ಗಂಡ ನನ್ನ ಸ್ವತ್ತು. ನನ್ನನ್ನು ಬಿಟ್ಟರೆ ಬೇರೆ ಹೆಣ್ಣನ್ನು ಕಣ್ಣೆತ್ತಿ ನೋಡ್ಬಾರದು ಎಂಬ ಸ್ವಭಾವ ಮಹಿಳೆಯರದ್ದು. ಪತಿಯ ಇನ್ನೊಂದು ಸಂಬಂಧ ಗೊತ್ತಾದ್ರೆ ಪತ್ನಿಯಾದವಳು ಜೀವ ಬಿಡಲೂ ಸಿದ್ಧವಿರ್ತಾಳೆ. ಆಕೆ ಪ್ರಾಣ ಬಿಟ್ಟರೆ ಅದಕ್ಕೆ ಕಾರಣ ಪತಿ ಎನ್ನುತ್ತದೆ ಕೋರ್ಟ್.
ತಂದೆ – ತಾಯಿ (Father – Mother), ಮಕ್ಕಳು, ಪತಿ –ಪತ್ನಿ, ಸ್ನೇಹಿತರು ಹೀಗೆ ಯಾವುದೇ ಸಂಬಂಧ (Relationship) ವಿರಲಿ ಅದನ್ನು ನಿಭಾಯಿಸುವುದ್ರಲ್ಲಿ ಭಾರತೀಯರು ಮುಂದಿದ್ದಾರೆ. ಭಾರತ (India) ದ ಜನರು ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅದ್ರಲ್ಲೂ ಪತಿ –ಪತ್ನಿ ವಿಷ್ಯ ಬಂದಾಗ ಇಬ್ಬರ ಮಧ್ಯೆ ಅತಿ ಹೆಚ್ಚು ಪಾಸಿಸಿವ್ ನೆಸ್ ಇರುತ್ತದೆ. ಪತಿಯಾದವನು ನನಗೆ ಸ್ವಂತ, ಬೇರೆಯವರು ಆತನನ್ನು ಮುಟ್ಟಬಾರದು ಎಂಬ ಭಾವನೆ ಭಾರತೀಯ ಮಹಿಳೆಯರಲ್ಲಿ ಅತಿ ಹೆಚ್ಚಿರುತ್ತದೆ. ಆತ ನನಗೊಬ್ಬನಿಗೆ ಸೇರಿದವನು, ಆತ ನನ್ನ ಸ್ವಾಧೀನ ಎಂಬ ಭಾವನೆಯಲ್ಲಿ ಮಹಿಳೆಯರಿರುತ್ತಾರೆ. ಇದೇ ಕಾರಣಕ್ಕೆ ಪತಿ ಬೇರೆ ಮಹಿಳೆ ಜೊತೆ ಮಾತನಾಡಿದ್ರೂ ಸಹಿಸುವುದಿಲ್ಲ. ಆತ ಇನ್ನೊಬ್ಬಳ ಜೊತೆ ಸಂಬಂಧ ಬೆಳೆಸಿದ್ರೆ ಅಥವಾ ಮದುವೆಯಾದ್ರೆ ಅದು ಮಹಿಳೆಗೆ ಆಗುವ ಬಿಗ್ ಶಾಕ್. ಇಷ್ಟಕ್ಕೂ ನಾವು ಇದನ್ನೆಲ್ಲ ಏನಕ್ಕೆ ಹೇಳ್ತಿದ್ದೇವೆ ಅಂದ್ರೆ, ಅನೇಕ ಬಾರಿ ಮಹಿಳೆಯೊಬ್ಬಳ ಆತ್ಮಹತ್ಯೆಗೂ ಪತಿಯ ಇನ್ನೊಂದು ಸಂಬಂಧವೇ ಕಾರಣವಾಗುತ್ತದೆ ಎಂಬುದನ್ನು ನಿಮಗೆ ತಿಳಿಸಲು. ದೇಶದಲ್ಲಿ ಅನೇಕ ಮಹಿಳೆಯರು, ಪತಿ ಇನ್ನೊಬ್ಬಳ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರ್ಟ್ ಗೆ ಆತ್ಮಹತ್ಯೆ ಪ್ರಕರಣವೊಂದು ಬಂದಾಗ, ವಿಚಾರಣೆ ನಡೆಸಿದ ಜಡ್ಜ್ ಕೂಡ ಇದೇ ವಿಷ್ಯವನ್ನು ಹೇಳಿದ್ದಾರೆ.
ಅಷ್ಟಕ್ಕೂ ನಡೆದ ಘಟನೆ ಏನು ಅಂದ್ರೆ ? : ಸೆಪ್ಟೆಂಬರ್ 22, 2018ರಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣ ವಿಚಾರಣೆಯನ್ನು ವಾರಣಾಸಿ ಸೆಷನ್ ನ್ಯಾಯಾಲಯ ನಡೆಸಿತ್ತು. ಇದರ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಮೃತ ಮಹಿಳೆಯ ಪತಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
HOME CLEANING : ಮನೆಯಲ್ಲಿರುವ ಧೂಳು ತೆಗೆಯೋಕೆ ಇಲ್ಲಿದೆ ಸುಲಭ ಉಪಾಯ
ನ್ಯಾಯಮೂರ್ತಿಗಳು ಹೇಳಿದ್ದೇನು? : ಯಾವುದೇ ಭಾರತೀಯ ಮಹಿಳೆ ತನ್ನ ಪತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಿದ್ಧವಿರುವುದಿಲ್ಲ. ಮಹಿಳೆಯ ಪತಿ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರೆ ಅಥವಾ ಮದುವೆಯಾದರೆ, ಅದು ಆ ಮಹಿಳೆಗೆ ದೊಡ್ಡ ಹಿನ್ನಡೆಯಾಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಹೇಳಿಕೆ ನೀಡಿದ್ದಾರೆ. ಮಹಿಳೆಯ ಪತಿ ಸುಶೀಲ್ ಕುಮಾರ್ ಮುಖ್ಯ ಅಪರಾಧಿ ಎಂಬುದು ತೋರ್ತಿದೆ ಎಂದಿರುವ ನ್ಯಾಯಾಲಯ, ಸೆಕ್ಷನ್ 306 ರ ಅಡಿಯಲ್ಲಿ ಹೆಚ್ಚಿನ ವಿಚಾರಣೆ ನಡೆಸಬೇಕೆಂದು ಸೂಚನೆ ನೀಡಿದೆ.
ಸಾವಿಗೂ ಮುನ್ನ ಎಫ್ ಐಆರ್ ದಾಖಲಿಸಿದ್ದ ಮಹಿಳೆ : ಮದುವೆ ವೇಳೆ ಮಹಿಳೆಗೆ ಮೋಸವಾಗಿತ್ತು. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಸುಶೀಲ್ ಕುಮಾರ್, ಇನ್ನೊಂದು ಮದುವೆಯಾಗಿದ್ದ. ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗಿದ್ದಲ್ಲದೆ ಆತ ಈ ವಿಷ್ಯವನ್ನು ಎರಡನೇ ಪತ್ನಿಗೆ ಹೇಳಿರಲಿಲ್ಲ. ಪತಿಯ ಮೊದಲ ಮದುವೆ ಸಂಗತಿ ತಿಳಿಯುತ್ತಿದ್ದಂತೆ ಮಹಿಳೆ ಕುಗ್ಗಿ ಹೋಗಿದ್ದಳಂತೆ. ಆದ್ರೆ ಕುಟುಂಬಸ್ಥರು ಆಕೆಗೆ ಕಿರುಕುಳ ಶುರು ಮಾಡಿದ್ದರಂತೆ. ಸುಮಾರು 10- 12 ವರ್ಷಗಳ ಕಾಲ ಚಿತ್ರ ಹಿಂಸೆ ಮಧ್ಯೆಯೇ ಮಹಿಳೆ ಜೀವನ ಸಾಗಿಸಿದ್ದಳಂತೆ. ಈ ಮಧ್ಯೆ ಇಬ್ಬರು ಪತ್ನಿಯರನ್ನು ದೂರ ಮಾಡಿದ್ದ ಪತಿ, ಇನ್ನೊಬ್ಬಳ ಜೊತೆ ಸಂಸಾರ ಶುರು ಮಾಡಿದ್ದನಂತೆ.
Women Health: ಹನಿಮೂನ್ ನಂತ್ರ ಮಹಿಳೆಯರು ಆಸ್ಪತ್ರೆಗೆ ಏಕೆ ಬರ್ತಾರೆ?
ಕುಟುಂಬಸ್ಥರ ಹಿಂಸೆ ಮಿತಿ ಮೀರುತ್ತಿದ್ದಂತೆ ಸೆಪ್ಟೆಂಬರ್ 22,2018ರಂದು ಮಹಿಳೆ ತನ್ನ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಳು. ಐಪಿಸಿ ಸೆಕ್ಷನ್ 323, 494, 504, 506 ಮತ್ತು 379 ರ ಅಡಿಯಲ್ಲಿ ಸೆಪ್ಟೆಂಬರ್ 22, 2018 ರಂದು ಪ್ರಾಥಮಿಕ ದೂರು ದಾಖಲಿಸಲಾಗಿತ್ತು. ಅದೇ ದಿನ ಮಹಿಳೆ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಹಿಳೆ ಈ ಸಾವಿಗೆ ಆಕೆಯ ಪತಿಯೇ ಮುಖ್ಯ ಕಾರಣವೆಂದು ಕೋರ್ಟ್ ಹೇಳಿದೆ.