
ಆರೋಗ್ಯಕ್ಕೆ ನಿದ್ದೆ ತುಂಬಾ ಮುಖ್ಯ. ನಿದ್ದೆ ಕಡಿಮೆಯಾದರೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಚರ್ಮ ಪೇಲವವಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ. ಹೀಗಾಗಿ ಆರೋಗ್ಯಕ್ಕೆ ಬೇಕಾದಷ್ಟು ನಿದ್ದೆ ಮಾಡುವಂತೆ ಸೂಚಿಸುತ್ತಾರೆ. ಅಚ್ಚರಿಯೆಂದರೆ ನಿಜ ಜೀವನದಲ್ಲಿ ಸ್ಲೀಪಿಂಗ್ ಬ್ಯೂಟಿ ಕರೆಸಿಕೊಳ್ಳೋ ಯುವತಿ ದಿನಕ್ಕೆ 22 ಗಂಟೆಗಳ ಕಾಲ ನಿದ್ರಿಸುತ್ತಾಳಂತೆ. ಅಪರೂಪದ ಅಸ್ವಸ್ಥತೆಯಿಂದ ದಿನಕ್ಕೆ 22 ಗಂಟೆಗಳ ಕಾಲ ನಿದ್ರಿಸುವ ಮಹಿಳೆಯನ್ನು ನಿಜ ಜೀವನದ ಸ್ಲೀಪಿಂಗ್ ಬ್ಯೂಟಿ ಎಂದು ಕರೆಯಲಾಗುತ್ತಿದೆ. 38 ವರ್ಷದ ಜೋನ್ನಾ ಕಾಕ್ಸ್ ಅತಿಯಾದ ನಿದ್ರೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮತ್ತು ದಿನದಲ್ಲಿ ಎಚ್ಚರವಾಗಿರಲು ಒದ್ದಾಡುತ್ತಿದ್ದಾರೆ.
ಹಗಲಿನಲ್ಲಿಯೂ ಎಚ್ಚರವಾಗಿರಲಾಗದೆ ಒದ್ದಾಡುವ ಯುವತಿ
ಸ್ಲೀಪಿಂಗ್ ಬ್ಯೂಟಿ ಎಂದು ಕರೆಸಿಕೊಳ್ಳುವ ಯುವತಿ ಇಡಿಯೋಪಥಿಕ್ ಹೈಪರ್ಸೋಮ್ನಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈ ಸ್ಥಿತಿಯಲ್ಲಿ ವ್ಯಕ್ತಿ ಯಾವಾಗಲೂ ಆಯಾಸವನ್ನು ಅನುಭವಿಸುತ್ತಾರೆ. ಹಗಲಿನಲ್ಲಿಯೂ ಎಚ್ಚರವಾಗಿರಲು ಒದ್ದಾಡುತ್ತಾರೆ. ಜೋನ್ನಾ 2017 ರಲ್ಲಿ ವಿಲಕ್ಷಣ ರೋಗಲಕ್ಷಣಗಳನ್ನು (Symptoms) ಅನುಭವಿಸಲು ಪ್ರಾರಂಭಿಸಿದಾಗ ಅವಳು ಹಗಲಿನಲ್ಲಿ ದಣಿದ ಭಾವನೆಯನ್ನು ಕಂಡುಕೊಂಡಳು. ಕ್ಲಬ್‌ಗಳು ಮತ್ತು ಕಾರ್‌ಗಳಲ್ಲಿ ಅವಳು ನಿದ್ರಿಸುತ್ತಿದ್ದಳು. ಮೊದಲಿಗೆ, ಅವರು ಖಿನ್ನತೆ (Anxiety) ಎಂದು ಭಾವಿಸಿದರು. ಆದರೆ ನಂತರ ಇದು ಕಾಯಿಲೆ (Disease)ಯೆಂದು ತಿಳಿದುಬಂತು ಎಂದು ಜೋನ್ನಾ ಹೇಳುತ್ತಾರೆ.
ಐದು ಗಂಟೆಗಿಂತ ಕಡಿಮೆ ನಿದ್ದೆ ಮಾಡ್ತೀರಾ? ಕಾಯಿಲೆ ಕಾಡೋದು ಗ್ಯಾರಂಟಿ !
ನಿದ್ದೆ ಮಾಡದೆ ಎಚ್ಚರವಾಗಿದ್ದರೆ ಭ್ರಮಾಲೋಕದ ಸ್ಥಿತಿ
ರೋಗಲಕ್ಷಣಗಳು ಉಲ್ಬಣಗೊಂಡ ಕಾರಣ ಜೋನ್ನಾ 2019ರಲ್ಲಿ ತನ್ನ ಕೆಲಸವನ್ನು ತೊರೆದಳು. ಅಂತಿಮವಾಗಿ ಆಕೆಯನ್ನು ಅಕ್ಟೋಬರ್ 2021 ರಲ್ಲಿ ಯಾರ್ಕ್‌ಷೈರ್‌ನ ಪಾಂಟೆಫ್ರಾಕ್ಟ್ ಆಸ್ಪತ್ರೆಯಲ್ಲಿ (Hospital) ಸ್ಲೀಪ್ ಕ್ಲಿನಿಕ್‌ಗೆ ಉಲ್ಲೇಖಿಸಲಾಯಿತು. ಅಧಿಕೃತವಾಗಿ ಅಪರೂಪದ ನಿದ್ರೆಯ ಅಸ್ವಸ್ಥತೆಯನ್ನು ಗುರುತಿಸಲಾಯಿತು. ವರ್ಷಗಳಲ್ಲಿ, ಆಕೆಯ ಸ್ಥಿತಿಯು ಹದಗೆಟ್ಟಿದೆ. ಅವಳು ಎಚ್ಚರವಾಗಿರಲು ಪ್ರಯತ್ನಿಸಿದಾಗ ಭ್ರಮಾಲೋಕದಲ್ಲಿ ಇರುವ ಸ್ಥಿತಿಯನ್ನು ಅನುಭವಿಸುತ್ತಾಳೆ ಎಂದು ತಿಳಿದುಬಂದಿದೆ.
ಜೋನ್ನಾ ಪ್ರೋಟೀನ್ ಶೇಕ್‌ಗಳು ಮತ್ತು ರೆಡಿ-ಟು-ಈಟ್ ಊಟವನ್ನು ಸೇವಿಸುತ್ತಾಳೆ. ನಾನು ನಿಜ ಜೀವನದಲ್ಲಿ ಸ್ಲೀಪಿಂಗ್ ಬ್ಯೂಟಿಯಂತೆ ಇದ್ದೇನೆ, ನಾನು ಮಲಗಿದ ನಂತರ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನನಗೆ ಕೆಲಸ ಮಾಡಲು ಸಾಧ್ಯವಿಲ್ಲ, ನನಗೆ ಚಾಲನೆ ಮಾಡಲು ಸಾಧ್ಯವಿಲ್ಲ ಮತ್ತು ನಾನು ಎಂದಿಗೂ ಯಾವುದೇ ಯೋಜನೆಗಳನ್ನು ಮಾಡಲು ಸಾಧ್ಯವಿಲ್ಲ ಏಕೆಂದರೆ ನಾನು ಎಚ್ಚರವಾಗಿರುತ್ತೇನೆಯೇ ಎಂದು ನನಗೆ ತಿಳಿದಿಲ್ಲ. ಇದು ಯಾವ ದಿನ ಅಥವಾ ನಾನು ಎಷ್ಟು ಸಮಯ ನಿದ್ರಿಸುತ್ತಿದ್ದೇನೆ (Sleeping) ಎಂದು ತಿಳಿಯದೆ ನಾನು ಎಚ್ಚರಗೊಳ್ಳುತ್ತೇನೆ. ಇದು ಬದುಕಲು ತುಂಬಾ ಪ್ರತ್ಯೇಕವಾದ ಸ್ಥಿತಿಯಾಗಿದೆ ಮತ್ತು ನನಗೆ ನಿಜವಾಗಿಯೂ ಸಹಾಯ ಬೇಕು' ಎಂದು ಜೋನ್ನಾ ಹೇಳುತ್ತಾರೆ.
ನಿದ್ದೆ ಹೆಚ್ಚಾದ್ರೆ ಆರೋಗ್ಯಕ್ಕೆ ಕುತ್ತು, ಬ್ರೈನ್ ಸ್ಟ್ರೋಕ್ ಕೂಡಾ ಆಗ್ಬೋದು!
'ಇತ್ತೀಚೆಗೆ ಒಂದು ದಿನ, ನಾನು 12 ಗಂಟೆಗಳ ಕಾಲ ಎಚ್ಚರವಾಗಿದ್ದೆ ಮತ್ತು ಇದು ಸುಮಾರು ಆರು ವರ್ಷಗಳಲ್ಲಿ ನಾನು ಎಚ್ಚರವಾಗಿರುವುದು ಅತಿ ದೀರ್ಘ ಸಮಯವಾಗಿದೆ' ಎಂದು ಅವರು ಹೇಳಿದರು. ಜೋನ್ನಾ ವಿಭಿನ್ನ ಚಿಕಿತ್ಸೆಗಳು (Treatment) ಮತ್ತು ಔಷಧಿ (Medicine)ಗಳನ್ನು ಪ್ರಯತ್ನಿಸಿದ್ದಾರೆ, ಆದರೆ ಅದ್ಯಾವುದೂ ಅವರ ರೋಗಲಕ್ಷಣಗಳನ್ನು ಕಡಿಮೆ ಮಾಡಿಲ್ಲ ಎಂದು ತಿಳಿಸುತ್ತಾರೆ. ಅದೇನೆ ಇರ್ಲಿ, ದಿನಪೂರ್ತಿ ಮಲಗಿದ್ದು, ಎಚ್ಚರ ಇರಲಾಗದ ಮಹಿಳೆಯ (Women) ಸ್ಥಿತಿ ನಿಜಕ್ಕೂ ಆಘಾತಕಾರಿಯಾಗಿದೆ ಅನ್ನೋದಂತೂ ನಿಜ.
ಮಿಲಿಟರಿ ನಿಯಮ ಪಾಲಿಸಿದ್ರೆ ಗಾಢ ನಿದ್ರೆ ಆವರಿಸೋದು ಗ್ಯಾರಂಟಿ, ಹಾಗಂದ್ರೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.