ಕೆಲಸವಿಲ್ಲದ ಪತಿಯಿಂದ ಜೀವನಾಂಶ ಕೇಳಿದ ಮಹಿಳೆ; ಎಂಬಿಎ‌ ಓದಿದ್ದೀರಿ, ದುಡಿದು ತಿನ್ನಿ ಎಂದ ಕೋರ್ಟ್‌

Published : Apr 07, 2023, 01:51 PM ISTUpdated : Apr 07, 2023, 01:56 PM IST
ಕೆಲಸವಿಲ್ಲದ ಪತಿಯಿಂದ ಜೀವನಾಂಶ ಕೇಳಿದ ಮಹಿಳೆ; ಎಂಬಿಎ‌ ಓದಿದ್ದೀರಿ, ದುಡಿದು ತಿನ್ನಿ ಎಂದ ಕೋರ್ಟ್‌

ಸಾರಾಂಶ

ಮದುವೆಯಾಗಿ ವಿಚ್ಛೇದನ ಪಡೆದ ಬಳಿದ ಕಾನೂನಿನ ಪ್ರಕಾರ, ಪತಿಯಾದವನು ಮಾಜಿ ಪತ್ನಿಗೆ ಜೀವನಾಂಶ ನೀಡಬೇಕು. ಆದರೆ ಮಹಿಳೆಯೊಬ್ಬರು ಪತಿಯಿಂದ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಬದಲಿಗೆ ದುಡಿದು ತಿನ್ನುವಂತೆ ಸೂಚಿಸಿದೆ.  

ನವದೆಹಲಿ: ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜೀವನಾಂಶ ನೀಡುವಂತೆ ಪತ್ನಿ ಸಲ್ಲಿಸಿದ ಅರ್ಜಿಯನ್ನು ದೆಹಲಿಯ ನ್ಯಾಯಾಲಯ ತಿರಸ್ಕರಿಸಿದೆ. ಮದುವೆಯಾಗಿ ವಿಚ್ಛೇದನ ಪಡೆದ ಬಳಿದ ಕಾನೂನಿನ ಪ್ರಕಾರ, ಪತಿಯಾದವನು ಮಾಜಿ ಪತ್ನಿಗೆ ಜೀವನಾಂಶ ನೀಡಬೇಕು. ಕೆಲವು ಸಂದರ್ಭಗಳಲ್ಲಿ ಜೀವನಾಂಶ ನೀಡಲು ಪತಿಯು ನಿರಾಕರಿಸುವ ಕಾರಣ ಪತ್ನಿಯು ಕೋರ್ಟ್‌ ಮೊರೆ ಹೋಗುತ್ತಾರೆ. ಹಾಗೆಯೇ ಮಹಿಳೆಯೊಬ್ಬರು ಪತಿಯಿಂದ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಮಹಿಳೆ ಎಜುಕೇಟೆಡ್‌ ಮತ್ತು ದುಡಿಯಲು ಶಕ್ತಳಾಗಿದ್ದಾಳೆ ಎಂದು ತಿಳಿಸಿದೆ.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ವಯಂ ಸಿದ್ಧ ತ್ರಿಪಾಠಿ ಈ ಕಾಯ್ದೆಯಡಿ ತಿಂಗಳಿಗೆ 50,000 ಮಧ್ಯಂತರ ಜೀವನಾಂಶ (Alimony) ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು (Judge), 'ಪತ್ನಿ ಹೆಚ್ಚು ಅರ್ಹತೆ ಹೊಂದಿದ್ದಾರೆ ಮತ್ತು ತನಗಾಗಿ ಆದಾಯದ ಮೂಲವನ್ನು (Income source) ಕಂಡುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.ನಿರ್ವಹಣೆಗೆ ಅವಕಾಶ ನೀಡುವುದು ಕೇವಲ ಆಲಸ್ಯ ಮತ್ತು ಗಂಡನ (Husband) ಮೇಲೆ ಅವಲಂಬನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಆಕೆಯ ಗಳಿಸುವ ಸಾಮರ್ಥ್ಯದ ದೃಷ್ಟಿಯಿಂದ ನಾನು ಯಾವುದೇ ನಿರ್ವಹಣೆಯನ್ನು ನೀಡಲು ಒಲವು ತೋರುತ್ತಿಲ್ಲ' ಎಂದು ತಿಳಿಸಿದರು.

5 ಕೋಟಿ ಪರಿಹಾರ ಕೋರಿದ್ದ ಪತ್ನಿಗೆ 50 ಲಕ್ಷ ಜೀವನಾಂಶ: ಹೈಕೋರ್ಟ್‌

ಜೀವನಾಂಶ ಕೇಳಿದ ಪತ್ನಿಗೆ ದುಡಿದು ತಿನ್ನಿ ಎಂಬ ಸಲಹೆ ನೀಡಿದ ಕೋರ್ಟ್‌
ಕೆಲವು ಸಂದರ್ಭಗಳಲ್ಲಿ ಜೀವನಾಂಶ ನೀಡಲು ಪತಿಯು ನಿರಾಕರಿಸುವ ಕಾರಣ ಪತ್ನಿಯು ಕೋರ್ಟ್‌ ಮೊರೆ ಹೋಗುತ್ತಾರೆ. ಅಲ್ಲಿ ನ್ಯಾಯ ಪಡೆಯುತ್ತಾರೆ. ಆದರೆ, ದೆಹಲಿಯಲ್ಲಿ ಮಹಿಳೆಯೊಬ್ಬರು ಪತಿಯಿಂದ ಮಧ್ಯಂತರ ಜೀವನಾಂಶ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಹಾಗೆಯೇ, ದುಡಿದು ತಿನ್ನಿ ಎಂಬ ಸಲಹೆ (Suggestion) ನೀಡಿದೆ.

'ವಿಚ್ಛೇದನ ಪಡೆದ ಮಹಿಳೆಯು ಎಂಬಿಎ ಪದವೀಧರೆಯಾಗಿದ್ದಾರೆ. ಹೀಗಾಗಿ ಅವರು ಎಲ್ಲಾ ರೀತಿಯ ಕೆಲಸ ಮಾಡಬಲ್ಲರು, ಸ್ವಾವಲಂಬಿಯಾಗಬಲ್ಲರು. ಹೀಗಿರುವಾಗ ಪತಿಯಿಂದ ಜೀವನಾಂಶ ಪಡೆದರೆ ಅದು ಮಹಿಳೆಯನ್ನು ಆಲಸ್ಯಕ್ಕೆ ದೂಡುತ್ತದೆ. ಹಾಗೆಯೇ, ಪತಿಯ ಮೇಲೆ ಹೆಚ್ಚು ಅವಲಂಬಿತಳಾಗಿ ಇರುವಂತೆ ಮಾಡುತ್ತದೆ. ಮಹಿಳೆಯು ದುಡಿದು ಜೀವನ ಸಾಗಿಸಲು ಅರ್ಹರಾಗಿರುವ ಕಾರಣ ಪರಿಹಾರ ಕೊಡಬೇಕು ಎಂದು ಆದೇಶಿಸುವುದಿಲ್ಲ' ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಪತ್ನಿಗೆ ಆದಾಯವಿದ್ದರೂ ಪತಿ ಜೀವನಾಂಶದಿಂದ ವಂಚಿತಳಾಗಲು ಸಾಧ್ಯವಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು!

'ವಿಚ್ಛೇದನ ಪಡೆದ ಮಾತ್ರಕ್ಕೆ, ಪತಿಯಿಂದ ಬೇರಾದ ಮಾತ್ರಕ್ಕೆ ಆತನಿಂದ ಜೀವನಾಂಶ ಪಡೆಯಬೇಕು ಎಂಬ ಹಕ್ಕು ಇದ್ದರೂ, ಅದು ಎಲ್ಲಾ ಕಡೆ ಅನ್ವಯವಾಗುವುದಿಲ್ಲ . ಪತಿಯ ಆದಾಯ ಉತ್ತಮವಾಗಿದ್ದು, ಪತ್ನಿಯು ಜೀವನ ಸಾಗಿಸಲು ಕಷ್ಟ ಅನುಭವಿಸುತ್ತಿರಬೇಕು. ಆಕೆಯು ತನಗೆ ಬೇಕಾದ ಅವಶ್ಯತೆಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆಕೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗುತ್ತಾಳೆ' ಎಂದು ಹೇಳಿದರು.

ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ಪತಿ: ಮಹಿಳೆಯ ಪತಿಯು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸದ್ಯ ಯಾವುದೇ ಕೆಲಸ ಮಾಡುತ್ತಿಲ್ಲ. ಮಾತ್ರವಲ್ಲ ಯಾವುದೇ ರೀತಿಯ ಐಷಾರಾಮಿ ಜೀವನವನ್ನು ನಡೆಸುತ್ತಿಲ್ಲ ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ ಎಂದು ನ್ಯಾಯಾಧೀಶರು ಹೇಳಿದರು.ಪತ್ನಿಯು ಪತಿಯಷ್ಟೇ ವಿದ್ಯಾರ್ಹತೆ ಹೊಂದಿದ್ದಾರೆ. ಹಾಗೆಯೇ, ಅವರು ತಮಗಿರುವ ಅವಶ್ಯಕತೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಎಂಬಿಎ ಓದಿದರೂ ಉದ್ಯೋಗ ಹುಡುಕಿಲ್ಲ ಎಂಬ ಮಾಹಿತಿಯೂ ಇದೆ. ಹಾಗಾಗಿ, ಜೀವನಾಂಶ ನೀಡಬೇಕು ಎಂಬುದಾಗಿ ಆದೇಶಿಸಲು ಆಗುವುದಿಲ್ಲ ಎಂದು ತಿಳಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಸಾಲೆ ಪೌಡರ್ ಮಾಡುವಾಗ ಸ್ವಲ್ವೇ ಸ್ವಲ್ಪ ಅಕ್ಕಿ ಸೇರಿಸಿ, ಅಡುಗೆ ರುಚಿ ಡಬ್ಬಲ್ ಆಗುತ್ತೆ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!