ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಐಸ್ ವಾಟರ್ ಬ್ಯೂಟಿ ಟಿಪ್ಸ್ ನೀಡಿದ್ದಾರೆ. ಪ್ರತಿದಿನವೂ ಹೀಗೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಅವರು ಹೇಳಿರೋದೇನು?
ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ರಾಗಿಣಿ ಬ್ಯೂಟಿಗೆ ಮತ್ತು ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್ ನೆಸ್ ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ. ರಾಗಿಣಿ ದ್ವಿವೇದಿ ಈಚೆಗಷ್ಟೆ ಜೀರೋ ಫಿಗರ್ ಮಾಡಿಕೊಂಡು ಅದರ ಫೋಟೋಗಳನ್ನು ಶೇರ್ ಮಾಡಿದ್ದರು. ಇವರು ಆಗಾಗ ಫ್ಯಾಷನ್ ಶೋದಲ್ಲೂ ಭಾಗಿ ಆಗುತ್ತಾರೆ. ಶೋ ಟಾಪರ್ ಆಗಿಯೂ ಹೊಳೆಯುತ್ತಾರೆ. ಅವರು ಈಚೆಗೆ ತಮ್ಮ ಫಿಟ್‌ನೆಸ್ ಸೀಕ್ರೆಟ್ ಬಿಚ್ಚಿಟ್ಟಿದ್ದರು. ಯೋಗ ಮಾಡ್ತಿರುವ ವೀಡಿಯೋ ಶೇರ್ ಮಾಡುವ ಮೂಲಕ ತಾವೆಷ್ಟು ಫಿಟ್ ಎಂಬುದನ್ನ ನಟಿ ತಿಳಿಸಿದ್ದರು. ಜೊತೆಗೆ ಇತರರು ಯೋಗ ಮಾಡಲು ಅವರು ಪ್ರೇರೇಪಿಸುತ್ತಿದ್ದಾರೆ.
ಅವರ ಈ ಸ್ಮಾರ್ಟ್ನೆಸ್ನಿಂದಾಗಿಯೇ ಇವರಿಗೆ ಬಾಲಿವುಡ್ನಲ್ಲಿಯೂ ಆಫರ್ ಬಂದಿದೆ. ಕನ್ನಡ ಚಿತ್ರರಂಗದ ಹಾಟ್ ಆಂಡ್ ಕ್ಯೂಟ್ ಎನಿಸಿಕೊಂಡಿರುವ ರಾಗಿಣಿ ದ್ವೀವೇದಿ ಬಾಲಿವುಡ್ ಅಂಗಳಕ್ಕೂ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಹಿಂದಿ ಸಿನಿಮಾವೊಂದಕ್ಕೆ ಸಹಿ ಮಾಡಿ ಚಿತ್ರಿಕರಣ ಆರಂಭಿಸಿದ್ದಾರೆ. ರಾಗಿಣಿ ಸಹಿ ಮಾಡಿರುವ ಹಿಂದಿ ಚಿತ್ರದ ಹೆಸರು ವಾಲ್ಕೇರ್ ಹೌಸ್ ಎಂದು. ಈಗಾಗಲೇ ಲಂಡನ್‌ನಲ್ಲಿ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದು ಹಾರರ್ ಸಿನಿಮಾ.
ಇವುಗಳ ನಡುವೆಯೇ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿಯೂ (Social Media) ಸಕತ್ ಆ್ಯಕ್ಟೀವ್ ಆಗಿದ್ದು, ಆಗಾಗ್ಗೆ ಬ್ಯೂಟಿ ಟಿಪ್ಸ್ ಕೊಡುತ್ತಿರುತ್ತಾರೆ. ಇದೀಗ ನಟಿ ಐಸ್ ನೀರಿನಲ್ಲಿ ಪ್ರತಿದಿನ ಮೂರು ನಿಮಿಷ ಮುಖವನ್ನಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಹೀಗೆ ಮಾಡುವುದು ಸ್ವಲ್ಪ ಕಷ್ಟವೇ. ಆದರೆ ಪ್ರತಿದಿನವೂ ಹೀಗೆ ಮಾಡಿದರೆ ಆಗುವ ಅಭೂತಪೂರ್ವ ಬದಲಾವಣೆಯನ್ನು ನೀವು ನೋಡಬಹುದು ಎಂದಿರುವ ರಾಗಿಣಿ ಇದಕ್ಕೆ ನಾನು ಚಾಲೆಂಜ್ ಮಾಡುತ್ತೇನೆ ಎಂದಿದ್ದಾರೆ.
ಹೆಣ್ಣಿನ ಐದು ಸೋಲುಗಳು ಇವೇ ಅಂತೆ- 'ಭೂಮಿಗೆ ಬಂದ ಭಗವಂತ' ಹೇಳಾಯ್ತು... ನೀವೇನ್ ಹೇಳ್ತೀರಿ?
ಇದಾಗಲೇ ಐಸ್ ವಾಟರ್ (Ice Water) ಮುಖಕ್ಕೆ ಹಾಗೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಕಣ್ಣುಗಳ ಕೆಳಗೆ ಪಫಿನೆಸ್ ಮತ್ತು ಕಪ್ಪು ವಲಯ ನಿವಾರಣೆಗೆ ಐಸ್ ಕ್ಯೂಬ್ ಸಹಕಾರಿ ಎನ್ನಲಾಗುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣುಗಳು ಊದಿಕೊಂಡಿದ್ದ ಸಂದರ್ಭದಲ್ಲಿ ಕಪ್ಪು ವರ್ತುಲ ಉಂಟಾಗುತ್ತದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಐಸ್ ಫೇಶಿಯಲ್ ಮಾಡಬೇಕು ಎಂದು ಬ್ಯೂಟಿಷಿಯನ್ ಟಿಪ್ಸ್ ನೀಡುತ್ತಾರೆ. ಹತ್ತಿ ಬಟ್ಟೆಯಲ್ಲಿ ಐಸ್ ತುಂಡು ಸುತ್ತಿ ಕಣ್ಣುಗಳ ಕೆಳಗೆ ಹಚ್ಚಿದರೆ ಸಮಸ್ಯೆ ಕಡಿಮೆ ಮಾಡುತ್ತದೆ. ಐಸ್ ಫೇಶಿಯಲ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸನ್ ಬರ್ನ್, ಟ್ಯಾನಿಂಗ್, ರಕ್ತ ಪರಿಚಲನೆ ಹೆಚ್ಚಿಸಿ, ನೈಸರ್ಗಿಕವಾಗಿ ಹೊಳೆಯುವಂತೆ ಕಾಣುತ್ತದೆ ಎನ್ನಲಾಗುತ್ತದೆ. ಇಷ್ಟೇ ಅಲ್ಲದೇ, ಐಸ್ ಕ್ಯೂಬ್ ಮುಖದ ಮೇಲೆ ಇಟ್ಟುಕೊಳ್ಳುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ, ಉರಿಯೂತದ ಗುಣಲಕ್ಷಣ ಕಡಿಮೆ ಆಗುತ್ತದೆ. ಹಾಲನ್ನು ಘನೀಕರಿಸಿ, ಐಸ್ ಕ್ಯೂಬ್ ಮಾಡಿಕೊಂಡು ಚರ್ಮದ ಮೇಲೆ ಉಜ್ಜಿದರೆ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ ಎಂದು ಬ್ಯೂಟಿಷಿಯನ್ ಹೇಳುತ್ತಾರೆ.
ಇದೇ ಟಿಪ್ಸ್ ಅನ್ನು ಈಗ ನಟಿ ರಾಗಿಣಿ ದ್ವಿವೇದಿಯವರೂ ನೀಡಿದಂತಿದೆ. ಐಸ್ ವಾಟರ್ ಫೇಶಿಯಲ್ (Facial) ಮಾಡಲು ಒಂದು ಬೌಲ್ ನಲ್ಲಿ 10 ಐಸ್ ಕ್ಯೂಬ್ ತೆಗೆದುಕೊಂಡು ಬಟ್ಟಲಿಗೆ ಸ್ವಲ್ಪ ನೀರು ಸೇರಿಸಿ ಮತ್ತು ಐಸ್ ತುಂಡುಗಳು ಕರಗಲು ಬಿಡಬೇಕು. ನಂತರ ಅದರಲ್ಲಿ ಮುಖವನ್ನು ಅದ್ದಿ ತೆಗೆದರೆ ಪ್ರಯೋಜನಕಾರಿ ಎನ್ನುವಂತೆ ಅವರ ಈ ವಿಡಿಯೋ ತೋರಿಸುತ್ತದೆ. ಚಿತ್ರನಟಿಯರು ಎಂದರೆ ಸಿಕ್ಕಾಪಟ್ಟೆ ಮೇಕಪ್ ಮಾಡುವ ಅನಿವಾರ್ಯತೆ ಇರುತ್ತದೆ. ಚಿತ್ರಗಳಲ್ಲಿ ನಟಿಸುವಾಗ ಮಾತ್ರವಲ್ಲದೇ ಎಲ್ಲಿ ಹೋದರೂ ಇವರಿಗೆ ಮೇಕಪ್ ಬೇಕೇ ಬೇಕು. ಇಂಥ ಸಂದರ್ಭಗಳಲ್ಲಿ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವುದು ಸಹಜ. ಅವುಗಳಿಂದ ಮುಕ್ತಿಹೊಂದಲು ನಟಿ ಐಸ್ ನೀರಿನ ಮೊರೆ ಹೋಗಿದ್ದಾರೆ. ಐಸ್ ನೀರಿನಿಂದ ಹಲವು ಪ್ರಯೋಜನಗಳು ಇದ್ದು, ಒಮ್ಮೆ ಟ್ರೈ ಮಾಡಿ ಎಂದು ನಟಿ ಹೇಳಿದ್ದಾರೆ.
ಮಕ್ಕಳಿಗೆ ಗುಡ್ ಟಚ್, ಬ್ಯಾಡ್ ಟಚ್ ಬಗ್ಗೆ ಹೇಳಿಕೊಟ್ಟ ಶಿಕ್ಷಕಿ, ವಿಡಿಯೋ ವೈರಲ್