಿತ, ಸಂಗಾತಿಯಾಗಿದ್ದ. ಕ್ರಮೇಣ ನಮ್ಮ ನಡುವೆ ಲೈಂಗಿಕತೆ ಬೆಳೆಯಿತು. ಆತನ ಸ್ನೇಹಿತ ಜೊತೆಗೂ ಸಂಬಂಧ ಮುಂದುವರಿದೆ' ಎನ್ನುತ್ತಾರೆ ಮೀನಾ.

ಇನ್ನೊಬ್ಬ ಹೆಸರು ಹೇಳಲಿಚ್ಛಿಸದ ಮಹಿಳೆ ತನಗೆ ಲೈಂಗಿಕ ತೃಪ್ತಿ ಸಿಗದೇ ಬೇರೆ ಹುಡುಗನ ಜೊತೆ ಸಂಬಂಧ ಇರಿಸಿಕೊಂಡ ಕಥೆ ಹೇಳ್ತಾರೆ. 'ನನ್ನ ಪತಿ ದೂರದ ದೇಶದಲ್ಲಿದ್ದರು. ನಾನು ನನ್ನ ಮಗುವಿನ ಜೊತೆ ಮೂರು ತಿಂಗಳು ಒಬ್ಬಂಟಿಯಾಗಿದ್ದೆ. ಆಗ ನಾನು ಸ್ಕೈಪ್‌ನಲ್ಲಿ ಸುಮಾರು 19 ರಿಂದ 20 ವರ್ಷ ವಯಸ್ಸಿನ ಒಬ್ಬ ಹದಿಹರೆಯದ ಹುಡುಗನನ್ನು ಕಂಡುಕೊಂಡೆ. ಅವನು ಅದೇ ಊರಿನವನಾಗಿದ್ದರಿಂದ ಇಬ್ಬರೂ ಭೇಟಿಯಾದೆವು. ಲೈಂಗಿಕ ಬಯಕೆಯನ್ನು ತೀರಿಸಿಕೊಂಡೆವು. ನನ್ನ ಪತಿ ಊರಿಗೆ ಹಿಂತಿರುಗುವ 2-3 ದಿನಗಳ ಮೊದಲು ನಾವು ನಮ್ಮ ಸಂಬಂಧವನ್ನು ಕೊನೆಗೊಳಿಸಿದ್ದೇವೆ . ಅವನು ವಯಸ್ಸಿನಲ್ಲಿ ನನಗಿಂತ ಚಿಕ್ಕವನಾಗಿದ್ದ ಕಾರಣ ನಾನು ಹೊಂದಬಹುದಾದ ಅತ್ಯುತ್ತಮ ಲೈಂಗಿಕತೆ ಇದಾಗಿತ್ತು, ಪ್ರತಿ ಬಾರಿಯೂ ಹೊಸದನ್ನು ಪ್ರಯತ್ನಿಸಲು ಸಿದ್ಧನಾಗಿದ್ದ, ಅವನು ಹೆಚ್ಚಿನ ಲೈಂಗಿಕ (Sex) ಬಯಕೆಯನ್ನು ಹೊಂದಿದ್ದನು. ಗರ್ಭಾವಸ್ಥೆಯಲ್ಲಿ ಮೂಡಿರುವ ಸ್ಟ್ರಚ್‌ ಮಾರ್ಕ್‌(Strech mark) ಬಗ್ಗೆ ಆತ ತಲೆಕೆಡಿಸಿಕೊಳ್ಳಲಿಲ್ಲ' ಎನ್ನುತ್ತಾರೆ.

Relationship Tips: ನಾನ್ಯಾಕೆ ಒಂಟಿ? ಈ ಪ್ರಶ್ನೆ ಕಾಡ್ತಿದ್ರೆ ಇದನ್ನೋದಿ

ಸುಜು ಮಾತ್ರ ಗಂಡನಿಂದ ತೃಪ್ತಿ ಸಿಗದೇ ಆತನಿಗೆ ತಿಳಿಯದ ಹಾಗೆ ಇನ್ನೊಬ್ಬರ ಜೊತೆ ಸಂಬಂಧ ಇರಿಸಿಕೊಂಡರು. 'ನಾನು ನನ್ನ ಪತಿಗೆ (Husband) ಮೋಸ ಮಾಡುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ನಾನು ನನ್ನ ಬಹುಕಾಲದ ಉತ್ತಮ ಸ್ನೇಹಿತನ ಜೊತೆ ಸಂಬಂಧವನ್ನು ಬೆಳೆಸಿದ್ದೆ, ಈ ವಿಷ್ಯವನ್ನು ಮುಚ್ಚಿಡುವುದಾಗಿ ನಾನು ಯೋಚಿಸಿದ್ದೆ. ಆದರೆ ಈ ಘಟನೆ ನಡೆದು ಕೆಲವು ತಿಂಗಳುಗಳ ನಂತರ, ನನ್ನ ಪಾಪಪ್ರಜ್ಞೆಯು ನನ್ನನ್ನು ಕಾಡಲಾರಂಭಿಸಿತು.ನಾನು ನನ್ನ ಗಂಡನ ಮುಂದೆ ಎಲ್ಲವನ್ನೂ ಬಿಚ್ಚಿಟ್ಟೆ. ಅವನು ಆಘಾತಕ್ಕೊಳಗಾದನು ಮತ್ತು ಅಸೂಯೆಯಿಂದ ಅವನು ಆ ರಾತ್ರಿ ನನ್ನ ಲೈಂಗಿಕ ಜೀವನವನ್ನು(Life) ನಾನು ಹೇಗೆ ಊಹಿಸಿದ್ದೇನೋ ಹಾಗೆ ಆಗುವಂತೆ ಮಾಡಿದ. ಅಸೂಯೆ ಕೆಲಸ ಮಾಡಿದೆ. ಆ ಘಟನೆ ನಡೆದು ಒಂದು ವರ್ಷವಾಯಿತು, ನಾವು ಸಂತೋಷವಾಗಿದ್ದೇವೆ' ಎನ್ನುತ್ತಾರೆ ಸುಜು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?