
ಜೀವನಶೈಲಿಯೇ (Lifestyle) ನಮ್ಮ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಮೂಲ. ಅಧಿಕ ಸಮಯ ನಿದ್ರೆ (Over Sleep) ಮಾಡುವುದು ಹಾಗೂ ಅತಿ ಕಡಿಮೆ ಸಮಯ ನಿದ್ರಿಸುವುದು ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯದಲ್ಲಿ (Health) ಏರುಪೇರಾಗಬಹುದು. ಅಷ್ಟೇ ಏಕೆ? ವರ್ಷಾನುಗಟ್ಟಲೆ ಪೀರಿಯೆಡ್ಸ್ (Periods) ಕೂಡ ಆಗದೆ ಇರಬಹುದು. ಇತ್ತೀಚೆಗೆ ಮಾಜಿ ಮಿಸ್ ಯೂನಿವರ್ಸ್ (Former Miss Universe) ರಾಚೆಲ್ ಫಿಂಚ್ (Rachel Finch) ಈ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದು ಜಗತ್ತಿನ ಎಲ್ಲ ಮಹಿಳೆಯರಿಗೂ ಎಚ್ಚರಿಕೆಯಾಗಬೇಕು.
ರಾಚೆಲ್ ಫಿಂಚ್ ಅವರಿಗೆ ದಿನಕ್ಕೆ ಬರೋಬ್ಬರಿ 12 ಗಂಟೆ ನಿದ್ರಿಸುವ ಹವ್ಯಾಸವಿತ್ತಂತೆ! ಇದರಿಂದ ಅವರಿಗೆ ಈಟಿಂಗ್ ಡಿಸಾರ್ಡರ್ (Eating Disorder) ಅಂದರೆ ಆಹಾರ ಸೇವನೆಯ ಸಮಸ್ಯೆ ಉಂಟಾಗಿದ್ದಲ್ಲದೆ ಎರಡು ವರ್ಷಗಳ ಕಾಲ ಮುಟ್ಟು ಕಾಣಿಸಿಕೊಂಡಿರಲೇ ಇಲ್ಲವಂತೆ. ಅಷ್ಟರಮಟ್ಟಿಗೆ ಅವರ ದೇಹದ ಹಾರ್ಮೋನ್ (Hormone) ಸ್ರವಿಕೆಯಲ್ಲಿ ಏರಿಳಿತವಾಗಿತ್ತು.
ಮಹಿಳೆಯರು ಹಾರ್ಮೋನ್ ಕಾರಣದಿಂದಲೇ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಹೀಗಾಗಿಯೇ ಅವರಿಗೆ ಖಿನ್ನತೆ, ಒತ್ತಡ (Stress), ಬೊಜ್ಜು (Obesity), ಮಧುಮೇಹ (Diabetes) ಇತ್ಯಾದಿ ತೊಂದರೆಗಳು ಹೆಚ್ಚು. ಈ ಶಾರೀರಿಕ ಸಮಸ್ಯೆಗಳಿಗೆ ಹಲವಾರು ಕಾರಣಗಳಿರುತ್ತವೆ. ಮಹಿಳೆಯರ (Women) ಜೀವನಶೈಲಿಯೂ ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು. ಆಸ್ಟ್ರೇಲಿಯಾದ ಖ್ಯಾತ ಮಾಡೆಲ್ (Model) ಹಾಗೂ ಮಾಜಿ ಮಿಸ್ ಯೂನಿವರ್ಸ್ ರಾಚೆಲ್ ಫಿಂಚ್ ಸ್ವತಃ ಈ ಅನುಭವಕ್ಕೆ ಒಳಗಾಗಿದ್ದನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಮಾಡೆಲ್ ಕ್ಷೇತ್ರಕ್ಕೆ ಬಂದ ಆರಂಭದ ದಿನಗಳಲ್ಲಿ ಇಂಥದ್ದೊಂದು ಸಮಸ್ಯೆಯನ್ನು ಅವರು ಎದುರಿಸಿದ್ದರು. ಆಗ ಅವರಿಗೆ ಇನ್ನೂ ಹದಿಹರೆಯ. ಅವರದ್ದೇ ಕೆಲವು ಕೆಟ್ಟ ಅಭ್ಯಾಸಗಳು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಿದ್ದವು.
• ಬರೋಬ್ಬರಿ 12 ಗಂಟೆ ನಿದ್ರೆ
ರಾಚೆಲ್ ಮೊದಲು ದಿನಕ್ಕೆ 12 ಗಂಟೆಗಳ ಕಾಲ ನಿದ್ರಿಸುತ್ತಿದ್ದರು. ಈ ಅನಾರೋಗ್ಯಕರ ಅಭ್ಯಾಸದಿಂದ ಸಹಜವಾಗಿ ಆರೋಗ್ಯ ಹಾಳಾಗಿತ್ತು. ಕೆಲ ಸಮಯದಲ್ಲಿ ತಮ್ಮ ಆರೋಗ್ಯ ಕೈಕೊಡುತ್ತಿದೆ ಎನ್ನುವುದು ಸ್ವತಃ ಅವರ ಅನುಭವಕ್ಕೆ ಬರಲು ಆರಂಭವಾಗಿತ್ತು. ಅಷ್ಟು ನಿದ್ರೆ ಮಾಡಿ ಎದ್ದರೂ ಫ್ರೆಶ್ ಅನಿಸುತ್ತಿರಲಿಲ್ಲ, ಬದಲಿಗೆ ಸುಸ್ತೆನಿಸುತ್ತಿತ್ತು. 58 ಕೆಜಿ ತೂಕ ಇದ್ದ ರಾಚೆಲ್ ಕೆಲವೇ ತಿಂಗಳಲ್ಲಿ 52 ಕೆಜಿಗೆ ಇಳಿದರು.
ಇದನ್ನು ಓದಿ: ವರ್ಕ್‌ಔಟ್ ಮಾಡಿಯಾದ ಮೇಲೆ ಅಪ್ಪಿತಪ್ಪಿಯೂ ಇಂಥಾ ತಪ್ಪು ಮಾಡ್ಲೇಬೇಡಿ
• ಆಹಾರ ಸೇವನೆಯ ತೊಂದರೆ
ತಮಗಿದ್ದ ಈಟಿಂಗ್ ಡಿಸಾರ್ಡರ್ ಕುರಿತು ಕೂಡ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೇರೆಯವರಿಗೆ ತಮ್ಮ ಅನುಭವ ಸ್ಫೂರ್ತಿ ನೀಡಬೇಕು ಎನ್ನುವುದು ಅವರ ಆಶಯ. ಅವರಿಗೆ ಒಳ್ಳೆಯ ಆಹಾರ ಸೇವಿಸಬೇಕು ಎನ್ನುವ ಆಸೆಯೇ ಮೂಡುತ್ತಿರಲಿಲ್ಲ. ಬದಲಿಗೆ ಕ್ಯಾಲರಿ (Calorie) ಅಧಿಕವಾಗಿರುವ ಆಹಾರದ ಬಯಕೆ ಆಗುತ್ತಿತ್ತು. ಅದೂ ಸಹ ವಿಪರೀತ ತಿನ್ನುವ ಆಸೆಯಾಗುತ್ತಿತ್ತು. ಆದರೆ, ಮನೆಯ ಆಹಾರ ತೀರ ಸೀಮಿತವಾಗಿತ್ತು.
• 17 ವರ್ಷಕ್ಕೇ ಸ್ತನಗಳ ಕಸಿ
ಇತ್ತೀಚಿಗೆ ಸ್ತನಗಳ ಕಸಿ ಮಾಡಿಸಿಕೊಳ್ಳುವುದು ಸಾಮಾನ್ಯ ಶಸ್ತ್ರಕ್ರಿಯೆಯಾಗಿದೆ. ವೈದ್ಯಕೀಯ ತುರ್ತು ಸ್ಥಿತಿ ಇದ್ದರೆ ಇದು ಅನಿವಾರ್ಯ. ಆದರೆ ರಾಚೆಲ್ ಕೇವಲ ಸೌಂದರ್ಯಕ್ಕಾಗಿ ತಮ್ಮ ಹದಿನೇಳನೇ ವರ್ಷಕ್ಕೇ ಸ್ತನಗಳನ್ನು ಕಸಿ ಮಾಡಿಸಿಕೊಂಡಿದ್ದರು. ಬಳಿಕ 2021ರಲ್ಲಿ ಮತ್ತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕಸಿಯನ್ನು ತೆಗೆಸಿಕೊಂಡಿದ್ದರು. ಆ ಬಳಿಕ ತಮ್ಮ ಆರೋಗ್ಯದಲ್ಲಿ ಅದೆಷ್ಟೋ ಉತ್ಸಾಹ ಮೂಡಿದೆ ಎಂದವರು ಹೇಳಿದ್ದಾರೆ. ಕಸಿಯನ್ನು ತೆಗೆಸಿಕೊಂಡ ಬಳಿಕ ಹೆಚ್ಚು ಸಂತಸದಿಂದ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅನ್ನ ಬಿಟ್ಟು ಚಪಾತಿ ತಿನ್ತಿದ್ರೂ ಸಣ್ಣಗಾಗ್ತಿಲ್ವಾ ? ಹಿಟ್ಟನ್ನು ಹೀಗೆ ತಯಾರಿಸಿ, ಒಂದೇ ವಾರದಲ್ಲಿ ತೂಕ ಇಳಿಯುತ್ತೆ
ಹೆಚ್ಚು ನಿದ್ರೆಯಿಂದ ಈಟಿಂಗ್ ಡಿಸಾರ್ಡರ್
ಹೆಚ್ಚು ತಿನ್ನುವುದರಿಂದ ಹಾಗೂ ಕಡಿಮೆ ತಿನ್ನುವುದರಿಂದ ಬೇರೆ ಬೇರೆ ರೀತಿಯ ಈಟಿಂಗ್ ಡಿಸಾರ್ಡರ್ ಉಂಟಾಗುತ್ತದೆ. ಹೆಚ್ಚು ಸಮಯ ನಿದ್ರೆ ಮಾಡುವುದರಿಂದ ಸುಸ್ತಾಗುತ್ತದೆ. ಹಾಗೂ ಆ ಸುಸ್ತನ್ನು ಬಗೆಹರಿಸಿಕೊಳ್ಳಲು ತಿನ್ನಬೇಕೆಂಬ ಆಸೆ ಉಂಟಾಗುತ್ತದೆ. ಇದರಿಂದ ಬೊಜ್ಜಿನ ಸಮಸ್ಯೆಯೂ ಹೆಚ್ಚಬಹುದು. ತಜ್ಞರ ಪ್ರಕಾರ, ದಿನಕ್ಕೆ 7-8 ಗಂಟೆ ನಿದ್ರಿಸುವುದು ಆರೋಗ್ಯಕ್ಕೆ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.