ಮುಕಾಬಲಾ ಹಾಡಿಗೆ ಹಳ್ಳಿ ಮಹಿಳೆಯ ಸಖತ್ ಡ್ಯಾನ್ಸ್‌, ಲೇಡಿ ಪ್ರಭುದೇವ ಎಂದು ಹೊಗಳಿದ ನೆಟ್ಟಿಗರು

Published : Mar 01, 2023, 02:55 PM IST
ಮುಕಾಬಲಾ ಹಾಡಿಗೆ ಹಳ್ಳಿ ಮಹಿಳೆಯ ಸಖತ್ ಡ್ಯಾನ್ಸ್‌, ಲೇಡಿ ಪ್ರಭುದೇವ ಎಂದು ಹೊಗಳಿದ ನೆಟ್ಟಿಗರು

ಸಾರಾಂಶ

ಡ್ಯಾನ್ಸ್ ಅಂದ್ರೆ ಪ್ರಭುದೇವ, ಪ್ರಭುದೇವ ಅಂದ್ರೆ ಡ್ಯಾನ್ಸ್‌. ಅಷ್ಟರಮಟ್ಟಿಗೆ ಡ್ಯಾನ್ಸರ್ ಮತ್ತು ಪ್ರಖ್ಯಾತ ಕೊರಿಯೋಗ್ರಾಫರ್ ಆಗಿರೋ ಪ್ರಭುದೇವ ಫೇಮಸ್. ಪ್ರಭುದೇವ ಡ್ಯಾನ್ಸ್‌ನ್ನು ನೀವೆಲ್ಲಾ ನೋಡಿರ್ತೀರಾ..ಆದ್ರೆ ಲೇಡಿ ಪ್ರಭುದೇವ ಡ್ಯಾನ್ಸ್ ನೋಡಿದ್ದೀರಾ..ಇಲ್ಲಿದೆ ನೋಡಿ ಝಲಕ್‌.

ಪ್ರಭುದೇವ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಜಬರ್ದಸ್ತ್‌ ಡ್ಯಾನ್ಸ್‌. ಬೇಕಾದಂತೆ ಮೈ ಬಳುಕಿಸೋ ಪ್ರಭುದೇವ ಮೂವ್‌ಮೆಂಟ್‌ನ್ನು ಎಲ್ಲರೂ ಇಷ್ಟಪಡ್ತಾರೆ. ಸಖತ್‌ ಟಫ್ ಸ್ಟೆಪ್‌ನ್ನು ಲೀಲಾಜಾಲವಾಗಿ ನಿರ್ವಹಿಸೋ ಚಾಕಚಕ್ಯತೆಗೆ ಬೆರಗಾಗುತ್ತಾರೆ.  ಡ್ಯಾನ್ಸ್ ಅಂದ್ರೆ ಪ್ರಭುದೇವ, ಪ್ರಭುದೇವ ಅಂದ್ರೆ ಡ್ಯಾನ್ಸ್‌. ಅಷ್ಟರಮಟ್ಟಿಗೆ ಡ್ಯಾನ್ಸರ್ ಮತ್ತು ಪ್ರಖ್ಯಾತ ಕೊರಿಯೋಗ್ರಾಫರ್ ಆಗಿರೋ ಪ್ರಭುದೇವ ಫೇಮಸ್. ಪ್ರಭುದೇವ ಡ್ಯಾನ್ಸ್‌ನ್ನು ನೀವೆಲ್ಲಾ ನೋಡಿರ್ತೀರಾ..ಆದ್ರೆ ಲೇಡಿ ಪ್ರಭುದೇವ ಡ್ಯಾನ್ಸ್ ನೋಡಿದ್ದೀರಾ. ಪ್ರಭುದೇವ ಅವರ ಹಿಟ್ ಹಾಡು ಮುಕಾಬ್ ಲಾ ಮಹಿಳೆಯೊಬ್ಬರು ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸಂಚಲನ ಮೂಡಿಸಿದೆ. 

ಸೀರೆಯುಟ್ಟು ಸಖತ್‌ ಸ್ಟೆಪ್ಸ್ ಮಾಡಿದ ಹಳ್ಳಿಯ ಮಹಿಳೆ
ವೈರಲ್ ವಿಡಿಯೋದಲ್ಲಿ ಮಹಿಳೆ (Woman) ಸೀರೆಯುಟ್ಟು, ಹಳ್ಳಿಯೊಂದರ ಕಾರ್ಯಕ್ರಮದಲ್ಲಿ ನೃತ್ಯ (Dance) ಮಾಡುತ್ತಿರುವುದನ್ನು ನೋಡಬಹುದು. ಜನರು ಚಪ್ಪಾಳೆ ತಟ್ಟಿ ಮಹಿಳೆಯರನ್ನು ಹುರಿದುಂಬಿಸುತ್ತಾರೆ.  ಮಹಿಳೆ ಹಸಿರು ಮತ್ತು ಬಿಳಿ ಸೀರೆಯನ್ನು ಧರಿಸಿ ಜನಪ್ರಿಯ ಹಾಡಿಗೆ ನೃತ್ಯ ಮಾಡಿದರು. ಅವರು ಕೆಲವೊಂದು ಪ್ರಭುದೇವ ಕ್ಲಾಸಿಕ್ ಸ್ಟೆಪ್ಸ್‌ಗಳನ್ನು ಸಹ ಪ್ರಯತ್ನಿಸುತ್ತಾರೆ. ಹೀನಾಗ್‌ವಾಲಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವೀಡಿಯೋ 3.8 ಮಿಲಿಯನ್ ವೀಕ್ಷಣೆಗಳನ್ನು (Views) ಸಂಗ್ರಹಿಸಿದೆ. ನೆಟಿಜನ್‌ಗಳು ಆಕೆಯನ್ನು ಲೇಡಿ ಪ್ರಭುದೇವ ಎಂದು ಕೊಂಡಾಡಿದ್ದಾರೆ.

ಮದ್ವೆ ಮನೆಯಲ್ಲಿ ಸೀರೆಯುಟ್ಟು ಹುಡುಗರ ಮಸ್ತ್ ಮಸ್ತ್ ಡ್ಯಾನ್ಸ್‌, ವೀಡಿಯೋ ವೈರಲ್‌

ಲೇಡಿ ಪ್ರಭುದೇವ್ ಡ್ಯಾನ್ಸ್‌ಗೆ ನೆಟ್ಟಿಗರ ಮೆಚ್ಚುಗೆ
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು (Social media users) ಮಹಿಳೆಯ ಅದ್ಭುತ ನೃತ್ಯವನ್ನು ಹೊಗಳಿದ್ದಾರೆ. ಹಾರ್ಟ್‌ ಆಗುವ ನಗುವ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಮಹಿಳೆಯನ್ನು 'ಲೇಡಿ ಪ್ರಭುದೇವ' ಎಂದು ಕರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಅದ್ಭುತ ನೃತ್ಯ ಪ್ರದರ್ಶನ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಭಾವಂತ ಮಹಿಳೆ ಎಂದು ಕಾಮೆಂಟ್ ಮಾಡಿದ್ದಾರೆ.

ಈ ವೀಡಿಯೋವನ್ನು ಎಲ್ಲಿ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಇದು ಹಳ್ಳಿಯೊಂದರ ಗ್ರಾಮಸಭೆಯಂತೆ ಕಾಣುತ್ತದೆ. ಮಹಿಳೆ ಡ್ಯಾನ್ಸ್ ಮಾಡುತ್ತಿರುವಾಗ ಊರವರು ಕೂಗಿ ಬೆಂಬಲ ವ್ಯಕ್ತಪಡಿಸುತ್ತಾರೆ.  

ನಾಟು ನಾಟು... ಹಾಡಿಗೆ ಕುಣಿದ ಕೊರಿಯನ್ನರಿಗೆ ಪ್ರಧಾನಿ ಮೋದಿ ಫಿದಾ

ಸ್ಟ್ರೀಟ್ ಡ್ಯಾನ್ಸರ್ 3D ಚಿತ್ರದ ಪ್ರಸಿದ್ಧ ಹಾಡು ಮುಕಾಬ್ಲಾವನ್ನು ಯಶ್ ನಾರ್ವೇಕರ್ ಮತ್ತು ಪರಂಪರಾ ಠಾಕೂರ್ ಹಾಡಿದ್ದಾರೆ. ಮ್ಯೂಸಿಕ್ ಲೇಬಲ್ ಟಿ-ಸೀರೀಸ್ ಅಡಿಯಲ್ಲಿ ತನಿಷ್ಕ್ ಬಾಗ್ಚಿ ಹಿಟ್ ಸಂಖ್ಯೆಗೆ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ವರುಣ್ ಧವನ್, ಶ್ರದ್ಧಾ ಕಪೂರ್, ನೋರಾ ಫತೇಹಿ ಮತ್ತು ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?