Women Health : ಟೈಂ ಪಾಸ್ ಆಗ್ತಿಲ್ಲ ಅಂತಾ ಮೊಬೈಲ್ ಹಿಡಿಯೋ ಗರ್ಭಿಣಿಯರೇ ಇದನ್ನೋದಿ

By Suvarna News  |  First Published May 6, 2022, 1:31 PM IST

ಮೊಬೈಲ್ ನೋಡೋದು ಕೂಡ ಒಂದು ಚಟ. ನಾವು ಬಿಟ್ಟರೂ ಅದು ನಮ್ಮನ್ನು ಬಿಡೋದಿಲ್ಲ. ಹಾಗಂತ ಅದಕ್ಕೆ ಅಂಟಿ ಕುಳಿತ್ರೆ ಅಪಾಯ ತಪ್ಪಿದ್ದಲ್ಲ. ಅದ್ರಲ್ಲೂ ಗರ್ಭಿಣಿಯರು ಮೊಬೈಲ್ ದೂರವಿಟ್ಟಷ್ಟು ಒಳ್ಳೆಯದು.
 


ಮೊಬೈಲ್ (Mobile) ಇಲ್ಲವೆಂದ್ರೆ ದೇಹ (Body) ದ ಯಾವುದೋ ಅಂಗ (Organ) ಕಳೆದುಕೊಂಡ ಅನುಭವವಾಗುತ್ತದೆ. ಗಂಟೆಗೊಮ್ಮೆ ಮೊಬೈಲ್ ಚೆಕ್ ಮಾಡ್ಲೇಬೇಕು. ಸಾಮಾಜಿಕ ಜಾಲತಾಣಗಳು ಈಗಿನ ಜನರ ಅಚ್ಚುಮೆಚ್ಚು. ಫೇಸ್ಬುಕ್, ಇನ್ಸ್ಟಾಗ್ರಾಮ್ ರೀಲ್ಸ್ ನೋಡ್ತಿದ್ದರೆ ಸಮಯ ಕಳೆಯೋದೆ ತಿಳಿಯಲ್ಲ ಎನ್ನುವವರಿದ್ದಾರೆ. ಹೆಚ್ಚು ಮೊಬೈಲ್ ಬಳಸುವುದ್ರಿಂದ ಸಮಯ ಮಾತ್ರ ಹಾಳಾಗುವುದಿಲ್ಲ, ಆರೋಗ್ಯವೂ ಹಾಳಾಗುತ್ತದೆ. ಹೊಸದಾಗಿ ನಾವೇನು ಇದನ್ನು ಹೇಳ್ತಿಲ್ಲ. ಮೊಬೈಲ್ ಆರೋಗ್ಯ ಹಾಳ್ಮಾಡುತ್ತೆ ಎಂಬುದು ಎಲ್ಲರಿಗೂ ಗೊತ್ತು, ಆದ್ರೂ ಬಿಡೋದು ಕಷ್ಟ. ಮೊಬೈಲ್ ವಿಕಿರಣವು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅದ್ರಲ್ಲೂ ಗರ್ಭಿಣಿ (Pregnant) ಯರು ಮೊಬೈಲ್ ನಿಂದ ದೂರವಿರುವುದು ಒಳ್ಳೆಯದು. ಗರ್ಭಿಣಿಯರಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಈ ವಿಶ್ರಾಂತಿ ಸಮಯದಲ್ಲಿ ಬಹುತೇಕರು ಮೊಬೈಲ್ ವೀಕ್ಷಿಸ್ತಾರೆ. ಇದು ಅವರ ಆರೋಗ್ಯದ ಮೇಲೆ ಮಾತ್ರವಲ್ಲ, ಮಗುವಿನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಸಂಶೋಧನೆಯ ಪ್ರಕಾರ, ಗರ್ಭಿಣಿ ಮಹಿಳೆ ಮೊಬೈಲ್‌ನ ಅತಿಯಾದ ವಿಕಿರಣಕ್ಕೊಳಪಟ್ಟಿದ್ದರೆ, ಇದು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದಲ್ಲದೆ, ಮಗು ತನ್ನ ಜೀವನದುದ್ದಕ್ಕೂ ಬಿಹೇವಿಯರ್ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗರ್ಭಿಣಿಯರು ಮೊಬೈಲ್ ಬಳಸಿದ್ರೆ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ.  

ಸಂಶೋಧನೆಯ ಪ್ರಕಾರ, ಮೊಬೈಲ್ ಫೋನ್ ಬಳಕೆಯಿಂದ ಗರ್ಭದಲ್ಲಿರುವ ಮಗುವಿನ ದೈಹಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ಗರ್ಭಿಣಿ ಅತಿ ಹೆಚ್ಚು ಫೋನ್ ಬಳಸಿದರೆ, ಅದು ಮಗುವಿನ ಸ್ವಭಾವ, ಮೆಮೊರಿ ಮತ್ತು ಮೆದುಳಿನ ಬೆಳವಣಿಗೆ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಪ್ರಸವಪೂರ್ವ ಮತ್ತು ನಂತರ ಶಿಶುಗಳು ಅಧಿಕ ರಕ್ತದೊತ್ತಡದಂತಹ ಅಪಾಯಕಾರಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

Tap to resize

Latest Videos

ಆರೋಗ್ಯ ಹಾಳು ಮಾಡುತ್ವೆ ವೈರ್ಲೆಸ್ ಸಾಧನ : ಲ್ಯಾಪ್‌ಟಾಪ್, ಮೊಬೈಲ್ ಫೋನ್‌ನಂತಹ ಯಾವುದೇ ವೈರ್‌ಲೆಸ್ ಸಾಧನದ ಮುಂದೆ ನಾವು ಕುಳಿತುಕೊಂಡ ತಕ್ಷಣ ವೈಫೈ ಬಳಸ್ತೇವೆ. ಈ ವಿದ್ಯುತ್ಕಾಂತೀಯ ರೇಡಿಯೋ ತರಂಗಗಳು  ಅಪಾಯಕಾರಿ. ಇವು ಡಿಎನ್ಎಗೆ ಹಾನಿಯುಂಟು ಮಾಡುತ್ತದೆ. ಈ ಕಾರಣದಿಂದಾಗಿ, ನಮ್ಮ ದೇಹದ ಜೀವಂತ ಜೀವಕೋಶಗಳು ಅಪಾಯಕ್ಕೊಳಗಾಗುತ್ತವೆ. ಮನೆಯಲ್ಲಿ ಇಡೀ ದಿನ ವೈಫ್ ಆನ್ ಆಗಿರುತ್ತದೆ. ಇಡೀ ಮನೆಗೆ ಅದರ ತರಂಗಗಳು ಹರಡಿರುತ್ತವೆ. ಇದು ಗರ್ಭದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

Women Care : ತಾಯಿಯಾಗದ ಮಹಿಳೆಯರಿಗೆ ಹೃದಯಾಘಾತ ಹೆಚ್ಚು

ಮೊಬೈಲ್ ಬಳಕೆಯ ಅನಾನುಕೂಲಗಳು ಯಾವುವು ? : 
ಗರ್ಭಿಣಿಯರು ಮಾತ್ರವಲ್ಲ ಪ್ರತಿಯೊಬ್ಬರ ಆರೋಗ್ಯದ ಮೇಲೂ ಮೊಬೈಲ್ ಅಡ್ಡಪರಿಣಾಮ ಬೀರುತ್ತದೆ. ಅದ್ರಲ್ಲೂ ಗರ್ಭಿಣಿಯರ ದೇಹ ಸೂಕ್ಷ್ಮವಾಗಿರುವ ಕಾರಣ ಸಮಸ್ಯೆ ಹೆಚ್ಚಾಗುತ್ತದೆ. ಮೊಬೈಲ್ ಫೋನ್‌ಗಳಿಂದ ಹೊರಸೂಸುವ ವಿಕಿರಣವು ನಿಮ್ಮ ಮೆದುಳಿನ ಮೇಲೆ ಬಹಳ ಆಳವಾದ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಆಯಾಸ, ನಿದ್ರೆಯ ತೊಂದರೆ, ಆತಂಕದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 
ಮೊಬೈಲ್ ನಿಂದ ಹೊರಸೂಸುವ ವಿಕಿರಣದಿಂದಾಗಿ ಮಕ್ಕಳು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಾರೆ ಮತ್ತು ತುಂಬಾ ಕೋಪಗೊಳ್ಳುತ್ತಾರೆ.
ಗರ್ಭಿಣಿಯರು ರೇಡಿಯೋ ತರಂಗಗಳ ಸಂಪರ್ಕಕ್ಕೆ ಬಂದರೆ ಕ್ಯಾನ್ಸರ್ ಗೆ ಬಲಿಯಾಗುವ ಸಾಧ್ಯತೆಯಿರುತ್ತದೆ. 

HOME CLEANING : ಮನೆಯಲ್ಲಿರುವ ಧೂಳು ತೆಗೆಯೋಕೆ ಇಲ್ಲಿದೆ ಸುಲಭ ಉಪಾಯ

ಇದರಿಂದ ರಕ್ಷಣೆ ಹೇಗೆ ? :  
1. ಗರ್ಭಾವಸ್ಥೆಯಲ್ಲಿ, ಬ್ಲೂಟೂತ್ ಸಾಧನಗಳು ಮತ್ತು ವೈಫೈ ಬಳಕೆಯನ್ನು ಕಡಿಮೆ ಮಾಡಬೇಕು. 
2. ಕೆಲಸದ ಸಂದರ್ಭ ಹೊರತುಪಡಿಸಿ ಉಳಿದ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ ಆಡ್ಬೇಡಿ. ಮಾತನಾಡಲು ಲ್ಯಾಂಡ್ ಲೈನ್ ಫೋನ್ ಬಳಸುವುದು ಅತ್ಯುತ್ತಮ.
3. ಗರ್ಭಿಣಿಯರು, ರೇಡಿಯೋ, ಮೈಕ್ರೊವೇವ್ ಮತ್ತು ಕ್ಷ-ಕಿರಣ ಯಂತ್ರದಿಂದ ದೂರವನ್ನು ಕಾಯ್ದುಕೊಳ್ಳುವುದು ಬಹಳ ಒಳ್ಳೆಯದು.
4. ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಮೊಬೈಲ್ ಟವರ್ ಅಪಾಯಕಾರಿ. ಹಾಗಾಗಿ ಮೊಬೈಲ್ ಟವರ್ ಬಳಿ ಮನೆ ಖರೀದಿಸಬೇಡಿ. 

click me!