ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ, ಮಗಳ ಹೆಸರು ಕಡ್ಡಾಯಗೊಳಿಸಿದ ಸರ್ಕಾರ

By Roopa HegdeFirst Published Nov 5, 2024, 12:04 PM IST
Highlights

ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆಯೊಂದಾಗಿದೆ. ಪ್ರತಿಯೊಬ್ಬ ಸರ್ಕಾರಿ ನೌಕರ ಈ ವಿಷ್ಯವನ್ನು ತಿಳಿದಿರಬೇಕು. ಕುಟುಂಬ ಪಿಂಚಣಿ ಲಾಭ ಪಡೆಯುವ ನೌಕರರು, ಈ ಹೆಸರನ್ನು ಫಾರ್ಮ್ ನಲ್ಲಿ ನಮೂದಿಸಬೇಕು.
 

ಸರ್ಕಾರಿ ಉದ್ಯೋಗ (Govt job) ದ ಪ್ರಯೋಜನದಲ್ಲಿ ಮುಖ್ಯವಾಗಿ ನಮ್ಮ ಕಣ್ಣಿಗೆ ಕಾಣಿಸೋದು ಪಿಂಚಣಿ (Pension) ಮತ್ತು ಬೋನಸ್‌. ಸರ್ಕಾರಿ ಉದ್ಯೋಗಗಳು ಕುಟುಂಬ ಪಿಂಚಣಿ ಪ್ರಯೋಜ ಲಾಭ ಪಡೆಯುತ್ತಾರೆ. ಇದು  ಪ್ರೀತಿಪಾತ್ರರ ಆರ್ಥಿಕ ಭದ್ರತೆ (Financial security)ಯನ್ನು ಖಾತ್ರಿಗೊಳಿಸುತ್ತದೆ. ಇದರಿಂದ  ನಿಮ್ಮ ಮಕ್ಕಳು ಅಥವಾ ಸಂಗಾತಿಯ ಭವಿಷ್ಯದ ಬಗ್ಗೆ ಚಿಂತಿಸದೆ ಒತ್ತಡವಿಲ್ಲದೆ ಬದುಕಬಹುದು. ಈಗ ಸರ್ಕಾರಿ ನೌಕರರ ಪಿಂಚಣಿ (Govt Employees Pension)ಗೆ ಸಂಬಂಧಿಸಿದ ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಪಿಂಚಣಿದಾರರ ಕಲ್ಯಾಣ ಇಲಾಖೆ, ಪಿಂಚಣಿದಾರರಿಗೆ ಹೊಸ ನಿಯಮವನ್ನು ಪ್ರಕಟಿಸಿದೆ. ಇನ್ನು ಮುಂದೆ ಪಿಂಚಣಿ ಪಡೆಯಲು ಅರ್ಹ ಕುಟುಂಬ ಸದಸ್ಯರ ಪಟ್ಟಿಯಿಂದ ಮಗಳ ಹೆಸರು ಕಡ್ಡಾಯವಾಗಿದೆ. ಪಿಂಚಣಿದಾರರ ಕೆಲಸವನ್ನು ಸರ್ಕಾರ ಮತ್ತಷ್ಟು ಸುಲಭಗೊಳಿಸಿದೆ. ಹೆಚ್ಚುವರಿ ಸಾಮಾನ್ಯ ಪಿಂಚಣಿ (ಇಒಪಿ) ಅಡಿಯಲ್ಲಿ ಪಡೆದ ಎಲ್ಲಾ ನಿವೃತ್ತಿ ಪ್ರಯೋಜನಗಳನ್ನು ಸಾಧ್ಯವಾದಷ್ಟು ಬೇಗ ಕಟ್ಟುನಿಟ್ಟಾಗಿ ಬಿಡುಗಡೆ ಮಾಡಲು ಇಲಾಖೆ ಸೂಚನೆಗಳನ್ನು ನೀಡಿದೆ.

ಮಗಳ ಹೆಸರು ಕಡ್ಡಾಯ : ಅನೇಕ ಬಾರಿ ಸರ್ಕಾರಿ ನೌಕರರು ತಮ್ಮ ಪಿಂಚಣಿ ಅರ್ಜಿಯಲ್ಲಿ ಮಗಳ ಹೆಸರನ್ನು ನಮೂದಿಸೋದಿಲ್ಲ. ಮುಂದೆ ಪಿಂಚಣಿ ಪಡೆಯಲು ಅರ್ಹರ ಕುಟುಂಬ ಸದಸ್ಯರ ಪಟ್ಟಿಯಲ್ಲಿ ಸಾಮಾನ್ಯವಾಗಿ ಮಗನ ಹೆಸರನ್ನು ನಮೂದಿಸಲಾಗುತ್ತದೆ. ಮಗಳ ಹೆಸರು ಇರೋದಿಲ್ಲ. ಈಗ ಈ ಕುರಿತು ಪಿಂಚಣಿದಾರರ ಕಲ್ಯಾಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮದುವೆಯಾಗದ ಮಗಳನ್ನೂ ಸರ್ಕಾರಿ ನೌಕರರ ಕುಟುಂಬದ ಸದಸ್ಯೆ ಎಂದು ಪರಿಗಣಿಸಬೇಕು. ಆದ್ದರಿಂದ ಕುಟುಂಬದ ಸದಸ್ಯರ ಪಟ್ಟಿಯಲ್ಲಿ ಮಗಳ ಹೆಸರನ್ನೂ ಸೇರಿಸಬೇಕು. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ 2021 ರ ಪ್ರಕಾರ, ಕುಟುಂಬದಲ್ಲಿ ಮಲ ಮತ್ತು ದತ್ತು ಪಡೆದ ಹೆಣ್ಣುಮಕ್ಕಳನ್ನು ಹೊರತುಪಡಿಸಿ, ಮದುವೆಯಾಗದ, ವಿವಾಹಿತ ಮತ್ತು ವಿಧವೆ ಹೆಣ್ಣುಮಕ್ಕಳಿದ್ದರೆ ಅವರೆಲ್ಲರ ಹೆಸರನ್ನು ಅದರಲ್ಲಿ ಸೇರಿಸಬೇಕಾಗುತ್ತದೆ. 

Latest Videos

300 ಅರ್ಜಿ, 500 ಇಮೇಲ್, 5 ತಿಂಗಳ ಸತತ ಪ್ರಯತ್ನ, ಭಾರತೀಯನಿಗೆ ಟೆಸ್ಲಾದಲ್ಲಿ ಸಿಕ್ತು ಉದ್ಯೋಗ!

ಪಿಂಚಣಿ ಮೇಲೆ ಮೊದಲ ಹಕ್ಕು ಯಾರಿಗಿದೆ? : ಪಿಂಚಣಿ ಹಣವನ್ನು ಪಡೆಯುವ ಹಕ್ಕು ಯಾರಿಗಿದೆ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ನಿಯಮದ ಪ್ರಕಾರ, ಮನೆಯಲ್ಲಿ ಅಂಗವಿಕಲ ಮಗು ಇದ್ದರೆ, ಪಿಂಚಣಿ ಪಡೆಯುವ ಮೊದಲ ಹಕ್ಕನ್ನು ಅವರಿಗೆ ನೀಡಲಾಗುತ್ತದೆ. ಇದರ ಹೊರತಾಗಿ ಮಾನಸಿಕ ಅಥವಾ ದೈಹಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಮಗಳು, ಮದುವೆಯಾಗುವವರೆಗೆ ಅಥವಾ ಆರ್ಥಿಕವಾಗಿ ಬಲಶಾಲಿಯಾಗುವವರೆಗೆ ಪಡೆಯಬಹುದು. 

ಪಿಂಚಣಿ ಪಡೆಯುವ ವಯಸ್ಸು :  25 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ, ವಿಧವೆ, ವಿಚ್ಛೇದಿತ ಹೆಣ್ಣುಮಕ್ಕಳು ಕೂಡ ಕುಟುಂಬ ಪಿಂಚಣಿ ತೆಗೆದುಕೊಳ್ಳಬಹುದು. 

ಕುಟುಂಬ ಪಿಂಚಣಿ ಎಂದರೇನು? : ಯಾವುದೇ ಸರ್ಕಾರಿ ನೌಕರನ ಮರಣದ ನಂತರ, ಅವರ ಕುಟುಂಬಕ್ಕೆ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ. ಇದನ್ನು ಕುಟುಂಬ ಪಿಂಚಣಿ ಎಂದು ಕರೆಯಲಾಗುತ್ತದೆ.  ಪಿಂಚಣಿ ಪಡೆಯುವ ನೌಕರ ಮೊದಲೇ ತನ್ನ ನಂತರ ಯಾರು ಪಿಂಚಣಿ ಹಣ ಪಡೆಯಬೇಕು ಎಂಬುದನ್ನು ನಮೂದಿಸಬೇಕಾಗುತ್ತದೆ. ಆತನ ಮರಣದ ನಂತರ ಅವರ ಸೂಚನೆಯಂತೆ ಮಡದಿ ಅಥವಾ ಮಕ್ಕಳಿಗೆ ಪಿಂಚಣಿ ಹಣ ನೀಡಲಾಗುತ್ತದೆ. ಪಿಂಚಣಿ ನಿಯಮಗಳ ಪ್ರಕಾರ, ಕುಟುಂಬ ಪಿಂಚಣಿ ಸರ್ಕಾರಿ ನೌಕರನ ಮೂಲ ವೇತನದ ಶೇಕಡಾ 30ರಷ್ಟು ಆಗಿದೆ. ಆದರೆ ತಿಂಗಳಿಗೆ 3500ಕ್ಕಿಂತ ಕಡಿಮೆ ಇರುವಂತಿಲ್ಲ. ಪಿಂಚಣಿದಾರ ಸಾವನ್ನಪ್ಪಿದ ನಂತ್ರ ಅದು ಪತ್ನಿಗೆ ಹೋಗ್ತಿದ್ದು, ಪತ್ನಿ ಎರಡನೇ ಮದುವೆಯಾಗಿದ್ದು, ಆಕೆ ಆದಾಯ ಕುಟುಂಬ ಪಿಂಚಣಿಗಿಂತ ಕಡಿಮೆ ಇದ್ದರೆ ಆಕೆ ಕುಟುಂಬ ಪಿಂಚಣಿ ಪಡೆಯಲು ಅರ್ಹಳಾಗಿರುತ್ತಾಳೆ. 

ಡಿಆರ್‌ಡಿಓ ಹುದ್ದೆಗೆ ಅರ್ಜಿ ಆಹ್ವಾನ, ನಿವೃತ್ತರಾದವರು, ನಿವೃತ್ತಿಯ ಅಂಚಿನಲ್ಲಿರುವವರು

ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬವು ಮಾಸಿಕ ಆಧಾರದ ಮೇಲೆ ಕುಟುಂಬ ಪಿಂಚಣಿ ಪಡೆಯುತ್ತಿದ್ದರೆ ಅದನ್ನು ಅನ್ ಕಮ್ಯೂಟಡ್ ಪಿಂಚಣಿ ಎಂದು ಕರೆಯಲಾಗುತ್ತದೆ. ಆದರೆ, ಕುಟುಂಬದ ಸದಸ್ಯರು ಕುಟುಂಬ ಪಿಂಚಣಿಯನ್ನು ಒಟ್ಟು ಮೊತ್ತದಲ್ಲಿ ಪಡೆಯಲು ಬಯಸಿದರೆ, ಅದನ್ನು ಕಮ್ಯುಟೆಡ್ ಪಿಂಚಣಿ ಎಂದು ಕರೆಯಲಾಗುತ್ತದೆ.

click me!