ಅಬ್ಬಬ್ಬಾ..ವಿಶ್ವದ ಮಹಾತಾಯಿ, ಒಂದೇ ಬಾರಿಗೆ 5 ಮಕ್ಕಳಿಗೆ ಜನ್ಮ ನೀಡಿದ ಏಳು ಮಕ್ಕಳ ತಾಯಿ!

By Vinutha Perla  |  First Published Feb 16, 2023, 8:24 AM IST

ತಾಯ್ತನ ಎಂಬುದು ಪ್ರತಿಯೊಬ್ಬ ಹೆಣ್ಣಿನ ಪಾಲಿಗೂ ಖುಷಿ ನೀಡುವ ಕ್ಷಣ. ಇದು ಕೆಲವೊಮ್ಮೆ ಅಚ್ಚರಿಯನ್ನೂ ಮೂಡಿಸುತ್ತದೆ. ಕೆಲ ಗರ್ಭಿಣಿಯರು ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ ಇಲ್ಲೊಬ್ಬ ಮಹಾತಾಯಿ ಒಂದೇ ಬಾರಿಗೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ.


ಪೋಲಾಂಡ್‌: ತಾಯಿಯಾಗುವುದು ಮಹಿಳೆಯ ಜೀವನದಲ್ಲಿ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ. ಮಹಿಳೆಯ ಗರ್ಭದಲ್ಲಿ ಹುಟ್ಟುವ ಭ್ರೂಣವೊಂದು ತಿಂಗಳುಗಳ ಕಾಲ ಬೆಳೆದು ಪುಟ್ಟ ಜೀವವಾಗಿ ಹೊರಹೊಮ್ಮುವುದು ಅಚ್ಚರಿಯ ವಿಚಾರವೇ ಸರಿ. ಗರ್ಭಾವಸ್ಥೆಯಲ್ಲೂ ಹಲವು ಅಚ್ಚರಿಯ ಘಟನೆಗಳು ಸಂಭವಿಸುತ್ತವೆ. ಕೆಲವೊಬ್ಬರು ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಇನ್ನೂ ಅಪರೂಪದಲ್ಲಿ ಕೆಲವರು ನಾಲ್ವರು, ಐವರು ಮಕ್ಕಳಿಗೆ ಜನ್ಮ ನೀಡಿರುವುದೂ ಇದೆ. ಹೀಗೆಯೇ ಇಲ್ಲೊಬ್ಬ ಗರ್ಭಿಣಿ ಈಗಾಗಲೇ ಏಳು ಮಕ್ಕಳ ತಾಯಿಯಾಗಿದ್ದರು, ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. 

ಹೆಣ್ಣಿಗೆ ತಾಯ್ತನ ಒಂದು ದೊಡ್ಡ ವರದಾನ. ತನ್ನ ಹೊಟ್ಟೆಯೊಳಗೆ ಮತ್ತೊಂದು ಜೀವವನ್ನು ಹೊತ್ತು, ಹೆತ್ತು, ಜೀವಕೊಟ್ಟು ಭೂಮಿಗೆ ತರುತ್ತಾಳೆ. ಹೆಣ್ಣು (Women) ಸಾಮಾನ್ಯವಾಗಿ ಏಕಕಾಲದಲ್ಲಿ ಒಂದು ಮಗುವಿಗೆ ಜನ್ಮ ನೀಡುವುದು ಸಹಜವಾಗಿದೆ. ಕೆಲವೊಮ್ಮೆ ಏಕಕಾಲದಲ್ಲಿ ಅವಳಿ ಮಕ್ಕಳಿಗೆ (Twins) ಜನ್ಮ ನೀಡುತ್ತಾಳೆ. ಆದರೆ ಕೆಲವೊಂದು ಅಚ್ಚರಿ ಘಟನೆಗಳಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು, ಒಂಬತ್ತು ಹೀಗೆ ಹಲವು ಮಕ್ಕಳಿಗೆ ಏಕಕಾಲದಲ್ಲಿ ಜನ್ಮ ನೀಡಿದ ಅನೇಕ ಘಟನೆಗಳು ನಡೆದಿವೆ.ಕ್ರಾಕೋವ್ ವಿಶ್ವವಿದ್ಯಾಲಯದ ಆಸ್ಪತ್ರೆ ಅಧಿಕಾರಿಗಳ ಪ್ರಕಾರ, ಪೋಲೆಂಡ್ ನಿವಾಸಿಯಾಗಿರುವ 37 ವರ್ಷದ ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ.

Latest Videos

undefined

ವಾಟ್ಸಾಪ್‌ ಕಾಲ್‌ ನೆರವಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು..!

ಐದು ಮಕ್ಕಳನ್ನು ಹೆತ್ತು ಒಟ್ಟು 12 ಮಕ್ಕಳ ತಾಯಿಯಾದ ಮಹಿಳೆ
ಕುತೂಹಲಕಾರಿಯಾಗಿ, ಈ ಮಹಿಳೆಗೆ ಈಗಾಗಲೇ 7 ಮಕ್ಕಳಿದ್ದಾರೆ. ಈ ಮಹಿಳೆಯ ಹೆಸರು ಡೊಮಿನಿಕಾ ಕ್ಲಾರ್ಕ್. ಡೊಮಿನಿಕಾ ಕ್ಲಾರ್ಕ್ ತನ್ನ ಗರ್ಭಧಾರಣೆಯ 28 ನೇ ವಾರದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದಳು. ಅದರಲ್ಲಿ ಮೂವರು ಹುಡುಗಿಯರು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳು ಸಿಸೇರಿಯನ್ ಮೂಲಕ ಮಹಿಳೆಗೆ ಜನಿಸಿದೆಯಂತೆ . ಹುಟ್ಟಿದ ಎಲ್ಲಾ ಮಕ್ಕಳ ತೂಕ 710 ರಿಂದ 1400 ಗ್ರಾಂ ಹೊಂದಿದೆ. ಮಹಿಳೆ ಎಂಟನೇ ಮಗುವನ್ನು ಬಯಸಿ ಗರ್ಭವತಿ (Pregnant)ಯಾಗಿದ್ದರು. ಆದರೆ ಅವರು ಬಯಸಿದ್ದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಇದೀಗ ಒಮ್ಮಲೇ ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ.

ಎರಡು ಗಂಡು.. ಮೂರು ಹೆಣ್ಣು ಶಿಶುಗಳು ಜನನ
ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ (Hospital) ವೈದ್ಯರು ಗರ್ಭಧಾರಣೆಯ 28ನೇ ವಾರದಲ್ಲಿ ಸಿಸೇರಿಯನ್ ಮೂಲಕ ಐದು ಮಕ್ಕಳನ್ನು ಹೆರಿಗೆ ಮಾಡಿಸಿದ್ದಾರೆ. ಈ ಐದು ಮಕ್ಕಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಶಿಶುಗಳು ಜನಿಸಿದ್ದಾರೆ. ಈ ಮಕ್ಕಳಿಗೆ ಅರಿಯಾನಾ ಡೈಸಿ, ಚಾರ್ಲ್ಸ್ ಪ್ಯಾಟ್ರಿಕ್, ಎಲಿಜಬೆತ್ ಮೇ, ಇವಾಂಜೆಲಿನ್ ರೋಸ್ ಮತ್ತು ಹೆನ್ರಿ ಜೇಮ್ಸ್ ಎಂದು ನಾಮಕರಣ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅವಧಿಪೂರ್ವವಾಗಿ ಜನಿಸಿದ ಈ ಮಕ್ಕಳು ಕೊಂಚ ಉಸಿರಾಟದ ತೊಂದರೆ ಹೊಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದನ್ನು ಹೊರತುಪಡಿಸಿ ಐದು ಶಿಶುಗಳೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಗರ್ಭಿಣಿಯ ಮುಖ ಹೊಳೆಯುತ್ತಿದ್ರೆ ಹೆಣ್ಣು ಮಗು ಹುಟ್ಟುತ್ತಂತೆ… ಇದು ನಿಜಾನ?

ಈ ಬಗ್ಗೆ ಮಾತನಾಡಿದ ಡೊಮಿನಿಕಾ ಕ್ಲಾರ್ಕ್ ಪತಿ ವಿನ್ಸ್‌ 'ನಾವು ಎಂಟನೇ ಮಗುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ದೇವರು ಇದನ್ನು ಹನ್ನೆರಡು ಮಾಡಿದ್ದಾರೆ' ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ತಾಯಿ ಡೊಮಿನಿಕಾ ಕ್ಲಾರ್ಕ್ ಕೂಡ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, 52 ಮಿಲಿಯನ್‌ಗೆ ಒಂದು ಪ್ರಕರಣದಲ್ಲಿ ಐದು ಮಕ್ಕಳಿಗೆ ಜನ್ಮ ನೀಡುವ ಘಟನೆ ನಡೆಯುತ್ತದೆ. ಹೀಗಾಗಿ ತನ್ನ ಗರ್ಭಾವಸ್ಥೆಯನ್ನು ಪವಾಡ ಎಂದು ಕರೆದಿದ್ದಾರೆ.  

click me!