Viral Video : ಈ ಮಹಿಳೆ ಬಟ್ಟೆ ಮಡಿಸುವ ಟೆಕ್ನಿಕ್ ಗೆ ಆನಂದ್ ಮಹೀಂದ್ರಾ ಫಿದಾ

Published : Apr 06, 2023, 02:32 PM IST
Viral Video : ಈ ಮಹಿಳೆ ಬಟ್ಟೆ ಮಡಿಸುವ ಟೆಕ್ನಿಕ್ ಗೆ ಆನಂದ್ ಮಹೀಂದ್ರಾ ಫಿದಾ

ಸಾರಾಂಶ

ನೀವು ದೊಡ್ಡ ಸಾಧನೆ ಮಾಡ್ಬೇಕಾಗಿಲ್ಲ. ಮನೆಯಲ್ಲಿ ಮಾಡುವ ಸಣ್ಣ ಕೆಲಸದಲ್ಲೇ ಕ್ರಿಯೆಟಿವಿಟಿ ತೋರಿಸಿದ್ರೆ ಸಾಕು. ಬಟ್ಟೆ ಮಡಿಸೋದು ಬೋರಿಂಗ್ ಅನ್ನೋರು ಹೊಸ ತಂತ್ರ ಕಲಿತು ಅದನ್ನು ಫಾಲೋ ಆಡ್ಬಹುದು. ಅದಕ್ಕೆ ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋ ನೋಡಿ.  

ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಸದಾ ಸಕ್ರಿಯವಾಗಿರ್ತಾರೆ. ಅವರ ಕಣ್ಣಿಗೆ ಯಾವುದೇ ವಿಶೇಷವಾದದ್ದು ಕಂಡ್ರೂ ಅದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳೋದನ್ನು ಅವರು ಮರೆಯೋದಿಲ್ಲ. ಆನಂದ್ ಮಹೀಂದ್ರಾ ಟ್ವಿಟರ್ ಫಾಲೋ ಮಾಡ್ತಿದ್ದರೆ ನೀವು ವಾರಕ್ಕೊಂದಾದ್ರೂ ವಿಶೇಷವೆನ್ನಿಸುವಂತಹ ವಿಡಿಯೋ ಅಥವಾ ಫೋಟೋವನ್ನು ನೋಡ್ಬಹುದು.  

ಆನಂದ್ ಮಹೀಂದ್ರಾ (Anand Mahindra) ಹಾಕಿದ ಎಲ್ಲ ಪೋಸ್ಟ್ ಗಳು ಸಾಮಾನ್ಯವಾಗಿ ವಿಶೇಷತೆ ಹೊಂದಿರುತ್ತವೆ. ಅವರು ಹಾಕಿದ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ (Viral) ಆಗುತ್ತದೆ. ಕೆಲ ದಿನಗಳ ಹಿಂದಷ್ಟೆ ಸೀಲಿಂಗ್ ಪ್ಯಾನ್ ಸಹಾಯದಿಂದ ಐಸ್ ಕ್ರೀಂ ತಯಾರಿಸಿದ ಮಹಿಳೆ ವಿಡಿಯೋ (Video) ವನ್ನು ಅವರು ಹಂಚಿಕೊಂಡಿದ್ದರು. ಅದು 3.3 ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದಿತ್ತು. ಈಗ ಆನಂದ್ ಮಹೀಂದ್ರಾ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.  
ಬಟ್ಟೆ ಮಡಸೋದು ಸುಲಭವಲ್ಲ. ಮನೆ ಕೆಲಸ ಮಾಡುವ ಗೃಹಿಣಿಗೆ ಬಟ್ಟೆಯನ್ನು ವಾಶ್ ಮಾಡೋದು ಮಾತ್ರವಲ್ಲ ಅದನ್ನು ಮಡಿಕೆಯಾಗದಂತೆ ಮಡಸಿಡುವುದು ಕೂಡ ಒಂದು ಕೆಲಸ. ಅನೇಕ ಕೆಲಸದ ಮಧ್ಯೆ ಈ ಕೆಲಸವನ್ನು ಸುಲಭಗೊಳಿಸಲು ಆಕೆ ನಾನಾ ತಂತ್ರವನ್ನು ಹುಡುಕ್ತಿರುತ್ತಾಳೆ. ಈಗ ಆನಂದ್ ಮಹೀಂದ್ರಾ ಅಂಥ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.  ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ, ಬಟ್ಟೆ ಮಡಿಸುವ ತಂತ್ರಜ್ಞಾನಕ್ಕೆ ಪ್ರಭಾವಿತರಾಗಿದ್ದಾರೆ. ಕೇವಲ ಮೂರು ಹಂತಗಳಿವೆ ಎಷ್ಟು ನೀಟಾಗಿ ಬಟ್ಟೆ ಮಡಿಸಬಹುದು ಎಂಬುದನ್ನು ತೋರಿಸಲಾಗಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಬಟ್ಟೆ ಮಡಿಸುವ ಕೆಲಸ ಬೇಗ ಬೇಗ ಆಗ್ಬೇಕು ಎನ್ನುವವರು ನೀವಾಗಿದ್ದು, ಹೊಸ ತಂತ್ರದ ಹುಡುಕಾಟದಲ್ಲಿದ್ದರೆ ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ ವೀಕ್ಷಣೆ ಮಾಡಿ, ಆ ಟ್ರಿಕ್ ಕಲಿರಿ.

AI ಚಾಟ್‌ಬಾಟ್‌ನಲ್ಲಿ ಫ್ಲರ್ಟ್ ಮಾಡೋಕೆ ಹೋಗಿ ಪೇಚಿಗೆ ಸಿಲುಕಿದ, ಯುವತಿ ಹೇಳಿದ್ದೇನು?

ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಏನಿದೆ? : ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊದಲ್ಲಿ  ಮಹಿಳೆಯೊಬ್ಬರು ಟಿ-ಶರ್ಟ್ ಅನ್ನು ಮಡಿಸುತ್ತಿರುವುದನ್ನು ಕಾಣಬಹುದು. ಮಹಿಳೆ ಮೊದಲು ಒಂದು ಮೇಜ್ ಮೇಲೆ ಟೀ ಶರ್ಟ್ ಇಡುತ್ತಾಳೆ. ನಂತ್ರ ಟೀ ಶರ್ಟ್ ನ ಒಂದು ಬದಿಯಲ್ಲಿ 1, 2 ಮತ್ತು 3 ಸಂಖ್ಯೆಗಳನ್ನು ಬರೆದ ಸಣ್ಣ ಕಾರ್ಡ್‌ಗಳನ್ನು ಇಡುತ್ತಾಳೆ. ನಂತ್ರ ಆ ಕಾರ್ಡನ್ನು ತೆಗೆದು ಸಂಖ್ಯೆಗೆ ಅನುಗುಣವಾಗಿ ಬಟ್ಟೆಯನ್ನು ತ್ವರಿತವಾಗಿ ಮಡಚುತ್ತಾರೆ. ಒಂದು ಮತ್ತು ಎರಡರ ಸಂಖ್ಯೆ ಬರೆದಿರುವ ಜಾಗವನ್ನು ಒಂದು ರೀತಿ ಮಡಚಿ ನಂತ್ರ ಮೂರನೇ ಸಂಖ್ಯೆಯಿದ್ದ ಬಟ್ಟೆ ಜಾಗವನ್ನು ಇನ್ನೊಂದು ರೀತಿಯಲ್ಲಿ ಮಡಚುತ್ತಾಳೆ.  ನಾನು ಈ ರೀತಿಯ ಸಣ್ಣ ವಿಷಯಗಳಿಂದ ಆಕರ್ಷಿತನಾಗದೆ ಇರಲಾರೆ. ಇದು ಜಗತ್ತನ್ನು ಬದಲಾಯಿಸದಿರಬಹುದು. ಆದರೆ ತುಂಬಾ ಸೃಜನಶೀಲವಾಗಿದೆ. ಪ್ರಾಪಂಚಿಕ ಕಾರ್ಯಗಳಲ್ಲಿ ಸಮಯವನ್ನು ಉಳಿಸುವ ಇಂಥ ಕೆಲಸ ಪ್ರಗತಿ ಎಂದು ಆನಂದ್ ಮಹೀಂದ್ರಾ ಶೀರ್ಷಿಕೆ ಹಾಕಿದ್ದಾರೆ. 

Health Tips : ಏನೋ ಆತಂಕ, ಪದೆ ಪದೇ ಲಟಿಕೆ ತೆಗೀತಾನೇ ಇರ್ತೀರಾ? ಇದು ಒಳ್ಳೇಯದಲ್ಲ!

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದೆ ಇಷ್ಟು ಕಮೆಂಟ್ : ಟ್ವಿಟರ್ ನಲ್ಲಿ ಹಂಚಿಕೊಂಡ ನಂತರ ಈ ಕ್ಲಿಪನ್ನು 12.1 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಟ್ವಿಟರ್ ಬಳಕೆದಾರರು ಮಹೀಂದ್ರಾ ಟ್ವಿಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದ್ಭುತ. ಸೃಜನಶೀಲತೆಯು ಲೌಕಿಕ ಚಟುವಟಿಕೆಗಳನ್ನು ವೀಕ್ಷಿಸುವುದು ರೋಮಾಂಚನವನ್ನುಂಟು ಮಾಡುತ್ತದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ಇದನ್ನು ಮಾಡುತ್ತಿರುವವರು ಅನುಭವಿ ಹಾಗೂ ಬಟ್ಟೆ ಕೂಡ ಮೃದುವಾಗಿದೆ. ಆದ್ರೆ ನೋಡಿದಷ್ಟು ಇದು ಮಾಡಲು ಸುಲಭವಲ್ಲವೆಂದು  ಬರೆದಿದ್ದಾರೆ. ಇದೊಂದು ಮ್ಯಾಜಿಗ್ ರೀತಿಯಲ್ಲಿ ಕಾಣ್ತಿದೆ ಎಂದು ಇನ್ನೊಬ್ಬರು ಬರೆದ್ರೆ ಮತ್ತೊಬ್ಬರು ನಾನು ಕೂಡ ಪ್ರತಿ ಬಾರಿ ನನ್ನ ಬಟ್ಟೆಯನ್ನು ಹೀಗೆ ಮಡಚುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!