ಜಡೆಯಲ್ಲಿ KitKat, MilkyBar, ಚಾಕೊಲೇಟ್ ಹೇರ್ ಸ್ಟೈಲ್‌ಗೆ ನೆಟ್ಟಿಗರು ಫಿದಾ

Published : Jan 28, 2023, 12:02 PM ISTUpdated : Jan 28, 2023, 12:06 PM IST
ಜಡೆಯಲ್ಲಿ KitKat, MilkyBar, ಚಾಕೊಲೇಟ್ ಹೇರ್ ಸ್ಟೈಲ್‌ಗೆ ನೆಟ್ಟಿಗರು ಫಿದಾ

ಸಾರಾಂಶ

ವಧುವಿನ ಜಡೆಯನ್ನು ಹೂವುಗಳಿಂದ ಅಲಂಕರಿಸಿರೋದನ್ನು ನೀವು ನೋಡಿರ್ತೀರಾ ? ಆದ್ರೆ ಚಾಕೋಲೇಟ್‌ಗಳಿಂದ ಅಲಂಕರಿಸಿರೋದನ್ನು ನೋಡಿದ್ದೀರಾ ? ಹಾಗಿದ್ರೆ ಇಲ್ಲಿದೆ ನೋಡಿ ಚಾಕೋಲೇಟ್ ಹೇರ್‌ಸ್ಟೈಲ್ ವೀಡಿಯೋ.

ಭಾರತದಲ್ಲಿ ಮದುವೆಗಳು ಅನೇಕ ಆಚರಣೆಗಳನ್ನು ಒಳಗೊಂಡಿರುವ ಭವ್ಯವಾದ ಮತ್ತು ಆಡಂಬರದ ಸಮಾರಂಭವಾಗಿದೆ. ಪ್ರತಿಯೊಬ್ಬರೂ ತಮ್ಮ ಮದುವೆಯ ದಿನದಂದು ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ. ಮಂಟಪದ ಡೆಕೊರೇಶನ್ ಹೇಗಿರಬೇಕು, ಫುಡ್ ಹೇಗಿರಬೇಕು ಎಂಬುದು ಒಂದು ಪ್ಲಾನ್ ಆದರೆ ತಾನು ಹೇಗೆ ರೆಡಿಯಾಗಬೇಕು ಎಂದು ವಧು ದೊಡ್ಡ ಲಿಸ್ಟ್‌ನ್ನೇ ಮಾಡಿರುತ್ತಾಳೆ. ಯಾವ ಕಾರ್ಯಕ್ರಮಕ್ಕೆ ಯಾವ ರೀತಿ ರೆಡಿ ಆಗಬೇಕು, ಯಾವ ರೀತಿಯ ಡ್ರೆಸ್, ಜ್ಯುವೆಲ್ಲರಿ ಧರಿಸಬೇಕು ಎಂದು ಪ್ಲಾನ್ ಮಾಡುತ್ತಾಳೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಅನೇಕ ಜೋಡಿಗಳು ತಮ್ಮ ಮದುವೆಗಳನ್ನು ಅಲಂಕಾರಗಳು ಮತ್ತು ದೃಶ್ಯಗಳ ಹಿನ್ನೆಲೆಯೊಂದಿಗೆ ಎದ್ದು ಕಾಣುವಂತೆ ಮಾಡಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ಟ್ರೆಂಡ್ ಅನ್ನು ಅನುಸರಿಸಿ, ವಧು ತನ್ನ ಮದುವೆಯ ಕಾರ್ಯಕ್ರಮವೊಂದರಲ್ಲಿ ವಿಭಿನ್ನ ಕೇಶವಿನ್ಯಾಸವನ್ನು ಪ್ರಯತ್ನಿಸಿದ್ದಾಳೆ. 

ವಧುವಿಗೆ ಚಾಕೋಲೇಟ್‌ ಹೇರ್‌ಸ್ಟೈಲ್‌, ವೀಡಿಯೋ ವೈರಲ್‌
ಮದುವೆ ಅಂದ್ಮೇಲೆ ವಧು (Bride)ವಿನ ಲುಕ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ವಧು ಯಾವ ರೀತಿಯ, ಯಾವ ಬಣ್ಣದ ಸೀರೆ ಧರಿಸಿದ್ದಾಳೆ. ಯಾವ ರೀತಿಯ ಜ್ಯುವೆಲ್ಲರಿ ಪೇರ್‌ಅಪ್ ಮಾಡಿಕೊಂಡಿದ್ದಾಳೆ. ಮೇಕಪ್‌, ಹೇರ್‌ಸ್ಟೈಲ್ ಹೇಗಿದೆ ಎಂಬುದನ್ನು ಎಲ್ಲರೂ ಗಮನಿಸುತ್ತಾರೆ. ಹೀಗಾಗಿ ಇಂಥ ಸಂದರ್ಭದಲ್ಲಿ ವೈರಲ್ ಆಗಲು ಚಿತ್ರವಿಚಿತ್ರ ಅಲಂಕಾರ (Makeup) ಮಾಡಿಕೊಳ್ಳುವವರೂ ಇದ್ದಾರೆ. ಹಾಗೇ ಇಲ್ಲೊಬ್ಬಾಕೆ, ಹೇರ್‌ ಸ್ಟೈಲ್‌ಗೆ ಹೂಗಳ ಬದಲಿದೆ ಚಾಕೋಲೇಟ್‌ಗಳನ್ನು ಬಳಸಿಕೊಂಡಿದ್ದಾಳೆ. ಸಂಪೂರ್ಣ ಹೇರ್‌ಸ್ಟೈಲ್‌ಗೆ ರೈನ್ಸ್ಟೋನ್ಸ್ ಅಥವಾ ಹೂವುಗಳ ಬದಲಿಗೆ ಚಾಕೊಲೇಟ್‌ ಅಥವಾ ಮಿಠಾಯಿಗಳನ್ನು ಇಟ್ಟು ಅಲಂಕರಿಸಲಾಗಿತ್ತು.

ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!

ಮೇಕಪ್ ಕಲಾವಿದೆ ಚಿತ್ರಾ ಅವರು ವಧುವಿನ ಕೇಶ ವಿನ್ಯಾಸವನ್ನು (Hairstyle) ಚಾಕೊಲೇಟ್ ಮತ್ತು ಟೋಫಿ ಸೇರಿಸಿ ಮಾಡಿದ್ದಾರೆ. ವಿಶಿಷ್ಟವಾದ ಕೇಶವಿನ್ಯಾಸವು ಕಿಟ್ ಕ್ಯಾಟ್, 5 ಸ್ಟಾರ್, ಮಿಲ್ಕಿಬಾರ್ ಮತ್ತು ಫೆರೆರೋ ರೋಚರ್‌ನಂತಹ ಬ್ರ್ಯಾಂಡ್‌ಗಳ ಚಾಕೊಲೇಟ್‌ಗಳಿಂದ ಅಲಂಕರಿಸಲ್ಪಟ್ಟ ಬ್ರೇಡ್ ಅನ್ನು ಒಳಗೊಂಡಿದೆ. ವಧು ತನ್ನ ಹಳದಿ ಉಡುಪಿಗೆ ಪೂರಕವಾದ ಕಿವಿಯೋಲೆಗಳಾಗಿ (Earrings) ಮ್ಯಾಂಗೋ ಬೈಟ್ ಟೋಫಿಗಳನ್ನು ಧರಿಸಿದ್ದಳು. ಇಷ್ಟೇ ಅಲ್ಲ, ಆಕೆಯ ಸೊಂಟದ ಪಟ್ಟಿ, ಮಾಂಗ್ ಟಿಕ್ಕಾ ಮತ್ತು ನೆಕ್ಲೇಸ್ ಕೂಡಾ ಸಿಹಿತಿಂಡಿ (Sweets) ಹಾಗೂ ಚಾಕೋಲೇಟ್‌ಗಳನ್ನು ಒಳಗೊಂಡಿತ್ತು. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವೀಡಿಯೋ ಎರಡು ಲಕ್ಷ ಲೈಕ್‌ಗಳನ್ನು ಮತ್ತು ಆರು ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಹಲವಾರು ಇದಕ್ಕೆ ಹಾರ್ಟ್‌ ಎಮೋಜಿಯ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ವಧು ಮಕ್ಕಳ ಬಳಿ ಸುಳಿಯವುದು ಒಳ್ಳೆಯದಲ್ಲ', 'ಮಕ್ಕಳಿಂದ ದೂರವಿರದಿದ್ದರೆ ವಧುವಿನ ಹೇರ್ ಸ್ಟೈಲ್ ಹಾಳಾಗಬಹುದು' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು, 'ಮಕ್ಕಳಿಂದ ಸುರಕ್ಷಿತವಾಗಿರಿ, ಇಲ್ಲದಿದ್ದರೆ ನೀವು ಚೆನ್ನಾಗಿ ಕಾಣಲು ಸಾಧ್ಯವಿಲ್ಲ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಹುಡುಗರೇ, ಇದು ಒಬ್ಬರ ಸೃಜನಶೀಲತೆ ಮತ್ತು ಪ್ರತಿಭೆ (Talent), ಆದ್ದರಿಂದ ನಾವು ಅದನ್ನು ಟೀಕಿಸದೇ ಪ್ರಶಂಸಿಸಬೇಕು' ಎಂದು ಸಲಹೆ ನೀಡಿದ್ದಾರೆ.

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ಇಂದಿನ ದಿನಗಳಲ್ಲಿ ಕೇಶ ವಿನ್ಯಾಸವು ತುಂಬಾ ತಮಾಷೆಯಾಗಿರುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಸೇರಿಸಿದ್ದಾರೆ. ವಧುವಿನ ಮೇಕ್ಅಪ್ ಚೆನ್ನಾಗಿ ಮಾಡಲಾಗಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. 'ಒಳ್ಳೆಯ ಐಡಿಯಾ, ಕಾರ್ಯಕ್ರಮ ಮುಗಿದ ಬಳಿಕ ನಾವು ಅದನ್ನು ತಿನ್ನಬಹುದು ಅಥವಾ ಎಲ್ಲರಿಗೂ ಹಂಚಿಕೊಳ್ಳಬಹುದು' ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?